Bhagyalakshmi Serial:ಭಾಗ್ಯಾ ಕೆಲಸಕ್ಕೆ ಕುತ್ತು ತರುತ್ತಾರಾ? ಶ್ರೇಷ್ಠಾ ಮಸಲತ್ತು ಫಲಿಸುತ್ತಾ?
ಭಾಗ್ಯಾ ತನ್ನ ಮಾತಿನಂತೆ ನಡೆದುಕೊಳ್ಳುತ್ತಿದ್ದಾಳೆ. ಭಾಗ್ಯಾಗೆ ತನ್ನ ಮಾವ ತಂದೆಯ ಸಮಾನ ಎಂದು ಹೇಳಿದರೆ ತಪ್ಪಾಗದು. ತಂದೆಗಿಂತ ಬಹಳ ಪ್ರೀತಿಯಿಂದ ತನ್ನ ಮಾವನನ್ನು ನೋಡಿಕೊಳ್ಳುತ್ತಿದ್ದಾಳೆ. ಮಾವ ಸ್ಕೂಟರ್‌ನಿಂದ ಬಿದ್ದು ಏಟು ಮಾಡಿಕೊಂಡ ಕಾರಣ ಭಾಗ್ಯಾಗೆ ತನ್ನ ಮಾವ ಇನ್ನು ಮೇಲೆ ಸ್ಕೂಟರ್‌ನಲ್ಲಿ ಹೋಗುವುದು ಸರಿಯಲ್ಲ ಎಂದು ಅನ್ನಿಸುತ್ತೆ. ಅದೇ ಕಾರಣಕ್ಕೆ ಮಾವನಿಗೆ ಕಾರನ್ನು ಕೊಡಿಸಲು ಮುಂದಾಗಿದ್ದಾಳೆ.
ಭಾಗ್ಯಾ ಹೋಟೆಲ್‌ನಲ್ಲಿ ಶೆಫ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಗೆ ತನ್ನ ಕೆಲಸದ ಮೇಲೆ ಬಹಳಷ್ಟು ಶ್ರದ್ಧೆ ಭಕ್ತಿ ಇದೆ. ತನ್ನ ಮಾವನಿಗೆ ಕಾರು ಕೊಡಿಸಬೇಕು. ತನ್ನ ಮಗಳು ತನ್ವಿಯ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಇತ್ತ ತಾಂಡವ್ ಭಾಗ್ಯಾಗೆ ಯಾವುದಕ್ಕೂ ಸಹಾಯ ಮಾಡುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸುತ್ತಿಲ್ಲ. ತಾಂಡವನಿಗೆ ಶ್ರೇಷ್ಠಾ ಒಬ್ಬಳು ಇದ್ದರೆ ಸಾಕು. ಬೇರೆ ಯಾರು ಬೇಡವಾಗಿದೆ.

ಶ್ರೇಷ್ಠಾಗೆ ಅದೆಷ್ಟು ಬಾರಿ ಭಾಗ್ಯಾ ಹಾಗು ಕುಸುಮಾ ಮಂಗಳಾರತಿ ಎತ್ತಿದರು ಕೂಡ ಆಕೆಗೆ ಮಾನ ಮರ್ಯಾದೆ ಎನ್ನುವುದೇ ಇಲ್ಲ. ಇತ್ತ ಭಾಗ್ಯಾ ಉತ್ತಮ ಸ್ಥಾನಕ್ಕೆ ಏರುತ್ತಿರುತ್ತಾಳೆ. ಭಾಗ್ಯಾ ತನ್ನ ಕೆಲಸದಿಂದಾಗಿಯೇ ಇಷ್ಟೆಲ್ಲ ಹಾರಾಡುತ್ತಿದ್ದಾಳೆ. ಆಕೆಯನ್ನು ಹೇಗಾದರೂ ಮಾಡಿ ಕೆಲಸದಿಂದ ಓಡಿಸಬೇಕು ಎಂದು ಪ್ರಯತ್ನ ಪಡುತ್ತಿದ್ದಾಳೆ ಶ್ರೇಷ್ಠಾ. ಭಾಗ್ಯಾ ಏನೇ ಒಳ್ಳೆಯದು ಮಾಡಿದರೂ ಶ್ರೇಷ್ಠಾ ಅದ್ಯಾವುದನ್ನೂ ಸಹಿಸಿಕೊಳ್ಳತ್ತಿಲ್ಲ. ತಾಂಡವ್‌ಗೆ ಮನೆಯವರ ಬಗ್ಗೆ ಕೊಂಚವೂ ಕಾಳಜಿ ಇಲ್ಲದೆ ಶ್ರೇಷ್ಠಾ ಹಿಂದೆ ಮುಂದೆ ಓಡಾಡುತ್ತಿದ್ದಾನೆ.
ಭಾಗ್ಯಾ ಇದೀಗ ತನ್ನ ಮಾವನಿಗೆ ಒಳ್ಳೆಯ ಕಾರನ್ನು ಖರೀದಿ ಮಾಡಿದ್ದಾಳೆ. ಆಕೆಯ ಮಾವ ಆ ಕಾರನ್ನು ನೋಡಿ ಬಹಳಷ್ಟು ಖುಷಿ ಪಡುತ್ತಾರೆ. ತನ್ನ ಮಗ ಮಾಡದ ಕೆಲಸವನ್ನು ಸೊಸೆ ಮಾಡಿದ್ದಾಳೆ ಎನ್ನುವ ಹೆಮ್ಮೆ ಅವರಿಗೆ. ಮಗನ ಮೇಲೆ ಅಪ್ಪಿನಿಗೆ ಬಹಳ ಬೇಸರವಿದೆ. ಮನೆಯಲ್ಲಿ ಚಿನ್ನದಂತಹ ಹೆಂಡತಿ ಇರಬೇಕಾದರೆ, ಮಕ್ಕಳಿರಬೇಕಾದರೆ ಬೇರೆ ಹುಡುಗಿಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಅವರ ಮನದಾಳದ ನೋವು. ಆದರೆ ತಾಂಡವ್ ಇದೀಗ ಮನೆಗೆ ಬಂದಿದ್ದಾನೆ. ಅಷ್ಟೆಲ್ಲ ತಪ್ಪು ಮಾಡಿದ ತಾಂಡವ್‌ಗೆ ಮನೆಯಲ್ಲಿ ಆದರದ ಸ್ವಾಗತವನ್ನು ನೀಡಿದ್ದಾರೆ.

ಕುಸುಮಾ ಹಾಗೂ ಭಾಗ್ಯಾ ತಾಯಿ ಈ ಬಾರಿಯಾದರೂ ತಾಂಡವ್‌ನ ಮನವೊಲಿಸುವ ಪ್ರಯತ್ನವನ್ನು ಮಾಡು ಎಂದು ಭಾಗ್ಯಾಗೆ ಹೇಳುತ್ತಲೇ ಇರುತ್ತಾರೆ. ಆದರೆ ಭಾಗ್ಯಾ ಮನಸ್ಸಿನಲ್ಲಿ ತಾಂಡವ್ ಮೇಲೆ ಒಳ್ಳೆಯ ಅಭಿಪ್ರಾಯ ಇಲ್ಲವೇ ಇಲ್ಲ. ಯಾವಾಗ ತಾಂಡವ್ ಬೇರೆ ಹುಡುಗಿಯ ಜೊತೆಗೆ ಹೋದನೋ ಆವತ್ತೇ ಭಾಗ್ಯಾ ಮನಸ್ಸಿನಲ್ಲಿರುವ ಮಾತು ನಿಂತು ಹೋಗಿದೆ. ಆದರೆ, ತಾಂಡವ್ ಅದೆಷ್ಟೇ ಬಾರಿ ಭಾಗ್ಯಾಗೆ ಹಿಂಸೆ ಕೊಟ್ಟರು ಭಾಗ್ಯಾ ಮಾತ್ರ ತನ್ನ ಮಕ್ಕಳಿಗೋಸ್ಕರ ತಾಂಡವನ ಜೊತೆಯಿದ್ದಾಳೆ. ಹಾಗೆಯೇ ಆತ ಏನೇ ಮಾಡಿದರು ಕೂಡ ಸಹಿಸಿಕೊಂಡಿದ್ದಾಳೆ. ಇತ್ತ ಶ್ರೇಷ್ಠಾ ಹಾಗೂ ಕನ್ನಿಕಾ ಜೊತೆ ಸೇರಿಕೊಂಡು ಭಾಗ್ಯಾ ಕೆಲಸಕ್ಕೆ ಕುತ್ತು ಬರುವ ಹಾಗೆ ಮಾಡುತ್ತಿದ್ದಾರೆ. ಆದರೆ ಭಾಗ್ಯಾ ಇದ್ಯಾವುದಕ್ಕೂ ಕೂಡ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.


Click it and Unblock the Notifications











