Sushma K Rao:ಮಕ್ಕಳೊಂದಿಗೆ ಭಾಗ್ಯಾ ಜೂಟಾಟ; "ನಮ್ ಮನ್ಸು ನಮ್ಗೆ ಒಳ್ಳೆದು ಮಾಡಿದ್ರೆ.." ಅಂತ ಕಮೆಂಟ್!
ಅದೆಷ್ಟೋ ಹೆಣ್ಣು ಮಕ್ಕಳಿಗೆ ಭಾಗ್ಯಾ ಸ್ಪೂರ್ತಿಯಾದರೆ, ಇನ್ನು ಅದೆಷ್ಟೋ ಸೊಸೆಯಂದಿರಿಗೆ ಕುಸುಮಾ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಭಾಗ್ಯಾ ಎಲ್ಲಾ ನೋವನ್ನು ನುಂಗಿಕೊಂಡು ತಮ್ಮವರ ಸುಖಕ್ಕಾಗಿ ಬದುಕುತ್ತಾಳೆ. ಅದು ಭಾಗ್ಯಾಳ ಪರಿಸ್ಥಿತಿಯನ್ನು ತೋರಿಸುತ್ತದೆ.
ಭಾಗ್ಯಾಳಿಗೇನು ಜೋರು ಮಾತನಾಡುವುದಕ್ಕೆ ಬರಲ್ಲ ಅಂತಾನು ಅಲ್ಲ, ಗಂಡ ಬಿಟ್ಟರೆ ಬದುಕು ಅಸಾಧ್ಯ ಅಂತಾನು ಅಲ್ಲ. ಆದರೆ ಅತ್ತೆ-ಮಾವನ ಮೇಲಿನ ಪ್ರೀತಿ, ಮಕ್ಕಳ ಭವಿಷ್ಯವನ್ನು ನೋಡಿ ಅಸಹಾಯಕಳಾಗಿದ್ದಾಳೆ ಅಷ್ಟೇ. ಹೀಗಾಗಿ ತಾಳ್ಮೆಯನ್ನು, ಮನೆಯ ಜವಾಬ್ದಾರಿ ನಿಭಾಯಿಸುವ ರೀತಿಗೆ ಭಾಗ್ಯ ಸ್ಪೂರ್ತಿಯಾಗಿಯೇ ನಿಲ್ಲುತ್ತಾಳೆ.

ಇನ್ನು ಕುಸುಮಾ ವಿಚಾರ ಕೇಳಬೇಕಾ. ಇದ್ದರೆ ಇಂಥ ಅತ್ತೆ ಇರಬೇಕಪ್ಪಾ ಎನಿಸುವಷ್ಟು ಸೊಸೆಯನ್ನು ನೋಡಿಕೊಳ್ಳುತ್ತಾರೆ. ತನ್ನದೇ ಅಧಿಕಾರ ನಡೆಯಬೇಕು ಎಂಬುದು ಇದ್ದರು, ಸೊಸೆಗೆ ಅವಮಾನ ಆಗುವುದಕ್ಕೆ ಬಿಡುವುದಿಲ್ಲ. ಅದು ಮಗನೇ ಅವಮಾನ ಮಾಡಿದರು ಸುಮ್ಮನೆ ಇರುವವರಲ್ಲ ಅತ್ತೆ ಕುಸುಮಾ. ಇದನ್ನೇ ಎಲ್ಲಾ ಸೊಸೆಯಂದಿರು ತಮ್ಮ ಅತ್ತೆಯಂದಿರ ಬಳಿ ಬಯಸುವುದು ಅಲ್ವಾ.
ನಿಜ ಜೀವನದಲ್ಲೂ ಮುಗ್ಧಳು ಭಾಗ್ಯಾ
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಭಾಗ್ಯಾ ಪಾತ್ರಧಾರಿ ಸುಷ್ಮಾ ಸಿಕ್ಕಾಪಟ್ಟೆ ಮುಗ್ಧಳು. ತನಗೆ ನೋವಾದರೂ ಸಹಿಸುತ್ತಾಳೆ, ತನ್ನವರಿಗೆ ನೋವಾಗುವುದನ್ನು ಯಾವತ್ತಿಗೂ ಸಹಿಸುವುದಿಲ್ಲ. ಇದು ಬರೀ ಧಾರಾವಾಹಿಯಲ್ಲಿ ಅಲ್ಲ ನಿಜಜೀವನದಲ್ಲೂ ಭಾಗ್ಯಾ ಇದೇ ಥರ ಇರುವುದು. ಸುಷ್ಮಾ ಅವರ ಸೋಷಿಯಲ್ ಮೀಡಿಯಾ ನೋಡಿದರೆ ಅಥವಾ ಅವರ ಸಂಗಡಿಗರನ್ನು ಕೇಳಿದರೇನೆ ಸುಷ್ಮಾ ಅದೆಷ್ಟು ಮುಗ್ಧರು ಎಂಬುದು ತಿಳಿಯುತ್ತೆ.
ಕ್ಯಾಮೆರಾ ಹಿಂದೆ ಮಕ್ಕಳ ಫೇವರಿಟ್ ಅಮ್ಮ
ಸುಷ್ಮಾ ಕೆ ರಾವ್ ತುಂಬಾನೇ ಜಾಲಿ ಜಾಲಿ. 'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಭಾಗ್ಯಾಗೆ ಇಬ್ಬರು ಮಕ್ಕಳು. ತನ್ವಿ ಹಾಗೂ ಗುಂಡಣ್ಣ. ಇಬ್ಬರಲ್ಲಿ ಅಮ್ಮನನ್ನು ಕಂಡರೆ ತನ್ವಿಗೆ ಅಷ್ಟಕ್ಕೆ ಅಷ್ಟೇ. ಇನ್ನು ಗುಂಡಣ್ಣನಿಗೆ ಅಮ್ಮ ಎಂದರೆ ಪ್ರಾಣ. ಇದು ಧಾರಾವಾಹಿಯಲ್ಲಿ ಮಾತ್ರವಲ್ಲ ರಿಯಲ್ ಆಗಿನೂ ಸುಷ್ಮಾ ಹಾಗೂ ಗುಂಡಣ್ಣನದ್ದು ಬಾಂಡಿಂಗ್ ಹಾಗೇ ಇದೆ. ಬರೀ ಗುಂಡಣ್ಣ ಮಾತ್ರವಲ್ಲ, ತನ್ವಿ ಜೊತೆಗೆ ಕ್ಯಾಮೆರಾ ಹಿಂದೆ ಭಾಗ್ಯಾ ತುಂಬಾ ಕ್ಲೋಸ್. ಅಷ್ಟೇ ಯಾಕೆ ತಾಂಡವ್ ಜೊತೆಗೂ ಕ್ಯಾಮೆರಾ ಹಿಂದೆ ಒಳ್ಳೆಯ ಬಾಂಧವ್ಯವನ್ನೇ ಹೊಂದಿದ್ದಾರೆ.
ಮಕ್ಕಳಿಗೆ ಸುಷ್ಮಾ ಇದ್ದರೆ ಸಾಕು ಫುಲ್ ಆಟ
ಭಾಗ್ಯಾ ಶಾಲೆಗೆ ಹೋಗುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಗಂಡ ಪೆದ್ದಿ, ಎಸ್ಎಸ್ಎಲ್ಸಿ ಫೇಲ್ ಅಂತ ಯಾವಾಗಲೂ ನಿಂದಿಸಿದ್ದನ್ನು ಕುಸುಮಾರಿಂದ ನೋಡಲು ಆಗಲಿಲ್ಲ, ಕೇಳಲು ಆಗಲಿಲ್ಲ. ಹೀಗಾಗಿ ಅತ್ತೆಯೇ ಶಾಲೆಗೆ ಕಳುಹಿಸಿ ಆಗಿದೆ. ಶಾಲೆಯಲ್ಲಿ ಸುಷ್ಮಾ ಬರೀ ಪಾಠ ಕೇಳಿ ಬರ್ತಾರಾ ನೋ. ಶಾಲೆಯಲ್ಲಿ ಕೂತು ಆಡಿಕೊಳ್ಳುವ ಮಕ್ಕಳೊಂದಿಗೇನೆ ಜೂಟಾಟ (ಮುಟ್ಟಿಸುವಾಟ) ಆಡಿದ್ದಾರೆ.
ಭಾಗ್ಯಾರ ಈ ಗುಣಕ್ಕೆ ನೆಟ್ಟಿಗರು ಫುಲ್ ಖುಷಿ
ಸುಷ್ಮಾ ಮಕ್ಕಳ ಜೊತೆಗೆ ಆಡಿದ ಆಟದ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ನಮ್ಮ ಮನಸ್ಸು ನಮ್ಗೆ ಒಳ್ಳೆಯದು ಮಾಡಿದರೆ ದೇವ್ರು ಅಂತ ಟ್ರೆಂಡಿಂಗ್ ಸಾಲುಗಳನ್ನು ಹಾಕಿದ್ದಾರೆ. ಅದರಲ್ಲೂ ಕ್ಲಾಸ್ ನಲ್ಲಿ ಕೂತು ಕಿರಿಕಿರಿ ಮಾಡುವ ಮಕ್ಕಳೊಂದಿಗೇನೆ ಆಟವಾಡಿದ್ದಾರೆ. ಮಕ್ಕಳು ಕೂಡ ಸುಷ್ಮಾ ಅವರ ಜೊತೆಗೆ ಖುಷಿ ಖುಷಿಯಾಗಿ ಆಟವಾಡಿದ್ದಾರೆ. ಇದನ್ನು ನೋಡಿದ ನೆಟ್ಟುಗರು ಸುಷ್ಮಾ ಅವರಿಗೆ ಫಿದಾ ಆಗಿದ್ದಾರೆ. ಮಕ್ಕಳ ಜೊತೆಗೆ ಮಕ್ಕಳಾಗಿ ಬಿಡುತ್ತೀರಾ. ಇದಕ್ಕೆ ಖುಷಿಯಾಗುವುದು ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ. ಅಷ್ಟೇ ಅಲ್ಲ ಹಾರ್ಟ್ ಕೂಡ ನೀಡಿದ್ದಾರೆ.


Click it and Unblock the Notifications











