ಭಾಗ್ಯಾಳ ನಿಜ ಬಣ್ಣ ತಿಳಿಬೇಕು ಅಂದ್ರೆ ಈ ವಿಡಿಯೋ ನೋಡಿ; ಸೆಟ್‌ನಲ್ಲಿದ್ದವರಿಗೆ ಭಯ ಆಗದೆ ಇದ್ದದ್ದು ಹೆಚ್ಚು..!

By ಎಸ್ ಸುಮಂತ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸದ್ಯ ಶ್ರೇಷ್ಠಾ ಹಾಗೂ ತಾಂಡವ್ ಮದುವೆ ನಿಂತಿದೆ. ಕುಸುಮಾ ಸೊಸೆಯ ಜೀವನ ಹಾಳಾಗುವುದಕ್ಕೆ ಎಂದಿಗೂ ಬಿಡುವುದಿಲ್ಲ. ಸೊಸೆಗೋಸ್ಕರ ಮಗನನ್ನೇ ಎದುರಾಕಿಕೊಂಡಿದ್ದಳು. ಈಗ ಮಗ ಮನೆಗೆ ಮೋಸ‌ ಮಾಡುವುದಕ್ಕೆಂದು ಹೋದರೆ ಬಿಡುತ್ತಾಳಾ..? ಮದುವೆ ಮನೆಯಿಂದನೇ ಧರಧರನೇ ಎಳೆದುಕೊಂಡು ಬಂದಿದ್ದಾಳೆ. ಈ ರೀತಿ ಅನ್ಯಾಯವಾಗುವುದಕ್ಕೆ ಖಂಡಿತ ಬಿಡುವುದಿಲ್ಲ ಎಂದು ತಾಂಡವ್ ಗೆ ಎಚ್ಚರಿಕೆ ನೀಡಿದ್ದಾಳೆ.

ತಾಂಡವ್ ಮತ್ತೆ ಅಮ್ಮನಿಗೆ ಸವಾಲಾಕಿ, ಸಮಯ ಕೊಟ್ಟಿದ್ದಾನೆ. ಅವಳು ನನಗೆ ಇಷ್ಟವಾಗುವ ರೀತಿ ಇಲ್ಲ ಎಂದಿದ್ದಾನೆ. ತಾಂಡವ್‌ಗೆ ಬುದ್ದಿ ಕಲಿಸುವ ದಾರಿ ಹುಡುಕಿದ ಕುಸುಮಾ, ನಿನಗೆ ಇಷ್ಟವಾಗುವಂತೆ ಸೊಸೆಯನ್ನು ಬದಲಾಯಿಸಿ ತೋರಿಸುತ್ತೀನಿ ಎಂದು ಹೊರಟಿದ್ದಾಳೆ. ಆದರೆ ಇದೆಲ್ಲದರ ಹಿಂದೆ ಎಷ್ಟು ಪರಿಶ್ರಮ ಇದೆ, ಮದುವೆ ಮನೆಯಲ್ಲಿ ಎಷ್ಟೆಲ್ಲಾ ಫನ್ ನಡೆದಿದೆ ಅನ್ನೋದು ಸುಷ್ಮಾ ಸೋಷಿಯಲ್ ಮೀಡಿಯಾ ನೋಡಿದಾಗಲೇ ಗೊತ್ತಾಗಿದ್ದು.

Bhagyalakshmi serial fame Sushma K Rao shares funny BTS video

ಗರಗಸ ಹಿಡಿದು ಓಡಾಡಿದ ಭಾಗ್ಯಾ

ಸೆಟ್‌ನಲ್ಲಿ ಭಾಗ್ಯಾ ಕೈಗೆ ಗರಗಸ ಸಿಕ್ಕಿದೆ. ಆ ಗರಗಸ ಹಿಡಿದು ಮಚ್ಚು ಹಿಡಿದ ರೇಂಜಿಗೆ ಓಡಾಡಿದ್ದಾರೆ. ತಾಂಡವ್ ಎಲ್ರೋ ಅಂತ ಕೇಳಿದ್ದಾರೆ. ಮದುವೆ ಆಗ್ತೀಯಾ ಅಂತ ಗರಗಸ ತೋರಿಸಿದ್ದಾರೆ. ಅಲ್ಲಿಯೇ ವಿಡಿಯೋ ಮಾಡುತ್ತಿದ್ದ ತಾಂಡವ್, ಭಾಗ್ಯಾಳನ್ನು ರೇಗಿಸಿದ್ದಾರೆ.

ಎಲ್ಲರನ್ನು ಹೆದರಿಸಿದ ಭಾಗ್ಯಾ

ಸೆಟ್‌ನಲ್ಲಿ ಅದು ಬ್ರೇಕ್ ಟೈಮ್ ಅನ್ಸುತ್ತೆ. ಎಲ್ಲರು ಒಟ್ಟಿಗೆ ಕೂತಿದ್ದರು. ಆಗ ಭಾಗ್ಯಾ, ತಾಂಡವ್ ಮದುವೆ ಆಗುವುದಕ್ಕೆ ರೆಡಿಯಾಗಿದ್ರೆ, ನೀವೂ ಮಾಡಿಸುವುದಕ್ಕೆ ರೆಡಿಯಾಗಿದ್ದೀರಾ ಎಂದು ಗರಗಸ ತೋರಿಸಿ ಭಯ ಹುಟ್ಟಿಸಿದ್ದಾರೆ. ಅಲ್ಲೇ ವಿಡಿಯೋ ಮಾಡುತ್ತಾ ನಿಂತಿದ್ದ ತಾಂಡವ್, ಇದು ಭಾಗ್ಯಾಳ ನಿಜ ರೂಪ ಎಂದಿದ್ದಾರೆ. ಇನ್ನೊಬ್ರು ಆ ಗರಗಸ ನೋಡೊ, ಅಕ್ಕ ನಮ್ಮ ಮನೆಯಲ್ಲಿ ಒಂದು ಸೋಫಾ ಮಾಡಬೇಕು ಮಾಡಿಕೊಡ್ತೀರಾ ಎಂದು ಕೇಳಿದ್ದಾರೆ. 'ಟಗರು' ಚಿತ್ರದಲ್ಲಿ ಶಿವಣ್ಣ ಲಾಂಗ್ ಹಿಡಿದು ಬರುವ ಸ್ಟೈಲ್ ತೋರಿಸಿದ್ದಾರೆ.

ಮದುವೆ ಮಂಟಪದಲ್ಲಿ ಬಿದ್ದ ಶ್ರೇಷ್ಠಾ

ಇನ್ನು ಮದುವೆ ಮಂಟಪದಲ್ಲಿ ಶ್ರೇಷ್ಠಾ ಬಿದ್ದು ಬಿಟ್ಟಿದ್ದಾರೆ. ಅದರ ವಿಡಿಯೋವನ್ನು ಭಾಗ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ತಾಂಡವ್ ಕೂಡ ಆ ವಿಡಿಯೋದಲ್ಲಿ ಖುಷಿ ಖುಷಿಯಾಗಿ ಮಾತಾಡಿರುವುದನ್ನು ನೋಡಬಹುದು. ಭಾಗ್ಯಾ, ತಾಂಡವ್, ಶ್ರೇಷ್ಠಾ ನಡುವೆ ಉತ್ತಮ ಬಾಂಧವ್ಯವಿದೆ ಎಂಬುದಕ್ಕೆ ಇದೆ ಸಾಕ್ಷಿ. ತೆರೆ ಮೇಲಷ್ಟೇ ಭಾಗ್ಯಾ ಹಾಗೂ ಶ್ರೇಷ್ಠಾ ದುಷ್ಮನ್. ಕ್ಯಾಮೆರಾ ಆಫ್ ಆಯ್ತು ಅಂದ್ರೆ ಇಬ್ಬರ ನಡುವೆ ಅದ್ಭುತವಾದ ಅನ್ಯೋನ್ಯತೆ ಇದೆ ಎಂಬುದು ಅದರಲ್ಲೇ ಗೊತ್ತಾಗುತ್ತೆ.

ಸೆಟ್‌ನಲ್ಲಿ ನಕ್ಕು ನಲಿಸುವ ಭಾಗ್ಯಾ

ಭಾಗ್ಯಾ ಅಲಿಯಾಸ್ ಸುಷ್ಮಾ ಸದಾ ಲವಲವಿಕೆಯಿಂದ ಇರುವ ಹೆಣ್ಣು ಮಗಳು ಅವರ ಜೊತೆಗೆ ಇದ್ದರೆ ಯಾರಿಗೂ ಬೇಸರ ಆಗಲ್ಲ. ನಗು ಅನ್ನೋದು ಮಾಸುವುದಿಲ್ಲ. ನಕ್ಕು ನಲಿಸುವ ಗುಣವಂತೆ ಈ ಸುಷ್ಮಾ. ಭಾಗ್ಯಾಗೆ ಅದೆಷ್ಟು ಜನ ಮಹಿಳೆಯರು ಅಭಿಮಾನಿಗಳಿದ್ದಾರೆ ಅಂದ್ರೆ, ಈ ಬಾರಿ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಡಿಟ್ಟೋ ಭಾಗ್ಯಾಳಂತೆಯೇ ಅಲಂಕಾರಭೂಷಿತರಾಗಿ ಬಂದು ನಿಂತಿದ್ದರು. ಅದನ್ನು ನೋಡಿದ ಸುಷ್ಮಾಗೆ ಭಾಗ್ಯಾ ಪಾತ್ರ ಮಾಡಿದ ಸಾರ್ಥಕ ಭಾವ ಮೂಡಿತ್ತು. ಎಲ್ಲರಿಗೂ ಖುಷಿಯಿಂದ ನಮಸ್ಕರಿಸಿದರು.

More from Filmibeat

English summary
colors kannada serial Bhagyalakshmi Written Update on Bhagya share fun video. Here is the details about Sushma K Rao funny video;
Read more about: filmbeat original sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X