'ಭಾಗ್ಯಲಕ್ಷ್ಮಿ' ಸೀರಿಯಲ್ ಮಾಡಿಕೊಂಡೆ ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಬಂದ ಅಮೃತಾ; ಅಂಕವೆಷ್ಟು?
ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ ಹಲವು ಮಕ್ಕಳು ತೇರ್ಗಡೆಯಾದರೆ, ಇನ್ನು ಹಲವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇದರ ನಡುವೆ ಗಮನ ಸೆಳೆದ ಫಲಿತಾಂಶ ಎಂದರೆ 'ಭಾಗ್ಯಲಕ್ಷ್ಮೀ' ಧಾರಾವಾಹಿಯ ತನ್ವಿಯದ್ದು. ಹೌದು ತನ್ವಿ ಈಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದಾರೆ. ಈಗ ಅದರ ಫಲಿತಾಂಶವೂ ಹೊರ ಬಿದ್ದಿದೆ. ಊಹೆಯನ್ನೇ ಮಾಡದಂತ ಫಲಿತಾಂಶವನ್ನು ತನ್ವಿ ಅಲಿಯಾಸ್ ಅಮೃತಾ ಪಡೆದಿದ್ದಾರೆ. ಇದು ಭಾಗ್ಯಲಕ್ಷ್ಮೀ ತಂಡಕ್ಕೂ ಕೂಡ ಹೆಮ್ಮೆಯ ವಿಚಾರವೇ ಸರಿ.
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ತನ್ವಿ ಒಂಥರ ಜಂಭದ ಹುಡುಗಿಯಾಗಿದ್ದಳು. ಆ ವಯಸ್ಸು ಕೂಡ ಅಂತದ್ದೇ ಆಗಿರುತ್ತೆ ಎಂಬ ಸಂದೇಶವನ್ನ ಆ ತನ್ವಿ ಪಾತ್ರದ ಮೂಲಕ ಸಾರಿ ಹೇಳಲಾಗಿತ್ತು. ಅಂದ್ರೆ ಅಮ್ಮ ಹೇಳುವ ಬುದ್ಧಿ ಮಾತು ಇಷ್ಟವಾಗದೆ ಇರಬಹದು. ಆದರೆ ಮೇಲ್ನೋಟಕ್ಕೆ ಒಳ್ಳೆ ಮಾತನಾಡುವ, ಕೇಳಿದ್ದೆಲ್ಲವನ್ನು ಕೊಡಿಸುವ ಅಪ್ಪನಿದ್ದಾಗ, ಅಮ್ಮನ ಮೇಲೆ ಕೋಪ ಬರುವುದು ಸಹಜವೇ ಅಲ್ವಾ. ಆ ರೀತಿಯ ಪಾತ್ರ ಮಾಡಿದ್ದರು.

ತನ್ವಿಯ ದ್ವಿತೀಯ ಪಿಯುಸಿ ರಿಸಲ್ಟ್ ಔಟ್
ದ್ವಿತೀಯ ಪಿಯುಸಿ ರಿಸಲ್ಟ್ ಬಂದಿದ್ದು, ಭಾಗ್ಯಲಕ್ಷ್ಮೀ ಧಾರಾವಾಹಿಯ ತನ್ವಿ ಪಾತ್ರ ಮಾಡುತ್ತಿರುವ ಅಮೃತಾ ಗೌಡ ಫಲಿತಾಂಶವೂ ಹೊರಬಿದ್ದಿದೆ. ಮಕ್ಕಳಿಗೆ ಎಸ್ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಬಹಳ ಪ್ರಮುಖವಾದ ಘಟ್ಟವಾಗಿರುತ್ತದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಸಮಯ ಇದಾಗಿರುತ್ತದೆ. ಹೀಗಾಗಿ ಈ ಫಲಿತಾಂಶದ ಮೇಲೆ ಬಹಳ ನಿರೀಕ್ಷೆ ಇರುತ್ತೆ. ಇದೀಗ ಆ ನಿರೀಕ್ಷೆ ತನ್ವಿಯ ಪಾಲಿಗೆ ಫುಲ್ ಫಿಲ್ ಆದಂತಾಗಿದೆ. ಮನೆಯವರಿಗೂ ಕೂಡ ಸಮಾಧಾನ ತರುವಂತ ಫಲಿತಾಂಶ ಇದಾಗಿದೆ.
ತನ್ವಿ ಉರ್ಫ್ ಅಮೃತಾ ಗೌಡಗೆ ಎಷ್ಟು ಮಾರ್ಕ್ಸ್?
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆಯಬೇಕು ಅಂತಾನೇ ಮಕ್ಕಳು ಸಾಕಷ್ಟು ಪ್ರಯತ್ನ ಪಡುತ್ತಾರೆ. ಯಾಕಂದ್ರೆ ಈ ಫಲಿತಾಂಶದ ಮೇಲೆ ಮುಂದಿನ ಶಿಕ್ಷಣದ ದಾರಿ ಸುಲಭವಾಗುತ್ತದೆ. ಹೀಗಾಗಿಯೇ ಬಹಳಷ್ಟು ಎಫರ್ಟ್ ಹಾಕುತ್ತಾರೆ. ಇದೀಗ ತನ್ವಿ ಅಲಿಯಾಸ್ ಅಮೃತಾ ಅವರಿಗೂ ದ್ವಿತೀಯ ಪಿಯುಸಿನಲ್ಲಿ ಉತ್ತಮ ಮಾರ್ಕ್ಸ್ ಬಂದಿದೆ. 600ಕ್ಕೆ 543 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ದಾರೆ.

ಭಾಗ್ಯಲಕ್ಷ್ಮಿ ವೀಕ್ಷಕರು ಏನಂದ್ರು..?
ವೀಕ್ಷಕರಿಗೆ ತನ್ವಿಯ ಮೇಲೆ ಮೊದ ಮೊದಲು ಸಿಕ್ಕಾಪಟ್ಟೆ ಕೋಪ ಇತ್ತು. ದುರಹಂಕಾರದ ಹುಡುಗಿ ಅಂತೆಲ್ಲಾ ಬೈಕೊಳ್ತಾ ಇದ್ದರು. ಆದರೆ ಈಗ ಅಮ್ಮನ ಮಗಳು. ಅಮ್ಮನ ಕಷ್ಟ ಸುಖ ಅರ್ಥ ಮಾಡಿಕೊಳ್ಳುವ ಹುಡುಗಿ. ಹೀಗಾಗಿ ವೀಕ್ಷಕರಿಗೂ ಅಚ್ಚುಮೆಚ್ಚಿನ ಹುಡುಗಿಯಾಗಿದ್ದಾಳೆ. ತನ್ವಿಯ ರಿಸಲ್ಟ್ ಕಂಡು ಖುಷಿಪಟ್ಟಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಲೇ ಇಷ್ಟೊಂದು ಸ್ಕೋರ್ ಮಾಡೋದು ಅಂದ್ರೆ ಸುಮ್ನೇನಾ..? ತನ್ವಿ ಯು ಆರ್ ರಿಯಲೀ ಗ್ರೇಟ್ ಅಂತೆಲ್ಲಾ ಹೊಗಳುತ್ತಿದ್ದಾರೆ. ಧಾರಾವಾಹಿಯಲ್ಲಿ ಇಷ್ಟೊಂದು ಆಟಿಟ್ಯೂಡ್ ಇನ್ನು ಓದುವುದರಲ್ಲಿ ಹಿಂದೆ ಇದ್ದಾಳೆನೋ ಅಂದುಕೊಂಡಿದ್ದವರಿಗೆ ತನ್ವಿ ಸಖತ್ತಾಗಿನೇ ಉತ್ತರ ಕೊಟ್ಟಿದ್ದಾಳೆ. ಎಲ್ಲರೂ ಹೊಗಳುತ್ತಲೇ ಕಮೆಂಟ್ ಹಾಕಿದ್ದಾರೆ.
ತನ್ವಿ ಇಷ್ಟೊಂದು ಬುದ್ದಿವಂತೆನಾ?
'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಇಬ್ಬರ ಮಕ್ಕಳ ಸೀನ್‌ಗಳು ಯಾವಾಗಲೂ ಇದ್ದೇ ಇರುತ್ತದೆ. ತನ್ವಿ ಈಗ ಧಾರಾವಾಹಿಯಲ್ಲಿ ಫಸ್ಟ್ ಪಿಯುಸಿ. ನಿಜ ಜೀವನದಲ್ಲಿ ಪಿಯುಸಿ ಮುಗಿದೇ ಹೋಗಿದೆ. ಧಾರಾವಾಹಿಯಲ್ಲಿ ಸದಾ ಕಾಣಿಸುವ ಕಾರಣ ತನ್ವಿಗೆ ಕಾಲೇಜು, ಓದುಗೆ ಸಮಯ ಸಿಗೋದು ಕಡಿಮೆಯೇ. ಏನಿಲ್ಲ ಅಂದ್ರು ಶೂಟಿಂಗ್ ಹದಿನೈದು ದಿನವಾದರೂ ಕೊಡಲೇಬೇಕು. ಇಂಥ ಬ್ಯುಸಿ ಶೆಡ್ಯೂಲ್‌ನಲ್ಲೂ ತನ್ವಿ ಅದೇಗೆ ಓದುತ್ತಾ ಇದ್ದರು ಅನ್ನೋದೆ ಈಗ ಎಲ್ಲರಿಗೂ ಆಶ್ಚರ್ಯವಾಗಿದೆ. ಆದರೂ ತನ್ವಿ ಈ ರೀತಿಯ ಒಂದು ಸಾಧನೆಗೆ ಎಲ್ಲರೂ ಶಬ್ಬಾಶ್ ಎನ್ನಲೇಬೇಕು.


Click it and Unblock the Notifications











