Bhagyalakshmi serial:ಅಮ್ಮನ ಕಷ್ಟ ಮಗಳಿಗೆ ಅರ್ಥ ಆಗುತ್ತಿಲ್ಲ; ಮಾತಿನ ಪೆಟ್ಟು ಬುದ್ದಿ ಕಲಿಸುತ್ತಾ?
ಭಾಗ್ಯಳನ್ನು ಕೆಲಸದಿಂದ ಕಿತ್ತೆಸೆಯುವಾಗ ಆಕೆಗೆ ಬಹಳ ನೋವಾಗುತ್ತದೆ. ತಾನು ಮುಂದೇನು ಮಾಡಬೇಕು ಎನ್ನುವ ಆಲೋಚನೆ ಬಹಳಷ್ಟು ಭಾಗ್ಯಗಳನ್ನು ಕಾಡುತ್ತೆ. ಇದೆಲ್ಲವನ್ನು ನೋಡಿ ತಾಂಡವ್ ಹಾಗೂ ಶ್ರೇಷ್ಠಾ ಕೇಕೆ ಹಾಕಿ ನಗುತ್ತಾರೆ. ತಾಂಡವ್‌ಗೆ ಭಾಗ್ಯ ಮೇಲೆ ಬಹಳಷ್ಟು ಸಿಟ್ಟು. ಆಕೆಯ ಜೊತೆ ಜೀವನವನ್ನು ನೆಟ್ಟಗೆ ನಡೆಸಲಿಲ್ಲ. ಅದರೂ ತಾಂಡವ್‌ಗೆ ಒಳ್ಳೆಯದಾಗಲಿ ಎಂದು ಭಾಗ್ಯ ಬಯಸುತ್ತಾಳೆ. ಹಾಗಾಗಿ ಶ್ರೇಷ್ಠಾ ಜೊತೆ ಜೀವನ ಮಾಡಲು ಅವಕಾಶವನ್ನು ಭಾಗ್ಯ ನೀಡುತ್ತಾಳೆ. ಆದರೆ ಅದೆಲ್ಲವನ್ನೂ ಮರೆತ ತಾಂಡವ್ ಇದೀಗ ಬಹಳಷ್ಟು ಭಾಗ್ಯ ಮೇಲೆ ದ್ವೇಷ ಮೂಡಿದೆ. ಆದರೆ ಭಾಗ್ಯ ಮಾತ್ರ ಅದ್ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ.
ಹಾಗೆಯೇ ಭಾಗ್ಯ ಜೊತೆಗೆ ಆಕೆಯ ಮನೆಯವರೆಲ್ಲ ಸದಾ ಬೆನ್ನೆಲುಬಾಗಿ ನಿಂತಿರುತ್ತಾರೆ. ಶ್ರೇಷ್ಠಾ ಹಾಗೂ ತಾಂಡವ್ ಭಾಗ್ಯಗೆ ಬಹಳ ನಿಂದಿಸುತ್ತಾರೆ. ಆದರೆ ಭಾಗ್ಯ ಮಾತ್ರ ಯಾರ ಮಾತಿಗೂ ಸೊಪ್ಪು ಹಾಕುವುದಿಲ್ಲ. ಭಾಗ್ಯಗೆ ಯಾರ ಜೊತೆಗೆ ಏನು ಕೇಳಬೇಕು ಎಂದು ಅನ್ನಿಸುವುದು ಇಲ್ಲ. ತಾನು ಕೆಲಸ ಕಳೆದುಕೊಂಡಿದ್ದೇನೆ. ಇಂತಹ ವೇಳೆ ತಾನು ಮನೆಯನ್ನು ಹೇಗೆ ನಡೆಸುತ್ತೇನೆ ಮಾಡುವುದು ಎನ್ನುವ ಆಲೋಚನೆ ಆಕೆಗೆ. ತಾಂಡವ್ ಏನೇ ಮಾಡಿದರೂ ಭಾಗ್ಯ ಅದ್ಯಾವುದಕ್ಕೂ ಕರಗುವ ಮಾತೇ ಇಲ್ಲ. ಮನೆಗೆ ಬಂದ ಭಾಗ್ಯಗೆ ಸುನಂದಾ ಕೂಡ ಸಾಕಷ್ಟು ಪ್ರಶ್ನೆ ಮಾಡುತ್ತಿರುತ್ತಾಳೆ.

ಭಾಗ್ಯ ನೀನು ಮಾಡುತ್ತಿರುವುದು ಸರಿಯಲ್ಲ. ನೀನು ತಪ್ಪು ಮಾಡುತ್ತಿದ್ದಿಯಾ ಎಂದು ಕೋಪದಿಂದ ಭಾಗ್ಯ ಬಳಿ ಸುನಂದಾ ಕೇಳಿದಾಗ ಅಮ್ಮನ ಪ್ರಶ್ನೆಗೆ ಉತ್ತರ ನೀಡುವುದಿಲ್ಲ. "ಅಮ್ಮ ನೀನು ಯಾವಾಗ ಬಂದೆ? ಊಟ ಮಾಡಿದೆಯಾ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ. ಆದರೆ ಸುನಂದಾಗೆ ಭಾಗ್ಯ ಇಷ್ಟೊಂದು ಕಷ್ಟ ಪಡುವುದನ್ನು ನೋಡಲು ಇಷ್ಟ ಆಗುವುದಿಲ್ಲ. ಗಂಡನ ಮನೆಯಲ್ಲಿ ತನ್ನ ಮಗಳಿಗೆ ಸುಖವೇ ಇಲ್ಲದಾಯಿತು ಎಂದು ಸುನಂದಾ ಬಹಳ ಬೇಸರ ಪಡುತ್ತಾಳೆ. ಭಾಗ್ಯಗೆ ತಾಯಿಯ ಮಾತು ಅರ್ಥ ಆಗುತ್ತದೆ. ಆದರೆ ಕೆಟ್ಟ ಗಂಡನ ಜೊತೆಗೆ ಹೇಗೆ ನಾನು ಜೀವನ ಸಾಗಿಸಲಿ ಎಂದು ಬಹಳ ಬೇಸರ ವ್ಯಕ್ತಪಡಿಸುತ್ತಾಳೆ.
ಅಮ್ಮನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದ ತನ್ವಿ
ಭಾಗ್ಯ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ತನ್ವಿ ಅಮ್ಮನ ಬಳಿಗೆ ಬಂದು ಅಮ್ಮ ಏನ್ ಮಾಡ್ತಿದ್ದೀಯಾ ಎಂದು ಮೊದಲು ಪ್ರಶ್ನೆಯನ್ನು ಕೇಳುತ್ತಾಳೆ. ಭಾಗ್ಯ ತಾನು ಅಡುಗೆ ಕೆಲಸ ಮಾಡುತ್ತಿರುವುದಾಗಿ ತನ್ವಿ ಬಳಿ ಬಹಳ ಕೂಲಾಗಿ ಮಾತನಾಡುತ್ತಾಳೆ ಆಗ ತನ್ವೀ ತನ್ನ ತಾಯಿಯ ಬಳಿ ತನ್ನ ಗೆಳೆಯರ ಜೊತೆ ಔಟಿಂಗ್ ಹೋಗುವುದಾಗಿ ಹೇಳುತ್ತಾಳೆ. ಅದಕ್ಕೆ ಒಂದಿಷ್ಟು ಹಣ ಬೇಕು ಎಂದು ತನ್ನ ತಾಯಿಯ ಎದುರು ಬೇಡಿಕೆ ಇಡುತ್ತಾಳೆ. ಆದರೆ ಭಾಗ್ಯಗೆ ತನ್ವಿಯ ಖುಷಿ ಮುಖ್ಯ. ಆದರೆ ಆಕೆಗೆ ಹಣದ ತೊಂದರೆ ಇದೆ. ಹೀಗಾಗಿ ಮಗಳ ಆಸೆಯನ್ನು ಈಡೇರಿಸುವುದಕ್ಕೆ ಆಗುವುದಿಲ್ಲ.

ಅಜ್ಜಿಯ ಬಗ್ಗೆ ಹಗುರವಾಗಿ ಮಾತನಾಡಿದ ತನ್ವಿ
ತನ್ವಿಗೆ ಅಮ್ಮನ ಕಷ್ಟಗಳ ಬಗ್ಗೆ ಯೋಚನೆಯೇ ಇಲ್ಲ. ಆಕೆಗೆ ತನ್ನ ಗೆಳೆಯರ ಜೊತೆಗೆ ಮಜಾ ಮಾಡುವುದು ಎಂದರೆ ಬಹಳಷ್ಟು ಇಷ್ಟ. ಆದರೆ ಭಾಗ್ಯಗೆ ಬಹಳ ಕಷ್ಟವಾಗುತ್ತದೆ. ಆದರೂ ನಿಮ್ಮ ಅಜ್ಜಿಯ ಬಳಿ ಒಂದು ಮಾತು ಹೇಳುತ್ತೇನೆ. ಅವರು ಒಪ್ಪಿದರೆ ನೀನು ಹೋಗಬಹುದು ಎಂದಾಗ ತನ್ವಿಗೆ ಸಿಟ್ಟು ಬರುತ್ತೆ. ಅಮ್ಮ ಇದೀಗ ನಿನ್ನ ಮನೆ. ಈಗಲೂ ಕೂಡ ನೀನು ಅಜ್ಜಿಯ ಬಳಿ ಎಲ್ಲಾವನ್ನು ಹೇಳುತ್ತೀಯಾ? ಇದ್ಯಾವುದು ಕೂಡ ಇಷ್ಟವಾಗುತ್ತಿಲ್ಲ ಅಮ್ಮ. ನೀನು ಅಜ್ಜಿಯ ಹಾಗೆ ಮಾತನಾಡುತ್ತಿಯಾ ಎಂದು ಅಮ್ಮನ ಜೊತೆ ತನ್ವಿ ಎದುರು ವಾದಿಸಿದಾಗ ಭಾಗ್ಯಗೆ ಬಹಳ ಸಿಟ್ಟು ಬರುತ್ತದೆ. ಭಾಗ್ಯ ಬಹಳ ಜೋರಾಗಿಯೇ ತನ್ವಿಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಇದೆಲ್ಲವನ್ನೂ ನೋಡಿದ ಮನೆ ಮಂದಿಗೆ ಸಿಕ್ಕಾಪಟ್ಟೆ ನೋವಾಗುತ್ತದೆ.
ಮಗಳ ಸೊಕ್ಕಿನ ಮಾತಿಗೆ ಮಾತಿನ ಪೆಟ್ಟು
ಮಗಳ ಸೊಕ್ಕಿನ ಮಾತನ್ನು ಹೇಗಾದರೂ ಮಾಡಿ ನಿಲ್ಲಿಸಬೇಕೆಂದು ಭಾಗ್ಯ ಅಂದುಕೊಳ್ಳುತ್ತಿರುತ್ತಾಳೆ. ಭಾಗ್ಯಗೆ ಮಗಳ ಮೇಲೆ ಬಹಳ ಕೋಪ ಬಂದಿರುತ್ತದೆ. ಆದರೆ ಆಕೆ ಅದನ್ನು ತೋರಿಸಿಕೊಳ್ಳುವುದಿಲ್ಲ. ತನ್ವಿಗೆ ಊಟಕ್ಕೆ ಕರೆದಾಗ ಆಕೆ ಹಸಿವಿಲ್ಲ ಎಂದು ಅಮ್ಮನ ಬಳಿ ಕೋಪದಿಂದ ಹೇಳುತ್ತಾಳೆ. ಆಗ ಭಾಗ್ಯ ತನ್ವಿಗೆ ಒತ್ತಾಯ ಮಾಡಲು ಹೋಗುವುದಿಲ್ಲ. ಎಲ್ಲರೂ ಜೊತೆಯಾಗಿ ಕುಳಿತು ಊಟ ಮಾಡುತ್ತಿರುವಾಗ ತನ್ವಿಗೆ ಹಸಿವಾಗುತ್ತದೆ.


Click it and Unblock the Notifications











