ರೀಲ್‌ನಲ್ಲಿ ಮಾಜಿ ಪ್ರೇಯಸಿ ರಿಯಲ್ ಲೈಫ್‌ನಲ್ಲಿ ತಾಂಡವ್ ಅರ್ಧಾಂಗಿ ಆಗಿದ್ಹೇಗೆ..?

By ಪ್ರಿಯಾ ದೊರೆ

Article desc: ಭಾಗ್ಯಲಕ್ಷ್ಮೀ ಧಾರಾವಾಹಿಯ ತಾಂಡವ್ ಈಗ ವೀಕ್ಷರ ಕಣ್ಣಲ್ಲಿ ಕೋಪ ಮೂಡಿಸಿರುವ ಪಾತ್ರ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾಯಕ, ಖಳನಾಯಕ ಎಲ್ಲವೂ ತಾಂಡವ್.

ಈಗಾಗಲೇ ತಾಂಡವ್ ಭಾಗ್ಯಳನ್ನು ಮದುವೆಯಾಗಿದ್ದು, ಅವಳು ದಡ್ಡಿ ಎಂಬ ಕಾರಣಕ್ಕೆ ಶ್ರೇಷ್ಠ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು, ಈಗ ಹೆಂಡತಿಗೆ ಹಾಗೂ ತಾಯಿಗೆ ಪಾಠ ಕಲಿಸಬೇಕು ಎಂದು ಮನೆಯಿಂದ ಹೊರಗಡೆ ಬಂದಿದ್ದಾನೆ.

Bhagyalakshmi serial fame Actor Sudarshan Rangaprasad love story

ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ನೋಡುವ ಪ್ರತಿಯೊಬ್ಬರೂ ತಾಂಡವ್ ಅನ್ನು ಬೈಯುತ್ತಲೇ ಇರುತ್ತಾರೆ. ಭಾಗ್ಯಳ ಜೊತೆಗೆ ಬಾಳುವುದು ಬಿಟ್ಟು ಯಾಕೆ ದಡ್ಡನಂತೆ ಆಡುತ್ತಿದ್ದಾನೋ ಎಂದು ಹೇಳುತ್ತಿರುತ್ತಾರೆ.

ಸಣ್ಣ ಪಾತ್ರ ತಂದ ಬದಲಾವಣೆ

ತಾಂಡವ್ ಪಾತ್ರದಲ್ಲಿ ನಟಿಸುತ್ತಿರುವ ನಟ ಸುದರ್ಶನ್ ರಂಗಪ್ರಸಾದ್, ಸ್ಯಾಂಡಲ್‌ವುಡ್ ನಟಿ ಸಂಗೀತಾ ಭಟ್ ಪತಿ. ಏಳು ವರ್ಷಗಳ ಹಿಂದೆ ಈ ಜೋಡಿ ಪ್ರೀತಿಸಿ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಜರ್ಮನಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುದರ್ಶನ್ ರಂಗಪ್ರಸಾದ್ ಬೆಂಗಳೂರಿಗೆ ವಾಪಸ್ ಆಗಿದ್ದೇ ತಡ ಲೈಫ್ ಟರ್ನಿಂಗ್ ಪಡೆದುಕೊಂಡಿತು. ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು, ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ತು. ಸಿನಿಮಾದಲ್ಲಿ ನಾಯಕಿಗೆ ಗಾಳ ಹಾಕಿದ ಸುದರ್ಶನ್ ಲಕ್ ಡಬಲ್ ಆಗಿತ್ತು.

Bhagyalakshmi serial fame Actor Sudarshan Rangaprasad love story

ಎಕ್ಸ್ ಗರ್ಲ್ ಫ್ರೆಂಡ್ ಕಥೆ

ಸುದರ್ಶನ್‌ಗೆ ನಿರ್ದೇಶಕ ಪವನ್ ಒಡೆಯರ್ ಹಲವು ವರ್ಷಗಳ ಸ್ನೇಹಿತರಾಗಿದ್ದರು. 'ಪ್ರೀತಿ ಗೀತಿ ಇತ್ಯಾದಿ' ಚಿತ್ರದಲ್ಲಿ ಸುದರ್ಶನ್‌ಗೆ ನಟಿಸಲು ಅವಕಾಶ ಕೊಟ್ಟರು. ಇದರಲ್ಲಿ ಸಂಗೀತಾ ಭಟ್ ನಾಯಕಿಯಾಗಿದ್ದರು. ನಾಯಕಿಯ ಎಕ್ಸ್ ಬಾಯ್ ಫ್ರೆಂಡ್ ಪಾತ್ರವು ಸುದರ್ಶನ್‌ಗೆ ಸಿಕ್ಕಿತ್ತು. ಸಂಗೀತಾ ಶೂಟಿಂಗ್ ಸೆಟ್‌ನಲ್ಲಿ ಭೇಟಿಯಾದ ಮೊದಲ ದಿನದಿಂದಲೇ ಕಾಳು ಹಾಕಲು ಶುರು ಮಾಡಿದ ಸುದರ್ಶನ್, ಸಂಗೀತಾ ರಿಯಲ್ ಲೈಫ್ ಲವ್ವರ್ ಆಗಿ ಬಹುಬೇಗನೇ ಪ್ರಮೋಷನ್ ತೆಗೆದುಕೊಂಡರು. ಆದರೆ ಭೇಟಿಯಾದ ಮೊದಲ ದಿನ ಸಂಗೀತಾನ ಹಾಯ್ ಎಕ್ಸ್ ಗರ್ಲ್ ಫ್ರೆಂಡ್ ಎಂದಿದ್ದ ಸುದರ್ಶನ್ ಈಗ ಅವಳು ನನ್ನ ಅರ್ಧಾಂಗಿ ಎನ್ನುತ್ತಿದ್ದಾರೆ.

ಸುದರ್ಶನ್ ಸ್ಟ್ಯಾಂಡಪ್ ಕಾಮಿಡಿಯನ್

ಸುದರ್ಶನ್ ಕೆಲಸ ಮಾಡುತ್ತಲೇ ಶನಿವಾರ ಹಾಗೂ ಭಾನುವಾರ ಸ್ಟ್ಯಾಂಡಪ್ ಕಾಮಿಡಿಯನ್ ಜನರನ್ನು ನಗಿಸುತ್ತಿದ್ದರು. ಸ್ನೇಹಿತರ ಜೊತೆ ಸೇರಿ ತಮ್ಮದೇ ಒಂದು ತಂಡ ಕಟ್ಟಿಕೊಂಡು ವೀಕೆಂಡ್‌ಗಳಲ್ಲಿ ಕೆಲ ಏರಿಯಾಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಜನರಿಗೆ ಮನರಂಜನೆಯನ್ನೂ ಕೊಡುತ್ತಿದ್ದರು. ಇವರದ್ದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಹೊಂದಿದ್ದು, ಅದಕ್ಕೆ ಲೊಲ್ಭಾಗ್ ಎಂದು ಹೆಸರಿಟ್ಟಿದ್ದಾರೆ. ಆಕಸ್ಮಿಕವಾಗಿ ಸಿನಿಮಾ ಸೆಟ್‌ನಲ್ಲಿ ಭೇಟಿಯಾಗಿ ಕೊನೆಗೆ ಜೋಡಿಯಾದ ಇವರಿಬ್ಬರು ಮದುವೆಯಾಗಿ 7 ವರ್ಷಗಳೇ ಕಳೆದಿದೆ.

ಕಿರುತೆರೆಯಲ್ಲಿ ಮಿಂಚುತ್ತಿರುವ ತಾಂಡವ್

ಕಳೆದ ಒಂದು ವರ್ಷದಿಂದ ಸುದರ್ಶನ್ ಕಿರುತೆರೆಗೆ ಎಂಟ್ರಿಕೊಟ್ಟು ಮಿಂಚುತ್ತಿದ್ದಾರೆ. ತಾಂಡವ್ ಪಾತ್ರವನ್ನು ವೀಕ್ಷಕರು ಬೈದುಕೊಂಡೇ ಮೆಚ್ಚಿಕೊಂಡಿದ್ದಾರೆ. 'ಭಾಗ್ಯಲಕ್ಷ್ಮೀ' ಸುದರ್ಶನ್ ಮೊದಲ ಸೀರಿಯಲ್. ಇದರಲ್ಲಿ ಭಾಗ್ಯ, ಪತಿ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸುದರ್ಶನ್ ರಂಗಪ್ರಸಾದ್ ಹಾಗೂ ಪತ್ನಿ ಸಂಗೀತಾ ಭಟ್ ಆಗಾಗ ಪ್ರವಾಸ ಹೋಗಲು ಬಯಸುತ್ತಾರೆ. ಆಗಾಗ ಇಬ್ಬರೂ ಸುಂದರವಾದ ಫೋಟೋಶೂಟ್ ಕೂಡ ಮಾಡಿಸಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

More from Filmibeat

English summary
sudarshan rangaprasad and sangeetha bhat love story;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X