Sushma Rao: ಭಾಗ್ಯಾಗೆ ತುಂಡುಡುಗೆ ಕೊಡಿಸಿದ ತಾಂಡವ್; ವಾವ್ ಬೇಬಿ ಅನ್ನೋದಾ ಶ್ರೇಷ್ಠಾ?

By ಎಸ್ ಸುಮಂತ್

ಭಾಗ್ಯಲಕ್ಷ್ಮೀ ಧಾರಾವಾಹಿಲ್ಲಿ ಅತ್ತೆ, ಮಾವ, ತಂಗಿ, ಸ್ನೇಹಿತೆ ಎಲ್ಲರು ಸೇರಿ ಹೇಗಾದರೂ ಮಾಡಿ ತಾಂಡವ್ ಮನಸ್ಸು ಬದಲಾಯಿಸಬೇಕಕು, ಭಾಗ್ಯಾಳ ಜೊತೆಗೆ ಸಂಸಾರ ಮಾಡುವಂತೆ ಆಗಬೇಕು ಎಂದು ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ತಾಂಡವ್‌ಗೆ ತನ್ನ ಹೆಂಡತಿ ಇಷ್ಟವಾಗಬೇಕು ಆಗ ಶ್ರೇಷ್ಠಾಳ ಸಹವಾಸ ಬಿಡುತ್ತಾನೆ. ಆದರೆ ಒಲ್ಲದ ಮನಸ್ಸಲ್ಲಿ ಭಾಗ್ಯಾಳನ್ನ ನೋಡಿದರೆ ಇಷ್ಟವಾಗೋದಾದರೂ ಹೇಗೆ ಅನ್ನೋದೆ ವೀಕ್ಷಕರ ಪ್ರಶ್ನೆ.

ತಾಂಡವ್ ಹೊಸ ನಾಟಕ ಶುರು ಮಾಡಿದ್ದಾನೆ. ಭಾಗ್ಯಾಳ ಬಳಿ ಪ್ರೀತಿಯ ನಾಟಕವಾಡುತ್ತಾ, ಎಲ್ಲರೆದುರು ಅವಮಾನ ಮಾಡುವುದನ್ನೇ ತಲೆಯಲ್ಲಿಟ್ಟುಕೊಂಡಿದ್ದಾನೆ. ಆದರೆ ಭಾಗ್ಯಾ, ತಾಂಡವ್‌ಗೆ ಬಿಟ್ಟು ನೋಡಿದವರಿಗೆಲ್ಲಾ ಇಷ್ಟವಾಗುತ್ತಿದ್ದಾಳೆ. ಇದಕ್ಕಿಂತ ಖುಷಿಯ ವಿಚಾರ ಅಂದ್ರೆ ತಾಂಡವ್ ಕೊಡಿಸಿದ ಡ್ರೆಸ್‌ನಲ್ಲಿ ಭಾಗ್ಯಾಳನ್ನು ನೋಡಿದ ಶ್ರೇಷ್ಠಾ ಹೊಗಳಿ ಅಟ್ಟಕ್ಕೇರಿಸಿದ್ದಾರೆ.

Bhagyalakshmi serial Kavya gowda comment wow baby for Sushma roa s modern look

ಭಾಗ್ಯಾಗೆ ಅವಮಾನ ಮಾಡಲು ಪಾರ್ಟಿ

ತಾಂಡವ್‌ಗೆ ತಾನು ಇಷ್ಟ ಪಡಬೇಕಾದ ಹುಡುಗಿ ಹೀಗೆ ಇರಬೇಕೆಂಬ ಒಂದಷ್ಟು ಆಲೋಚನೆಗಳಿದಾವೆ. ಅದನ್ನ ಅಮ್ಮನ ಬಳಿ ಹೇಳಿದ್ದಾನೆ‌. ಕುಸುಮಾ ಕೂಡ ಭಾಗ್ಯಾಳನ್ನು ಬದಲಿಸುತ್ತೇನೆ ಎಂದು ನಿಂತಿದ್ದಾಳೆ. ಇದಕ್ಕೆ ತಕ್ಕ ಹಾಗೇ ಒಂದು ಮಾಡ್ರನ್ ಟಾಪ್ ತಂದು ಕೊಟ್ಟು, ಪಾರ್ಟಿಗೆ ಹೀಗೆ ಬಾ ಎಂದು ತಾಂಡವ್ ಹೇಳಿದ್ದ. ಭಾಗ್ಯಾ ಒಮ್ಮೆ ಟ್ರೈ ಕೂಡ ಮಾಡಿದಳು. ಆದರೆ ಅದರಲ್ಲಿ ಮುಜುಗರ ಪಟ್ಟು, ಅಳಲು ಶುರು ಮಾಡಿದಳು. ಮತ್ತೆ ಧೈರ್ಯ ತಂದುಕೊಂಡು ಸೀರೆಯನ್ನೇ ಹಾಕಿ, ತಾಂಡವ್ ಪ್ಲ್ಯಾನ್ ತಲೆ ಕೆಳಗೆ ಮಾಡಿದಳು.

ಮಾಡ್ರನ್ ಲುಕ್‌ನಲ್ಲಿ ಭಾಗ್ಯಾ

ತಾಂಡವ್, ಭಾಗ್ಯಾಗಾಗಿ ತಂದು ಕೊಟ್ಟದ್ದು ನೀಲಿ ಬಣ್ಣದ, ಮಿಂಚುವ ಟಾಪ್. ಅದನ್ನ ಸೀರಿಯಲ್‌ನಲ್ಲಿ ಹಾಕುವುದಕ್ಕೆ ಆ ಪಾತ್ರ ಒಪ್ಪಲಿಲ್ಲ. ಆದರೆ ರಿಯಲ್ ಭಾಗ್ಯಾ ಅಲಿಯಾಸ್ ಸುಷ್ಮಾ ಆ ಟಾಪ್‌ನಲ್ಲಿ ಸೂಪರ್ ಆಗಿ ಕಾಣಿಸುತ್ತಿದ್ದಾರೆ. ಆ ಟಾಪ್ ಹಾಕಿ, ಒಂದು ಕ್ಯಾಟ್ ವಾಕ್ ಮಾಡಿ, ರೀಲ್ಸ್ ಮಾಡಿ ಅಪ್ಲೋಡ್ ಮಾಡಿದ್ದಾರೆ. ಸೀರೆ ಬಿಟ್ಟು ಭಾಗ್ಯಾ ಮಾಡ್ರನ್ ಲುಕ್‌ನಲ್ಲಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

ವಾವ್ ಬೇಬಿ ಎಂದ ಶ್ರೇಷ್ಠಾ

ಸುಷ್ಮಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆ ಬ್ಯೂಟಿಫುಲ್ ವಿಡಿಯೋ ಹಂಚಿಕೊಂಡಿದ್ದಾರೆ. ಆ ವಿಡಿಯೋಗೆ ಅಭಿಮಾನಿಗಳಿಂದಾನೂ ಸಿಕ್ಕಾಪಟ್ಟೆ ಕಮೆಂಟ್‌ಗಳು ಬಂದಿವೆ. ವಾವ್ ಭಾಗ್ಯಕ್ಕ ಈ ಲುಕ್‌ನಲ್ಲೂ ಕೂಡ ನೀವೂ ಸುಂದ್ರಿನೇ ಬಿಡಿ. ಸೂಪರ್ ಆಗಿ ಕಾಣಿಸ್ತಾ ಇದ್ದೀರಾ ಅಂತೆಲ್ಲ ಕಮೆಂಟ್ ಹಾಕಿದ್ದಾರೆ. ಇದೇ‌ ವಿಡಿಯೋಗೆ ಶ್ರೇಷ್ಠಾ ಕೂಡ ಕಮೆಂಟ್ ಹಾಕಿದ್ದು, ವಾವ್ ಬೇಬಿ ಎಂದು ಹೊಗಳಿದ್ದಾರೆ. ಆದರೆ ಈ ಕಮೆಂಟ್ ಹಾಕಿರೋದು ಕಾವ್ಯಾ ಆಗಿ ಶ್ರೇಷ್ಠಾ ಆಗಿ ಅಲ್ಲ.

ಶ್ರೇಷ್ಠಾ ಕೋಪಕ್ಕೆ ಭಾಗ್ಯಾ ಲೈಫ್ ಅತಂತ್ರ

ಧಾರಾವಾಹಿಯಲ್ಲಿ ಶ್ರೇಷ್ಠಾ ಮತ್ತು ಭಾಗ್ಯಾ ಶತ್ರುಗಳಾಗಿದ್ದಾರೆ. ಅಂದ್ರೆ ತಾಂಡವ್‌ಗಾಗಿ ಶ್ರೇಷ್ಠಾ, ಭಾಗ್ಯಾಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾಳೆ. ತಾಂಡವ್‌ಗೆ ಭಾಗ್ಯಾಳ ಮೇಲೆ ಕೋಪ ಬರುವಂತೆ ಮಾಡುತ್ತಿದ್ದಾಳೆ. ಭಾಗ್ಯಾಗಾಗಿ ಆಫೀಸ್‌ನಿಂದ ಕೊಟ್ಟ ಸೀರೆಯನ್ನು ಸುಟ್ಟು ಬಿಸಾಡಿದ್ದಾಳೆ. ಅಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಾಳೆ ಶ್ರೇಷ್ಠಾ.

More from Filmibeat

English summary
colors kannada serial Bhagyalakshmi Written Update on Sushma social media. Here is the details about Shrestha commented on Bhagya's video;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X