ತಾಂಡವ್‌ಗೆ ಡಿವೋರ್ಸ್ ಕೊಡು ಎಂದ ನೆಟ್ಟಿಗರು; ಹೆಣ್ಮಕ್ಕಳಿಗೆ ಮಾದರಿ ಆಗಲಿ ಎಂದ ಸೀರಿಯಲ್ ಪ್ರೇಮಿಗಳು

By ಪೂರ್ವ

ಭಾಗ್ಯಾಗೆ ತಾಂಡವ್ ಡೈವರ್ಸ್ ಪೇಪರ್ ಕಳುಹಿಸಿದ್ದಾನೆ ಎನ್ನುವ ಸುದ್ದಿ ಕೇಳಿದ ಕೂಡಲೇ ತಲೆ ತಿರುಗಿ ಬೀಳುತ್ತಾಳೆ. ಅಷ್ಟು ಗಟ್ಟಿಗಿತ್ತಿ ಆಗಿರುವ ಭಾಗ್ಯಾ ಗಂಡ ಮನೆ ಬಿಟ್ಟು ಹೋದಾಗಲೂ ಇಷ್ಟು ಅತ್ತಿರಲಿಲ್ಲ. ಆಕೆಗೆ ಒಂದೇ ಬೇಜಾರು ನನ್ನ ಗಂಡ ನನ್ನನ್ನು ಹಾಗೂ ನನ್ನ ಮಕ್ಕಳನ್ನು ಅನಾಥರನ್ನಾಗಿ ಮಾಡಬಾರದು. ನನ್ನ ಮಕ್ಕಳಿಗೆ ಕೂಡ ಕುಟುಂಬ ಇರಬೇಕು ಎಂದೆಲ್ಲ ಹೇಳಿ ಬಹಳ ಜೋರಾಗಿ ಅತ್ತು ಬಿಟ್ಟಿದ್ದಳು.

ಆದರೆ ನೆಟ್ಟಿಗರು ಭಾಗ್ಯಾ ಅಳುತ್ತಾ ಇರುವುದನ್ನು ನೋಡಿ, "ಯಾಕೆ ಭಾಗ್ಯಾ ಇಷ್ಟೊಂದು ಸಾಫ್ಟ್ ಆಗಿ ಬಿಟ್ಟರೆ ಹೇಗೆ? ಗಂಡ ಇಲ್ಲದೆ ಇದ್ದರೆ ಜೀವನ ಇಲ್ಲ ಎಂದು ಯಾಕೆ ಅಂದುಕೊಳ್ಳುತ್ತಿರಾ" ಎಂದು ಬುದ್ದಿ ಮಾತುಗಳನ್ನು ಹೇಳಲು ಶುರುವಿಟ್ಟುಕೊಂಡಿದ್ದಾರೆ.

Bhagyalakshmi Kannada Serial Feb 7th Episode Update

ಹಾಗೆಯೇ "ಹೆಣ್ಣಿಗೆ ಗಂಡು ಮುಖ್ಯ ಅಲ್ಲ.. ಹೆಣ್ಣು ಒಬ್ಬೊಂಟಿಯಾಗಿ ಜೀವನ ಮಾಡಬಹುದು" ಎಂದು ಧೈರ್ಯದ ಮಾತುಗಳನ್ನು ಹೇಳುತ್ತಾರೆ. ಹಾಗೆಯೇ ಇನ್ನೂ ಕೆಲವರು "ಗಂಡನೇ ಸರ್ವಸ್ವ ಎಂದೆಲ್ಲ ನಂಬಿಕೊಂಡು ಆತ ಏನೇ ಹಿಂಸೆ ಕೊಟ್ಟರೂ ಅದೆಲ್ಲವನ್ನೂ ತಡೆದುಕೊಳ್ಳುವವರಿಗೆ ನೀನು ಉತ್ತಮ ಉದಾಹರಣೆ ಆಗಬೇಕು ಭಾಗ್ಯಾ" ಎಂದೆಲ್ಲ ಹೇಳುತ್ತಾರೆ. ಇನ್ನು ಭಾಗ್ಯಾ ಮಾವ ತಾಂಡವ್ ಜೊತೆ ಮಾತನಾಡಿ "ಆತನಿಗೆ ಬುದ್ದಿ ಹೇಳಬೇಕು. ಮನೆಯಲ್ಲಿ ಮಡದಿ ಮಕ್ಕಳು ಇರಬೇಕಾದರೆ ಇಂತಹ ನಿರ್ಧಾರ ಸರಿ ಅಲ್ಲ ಎನ್ನುವುದನ್ನು ತಾಂಡವ್‌ಗೆ ಅರ್ಥ ಮಾಡಿಸಬೇಕು" ಎಂದು ಯೋಚನೆ ಮಾಡುತ್ತಾ ಇರುತ್ತಾನೆ.

ತಾಂಡವ್ ಆಫೀಸ್‌ಗೆ ಹೋದ ತಂದೆ, ತಾಂಡವನನ್ನು ಕಂಡ ಕೂಡಲೇ "ನಿನ್ನ ಜೊತೆ ಮಾತನಾಡಬೇಕು ಬಾ" ಎಂದು ಕರೆದುಕೊಂಡು ಹೋಗುತ್ತಾರೆ. ಇನ್ನು ತಾಂಡವ್ ಮಾಡಿದ ಕೆಲಸದ ಬಗ್ಗೆ ಹೇಳುತ್ತಾರೆ. "ಯಾಕೆ ಹೀಗೆ ಮಾಡಿದೆ ತಾಂಡವ್.. ನೀನು ಕಳುಹಿಸಿದ ಡಿವೋರ್ಸ್ ನೋಟಿಸ್ ನನ್ನ ಕೈಗೆ ಸಿಕ್ಕಿತು.. ಎಲ್ಲಾದರೂ ನಿನ್ನ ಅಮ್ಮ ಹಾಗೂ ಭಾಗ್ಯಾ ಕೈಗೆ ಸಿಕ್ಕಿದ್ದರೆ" ಎನ್ನುವಷ್ಟರಲ್ಲಿ ಅಲ್ಲಿಗೆ ಭಾಗ್ಯಾ ಹಾಗೂ ಕುಸುಮ ಬಂದಿರುತ್ತಾರೆ. ಭಾಗ್ಯಾಗೆ ಮಾವ ಹೇಳಿದ ಮಾತು ಕೇಳಿ ಆಕಾಶ ಭೂಮಿ ಒಂದಾದ ಹಾಗೆ ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದೇ ಮೌನಿಯಾಗಿ ನಿಂತು ಬಿಡುತ್ತಾಳೆ.

ಮಾವನ ಮಾತು ಕೇಳಿ ಕುಸಿದು ಹೋದ ಭಾಗ್ಯ

ಇತ್ತ ಕುಸುಮ ಮಾತ್ರ ಮಗ ಮಾಡಿದ ಕೆಲಸಕ್ಕೆ ಆತನಿಗೆ ಸರಿಯಾಗಿ ನಿಂದಿಸುತ್ತಾರೆ. "ಯಾಕೆ ಹೀಗೆ ಮಾಡಿದೆ ತಾಂಡವ್? ಭಾಗ್ಯಾ ಏನು ತಪ್ಪು ಮಾಡಿದ್ದಾಳೆ ಎಂದು ಆಕೆಗೆ ಈ ಶಿಕ್ಷೆ" ಎಂದೆಲ್ಲ ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಇನ್ನು ಭಾಗ್ಯಾ ಮಾತ್ರ ತಾಂಡವ್ ಮಾತು ಕೇಳಿ ದಿಗ್ಭ್ರಮೆ ಆಗಿ ಬಿಡುತ್ತದೆ. ತಾಂಡವ್ ಮೆತ್ತಗೆ ಭಾಗ್ಯಾ ಬಳಿ ಬಂದು ಕೈ ಹಿಡಿದುಕೊಳ್ಳುತ್ತಾನೆ. "ಭಾಗ್ಯಾ ನೀನು ನನ್ನನ್ನೂ ಅರ್ಥ ಮಾಡಿಕೊಳ್ಳುತ್ತಿಯಾ ಅಲ್ವಾ ... ನಿನಗೂ ನನಗೂ ಸೆಟ್ ಆಗುತ್ತಿಲ್ಲ. ಈ ವಿಚಾರ ನನಗೂ ನಿನಗೂ ತಿಳಿದಿದೆ. ನನಗೆ ಈ ಅಡ್ಜಸ್ಟ್ ಮಾಡಿಕೊಂಡು ಬದುಕುವುದು ಸಾಕಾಗಿ ಹೋಗಿದೆ. ದಯವಿಟ್ಟು ನಾವಿಬ್ಬರೂ ಬೇರೆ ಆಗಿ ಬಿಡೋಣ" ಎಂದು ಹೇಳುತ್ತಾಳೆ.

Bhagyalakshmi Kannada Serial Feb 7th Episode Update

ತಾಂಡವ್ ಮಾತು ಕೇಳಿ ದಿಗ್ಭ್ರಮೆಗೊಂಡ ಭಾಗ್ಯಾ

ಇದನ್ನು ಕೇಳಿದ ಭಾಗ್ಯಾಗೆ ಏನು ಮಾತನಾಡಬೇಕು ಎಂದು ತಿಳಿಯದಾಗಿ ಹೋಗುತ್ತದೆ. ಇತ್ತ ಕುಸುಮ ಹಾಗೂ ಆಕೆಯ ಗಂಡ ಮಗ ಮಾತಾನಾಡಿದ್ದುದ್ದನ್ನು ಕೇಳಿ ಶಾಕ್ ಆಗುತ್ತಾರೆ. ಮಗನಿಗೆ ಚಿನ್ನದ ಹಾಗೆ ಇರುವ ಹುಡುಗಿ ತಂದು ಮದುವೆ ಮಾಡಿದ್ದೇವೆ . ಅವರಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ. ಆದರೆ ಇದೀಗ ಇಬ್ಬರು ಬೇರೆ ಬೇರೆ ಆಗುತ್ತಿದ್ದಾರೆ ಎಂದು ತಿಳಿದ ಕೂಡಲೇ ತಾಂಡವ್ ತಂದೆಗೆ ದುಃಖ ತಡೆಯಲು ಆಗುವುದು ಇಲ್ಲ. ಭಾಗ್ಯಾಳನ್ನು ಕುಸುಮ ಸಮಾಧಾನ ಪಡಿಸುತ್ತಾ ಇರುತ್ತಾಳೆ. ಆದರೆ ಭಾಗ್ಯಾಗೆ ಮಾತ್ರ ಏನು ಮಾಡಬೇಕು? ಏನು ಹೇಳಬೇಕು? ತಿಳಿಯದೇ ಮೌನಿ ಆಗಿದ್ದಾಳೆ. ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಿದೆ.

ಭಾಗ್ಯಾ ಮುಂದಿನ ನಿರ್ಧಾರ ಎನು ?

ಭಾಗ್ಯಾಗೆ ಏನು ಮಾಡಬೇಕು ಎಂದು ತಿಳಿಯದೇ ಹೋಗುತ್ತದೆ. ಕಲ್ಲು, ಮುಳ್ಳಿನ ಹಾದಿಯಲ್ಲಿ ಇದ್ದಾಳೆ ಭಾಗ್ಯಾ. ಗಂಡನ ಕಠೋರವಾದ ಮಾತುಗಳನ್ನು ಕೇಳಿದ ಬಳಿಕ ಆಕೆಯ ಮನಸಿಗೆ ಬಹಳ ದೊಡ್ಡ ಆಘಾತ ಆಗಿರುವುದಂತು ಸತ್ಯ. ತಾಂಡವ್, ಶ್ರೇಷ್ಠ ಮಾತನ್ನು ಕೇಳಿ ಕೆಟ್ಟು ಹೋಗಿದ್ದಾನೆ. ಆಕೆಯನ್ನು ಮದುವೆ ಆಗಬೇಕು. ಹಾಗೆಯೇ ಭಾಗ್ಯಾಗೆ ಡಿವೋರ್ಸ್ ಕಳುಹಿಸಬೇಕು ಎಂದೆಲ್ಲ ಯೋಚನೆ ಮಾಡಿ ಒಂದೊಳ್ಳೆಯ ಲಾಯರ್ ಬಳಿ ಮಾತನಾಡಿ ವಿಚ್ಛೇದನಕ್ಕೆ ಎಲ್ಲವೂ ರೆಡಿ ಮಾಡುತ್ತಿದ್ದಾನೆ. ಇತ್ತ ಶ್ರೇಷ್ಠ ಬಣ್ಣದ ಮಾತುಗಳನ್ನು ಆಡಿ ಮದುವೆ ಆಗಲು ರೆಡಿ ಆಗಿದ್ದಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Bhagyalakshmi serial February 7th episode netizen demanding to gave divorce to tandav
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X