Bhagyalakshmi:ಗುಂಡಣ್ಣನ ಮೇಲೆ ಕೈ ಮಾಡಿದ ತಾಂಡವ್; ತಂದೆಯ ವರ್ತನೆ ನೋಡಿ ಭಯಗೊಂಡ ಮಗ

By ಪೂರ್ವ

ಭಾಗ್ಯಾ ತಾಂಡವ್‌ನಿಂದ ಸದ್ಯದ ಮಟ್ಟಿಗೆ ದೂರ ಇರುವ ವಿಚಾರ ತಿಳಿದಿದೆ. ಇದೆ ಕಾರಣ ಗುಂಡಣ್ಣ ತನ್ನ ತಂದೆಯೊಂದಿಗೆ ಬಹಳ ರೂಡ್ ಆಗಿ ನಡೆದುಕೊಳ್ಳುತ್ತಾನೆ. ಅಮ್ಮ ಅಪ್ಪನಿಗೆ ವಿಚ್ಚೇದನ ಆಗುತ್ತದೆ ಎಂದು ಅಜ್ಜಿ ಹೇಳಿದ ಮಾತು ಕೇಳಿ ಗುಂಡಣ್ಣ ಮಾತ್ರ ಬಹಳ ಬೇಸರಗೊಂಡಿದ್ದಾನೆ.

ಅಮ್ಮ ಅಂದರೆ ಗುಂಡಣ್ಣಗೆ ಪ್ರಾಣ. ಅಮ್ಮ ಮನೆ ಬಿಟ್ಟು ಹೋಗುತ್ತಾಳೆ ಎಂದು ತಿಳಿದ ಗುಂಡಣ್ಣ ತಂದೆಯ ಬಳಿ ಕೇಳುತ್ತಾನೆ. "ಅಮ್ಮ ಯಾಕೆ ನಮ್ಮಿಂದ ದೂರ ಆಗಿದ್ದಾಳೆ. ಆಕೆಗೆ ಹುಷಾರಿಲ್ಲ ಎಂದು ಸುಳ್ಳು ಬೇರೆ ಹೇಳಿದ್ದೀರ?. ಯಾಕೆ ಹೀಗೆಲ್ಲ ಮಾಡುತ್ತಿದ್ದೀರ ಎಂದು ಕೇಳುತ್ತಾನೆ" ಇದನ್ನು ಕೇಳಿದ ತಾಂಡವ್‌ಗೆ ಏನು ಉತ್ತರ ಕೊಡಬೇಕೋ ಗೊತ್ತಾಗುವುದಿಲ್ಲ.

Bhagyalakshmi serial February 29th update on Thandav agression on his son

ಅಮ್ಮ ಬೇಕೆಂದು ಸಾಕಷ್ಟು ಒತ್ತಾಯ ಮಾಡುತ್ತಾನೆ ಗುಂಡಣ್ಣ. ಗುಂಡಣ್ಣನ ಮಾತು ಕೇಳಿ ತಾಂಡವ್ ಆತನ ಮನ ಓಲೈಸಲು ಶುರು ಮಾಡುತ್ತಾನೆ. ಆದರೆ ಏನೂ ಪ್ರಯೋಜನ ಆಗುವುದಿಲ್ಲ. ಇನ್ನೂ ಶ್ರೇಷ್ಠಾ ಮಾತ್ರ ತಾಂಡವ್ ಹೇಗಾದರೂ ನನ್ನವರು ಆಗಬೇಕು. ಭಾಗ್ಯನಿಂದ ಹೇಗಾದರೂ ಮಾಡಿ ತಾಂಡವ್‌ನನ್ನು ದೂರ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ತಾಂಡವ್ ಮಾತ್ರ ತನ್ನ ಮಕ್ಕಳು ತನ್ನ ಸಂಸಾರ ಎನ್ನುವ ಗುಂಗಿನಲ್ಲಿ ಇರುತ್ತಾನೆ. ಆದರೆ, ಶ್ರೇಷ್ಠಾ ಮಾತ್ರ ಬಹಳ ಸ್ವಾರ್ಥದಿಂದ ಹೇಗಾದರೂ ಮಾಡಿ ತಾಂಡವ್ ನನ್ನವನಾಗಬೇಕು. ಇವತ್ತು ರೆಸ್ಟೋರೆಂಟ್‌ನಲ್ಲಿ ನಡೆಯಲಿದ್ದ ಆರೆಂಜ್‌ಮೆಂಟ್ ಎಲ್ಲಾ ಹಾಳು ಮಾಡಿ ಹೇಗಾದರೂ ಮಾಡಿ ತಾಂಡವ್‌ನನ್ನು ಕರೆದುಕೊಂಡು ಹೋಗಿಯೇ ಹೋಗುತ್ತೇನೆ ಎಂದು ಯೋಚನೆ ಮಾಡುತ್ತಾ ಆ ಸಮಯಕ್ಕಾಗಿ ಹೊಂಚು ಹಾಕುತ್ತಾ ಇರುತ್ತಾಳೆ. ಇನ್ನೂ ಗುಂಡಣ್ಣ ಅದ್ಯಾಕೋ ಅಮ್ಮ ಬೇಕು ನನಗೆ ಇಲ್ಲಿಗೆ ಕರೆದುಕೊಂಡು ಬನ್ನಿ ಎಂದು ಹೇಳುತ್ತಾನೆ. ಆದರೆ ಅದಕ್ಕೆ ತಾಂಡವ ಒಪ್ಪುವುದಿಲ್ಲ.

Bhagyalakshmi serial February 29th update on Thandav agression on his son

ಯಾರ ಮಾತೂ ಕೇಳದ ಗುಂಡಣ್ಣ

ಆದರೆ ಗುಂಡಣ್ಣ ಯಾರ ಮಾತೂ ಕೇಳದೆ ನನಗೆ ಅಮ್ಮ ಬೇಕು ಎಂದು ಓಡಲು ಮುಂದಾಗುತ್ತಾನೆ. ಇದನ್ನು ನೋಡಿದ ಕುಸುಮಗೆ ಏನು ಮಾಡಬೇಕು ತಿಳಿಯದಾಗಿ ಹೋಗುತ್ತೆ. ಬಳಿಕ ತಾಂಡವ್ ಓಡಿ ಹೋಗಿ ಗುಂಡಣ್ಣನನ್ನು ತಡೆಯುತ್ತಾನೆ. ಜೊತೆಗೆ ಆತನ ಕೆನ್ನೆಗೆ ಹೊಡೆಯಲು ಮುಂದಾಗುತ್ತಾನೆ. ಇದನ್ನು ನೋಡಿದ ಗುಂಡಣ್ಣಗೆ ಶಾಕ್ ಆಗುತ್ತೆ. ತಲೆ ತಿರುಗಿ ಬೀಳುತ್ತಾನೆ. ಇತ್ತಾ ಭಾಗ್ಯಾಗೆ ಅದ್ಯಾಕೋ ತಳಮಳ ಆಗುತ್ತಿರುತ್ತೆ.

ಭಾಗ್ಯಾಗೆ ಮನದಲ್ಲಿ ತಳಮಳ

ಏನಾಯಿತೋ ಏನೋ ಮನಸ್ಸು ಮಾತ್ರ ತಡೆಯುತ್ತಿಲ್ಲ ಎಂದು ಅಮ್ಮನ ಬಳಿ ಹೇಳುತ್ತ ಇರುತ್ತಾಳೆ..ಅದರಲ್ಲಿ ಬೇರೆ ಕಾಲಿಗೆ ಗಾಯವನ್ನು ಮಾಡಿಕೊಂಡು ಇರುತ್ತಾಳೆ. ಇದನ್ನು ನೋಡಿದ ಸುನಂದಾ ಭಾಗ್ಯಾಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇತ್ತ ಗುಂಡಣ್ಣನಿಗೆ ಟ್ರೀಟ್ ಮಾಡಲು ಡಾಕ್ಟರ್ ಬರುತ್ತಾರೆ. ಗುಂಡಣ್ಣ ಮೆತ್ತಗೆ ರಿಕವರ್ ಆಗುತ್ತಿರುತ್ತಾನೆ. ಆದರೆ, ಅಮ್ಮ ಬೇಕು ಎನ್ನುವುದು ಮಾತ್ರ ನಿಲ್ಲುತ್ತಿಲ್ಲ. ಅಮ್ಮನ ಮೇಲೆ ಗುಂಡನಿಗೆ ಅಪಾರವಾದ ಪ್ರೀತಿ. ಆದರೆ, ತಾಂಡವ್‌ಗೆ ಭಾಗ್ಯಳನ್ನು ಕಂಡರೆ ಆಗುವುದು ಇಲ್ಲ .

ಡಾಕ್ಟರ್‌ಗೆ ಕರೆ ಮಾಡಿದ ತಾಂಡವ್

ಒಟ್ಟಿನಲ್ಲಿ ಏನು ಮಾಡಬೇಕು ಎಂದು ತಿಳಿಯದೇ ಡಾಕ್ಟರ್ ಹೇಳಿದ ಪ್ರಕಾರ ರೆಸಾರ್ಟ್‌ಗೆ ಭಾಗ್ಯಾ ಕರೆ ಮಾಡಿ ಬಾ ಎಂದು ಹೇಳುತ್ತಾನೆ. ಇದನ್ನು ನೋಡಿದ ಕುಸುನಾ ಮಗನ ಬಳಿ ಬಂದು ಹೇಳುತ್ತಾರೆ. "ಇದೇನಿದು ಈ ರೀತಿ ಯಾರಾದರೂ ಕರೆಯುತ್ತಾರಾ?" ಎಂದು ಹೇಳಿದಾಗ ತಾಂಡವ್ "ನಾನು ಇರುವುದೇ ಹೀಗೆ" ಎಂದು ಜೋರಾಗಿ ಹೇಳುತ್ತಾನೆ. ಆಗ ಭಾಗ್ಯಾಗೆ ಬಹಳ ತಳಮಳ ಆಗುತ್ತದೆ. ಏನೋ ದೊಡ್ಡ ಅನಾಹುತ ಆಗಿದೆ. ನಾನು ಬೇಗ ರೆಸಾರ್ಟ್‌ಗೆ ಹೋಗಬೇಕು ಎಂದು ಆಲೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Bhagyalakshmi serial February 29th update on Thandav agression on his son.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X