ಹೊಸ ಪಾತ್ರದ ಎಂಟ್ರಿ ಮೂಲಕ ಹೊಸ ಟ್ವಿಸ್ಟ್ ಪಡೆದ ಭಾಗ್ಯಲಕ್ಷ್ಮಿ ಧಾರಾವಾಹಿ!
"ಭಾಗ್ಯಲಕ್ಷ್ಮಿ" ಧಾರಾವಾಹಿ ಇಂದು ಕಿರುತೆರೆ ಪ್ರೇಕ್ಷಕರ ಮನಗಿದ್ದಿದೆ. ಬಹಳ ನೈಜವಾಗಿ ಒಂದು ಸಂಸಾರದ ಹುಡುಕನ್ನು ತೆರೆಸುತ್ತಿರುವುದಲ್ಲದೆ, ಹೆಣ್ಣು ಅಬಲೆ ಅಲ್ಲ ಸಬಲೆ ಎನ್ನುವುದನ್ನು ಬಹಳ ಅಚ್ಚುಕಟ್ಟಾಗಿ ಸಾರುತ್ತಿದೆ ಈ ಕಥೆ. ಗಂಡ ತಾಂಡವನನ್ನು ಬಿಟ್ಟು ಭಾಗ್ಯ ತನ್ನ ಸಂಸಾರವನ್ನು ತಾನೇ ಕಟ್ಟಿಕೊಳ್ಳುವ ನಿರ್ಧಾರ ಮಾಡಿದ್ದಾಳೆ. ಆದರೆ ಆಕೆಗೆ ಮೇಲಿಂದ ಮೇಲೆ ಬರುತ್ತಿರುವ ಸಂಕಷ್ಟಗಳು ಒಂದೆರಡು ಅಲ್ಲ.
ಭಾಗ್ಯ, ತಂಗಿ ಪೂಜೆಗೆ ಇದೀಗ ಕೆಲಸ ಸಿಕ್ಕಿದೆ. ಭಾಗ್ಯ ತಂಗಿ ಪೂಜಾ ಕೆಲಸವಿಲ್ಲದೆ ಓತ್ಲ ಹೊಡೆದುಕೊಂಡಿದ್ದಳು. ಅಕ್ಕನ ಸಂಕಷ್ಟಗಳಿಗೆ ಸಹಾಯವಾಗಬೇಕೆಂದು ಆಸೆ ಇದ್ದರೂ ಸಹ ಪೂಜಾರಿಗೆ ಯಾವುದೇ ಕೆಲಸ ಸಿಕ್ಕಿರಲಿಲ್ಲ. ಆದರೆ ಈಗ ಯಾವುದೇ ಇಂಟರ್ ವ್ಯೂ ಇಲ್ಲದೆ ಕೆಲಸ ಸಿಕ್ಕಿದೆ. ಇದೇ ಈ ಎಪಿಸೋಡ್ ನ ಹೈಲೈಟ್ ಆಗಿತ್ತು.

ಅಂದ ಹಾಗೆ ಪೂಜಾರಿಗೆ ಕೆಲಸ ಕೊಟ್ಟಿರುವುದು ಅವಳ ಕ್ಲಾಸ್ಮೇಟ್ ಕಿಶನ್! ಆದರೆ ಈ ಕಿಶನ್ ಇಲ್ಲಿಯವರೆಗೆ ಪರಿಚಯವಾಗಿರಲಿಲ್ಲ. ಆದರೆ ಈಗ ಭಾಗ್ಯಲಕ್ಷ್ಮಿ ತಂಡ ತಮ್ಮ ಹೊಸ ಸದಸ್ಯ ಕಿಶನ್‌ನ ಪರಿಚಯ ಮಾಡಿಸುತ್ತಿದೆ. ಈ ಮೂಲಕ ಕಿಶನ್ ಎನ್ನುವ ಹೊಸದೊಂದು ಪಾತ್ರದ ಎಂಟ್ರಿ ಆಗಿದೆ. ಅಂದ ಹಾಗೆ ಈ ಪಾತ್ರಕ್ಕೆ ಬಣ್ಣಹಚ್ಚುತ್ತಿರುವುದು ನಟ ರಾಜೇಶ್ ಧ್ರುವ.
"ಅಗ್ನಿಸಾಕ್ಷಿ" ಮೂಲಕ ಹೆಂಗಳೆಯರ ಮನ ಗೆದ್ದ ನಟ ರಾಜೇಶ್ ಧ್ರುವ, "ಶ್ರೀ ಗೌರಿ" ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿದ್ದರು. "ಅಗ್ನಿಸಾಕ್ಷಿ" ಧಾರಾವಾಹಿಯಲ್ಲಿ ಹೀರೋ ತಮ್ಮನ ಪಾತ್ರ ಮಾಡಿದರೆ "ಶ್ರೀಗೌರಿ" ಧಾರವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು ನಟ ರಾಜೇಶ್ ಧ್ರುವ. ಇದೀಗ ಭಾಗ್ಯಲಕ್ಷ್ಮಿ ಧಾರಾವಾಹಿ ಮೂಲಕ ಕಿಶನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟ ಹೀರೋ ನಾ ಅಥವಾ ವಿಲನ್ನಾ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಬಹಳ ಭರ್ಜರಿಯಾಗಿ ರಾಜೇಶ್ ಧ್ರುವ ಅವರ ಎಂಟ್ರಿ ಆಗಿದೆ. ಪೂಜಾ ಗೆ ಕೆಲಸ ಕೊಡಿಸುವ ಮೂಲಕ ಆಕೆಯ ಜೀವನವನ್ನು ಸುಲಭ ಮಾಡಿರುವ ಕಿಶನ್, ಇಡೀ ಕಥೆಗೆ ಯಾವ ರೀತಿ ಟ್ವಿಸ್ಟ್ ಕೊಡಲಿದ್ದಾರೆ? ಕಿಶನ್ ಹಾಗೂ ಪೂಜಾರ ನಡುವೆ ಪ್ರೇಮಾಂಕುರವಾಗುವ ಸಾಧ್ಯತೆ ಇದೆಯಾ? ಕಿಶನ್ ಒಳ್ಳೆಯವರ ಅಥವಾ ದುರುದ್ದೇಶದ ವ್ಯಕ್ತಿಯಾ? ಎಂಬಿತ್ಯಾದಿ ಹಲವು ಕುತೂಹಲಗಳು ಪ್ರೇಕ್ಷಕರಲ್ಲಿ ಮೂಡಿದೆ. ಇವೆಲ್ಲಕ್ಕೂ ಕ್ರಮೇಣ ಉತ್ತರ ಸಿಗಲಿದೆ.
ಪೂಜಾಳಿಗೆ ಕೆಲಸ ಸಿಕ್ಕಿರುವುದು, ಸದ್ಯಕ್ಕೆ ಬಹಳ ಸಂಕಷ್ಟದಲ್ಲಿರುವ ಭಾಗ್ಯಾಳಿಗೆ, ಸಹಾಯವಾಗುತ್ತದೆ. ಪೂಜಾ ಈ ಕೆಲಸವನ್ನು ಒಪ್ಪಿಕೊಂಡು ಚೆನ್ನಾಗಿ ನಿಭಾಯಿಸುತ್ತಾಳ? ಅಥವಾ ಮತ್ತೊಂದಿಷ್ಟು ಸಂಕಷ್ಟಗಳಲ್ಲಿ ಸಿಲುಕುತ್ತಾಳ? ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಜಿಮ್ ಓನರ್ ಕಿಶನ್ ಭಾಗ್ಯಳ ತಂಗಿ ಪೂಜಾಳ ಇಂಟರ್ವ್ಯೂ ಕೂಡ ಮಾಡಿದ್ದು ಕೆಲಸ ಕೊಟ್ಟಿದ್ದಾನೆ. ಅಂದ ಹಾಗೇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಕ್ಸಾಮ್ ಬರೆಯುವಾಗ ಕಿಶನ್ ಗೆ ಉತ್ತರಗಳು ಗೊತ್ತಾಗದೆ ತಡಕಾಡುತ್ತಿದ್ದ, ಆಗ ಕಾಪಿ ಚೀಟಿ, ಕಿಶನ್ ನನ್ನು ಪಾರು ಮಾಡಿದ್ದಳು ಪೂಜಾ. ಈ ಹಿನ್ನೆಲೆಯಲ್ಲಿ ಕಿಶನ್ ಅವಳಿಗೆ ಕೆಲಸ ಕೊಟ್ಟನೇ? ಎನ್ನುವ ಪ್ರಶ್ನೆ ಈಗ ಹಲವರನ್ನು ಕಾಡುತ್ತಿದೆ.
ಒಟ್ಟಿನಲ್ಲಿ ಇಷ್ಟು ದಿನ ಸಂಕಷ್ಟದಲ್ಲಿರುವ ಭಾಗ್ಯಳಿಗೆ ಪೂಜೆ ಯಾವುದೇ ರೀತಿ ಸಹಾಯ ಮಾಡುತ್ತಿಲ್ಲ ಎಂದು ಪ್ರೇಕ್ಷಕರು ಗರಂ ಆಗಿದ್ದರು, ಈಗ ಅವರ ಬೇಡಿಕೆಗೆ ಒಂದು ಅರ್ಥ ಸಿಕ್ಕಿದೆ. ಪೂಜಾ ಈ ಕೆಲಸವನ್ನು ನಿಭಾಯಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.
ಇತ್ತ ಭಾಗ್ಯ ಅಂತೂ ತನ್ನ ರುಚಿಯಾದ ಅಡುಗೆಯಿಂದಲೇ, ಹೊಸದೊಂದು ಉದ್ಯಮವನ್ನು ಆರಂಭಿಸಿದ್ದಾಳೆ. ಭಾಗ್ಯ ಕೈ ತುತ್ತು ಎನ್ನುವ ಊಟದ ಸರ್ವಿಸ್ ಓಪನ್ ಮಾಡಿದ್ದಾಳೆ. ಈಗಾಗಲೇ ಅವಳಿಗೆ ಬಹಳಷ್ಟು ಆರ್ಡರ್ ಗಳು ಸಿಗುತ್ತಿವೆ. ಇದರಿಂದಲೇ ಮನೆಯ ಇಎಂಐ ಜೊತೆಗೆ ತನ್ನ ಮಗ ಗುಂಡನ ಸ್ಕೂಲ್ ಫೀಜ್ ಅನ್ನು ಕಟ್ಟಿದ್ದಾಳೆ ಭಾಗ್ಯ.
ಭಾಗ್ಯಳನ್ನು ಪದೇಪದೇ ಕರೆದು ಅವಮಾನಿಸಿ, ಆಕೆಗೆ ಮೋಸ ಮಾಡಿ ಡಿವೋರ್ಸ್ ನೀಡಿದಷ್ಟು ಭಾಗ್ಯ ಸಿಡಿದೆದ್ದು ನಿಂತಿದ್ದಾಳೆ. ಅವಳು ಸೋಲಬೇಕೆಂದು ಆಶಿಸುತ್ತಾ ಪದೇಪದೇ ಸಂಕಷ್ಟಗಳನ್ನು ತಂದೊಡುತ್ತಿರುವ ತಾಂಡವ್ ಮುಂದೆ ಗೆಲ್ಲುತ್ತಿದ್ದಾಳೆ. ಮನೆಯವರನ್ನೆಲ್ಲ ತನ್ನ ಜೊತೆಗೆ ಇಟ್ಟುಕೊಂಡು, ಅವರೆಲ್ಲರಿಗೂ ಭಾವನಾತ್ಮಕವಾಗಿ ಬೆಂಬಲ ನೀಡುತ್ತಿದ್ದಾಳೆ. ಆರ್ಥಿಕವಾಗಿ ಸದೃಢವಾಗುವ ಪಣತೊಟ್ಟಿದ್ದಾಳೆ. ಅದಕ್ಕೆ ಸರಿಯಾಗಿ ಇದೀಗ ಪೂಜಾಳಿಗೆ ಕೆಲಸ ಸಿಕ್ಕಿರುವುದು, ಭಾಗ್ಯಳ ಗೆಲುವಿನ ರೆಕ್ಕೆಗೆ ಮತ್ತೊಂದು ಗರಿ ಸೇರಿಸಿದಂತಾಗಿದೆ.
ಈ ಹೊಸ ಬೆಳವಣಿಗೆ ಜೊತೆಗೆ ನಟ ರಾಜೇಶ್ ಧ್ರುವ ಅವರ ಕಿಶನ್ ಎಂಬ ಹೊಸ ಪಾತ್ರ ಎಂಟ್ರಿ ಆಗಿರುವುದು ಕಥೆಗೆ ಯಾವ ರೀತಿಯ ಟ್ವಿಸ್ಟ್ ಕೊಡಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ. ಇಷ್ಟು ದಿನ ಬರೀ ಜಗಳ ಮನಸ್ತಾಪ ಡಿವೋರ್ಸ್ ಅಂತಲೇ ಇದ್ದ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಇದೀಗ ಲವ್ ಆಂಗಲ್ ಆರಂಭವಾಗುತ್ತಾ ಎಂಬುದು ಪ್ರೇಕ್ಷಕರ ಕುತೂಹಲವಾಗಿದೆ.


Click it and Unblock the Notifications











