Bhagyalakshmi:ಶ್ರೇಷ್ಠಾಳ ಚಳಿ ಬಿಡಿಸಿದ ಕುಸುಮಾ: ಇನ್ನಾದರೂ ಶ್ರೇಷ್ಠಾಗೆ ಬುದ್ದಿ ಬರುತ್ತಾ?.

By ಪೂರ್ವ

ಭಾಗ್ಯ ತಾಂಡವ್ ಮೇಲೆ ತನ್ನ ಜೀವವನ್ನೇ ಇಟ್ಟುಕೊಂಡಿದ್ದಾಳೆ. ಆದರೆ ತಾಂಡವ ಮಾತ್ರ ಭಾಗ್ಯಾಳನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡುತ್ತಿದ್ದಾನೆ. ಆತನಿಗೆ ಮಕ್ಕಳು ಮಾತ್ರ ಬೇಕು. ಆದರೆ, ಹೆಂಡತಿ ಬೇಡ. ಆದರೆ ಮಕ್ಕಳು ತನ್ನ ತಾಯಿಯನ್ನು ನೆನಪಿಸಿಕೊಂಡು ಅಳುತ್ತಿದ್ದಾರೆ. ತಾಯಿಗೆ ತನ್ನ ಮಕ್ಕಳ ಮುಖವನ್ನು ನೋಡದಿರಲು ಸಾಧ್ಯ ಆಗುವುದಿಲ್ಲ. ಆದಕಾರಣ ತಾಂಡವ್ ಮನೆಗೆ ಭಾಗ್ಯಾ ಬಂದು ಮಕ್ಕಳ ಜೊತೆ ಮಾತನಾಡಿ, ಗಂಡ ಮಾಡಿದ ಅವಮಾನವನ್ನೆಲ್ಲ ಸಹಿಸಿಕೊಂಡು ಭಾಗ್ಯಾ ಪುನಃ ಮನೆಗೆ ವಾಪಸ್ ಆಗಿದ್ದಾಳೆ.

ಭಾಗ್ಯಾಗೆ ಇದೀಗ ಶಾಲೆಯಲ್ಲಿ ಇನ್ನೊಂದು ರೀತಿಯ ಕಿರುಕುಳ ಆರಂಭವಾಗಿದೆ. ಭಾಗ್ಯಾ ಏನೇ ಕೆಲಸ ಮಾಡಬೇಕೆಂದುಕೊಂಡರು ಅದೆಲ್ಲವೂ ಸಾಧ್ಯ ಆಗುತ್ತಿಲ್ಲ. ಭಾಗ್ಯಾಗೆ ಎಲ್ಲರೂ ಎದುರಾಗಿ ನಿಲ್ಲುತ್ತಿದ್ದಾರೆ. ಆದರೆ, ಅದೆಲ್ಲವನ್ನು ಸಹಿಸಿಕೊಂಡಿದ್ದ ಭಾಗ್ಯಾ ಮಾತ್ರ ತನ್ನ ಗಂಡನಿಗೆ ಬುದ್ಧಿ ಬರಲಿ ಎನ್ನುವುದಕ್ಕೋಸ್ಕರ ಒಂದು ವಾರದ ಒಪ್ಪಂದಕ್ಕೆ ಒಪ್ಪಿಗೆಯ ಮುದ್ರೆಯನ್ನು ಸೂಚಿಸುತ್ತಾಳೆ.

Bhagyalakshmi serial February 27th episode update

ಇದೇ ವೇಳೆ ತಾಂಡವ್ ತನ್ನ ಇಬ್ಬರು ಮಕ್ಕಳನ್ನು ಹಾಗೂ ತನ್ನ ತಂದೆ ತಾಯಿಯನ್ನು ಕರೆದುಕೊಂಡು ರೆಸ್ಟೋರೆಂಟ್‌ಗೆ ಬರುತ್ತಾನೆ. ಅಲ್ಲಿ ಶ್ರೇಷ್ಠಾಳನ್ನು ನೋಡಿ ತಾಂಡವ್‌ಗೆ ತಲೆ ಕೆಟ್ಟು ಹೋಗುತ್ತೆ . ಇದೀಗ ನನ್ನ ತಂದೆ ತಾಯಿಯವರಿಗೆ ಖಂಡಿತವಾಗಿಯೂ ನನ್ನ ಮೇಲೆ ಡೌಟ್ ಬಂದೇ ಬರುತ್ತದೆ. ಶ್ರೇಷ್ಠಾ ಮಾಡಿದ ಕಿತಾಪತಿಯಿಂದಾಗಿ ಬಹಳ ದೊಡ್ಡ ಗಂಡಾಂತರ ಕಾದಿದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಶ್ರೇಷ್ಠಾಳನ್ನ ನೋಡಿದ ಕುಸುಮಾಗೆ ಬಹಳ ಸಿಟ್ಟು ಬರುತ್ತೆ. ನನ್ನ ಮಗ ಎಲ್ಲಿ ಹೋಗುತ್ತಾನೆ ಅಲ್ಲಿ ಈಕೆ ಇರುತ್ತಾಳೆ. ಇವತ್ತು ಮಾತ್ರ ಶ್ರೇಷ್ಠಾ ಚಳಿ ಬಿಡಿಸುತ್ತೇನೆ ಎಂದು ಮನದಲ್ಲಿ ಅಂದುಕೊಂಡು ಶ್ರೇಷ್ಠಾಳನ್ನು ಪ್ರಶ್ನೆ ಮಾಡುತ್ತಾರೆ.

ಶ್ರೇಷ್ಠಾಗೆ ಪ್ರಶ್ನೆ ಮಾಡಿದ ಕುಸುಮ

ಕುಸುಮಾ ಯಾಕಾಗಿ ಇಲ್ಲಿಗೆ ಬಂದೆ ಎಂದು ಕೇಳಿದಾಗ ಶ್ರೇಷ್ಠಾಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತೆ. ಆದರೂ ಸಂಭಾಳಿಸಿಕೊಂಡು "ಅದು ಇಲ್ಲಿ ಮೀಟಿಂಗ್ ಇದೆ.. ಆದ ಕಾರಣ ಬಂದಿದ್ದೇನೆ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕುಸುಮಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಕೊನೆಗೆ ಶ್ರೇಷ್ಠಾ ನಿಜ ವಿಚಾರ ಬಾಯಿ ಬಿಡುತ್ತಾಳೆ.

Bhagyalakshmi serial February 27th episode update

ಕುಸುಮಾ ಡೈಲಾಗ್‌ಗೆ ನಲುಗಿದ ಶ್ರೇಷ್ಠಾ

ನನ್ನನು ತಾಂಡವ್ ಸರ್ ಬರಲು ಹೇಳಿದರು. "ಮಕ್ಕಳನ್ನು ನಿಭಾಯಿಸಲು ನನ್ನಿಂದ ಒಬ್ಬರಿಂದಲೆ ಸಾಧ್ಯ ಇಲ್ಲ. ನೀನು ಬಾ ಎಂದರು. ಅದಕ್ಕೆ ಬಂದೆ" ಎಂದಾಗ ಕುಸುಮಾ ಮತ್ತೆ ಶ್ರೇಷ್ಠಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. "ಆತ ಕರೆದ ಎಂದ ತಕ್ಷಣ, ನೀನು ಬಂದೆ ಅಲ್ಲ ಯಾಕೆ? ಮಕ್ಕಳನ್ನು ನಿಭಾಯಿಸಲು ನಾನು ಇದ್ದೇನೆ. ಇಲ್ಲಿ ನಿನ್ನ ಅವಶ್ಯಕತೆಯಿಲ್ಲ. ನನಗೆ ನಿನ್ನ ಬಗ್ಗೆ ಎಲ್ಲಾ ತಿಳಿದಿದೆ. ಎಲ್ಲಾ ವಿಚಾರ ಪೂಜಾ ನನಗೆ ತಿಳಿಸಿದ್ದಾಳೆ" ಎಂದು ಹೇಳುತ್ತಾರೆ. ಇದನ್ನೆಲ್ಲ ಕೇಳಿದ ಶ್ರೇಷ್ಠಾ ಹೌ ಹಾರುತ್ತಾಳೆ. ಇನ್ನೂ ಪೂಜಾ ಸುಂದರಿ ಬಳಿ ಎಲ್ಲಾ ನಿಜ ವಿಚಾರವನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಆಕೆಗೆ ತಾಂಡವ್‌ನ ಎರಡನೇ ಮುಖದ ಅನಾವರಣ ಆಗಿದೆ. ತಾಂಡವ್ ಅದೆಂಥ ಚಾಲಾಕಿ ನಾಟಕ ಆಡಿ ತನ್ನ ಅಕ್ಕನ ಜೀವನ ಹಾಳು ಮಾಡಿದ್ದಾನೆ. ನನಗೆ ಮಾತ್ರ ಅದು ಬಹಳ ನೋವು ತಂದಿದೆ ಎಂದು ಸುಂದರಿ ಬಳಿ ಪೂಜಾ ನೋವು ಹೇಳಿಕೊಳ್ಳುತ್ತಿರುತ್ತಾಳೆ.

More from Filmibeat

English summary
Bhagyalakshmi serial February 27th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X