Bhagyalakshmi:ಇಷ್ಟು ಬೇಗ ಶ್ರೀಮಂತೆಯಾದಳೇ ಭಾಗ್ಯ? ಕೂಲಿಂಗ್ ಗ್ಲಾಸ್, ಸೂಟ್‌ಕೇಸ್‌ನಲ್ಲಿ ಹಣ.. ಏನಿದು ಕನಸಾ?
ಭಾಗ್ಯಗೆ ನೆರೆಹೊರೆಯವರು ಚುಚ್ಚು ಮಾತುಗಳಿಂದ ನಿಂದನೆ ಮಾಡಿದರು ಕೂಡ ಅದ್ಯಾವುದಕ್ಕೂ ತಲೆಗೆ ಹಾಕಿಕೊಳ್ಳದೆ ತಾನಾಯಿತು ತನ್ನ ಪಾಡಾಯಿತು ಎಂದು ಭಾಗ್ಯ ಇದ್ದು ಬಿಟ್ಟಿದ್ದಾಳೆ. ಆದರೆ ತನ್ನ ಅತ್ತೆಗೆ ಯಾರಾದರೂ ಏನಾದರೂ ಹೇಳಿದರೆ ಭಾಗ್ಯ ಸುಮ್ಮನೆ ಇರುವವಳಲ್ಲ. ಕುಸುಮಾ ಮನೆವರೆಗೆ ಬಂದ ನೆರೆಹೊರೆಯವರು ಬುದ್ದಿವಾದ ಹೇಳಲು ಶುರು ಮಾಡಿದ್ದರು.
"ಕುಸುಮಾ ಅವರೇ ನೀವು ಮಾಡುತ್ತಿರುವುದು ಸ್ವಲ್ಪ ಕೂಡ ಸರಿ ಇಲ್ಲ. ನಿಮ್ಮ ಮಗ ಏನೇ ಮಾಡಿದರೂ ನೀವು ನಿಮ್ಮ ಮಗನ ಹತ್ತಿರವೇ ಇರಬೇಕಾಗಿತ್ತು. ಅದು ಬಿಟ್ಟು ನೀವು ನಿಮ್ಮ ಮಗನನ್ನು ಮನೆಯಿಂದ ಆಚೆ ಕಳಿಸಿರುವುದು ಬಹಳ ದೊಡ್ಡ ತಪ್ಪು" ಎಂದು ಕುಸುಮಾ ಬಳಿ ಹೇಳಿದಾಗ ಆಕೆಗೆ ಬಹಳ ಸಿಟ್ಟು ಬರುತ್ತೆ. "ನನ್ನಿಷ್ಟ ನಾನು ಏನಾದರೂ ಮಾಡುತ್ತೇನೆ. ಅದೆಲ್ಲವನ್ನು ಕೇಳಲು ನೀವ್ಯಾರು?" ಎನ್ನುವ ಪ್ರಶ್ನೆ ಮಾಡಿದಾಗ, "ನೀವು ನಮ್ಮ ಮನೆಯಲ್ಲಿ ಏನಾದರೂ ಸಮಸ್ಯೆಯಾದಾಗ ಮೂಗು ತೂರಿಸಿಕೊಂಡು ಬಂದು ಏನಾದರೂ ಒಂದು ಕುಂಕುಮಾತನಾಡಿ ಹೋಗುತ್ತಿದ್ದೀರಿ. ಆದರೆ ಇದೀಗ ನಿಮ್ಮ ಮನೆಯಲ್ಲಿ ಇತರ ಘಟನೆಗಳು ನಡೆದಾಗ ನಾವು ನಿಮಗೆ ಬಂದು ಬುದ್ಧಿ ಹೇಳಿದರೆ ನಿಮಗೆ ಸಿಟ್ಟು ಬರುತ್ತೆ. ನಿಮ್ಮ ಮೇಲಿನ ಕೋಪದಿಂದ ನಾವೇನು ನಿಮಗೆ ಬುದ್ಧಿ ಹೇಳುವುದಕ್ಕೆ ಬಂದಿಲ್ಲ. ಆದರೆ ನೀವು ಮಾಡುತ್ತಿರುವುದು ತಪ್ಪು ಎನ್ನುವುದನ್ನು ಹೇಳುವುದಕ್ಕೋಸ್ಕರ ನಾವಿಲ್ಲಿಗೆ ಬಂದಿದ್ದೇವೆ" ಎಂದು ಅಕ್ಕ ಪಕ್ಕದವರು ಕುಸುಮಾ ಬಳಿ ಕೋಪ ವ್ಯಕ್ತಪಡಿಸುತ್ತಾರೆ.

ಕುಸುಮಾ ಜೊತೆ ಪೂಜಾ ಕೂಡ ಅವರ ಜೊತೆ ವಾಗ್ವಾದಕ್ಕೆ ಇಳಿಯುತ್ತಾಳೆ. ಆ ಕೂಡಲೇ ಅಲ್ಲಿದ್ದ ಜನ "ನಿಮ್ಮ ಮಗನ ಜೊತೆಗೆ ಇರುವುದನ್ನು ಬಿಟ್ಟು ನಿಮ್ಮ ಸೊಸೆಯನ್ನ ತಲೆಯ ಮೇಲೆ ಹೊತ್ತುಕೊಂಡು ಮೆರೆದಾಡುತ್ತಿದ್ದೀರಿ. ಇದು ನಿಮ್ಮಿಂದ ಮಾತ್ರ ಸಾಧ್ಯ" ಎಂದು ಹೇಳುತ್ತಾರೆ. ಆಗ ಭಾಗ್ಯ "ಹೌದು ಇದು ನಮ್ಮ ಅತ್ತೆಯಿಂದ ಮಾತ್ರ ಸಾಧ್ಯ. ಬೇರೆ ಯಾರೂ ಕೂಡ ಈ ರೀತಿ ಮಾಡಲು ಸಾಧ್ಯವೇ ಇಲ್ಲ. ಸೊಸೆಯನ್ನು ಮನೆಯಿಂದ ಹೊರಗೆ ಹಾಕಿ ಮಗನನ್ನೇ ಮನೆಯಲ್ಲಿ ಕೂರಿಸಿಕೊಳ್ಳುತ್ತಿದ್ದರು. ಆದರೆ ನನ್ನ ಅತ್ತೆ ಹಾಗೆ ಅಲ್ಲ. ಅವರಿಗೆ ಸೊಸೆಯ ಮೇಲೆ ನಂಬಿಕೆ ಇದೆ. ಸೊಸೆಯನ್ನು ಮಗಳ ಹಾಗೆ ನೋಡುತ್ತಾರೆ. ಆದಕಾರಣ ಅವರು ಆ ಕೆಲಸವನ್ನು ಮಾಡಿಲ್ಲ" ಎಂದು ತಿರುಗೇಟು ಕೊಡುತ್ತಾಳೆ.
ಹಾಗೇ ನಮ್ಮ ಮನೆಯ ವಿಚಾರಕ್ಕೆ ಯಾರೂ ಕೂಡ ತಲೆ ಹಾಕುವ ಅಗತ್ಯವಿಲ್ಲ. ನಿಮ್ಮ ಮನೆಯ ವಿಚಾರಗಳೇ ಬೇಕಾದಷ್ಟಿದೆ. ನೀವು ಅದಕ್ಕೆ ಪರಿಹಾರ ಕಂಡುಕೊಳ್ಳಿ ಆಮೇಲೆ ನಮ್ಮ ಮನೆಯ ಬಗ್ಗೆ ಯಾರಾದರೂ ಕೆಟ್ಟದು ಮಾತನಾಡಿದರೆ ನಾನು ಸುಮ್ಮನೆ ಇರುವ ಮಾತೇ ಇಲ್ಲ ಎಂದು ಭಾಗ್ಯ ಖಡಕ್ಕಾಗಿ ಹೇಳುತ್ತಾಳೆ.
ಭಾಗ್ಯ ಮಾತಿಗೆ ಮೆತ್ತಗಾದ ಜನ
ಭಾಗ್ಯ ಮಾತನ್ನು ಕೇಳಿ ನೆರೆಹೊರೆಯವರೆಲ್ಲ ಅವರವರ ಮನೆಗೆ ಹೋಗುತ್ತಾರೆ. ಇತ್ತ ತಾಂಡವ್‌ಗೆ ಭಾಗ್ಯ ಗೆಲುವು ಆತನಿಗೆ ಬಹಳಷ್ಟು ಕಾಡುತ್ತದೆ. ಭಾಗ್ಯ ನನ್ನ ಮುಂದೆ ಗೆದ್ದು ಬಿಟ್ಟಳು. ಆಕೆಗೆ ಈ ಬಾರಿ ನನ್ನ ವಿರುದ್ಧ ಗೆಲ್ಲಲು ಬಹಳ ಕಷ್ಟವಿತ್ತು. ಆದರೆ ಆ ಕಠಿಣ ದಿನದಲ್ಲೂ ಕೂಡ ಭಾಗ್ಯ ನನ್ನ ವಿರುದ್ಧ ಗೆದ್ದು ಬೀಗಿ ಬಿಟ್ಟಳು. ಭಾಗ್ಯಗೆ ನನ್ನ ಸಹಾಯ ಬೇಕಾಗಬಹುದು ಎಂದು ನಾನು ಅಂದುಕೊಂಡಿದ್ದೆ. ಆದರೆ ಆಕೆಗೆ ನನ್ನ ಸಹಾಯವೇ ಬೇಡ ಎಂದು ಶ್ರೇಷ್ಠಾ ಬಳಿ ತಾಂಡವ್ ಹೇಳಿಕೊಳ್ಳುತ್ತಾನೆ. ಶ್ರೇಷ್ಠಾಗೆ ತಾಂಡವ್‌ನ ಅವಸ್ಥೆ ಕಂಡು ಬಹಳ ಬೇಸರವಾಗುತ್ತೆ. ಹಾಗೆಯೇ ತಾಂಡವ್ ಭಾಗ್ಯ ವಿಚಾರಕ್ಕೆ ಹುಚ್ಚನ ಹಾಗೆ ಆಡುತ್ತಿರುವುದು ಶ್ರೇಷ್ಠಾಗೆ ಕೋಪ ತರಿಸುತ್ತೆ.
ಕನಸಿನಲ್ಲಿ ತೇಲಾಡುತ್ತಿರುವ ಸುಂದರಿ
ಭಾಗ್ಯ ಬಹಳ ಉತ್ತಮ ಸ್ಥಾನಕ್ಕೆ ಖಂಡಿತವಾಗಿಯೂ ಏರಿಯೇ ಏರುತ್ತಾಳೆ. ತಾಂಡವ್ ಅದೆಲ್ಲವನ್ನೂ ನೋಡಿ ಖಂಡಿತವಾಗಿಯೂ ಹೊಟ್ಟೆಯುರಿದುಕೊಳ್ಳುವುದು ಮಾತ್ರ ಸತ್ಯ ಎಂದು ಮನೆಯವರ ಬಳಿ ಸುಂದರಿ ತನ್ನ ಕನಸಿನ ಬಗ್ಗೆ ಹೇಳುತ್ತಾಳೆ. ಇದೆಲ್ಲವನ್ನೂ ಪೂಜಾ ಕೇಳಿಸಿಕೊಂಡವಳೆ ಇದೆಲ್ಲ ಇಮ್ಯಾಜಿನೇಶನ್ ಮಾಡಲು ಮಾತ್ರ ಖುಷಿ. ಆದರೆ ರಿಯಾಲಿಟಿಗೆ ಮಾತ್ರ ಬಹಳ ಕಷ್ಟ ಎಂದಾಗ, ಸುಂದರಿ ಹಾಗೇನೂ ಆಗುವುದಿಲ್ಲ. ಭಾಗ್ಯ ಖಂಡಿತವಾಗಿಯೂ ಉತ್ತಮ ಸ್ಥಾನಕ್ಕೆ ಹೋಗುತ್ತಾಳೆ. ಅದನ್ನು ನೀನು ನೋಡುತ್ತಿಯಾ ಎಂದು ಹೇಳುತ್ತಾಳೆ. ಇತ್ತ ಭಾಗ್ಯ, ಸುಂದರಿ ಬಳಿ ರಿಯಾಲಿಟಿಯನ್ನು ಹೇಳುತ್ತಾಳೆ. ಬಳಿಕ ಸುಂದರಿ ಸುಮ್ಮನಾಗುತ್ತಾಳೆ.


Click it and Unblock the Notifications











