Bhagyalakshmi: ಭಾಗ್ಯಾಳನ್ನು ಡ್ಯಾನ್ಸ್ ನೋಡಿ ಹಾಡಿ ಹೊಗಳಿದ ತಾಂಡವ್ ಬದಲಾಗುತ್ತಿದ್ದಾನಾ?

By ಪೂರ್ವ

ಭಾಗ್ಯಾ ಪಾರ್ಟಿಯಲ್ಲಿ ಕುಣಿಯುತ್ತಿರುವ ದೃಶ್ಯವನ್ನು ಪ್ರೇಕ್ಷಕರು ಎಲ್ಲರೂ ನೋಡಿದ್ದಾರೆ. ಭಾಗ್ಯಾ ತಾನು ಯಾರಿಗೆ ಕೂಡ ಕಡಿಮೆ ಇಲ್ಲ ಎನ್ನುವ ಹಾಗೆ ಗಂಡನ ಕೈ ಹಿಡಿದು ನೃತ್ಯ ಮಾಡಿದ್ದಾಳೆ. ಇದನ್ನು ನೋಡಿ ಶ್ರೇಷ್ಠಾಗೆ ಶಾಕ್ ಆಗುತ್ತೆ. ಇಲ್ಲಿವರೆಗೂ ಭಾಗ್ಯಾ ಹಳ್ಳಿಯ ಗಮಾರಿ, ಆಕೆಗೆ ಏನೂ ಬರುವುದಿಲ್ಲ. ಆಕೆ ಎಲ್ಲರ ಹಾಗೆ ಒಳ್ಳೆಯ ಅಮ್ಮ ಆಗಲು ಸಾಧ್ಯವಿಲ್ಲ, ಹಾಗೆಯೇ ಒಳ್ಳೆ ಹೆಂಡತಿ ಆಗಲೂ ಸಾಧ್ಯ ಇಲ್ಲ ಎಂದುಕೊಂಡು ಇರುತ್ತಾನೆ . ಆದರೆ ಭಾಗ್ಯಾ ಪಾರ್ಟಿಗೆ ರೆಡಿ ಆಗಿ ಬರಬೇಕಾದರೇನೆ ಬಹಳ ಮುದ್ದಾಗಿ ಸೀರೆಯನ್ನುಟ್ಟು ಅಂದವಾಗಿ ಕಾಣಿಸುತ್ತಿದ್ದಳು.

ಆದರೆ ಶ್ರೇಷ್ಠಾಗೆ ಭಾಗ್ಯಾನನ್ನು ನೋಡಿ ಹೊಟ್ಟೆಯುರಿಯುತ್ತದೆ. ಆಕೆಗೆ ಭಾಗ್ಯಾನನ್ನು ತಾಂಡವ್‌ನಿಂದಾ ಹೇಗಾದರೂ ಮಾಡಿ ದೂರ ಮಾಡಲೇ ಬೇಕು ಎಂದು ಯೋಚನೆ ಮಾಡುತ್ತಿರುತ್ತಾಳೆ. ಆದರೆ, ಆಕೆಯ ಹಲವು ಪ್ಲಾನ್ ನೀರಿನಲ್ಲಿ ಹೋಮ ಮಾಡಿದ ಹಾಗೆ ಆಗುತ್ತದೆ. ಆದರೂ ಪ್ರಯತ್ನ ಬಿಡದೆ ತಾಂಡವ್‌ ಬೇಕೆ ಬೇಕು ಎನ್ನುವ ಹಠದಲ್ಲಿ ಇದ್ದಾಳೆ. ಇನ್ನೂ ಭಾಗ್ಯಾ ಜೊತೆ ತಾಂಡವ್ ಹೆಜ್ಜೆ ಹಾಕುವುದನ್ನು ನೋಡಿ ಎಲ್ಲರೂ ಖುಷಿ ಪಡುತ್ತಾರೆ.

Bhagyalakshmi serial March 7th Episode update about Bhagya dance

ಪಾರ್ಟಿ ಮುಗಿಸಿ ಎಲ್ಲರೂ ಊಟಕ್ಕೆ ಕುಳಿತುಕೊಂಡಿರುವಾಗ ತಾಂಡವ್ ಹೆಂಡತಿಗೆ "ಭಾಗ್ಯಾ ಇವತ್ತು ಡಾನ್ಸ್ ಬಹಳ ಚೆನ್ನಾಗಿ ಮಾಡಿದ್ದೀಯಾ" ಎಂದಾಗ ಎಲ್ಲರಿಗೆ ಕೂಡ ಬಹಳ ಖುಷಿ ಆಗುತ್ತದೆ. ಹಾಗೆಯೇ ಭಾಗ್ಯಾ ಅದಕ್ಕೆ ಏನು ಪ್ರತಿಕ್ರಿಯೆ ನೀಡದೆ ಮಕ್ಕಳಿಗೆ ಜ್ಯೂಸ್ ತೆಗೆದುಕೊಂಡು ಬರಲು ಹೋಗುತ್ತಾಳೆ.

ಗಂಡನ ಮಾತಿಗೆ ಭಾಗ್ಯಾ ಪ್ರತಿಕ್ರಿಯೆ ಏನು?

ಇದನ್ನು ನೋಡಿ ಕುಸುಮಾ "ತಾಂಡವ್ ನೀನು ಹೋಗೋ ಭಾಗ್ಯಾಗೆ ಸಹಾಯ ಮಾಡು" ಎಂದಾಗ, ಭಾಗ್ಯಾ ಹಿಂದೆ ಹೋಗುತ್ತಾನೆ. ಬಳಿಕ "ಭಾಗ್ಯಾ ಜೊತೆ ಹೀಗೆಲ್ಲ ಡಾನ್ಸ್ ಮಾಡುವುದು ನಿನಗೆ ಗೊತ್ತಿದೆಯಾ?" ಎಂದಾಗ ಭಾಗ್ಯಾ "ತನ್ನ ಮಕ್ಕಳ ಖುಷಿಗಾಗಿ ನಾನು ಏನು ಮಾಡಲು ಸಿದ್ಧ" ಎಂದು ಹೇಳುತ್ತಾರೆ. ಇದನ್ನು ಕೇಳಿದ ತಾಂಡವ್ ಮೌನವಾಗಿ ಬಿಡುತ್ತಾನೆ. ಆದರೆ, ಶ್ರೇಷ್ಠಾ ಮಾತ್ರ ಮನದಲ್ಲಿ ಬೇರೆ ಏನೋ ಸ್ಕೆಚ್ ಹಾಕುತ್ತಿರುತ್ತಾಳೆ.

ಮಕ್ಕಳ ಖುಷಿಗಾಗಿ ಯಾವ ತ್ಯಾಗಕ್ಕೂ ಭಾಗ್ಯಾ ಸಿದ್ಧ

ತಾಂಡವ್ ಮಕ್ಕಳ ಖುಷಿಗಾಗಿ ತನ್ನ ಮನೆಯವರ ಖುಷಿಗಾಗಿ ಏನು ಮಾಡಲು ಸಿದ್ದನಾದನಾ? ತಾಂಡವ್ ನನ್ನನ್ನು ಮರೆತೇ ಬಿಡುತ್ತಾನಾ? ಎಂದು ಯೋಚನೆ ಮಾಡುತ್ತಿರುತ್ತಾಳೆ. ಆ ಬಳಿಕ ಎಲ್ಲರೂ ತಾಂಡವ್‌ನ ಮನೆಗೆ ಹೋಗುತ್ತಾರೆ. ಮುಂಜಾನೆ ಭಾಗ್ಯಾ ಮನೆ ಮುಂದೆ ರಂಗೋಲಿ ಹಾಕಿ ಬಿಸಿ ಬಿಸಿ ಕಾಫಿ ಮಾಡಿ ಎಲ್ಲರಿಗೂ ಕೂಡುತ್ತಾರೆ.

Bhagyalakshmi serial March 7th Episode update about Bhagya dance

ತಾಂಡವ್ ಬದಲಾಗುತ್ತಾನಾ?

ಭಾಗ್ಯಾಳನ್ನು ಅತ್ತೆ ಮಾವ ಬಹಳ ಹೊಗಳುತ್ತಾರೆ. ಇದರಿಂದ ಶ್ರೇಷ್ಠಾಗೆ ಬಹಳ ಕಿರಿ ಕಿರಿ. ನಾನು ಒಮ್ಮೆ ತಾಂಡವನ್ನು ಮದುವೆ ಆದ ಬಳಿಕ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮನಸ್ಸಿನಲ್ಲೇ ಹಗೆ ಸಾಧಿಸುತ್ತಾ ಮನೆಯಿಂದ ಹೊರಗಡೆ ಹೋಗುತ್ತಾಳೆ.

More from Filmibeat

English summary
Bhagyalakshmi serial March 7th Episode update about Bhagya dance:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X