ಮಗನ ಬುದ್ಧಿ ಕಂಡು ಕಣ್ಣೀರಾಕಿದ ಕುಸುಮಾ..! ಅಮ್ಮನ ಕಣ್ಣೀರಿಗೆ ಬೆಲೆ ಕೊಡುತ್ತಾನಾ ತಾಂಡವ್..!?
ಯಾವುದೇ ಕಾರಣಕ್ಕೂ ಭಾಗ್ಯ ಹೆಸರಿಗೆ ಮನೆಯನ್ನು ಬರೆಯುವುದಿಲ್ಲ ಎಂದು ಕುಸುಮಾ ಅಂದುಕೊಂಡಿದ್ದರು. ಆದರೆ ತಾಂಡವ್ ತುಂಬಾ ಯೋಚನೆಯನ್ನು ಮಾಡಿ ನನಗೆ ಯಾವುದು ಬೇಡ ಭಾಗ್ಯ ಬೇಕಾದರೆ ಮನೆಯ ಇಎಂಐಯನ್ನು ಕಟ್ಟಿಕೊಳ್ಳಲಿ ಎಂದು ಮನೆಯನ್ನು ಭಾಗ್ಯ ಹೆಸರಿಗೆ ಬರೆದಿದ್ದಾನೆ. ಇದನ್ನು ಕುಸುಮಾ ನಿರೀಕ್ಷೆ ಮಾಡಿರಲಿಲ್ಲ .ಆದರೆ ಮಗ ಈ ರೀತಿಯಾಗಿ ಬಿಟ್ಟನಲ್ಲ ಎಂದು ತುಂಬಾ ಕಣ್ಣೀರು ಹಾಕಿದ್ದಾರೆ. ಅದು ಮಗನಿಗೆ ಗೊತ್ತಾಗಬಾರದು ಎಂದು ತನ್ನ ಸೊಸೆಯ ಕಡೆಗೆ ತಿರುಗಿಕೊಂಡು ಕಣ್ಣನ್ನು ಒರೆಸಿಕೊಂಡಿದ್ದಾರೆ.
ಮೊದಲಿನಿಂದಲೂ ಕೂಡ ಭಾಗ್ಯಳನ್ನ ಕಂಡರೆ ತಾಂಡವ್‌ಗೆ ಆಗುತ್ತಾ ಇಲ್ಲ ಅದಕ್ಕಾಗಿ ಭಾಗ್ಯಳಿಗೆ ಏನೇನು ಮಾತುಗಳನ್ನು ಆಡುತ್ತಿದ್ದಾನೆ. ನಿನ್ನ ಮಾತುಗಳಿಂದಲೇ ಅಮ್ಮ ಇಷ್ಟೆಲ್ಲ ಆಡುತ್ತಿರುವುದು ನೀನು ನರಿ ಬುದ್ಧಿಯವಳು ಎಂದೆಲ್ಲಾ ಹೇಳುತ್ತಾ ಇದ್ದಾಗ ಭಾಗ್ಯಗೆ ತುಂಬಾ ಅಳು ಬಂದಿದೆ ಇದಕ್ಕೆ ನನ್ನನ್ನ ಆ ರೀತಿ ಎಲ್ಲಾ ಅನ್ನಬೇಡಿ. ಅತ್ತೆ ಏನು ಸಣ್ಣವರಲ್ಲ ಎಂದು ಅಂದಿದ್ದಾಳೆ ಇನ್ನೂ ಇದೆ ವೇಳೆ ಭಾಗ್ಯ ಮೇಲೆ ತಾಂಡವ್ ಕೈ ಎತ್ತಲು ಹೋದಾಗ ಕುಸುಮಾ ಮಧ್ಯ ಬಂದಿದ್ದು ಸೊಸೆಗೆ ಸ್ಪಲ್ವವೂ ಸಹ ನೋವಾಗಲು ಬಿಟ್ಟಿಲ್ಲ. ಅಮ್ಮನನ್ನು ನೋಡಿದ ತಾಂಡವ್ ಬೆಚ್ಚಿ ಬಿದ್ದಿದ್ದಾನೆ ನಂತರ ಹಿಂದೆ ಸರಿದಿದ್ದಾನೆ.

ಇದೇ ವೇಳೆ ಕುಸುಮಾ ಅವರು ತಮ್ಮ ಮಗನಿಗೆ, ನಾನು ಇಲ್ಲಿಯ ತನಕ ನಿನ್ನನ್ನ ಓದಿಸಲು ಬೆಳೆಸಲು ಇಷ್ಟೊಂದು ದುಡ್ಡು ಖರ್ಚಾಗಿದೆ ಅದನ್ನ ಏನು ಮಾಡುತ್ತೀಯಾ ಎಂದು ಕೇಳಿದ್ದಾರೆ. ಇದಕ್ಕೆ ತಾಂಡವ್ ಹಣ ಕೊಡುತ್ತೇನೆ ಎಂದು ಹೇಳಿದ್ದಾನೆ. ಈ ಮಾತು ಕೇಳಿದ ಕೂಡಲೇ ಕುಸುಮಾಗೆ ತಮ್ಮ ಮಗ ಎಷ್ಟು ಬದಲಾಗಿ ಹೋಗಿದ್ದಾನೆ ಎಂಬುದು ಅರಿವಿಗೆ ಬಂದಿದೆ. ನಂತರ ತಾಂಡವ್ ಬಳಿ ಬಂದ ಕುಸುಮ ನಾನು ನಿನ್ನನ್ನು ಪರೀಕ್ಷೆ ಮಾಡಿದೆ .ನನ್ನ ಮಗ ನೀನಲ್ಲ. ನನ್ನ ಮಗ ತಾಂಡವ್ ಈಗ ದುರಹಂಕಾರದಿಂದ ಬದಲಾಗಿ ಹೋಗಿದ್ದಾನೆ ಎಂದು ಹೇಳಿದ್ದಾರೆ.
ತಾಂಡವ್‌ಗೆ ಅಮ್ಮನ ಕಷ್ಟ ತಿಳಿಯುತ್ತಾ..?
ಮಗನಿಗೆ ಬುದ್ಧಿವಾದ ಹೇಳಿದ ಕುಸುಮಾ
ಇಷ್ಟೆಲ್ಲಾ ಮಾಡಿದ ಮೇಲೆ ಕುಸುಮಾ ತಾಂಡವ್ ಬಳಿ ನಿನ್ನ ಸಾಕುವುದಕ್ಕೆ ಎಷ್ಟೆಲ್ಲ ಕಷ್ಟ ಪಟ್ಟೆ ಎಂಬುದನ್ನ ಹೇಳಿದ್ದಾರೆ. ಅಷ್ಟೇ ಅಲ್ಲದೆ ನೀನು ಆ ಮನೆಯನ್ನು ಕಟ್ಟಲು ಪ್ರತಿ ಇಟ್ಟಿಗೆಗೂ ಕೂಡ ಶ್ರಮವನ್ನು ಪಟ್ಟಿದ್ದೀಯಾ ಎಂದು ಹೇಳಿದ್ದಾರೆ. ಈ ಮಾತನ್ನೆಲ್ಲ ಕೇಳುತ್ತಿರುವ ತಾಂಡವ್ ಮೂಕನಾಗಿ ನಿಂತುಕೊಂಡಿದ್ದಾನೆ. ನಿನ್ನ ದುರಹಂಕಾರದಿಂದಾಗಿ ಈಗ ನೀನು ನನ್ನ ಮಗನಾಗಿ ಉಳಿದುಕೊಂಡಿಲ್ಲ. ನನ್ನ ಮಗ ತಾಂಡವ್ ಬೇರೆಯೇ ಅವನಿಗೆ ನಾನು ಒಳ್ಳೆಯ ಸಂಸ್ಕಾರವನ್ನ ಕೊಟ್ಟು ಬೆಳೆಸಿದೆ ಅವನಿಗೆ ಅಪ್ಪ ಅಮ್ಮ ಬೇಕು, ಆದರೆ ನನ್ನ ಮುಂದಿರುವ ತಾಂಡವ್‌ಗೆ ಯಾರು ಬೇಡವಾಗಿದೆ ಎಂದು ಕುಸುಮಾ ಹೇಳಿದ್ದಾರೆ.
ನನಗೆ ನನ್ನ ಹಳೆಯ ತಾಂಡವ್ ಬೇಕು. ಅವನಾಗಿದ್ದರೆ ಅಮ್ಮ ನನಗೆ ಇದ್ಯಾವುದೂ ಬೇಡ ನಾನು ನಿಮ್ಮ ಜೊತೆಗೆ ಮನೆಗೆ ಬರುತ್ತೇನೆ ಎಂದು ಹೇಳುತ್ತಿದ್ದ. ಆದರೆ ಇಲ್ಲಿರುವ ತಾಂಡವ್ ಬೇರೆ, ಅವನಿಗೆ ಮನೆ ಬೇಡ ಅಪ್ಪ ಅಮ್ಮ ಬೇಡ ಮಕ್ಕಳು ಬೇಡ ಅದಕ್ಕಾಗಿ ನನಗೆ ಈ ತಾಂಡವ್ ಬೇಡ ಅವನ ಆಸ್ತಿಯೂ ಕೂಡ ಬೇಡ ಎಂದಿದ್ದಾರೆ. ಭಾಗ್ಯ ಕೈಯಲ್ಲಿದ್ದ ಪತ್ರವನ್ನು ಹರಿದು ತಾಂಡವ್ ಮುಖದ ಮೇಲೆ ಎಸೆದಿದ್ದಾರೆ. ನೀನೇ ಬೇಡವೆಂದ ಮೇಲೆ ನೀನು ಕಟ್ಟಿರುವ ಮನೆಯೂ ಕೂಡ ನಮಗೆ ಬೇಡ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ನಾನು ನನ್ನ ಗಂಡ ಬಂದ ಮೇಲೆ ನಾವು ಇದ್ದ ಬಾಡಿಗೆ ಮನೆಗೆ ಹೋಗುತ್ತೇವೆ ಎಂದಿದ್ದಾರೆ.

ಅಮ್ಮನ ಮಾತು ಕೇಳಿ ತಾಂಡವ್‌ಗೆ ಬೇಸರ
ಸೊಸೆ ಕರೆದುಕೊಂಡು ಹೊರಟ ಕುಸುಮಾ
ಕುಸುಮಾ ತಾವು ಬಾಡಿಗೆ ಮನೆಗೆ ಹೋಗುತ್ತೇವೆ ಈ ಮನೆಗೆ ಮಾಡಿರುವ ಸಾಲದ ಬಾಕಿಯನ್ನು ನೀನೇ ಕಟ್ಟಿಕೋ ನಮಗೆ ಮನೆಯೂ ಬೇಡ ನೀನು ಬೇಡ ಎಂಬ ಮಾತನ್ನು ಹೇಳಿದ್ದೆ ತಡ ತಾಂಡವ್‌ಗೆ ಬೇಸರವಾಗಿದೆ. ಮನೆಯ ಸಾಲವನ್ನು ಕಟ್ಟಲು ಆಗದಿದ್ದರೆ ನಾವೇ ಹೇಗಾದರೂ ಮಾಡಿ ಕಟ್ಟುತ್ತೇವೆ ಎಂದೂ ಹೇಳಿದ್ದಾರೆ. ತಾಂಡವ್ ಮಾತಿಗೂ ಕಾಯದ ಕುಸುಮಾ ಇಂತಹ ಗಂಡ ನಿನಗೆ ಬೇಡ ಬಾ ಎಂದು ಭಾಗ್ಯಳ ಕೈಯನ್ನ ಹಿಡಿದುಕೊಂಡು ಹೋಟೆಲಿನಿಂದ ಹೊರಗೆ ಬಂದಿದ್ದಾರೆ. ಭಾಗ್ಯ ಕಣ್ಣೀರು ಒರೆಸಿಕೊಂಡು ಅತ್ತೆಯ ಜೊತೆಯಲ್ಲಿ ಹೊರಟಿದ್ದಾಳೆ. ಆದರೆ ತಾಂಡವ್‌ಗೆ ಅಮ್ಮನ ಮಾತುಗಳು ಎಷ್ಟು ಅರ್ಥವಾಗಿದೆ ಅದನ್ನು ಅರ್ಥ ಮಾಡಿಕೊಂಡು ಮನೆಗೆ ಬರುತ್ತಾನಾ ನೋಡಬೇಕಾಗಿದೆ.


Click it and Unblock the Notifications











