Bhagyalakshmi: ಕುಸುಮಾ- ಭಾಗ್ಯಗೆ ಚಪ್ಪಾಳೆ: ಬಹಿರಂಗವಾಗಿ ತಾಂಡವ್‌- ಶ್ರೇಷ್ಠಗೆ ವೀಕ್ಷಕರಿಂದ ತರಾಟೆ!

By ಶೃತಿ ಹರೀಶ್ ಗೌಡ

'ಭಾಗ್ಯಲಕ್ಷ್ಮಿ' ಧಾರಾವಾಹಿ ದಿನದಿಂದ ದಿನಕ್ಕೆ ವೀಕ್ಷಕರಿಗೆ ಹೆಚ್ಚು ಹೆಚ್ಚು ಹತ್ತಿರವಾಗುತ್ತಿದೆ. ವೀಕ್ಷಕರು ಅತ್ತೆ ಸೊಸೆಯ ಬಾಂಧವ್ಯ ಕಂಡು ಫಿದಾ ಆಗಿದ್ದಾರೆ. ಇದ್ದರೆ ಇವರಿಬ್ಬರಂತೆ ಅತ್ತೆ- ಸೊಸೆ ಇರಬೇಕು ಎಂದು ಮಾತನಾಡಿಕೊಳ್ಳುವ ಮಟ್ಟಕ್ಕೆ ಈ ಧಾರಾವಾಹಿ ಫೇಮಸ್ ಆಗಿದೆ. ಬೇರೆ ಧಾರಾವಾಹಿಗಳಿಗೆ 'ಭಾಗ್ಯಲಕ್ಷ್ಮಿ' ಧಾರಾವಾಹಿ ಪೈಪೋಟಿಯನ್ನು ಪ್ರತಿವಾರವೂ ನೀಡುತ್ತಲೇ ಬಂದಿದೆ.

ಇದೆಲ್ಲದರ ನಡುವೆ 'ಫ್ಯಾಮಿಲಿ ಗ್ಯಾಂಗ್‌ಸ್ಟರ್ಸ್' ರಿಯಾಲಿಟಿ ಶೋನಲ್ಲಿ 'ಭಾಗ್ಯಲಕ್ಷ್ಮಿ' ಧಾರಾವಾಹಿ ತಂಡ ಭಾಗವಹಿಸಿ ಒಳ್ಳೆ ಪ್ರದರ್ಶನವನ್ನು ನೀಡುತ್ತಿದೆ. ಈ ವಾರ ತಂಡ ಪ್ರದರ್ಶನ ನೀಡುವ ವೇಳೆ ಕುಸುಮ ಸಹ ಬಂದಿದ್ದು ಎಲ್ಲರಿಗೂ ಸಹ ಉತ್ಸಾಹ ಬಂದಂತೆ ಆಗಿತ್ತು. ನೀವ್ಯಾಕೆ 'ಭಾಗ್ಯಲಕ್ಷ್ಮಿ' ಧಾರಾವಾಹಿಯವರ ಜೊತೆ ಆಟವಾಡುತ್ತಿಲ್ಲ ಎಂದು ಕೇಳಿದ್ದಕ್ಕೆ ನನಗೆ ಈ ಪ್ಯಾಂಟು ಶರ್ಟ್ ಹಾಕಿ ಅಭ್ಯಾಸವಿಲ್ಲ ಎಂದು ಕುಸುಮ ನಗುತ್ತಲೇ ಉತ್ತರ ನೀಡಿದ್ದಾರೆ.

Bhagyalakshmi serial Team in Family Gangstars TV Show

'ಫ್ಯಾಮಿಲಿ ಗ್ಯಾಂಗ್ಸ್‌ಸ್ಟರ್ಸ್‌'ನಲ್ಲಿ 'ಭಾಗ್ಯಲಕ್ಷ್ಮೀ' ತಂಡಕ್ಕೆ ಸ್ವೀಟ್ ಸರ್ಪ್ರೈಸ್ ಸಿಕ್ಕಿದೆ. ವೀಕ್ಷಕರು ಫ್ಯಾಮಿಲಿ ಶೋಗೆ ಬಂದು ಕುಸುಮಾಳ ಪಾತ್ರಕ್ಕೆ ಬಹಳ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಎಲ್ಲರಿಗೂ ಸಹ ನಿಮ್ಮಂತಹ ಅತ್ತೆಯೇ ಸಿಗಬೇಕು ಈ ರೀತಿ ಸಿಕ್ಕರೆ ಯಾವುದೇ ಮನೆಯಲ್ಲಿ ಜಗಳ ಅನ್ನೋದು ಇರೋದಿಲ್ಲ, ಎಲ್ಲರೂ ಖುಷಿಯಿಂದ ಇರುತ್ತಾರೆ ಎಂದಿದ್ದಾರೆ.

Bhagyalakshmi serial Team in Family Gangstars TV Show

ಜನ ಮೆಚ್ಚಿದ ಅತ್ತೆಯಾದರೂ ಕುಸುಮಾ

ಕುಸುಮಾ ಅವರ ಪಾತ್ರಕ್ಕೆ ಎಲ್ಲಾ ಸೊಸೆಯಂದಿರೂ ಸಹ ಫಿದಾ ಆಗಿ ಹೋಗಿದ್ದಾರೆ. ವೇದಿಕೆಯ ಮೇಲೆ ಬಂದಂತಹ ಮಹಿಳೆಯರು ಕುಸುಮಾ ಪಾತ್ರ ಹಾಗೂ ಭಾಗ್ಯ ಪಾತ್ರದ ಬಗ್ಗೆ ಮುಕ್ತವಾಗಿ ಹೊಗಳಿದ್ದಾರೆ. ಇದೇ ವೇಳೆ ಕುಸುಮಾರನ್ನು ಜನ ಮೆಚ್ಚಿದ ಅತ್ತೆಯಾಗಿ ಘೋಷಣೆ ಮಾಡಿ ಅವರಿಗೆ ಒಂದು ಬಿರುದನ್ನು ನೀಡಲಾಗಿದೆ. ಕಲರ್ಸ್ ಕನ್ನಡದವರು ಈ ರೀತಿ ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ ಕುಸುಮ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನು ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಭಾಗ್ಯ, ನಾನು ಮೊದಲ ಬಾರಿಗೆ ಇಂತಹ ಪಾತ್ರವನ್ನ ಮಾಡಿದ್ದೇನೆ. ಈ ರೀತಿ ಸೈಲೆಂಟ್ ಆಗಿರುವ ಪಾತ್ರ ಮಾಡಿರುವುದಕ್ಕೆ ನನಗೆ ತುಂಬಾನೇ ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಜನರು ಸಹ ನನ್ನ ಪಾತ್ರಕ್ಕೆ ಬಹಳ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಈ ರೀತಿಯಲ್ಲಾ ಕೇಳುತ್ತಿದ್ದರೆ ಬಹಳ ಖುಷಿಯಾಗುತ್ತದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಂಡವ್‌ಗೆ ಬುದ್ಧಿ ಹೇಳಿದ ವೀಕ್ಷಕರು

ಇನ್ನು ನೀವ್ಯಾಕೆ ಭಾಗ್ಯಳನ್ನು ಬಿಟ್ಟು ಶ್ರೇಷ್ಠ ಹಿಂದೆ ಹೋಗುತ್ತಿದ್ದೀರಿ? ಸರಿಯಾದ ರೀತಿಯಲ್ಲಿ ಭಾಗಿಯ ಜೊತೆ ಇದ್ದು ಸಂಸಾರ ಮಾಡಿಕೊಂಡು ಹೋಗಿ ಎಂದು ತಾಂಡವ್‌ಗೆ ವೀಕ್ಷಕರು ಬುದ್ದಿವಾದ ಹೇಳಿದ್ದಾರೆ. ಇನ್ನು ಶ್ರೇಷ್ಠ ಪಾತ್ರಧಾರಿ ಕಾವ್ಯಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮಗೆ 40 ವರ್ಷ ವಯಸ್ಸಿನ ಹುಡುಗ ಬೇಕಾ? ಅವರಿಗೆ ಈಗಾಗಲೇ ಮದುವೆಯಾಗಿದೆ ನೀವು ಅವರಿಂದ ದೂರ ಇರಿ ಎಂದಿದ್ದಾರೆ.

ಸಹೋದರಿಯರ ಬಗ್ಗೆ ಮೆಚ್ಚುಗೆ

ಕುಸುಮಾ ಹಾಗೂ ಕಾವೇರಿಯ ಸಂಬಂಧದ ಬಗ್ಗೆ ಮಾತನಾಡಿದ್ದು, ಅಕ್ಕ ತಂಗಿಯರ ಸಂಬಂಧ ಯಾವ ರೀತಿ ಇರಬೇಕು ಎಂಬುದನ್ನು ಸಹ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ. ನಾವೆಲ್ಲರೂ ಈ ಧಾರಾವಾಹಿಗೆ ಅಭಿಮಾನಿಗಳಾಗಿ ಹೋಗಿದ್ದೇವೆ ಎಂದು ಹೇಳಿದ್ದಾರೆ. ಕುಸುಮಾರಂತಹ ಅತ್ತೆ ಎಲ್ಲರಿಗೂ ಸಿಗಬೇಕು. ಅದೇ ರೀತಿ ಭಾಗ್ಯಳಂತ ಅಂತಹ ಸೊಸೆಯು ಸಹ ಸಿಕ್ಕರೆ ಚೆನ್ನಾಗಿ ಇರುತ್ತದೆ. ಅಂತಹ ಮನೆಯಲ್ಲಿ ಜಗಳಗಳು ಆಗುವುದಿಲ್ಲ ಎಂದು ಮನಸ್ಸು ಬಿಚ್ಚಿ ಪ್ರೇಕ್ಷಕರು ಮಾತನಾಡಿದ್ದಾರೆ.

ಅಭಿಮಾನಿಗಳ ಹೊಗಳಿಕೆಯನ್ನ ಕೇಳಿದ 'ಭಾಗ್ಯಲಕ್ಷ್ಮಿ' ತಂಡ ಫುಲ್ ಖುಷಿಯಾಗಿದ್ದಾರೆ. ನಮ್ಮ ಧಾರಾವಾಹಿ ಜನರಿಗೆ ಇಷ್ಟವಾಗಿದೆ, ಅದೇ ನಮ್ಮ ಸೌಭಾಗ್ಯ ಎಂದು ಹೇಳಿದ್ದಾರೆ. ಜನರಿಗೆ ಮನರಂಜನೆಯ ಮೂಲಕ ಉತ್ತಮವಾದ ಸಂದೇಶ ಸಾರಿದ್ದರೆ ಅದು ಎಲ್ಲರಿಗೂ ಸಹ ಇಷ್ಟವಾಗುತ್ತದೆ ಎಂದು ಧಾರಾವಾಹಿಯ ತಂಡದವರು ಹೇಳಿದ್ದಾರೆ.

More from Filmibeat

English summary
Sweet surprise for Bhagyalakshmi serial Team in Family Gangstars show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X