Susham K Rao: ಕಾಶಿಗೆ ಹೊರಟ ಭಾಗ್ಯಾ.. ಇಷ್ಟು ಬೇಗ ಯಾಕೆ ಮೇಡಂ ಅಂತಿದ್ದಾರೆ ಅಭಿಮಾನಿಗಳು?

By ಎಸ್ ಸುಮಂತ್

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಭಾಗ್ಯಾಳ ತ್ಯಾಗವನ್ನು ಯಾರು ಮರೆಯೋ ಹಾಗಿಲ್ಲ. ಅಮ್ಮನ ಬಳಿ ಲಡ್ಡುಗಾಗಿ ಕಿತ್ತಾಡುವ ಭಾಗ್ಯ, ಅತ್ತೆಯ ಬಳಿ ಜೋರು ಮಾಡುವುದಿಲ್ಲ. ಹಾಗಂತ ತಪ್ಪನ್ನು ತಪ್ಪು ಎನ್ನದೆ ಬಿಡುವುದಿಲ್ಲ. ಸರಿ ಎನಿಸಿದ್ದನ್ನು ಜಾರಿಗೆ ತರದೆಯೂ ಇರುವುದಿಲ್ಲ.

ಎಲ್ಲದರಲ್ಲೂ ಭಾಗ್ಯಾ ಪರ್ಫೆಕ್ಟ್ . ಆದರೆ ಟ್ರೆಡಿಷನಲ್ ಎಂಬ ಕಾರಣಕ್ಕೆ ತಾಂಡವ್ ಕೋಪಕ್ಕೆ ಯಾವಾಗಲೂ ಗುರಿಯಾಗುತ್ತಲೇ ಇರುತ್ತಾಳೆ. ಅದನ್ನು ನೋಡಿದವರು ತಾಂಡವ್‌ಗೆ ಹಿಡಿ ಶಾಪ ಹಾಕುತ್ತಲೇ ಇರುತ್ತಾರೆ.

ಸಿಕ್ಕಿದರೆ ನಮಗೂ ಇಂಥ ಸೊಸೆಯೇ ಸಿಗಬೇಕು ಅಂತ ಧಾರಾವಾಹಿ ನೋಡುವವರೆಲ್ಲ ಉದ್ಘರಿಸದೆ ಇರಲಾರರು. ಯಾಕಂದ್ರೆ, ಅತ್ತೆ ಏನೇ ಹೇಳಿದರೂ ತಲೆಯಾಡಿಸುತ್ತಾಳೆ. ಯಾವುದೇ ಮಾತಿಗೂ ಎದುರಾಡುವುದಿಲ್ಲ.

ಗಂಡ ಎಷ್ಟೇ ಮನಸ್ಸು ನೋಯಿಸಿದರು ಗಂಡನಿಗೂ ನೋವು ಮಾಡುವುದಿಲ್ಲ. ತನ್ನ ಸ್ಥಾನ ಕಿತ್ತುಕೊಳ್ಳಲು ಇನ್ನೊಬ್ಬಳು ಹೊಂಚು ಹಾಕುತ್ತಿದ್ದಾಳೆ. ಅದು ಕೂಡ ಭಾಗ್ಯಾಳಿಗೆ ಗೊತ್ತಾಗುತ್ತಿಲ್ಲ. ಅಷ್ಟು ಮುಗ್ಧತೆಯ ಸ್ವಭಾದವಳು ಭಾಗ್ಯ. ಆದರೆ, ಈಗ ಕಾಶಿ ಯಾತ್ರೆಗೆ ಹೊರಟಿದ್ದಾರೆ.

ಕಾಶಿ ಯಾತ್ರೆಯಲ್ಲಿ ಸುಷ್ಮಾ ಉರ್ಫ್ ಭಾಗ್ಯ

ಸುಷ್ಮಾ ಕೆ ರಾವ್, ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮನೆ ಮಾತಾಗಿದ್ದಾರೆ. 'ಗುಪ್ತಗಾಮಿನಿ' ಧಾರಾವಾಹಿಯಿಂದ ಎಲ್ಲರ‌ ಮನಸ್ಸನ್ನು ಗೆದ್ದವರು. ಬಳಿಕ ನಿರೂಪಕಿಯಾಗಿಯೂ ಸಖತ್ ಸೌಂಡ್ ಮಾಡಿದ್ದವರು. ಇತ್ತೀಚೆಗೆ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ 'ಭಾಗ್ಯಲಕ್ಷ್ಮೀ' ಧಾರಾವಾಹಿ ಮೂಲಕ ದೊಡ್ಡಮಟ್ಟದಲ್ಲಿ ಬಂದಿದ್ದಾರೆ. ದೊಡ್ಡ ಮಟ್ಟದಲ್ಲಿಯೆ 'ಭಾಗ್ಯಲಕ್ಷ್ಮೀ' ಕೂಡ ಸೌಂಡ್ ಮಾಡುತ್ತಿದೆ. ಭಾಗ್ಯಾಳ ಪಾತ್ರದಲ್ಲಿ ಸುಷ್ಮಾ ಕಾಣಿಸಿಕೊಂಡಿದ್ದಾರೆ.

Bhagyalakshmi serial Actress Sushma K Rao in Kashi Yatra netizens ask why?

ತಂಗಿಯೆಂದರೆ ಪ್ರಾಣ ಬಿಡುತ್ತಾಳೆ ಭಾಗ್ಯಾ. ಸದ್ಯ ತಂಗಿಯ ಮದುವೆ ಮಾಡಿಕೊಟ್ಟು ತಲೆ ‌ಮೇಲಿದ್ದ ದೊಡ್ಡ ಜವಾಬ್ದಾರಿಯನ್ನು ಕಳೆದುಕೊಂಡಿದ್ದಾಳೆ. ತಂಗಿಯನ್ನು ಒಳ್ಳೆ ಮನೆಗೆ ಸೇರಿಸಬೇಕೆಂಬುದೇ ಭಾಗ್ಯಾಳ ಕನಸಾಗಿತ್ತು. ಮನೆಯಲ್ಲಿರುವ ಅತ್ತೆ ಒಳ್ಳೆಯವರೋ ಕೆಟ್ಟವರೋ ಆದರೆ, ಗಂಡ ಮಾತ್ರ ಲಕ್ಷ್ಮೀ ಬಯಸಿದಂತೆ ಸಿಕ್ಕಿದ್ದಾನೆ. ಹೀಗೆ ಧಾರಾವಾಹಿಯ ಕಥೆ ಸಾಗುತ್ತಾ ಇದೆ. ಭಾಗ್ಯಾ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದರೆ, ಆ ಕಡೆ ಸುಷ್ಮಾ ಕೆ ರಾವ್ ಕಾಶಿಯಾತ್ರೆಗೆ ಹೋಗಿದ್ದಾರೆ. ತಮ್ಮ ಮೊಬೈಲ್‌ನಲ್ಲಿ ಕಾಶಿಯ ಸುಂದರ ಸ್ಥಳಗಳನ್ನೆಲ್ಲಾ‌ಸೆರೆ ಹಿಡಿದಿದ್ದಾರೆ. ಅದನ್ನು ತಮ್ಮ ಪ್ರೇಕ್ಷಕರ ಬಳಗ ಹಾಗೂ ಅಭಿಮಾನಿ ಬಳಗಕ್ಕೂ ತೋರಿಸಿದ್ದಾರೆ.

ಇಷ್ಟು ಬೇಗ ಯಾಕೆ ಎಂದು ನೆಟ್ಟಿಗರ ಪ್ರಶ್ನೆ

ಸುಷ್ಮಾ ಅವರು ಅಷ್ಟು ಬ್ಯುಸಿ ಶೆಡ್ಯೂಲ್ ನಲ್ಲಿಯೂ ಧಾರಾವಾಹಿಯಿಂದ ಬಿಡುವು ಮಾಡಿಕೊಂಡು ಕಾಶಿ ಯಾತ್ರೆಗೆ ಹೋಗಿದ್ದಾರೆ. ಭಾಗ್ಯಾ ಅಲಿಯಾಸ್ ಸುಷ್ಮಾಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಅವರೆಲಾ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ನೋಡಿ ಪ್ರಶ್ನಿಸ್ತಾ ಇದ್ದಾರೆ. ಇಷ್ಟು ಬೇಗ ಕಾಶಿ ಯಾತ್ರೆಗೆ ಯಾಕೆ ಹೋದ್ರಿ ಮೇಡಂ ಅಂತ ಪ್ರಶ್ನೆ ಮಾಡ್ತಾ ಇದ್ದಾರೆ.

Bhagyalakshmi serial Actress Sushma K Rao in Kashi Yatra netizens ask why?

ಸುಷ್ಮಾ ಕೆ ರಾವ್ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಆಕ್ಟೀವ್ ಆಗಿರಲಿಲ್ಲ. ಆದರೆ 'ಭಾಗ್ಯಲಕ್ಷ್ಮೀ' ಧಾರಾವಾಹಿ ಆರಂಭವಾದಾಗಿನಿಂದ ಫುಲ್ ಆಕ್ಟೀವ್ ಆಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಧಾರಾವಾಹಿಯ ಕ್ಲಿಪ್ಸ್ ಗಳನ್ನೇ ಹಾಕುತ್ತಾರೆ. ಜೊತೆಗೆ ಶೂಟಿಂಗ್ ಸೆಟ್‌ನಲ್ಲಿ ತಾವೂ ಮಾಡುವ ಫನ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಆ ವಿಡಿಯೋಗಳನ್ನೆಲ್ಲಾ ನೋಡುತ್ತಾ ಇದ್ದರೆ, ಸುಷ್ಮಾ ಅವರು ಧಾರಾವಾಹಿ ಸೆಟ್‌ನಲ್ಲಿ ಎಷ್ಟು ಖುಷಿ ಖುಷಿಯಾಗಿ ಇರುತ್ತಾರೆ ಎಂಬುದು ಅದರಿಂದಾನೇ ಗೊತ್ತಾಗುತ್ತೆ.

More from Filmibeat

English summary
Colors Kannada Bhagyalakshmi serial Written Update on Sushma social media update. Here is the details about Sushma Kashi trip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X