Bhagyalakshmi: ರೀಲ್ ಶ್ರೇಷ್ಠಾರನ್ನು ರಿಯಲ್ ವೈಫ್ ಜೊತೆ ಭೇಟಿಯಾದ ತಾಂಡವ್ ಸೂರ್ಯವಂಶಿ..!
ಭಾಗ್ಯಲಕ್ಷ್ಮೀ ಸೀರಿಯಲ್ ಈಗ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಅದರಲ್ಲೂ ಭಾಗ್ಯಾಳ ಓದುವ ನಿರ್ಧಾರವಂತು ಎಲ್ಲರೊಳಗೂ ಮತ್ತಷ್ಟು ಆತ್ಮ ಸ್ಥೈರ್ಯ ತುಂಬಿದೆ. ಹೆಣ್ಣು ಮಕ್ಕಳೆಂದರೆ ಇಷ್ಟೇ ಗಟ್ಟಿತನವಿರಬೇಕು. ಯಾವುದಕ್ಕೂ ಹೆದರಬಾರದು ಎಂಬೆಲ್ಲಾ ಸಂದೇಶವನ್ನು ಭಾಗ್ಯಲಕ್ಷ್ಮೀ ಧಾರಾವಾಹಿ ಸಾರುತ್ತಿದೆ. ಈಗ ಅತ್ತೆ - ಸೊಸೆ, ಅಮ್ಮ ಮಗಳಂತೆ ಆಗಿದ್ದಾರೆ. ಸೊಸೆಯ ಓದಿಗೆ ಅತ್ತೆಯಂತೂ ಬೆಂಗಾವಲಾಗಿ ನಿಂತಿದ್ದಾಳೆ. ಇದು ಎಲ್ಲಾ ಹೆಣ್ಣು ಮಕ್ಕಳಿಗೂ ಸಿಕ್ಕಾಪಟ್ಟೆ ಇಷ್ಟವಾಗುತ್ತಿರುವ ಎಪಿಸೋಡ್ ಆಗಿದೆ.
ತಾಂಡವ್‌ಗೆ ಇತ್ತೀಚೆಗೆ ಹೆಂಡತಿ ಇಷ್ಟವಾಗುತ್ತಿಲ್ಲ. ಕಾರಣ ಶ್ರೇಷ್ಠಾ ಫ್ಯಾಷನ್ ಕ್ವೀನ್ ಸಿಕ್ಕಿರುವ ಕಾರಣಕ್ಕೆ. ಹೇಗಾದರೂ ಮಾಡಿ ಶ್ರೇಷ್ಠಾಳನ್ನೆ ಮನೆಗೆ ಸೊಸೆಯಾಗಿ ತರಬೇಕು ಎಂಬುದು ತಾಂಡವ್ ಪ್ಲ್ಯಾನ್. ಅದಕ್ಕಾಗಿಯೇ ಮಾತೆತ್ತಿದರೆ ಭಾಗ್ಯಾಳ ಬಳಿ ಯುದ್ಧಕ್ಕೆ ನಿಲ್ಲುತ್ತಾನೆ.

ನೆಗೆಟಿವ್ ಶೇಡ್‌ನಲ್ಲಿ ಕಾಣಿಸುತ್ತಿರುವ ತಾಂಡವ್
ಈ ಮೊದಲು ತಾಂಡವ್ ಅಂದ್ರೆ ಮನಸ್ಸಿಗೆ ಅಷ್ಟಾಗಿ ಕೋಪವೇನು ಬರ್ತಾ ಇರ್ಲಿಲ್ಲ. ಆದರೆ ಅದ್ಯಾಕೋ ಶ್ರೇಷ್ಠಾ ಪರಿಚಯವಾದ ಮೇಲೆ ತಾಂಡವ್ ಕಂಪ್ಲೀಟ್ ಆಗಿ ಬದಲಾಗಿದ್ದಾನೆ. ಭಾಗ್ಯಾಳಿಗೆ ಯಾವಾಗಲೂ ಅವಮಾನಿಸುತ್ತಾನೆ. ಭಾಗ್ಯಾ ಏನೇ ಮಾಡಿದರೂ ತಪ್ಪು ಎನ್ನುತ್ತಾನೆ. ನೋಡುಗರ ಕಣ್ಣಿಗಂತೂ ದೊಡ್ಡ ವಿಲನ್ ಆಗಿ ಕಾಣಿಸುತ್ತಾನೆ.
ಶ್ರೇಷ್ಠಾಳಿಗಾಗಿ ಪರಿತಪಿಸುತ್ತಿರುವ ತಾಂಡವ್
ಶ್ರೇಷ್ಠಾ ಪರಿಚಯವಾದ ಮೇಲೆ ಶ್ರೇಷ್ಠಾ.. ಶ್ರೇಷ್ಠಾ ಅಂತ ಕುಣಿತಾ ಇದ್ದಾನೆ. ಶ್ರೇಷ್ಠಾ ಮುಂದೆ ಯಾವಾಗಲೂ ಭಾಗ್ಯಾಳನ್ನು ಜೀರೋ ಮಾಡಿಯೇ ಮಾತನಾಡಿಸುತ್ತಾನೆ. ಭಾಗ್ಯಾ ದಡ್ಡಿ, ನನ್ನ ಜೀವನಕ್ಕೆ ಬಂದಿದ್ದೇ ಒಂದು ನರಕ, ಹನಿ ನೀನೇ ಇರಬೇಕಿತ್ತು ನನ್ನ ಹೆಂಡತಿಯಾಗಿ ಅಂತೆಲ್ಲಾ ಹೇಳ್ತಾ ಇರುತ್ತಾನೆ. ಅದನ್ನೇ ಶ್ರೇಷ್ಠಾ ಈಗ ಬಂಡವಾಳ ಮಾಡಿಕೊಂಡು ತಾಂಡವ್ ನನ್ನು ಪಡೆಯಲು ಹೊರಟಿದ್ದಾಳೆ. ಆದ್ರೆ ಆ ಕಡೆ ಶ್ರೇಷ್ಠಾ ಅಪ್ಪ ಅಮ್ಮನಿಗೆ ಎಲ್ಲಾ ಸತ್ಯ ಗೊತ್ತಾಗಿದೆ. ಇನ್ಮುಂದೆ ಶ್ರೇಷ್ಠಾ ಆಟ ಎಷ್ಟರಮಟ್ಟಿಗೆ ನಡೆಯುತ್ತೆ ಎಂಬುದು ಮಾತ್ರ ಗೊತ್ತಿಲ್ಲ.

ಹಳೆ ಶ್ರೇಷ್ಠಾರನ್ನು ಭೇಟಿ ಮಾಡಿದ ತಾಂಡವ್
ಈ ಕಡೆ ಧಾರಾವಾಹಿಯಲ್ಲಿ ಅಂತ ಕಥೆಯಾದರೆ ನಿಜ ಜೀವನದಲ್ಲಿ ಬೇರೆಯೇ ಇದೆ. ತೆರೆ ಮೇಲೆ ವಿಲನ್‌ಗಳಾದವರು ತೆರೆ ಹಿಂದೆ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ. ಅದು ಇತ್ತೀಚೆಗೆ ಸೋಷಿಯಲ್ ಮೀಡಿಯಾ ಟ್ರೆಂಡ್ ಆದ ಮೇಲೆ ಎಲ್ಲರಿಗೂ ತಿಳಿದಿದೆ. ಈಗ ತಾಂಡವ್ ಅಲಿಯಾಸ್ ಸುದರ್ಶನ್ ಕೂಡ ರೀಲ್ ಬೇರೆ ರಿಯಲ್ ಲೈಫ್ ಬೇರೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡು, ಬಾಂಧವ್ಯದ ಬಗ್ಗೆ ಸಾರಿದ್ದಾರೆ.
ಸೆಲೆಬ್ರೇಷನ್ ಮಾಡಿ ಹೊರ ಬಂದಿರುವ ಗೌತಮಿ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಈ ಮೊದಲು ಶ್ರೇಷ್ಠಾ ಪಾತ್ರವನ್ನು ಗೌತಮಿ ಗೌಡ ನಿಭಾಯಿಸ್ತಾ ಇದ್ರು. ವೈಯಕ್ತಿಕ ಕಾರಣದಿಂದ ಹೊರ ನಡೆದರು. ಹೊರ ಬರುವಾಗಲೂ ಟೀಂ ಜೊತೆಗೆ ಕೇಕ್ ಕಟ್ ಮಾಡಿ, ಖುಷಿಯಿಂದಾನೇ ಬಂದಿದ್ದಾರೆ. ಈಗ ಟೀಂ ಜೊತೆಗೆ ಹೊರಗು ಬಾಂಧವ್ಯ ಮುಂದುವರೆದಿದೆ. ಸುದರ್ಶನ್ ಮತ್ತು ಸಂಗೀತಾ ಭಟ್ ಜೊತೆಗೆ ಗೌತಮಿ ಗೌಡ ಮತ್ತು ಅವರ ಪತಿ ಹೊರಗೆ ಭೇಟಿ ಮಾಡಿದ್ದಾರೆ. ಆ ಸುಂದರ ಗಳಿಗೆಯ ಸವಿನೆನಪಿನ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











