Bhagyalakshmi serial:ಭಾಗ್ಯಾ ಮನೆಯಲ್ಲಿ ಮತ್ತೆ ರಂಪಾಟ; ಶ್ರೇಷ್ಠಾಗೆ ತಾಂಡವ್ ಕಪಾಳಮೋಕ್ಷ!

By ಪೂರ್ವ

ತನ್ವಿಗೆ ತಾಂಡವ್ ಹಣ ಕೊಟ್ಟದ್ದೆ ಇದೀಗ ಬಹಳ ದೊಡ್ಡ ತಪ್ಪಾಗಿದೆ. ತಾಂಡವ್ ಆತನ ಮಗಳಿಗೆ ಸ್ಕೂಲ್ ಫೀಸ್ ಕಟ್ಟಿದ್ದಾನೆ. ಮಗಳು ಯಾವುದೋ ಒಂದು ಕೋರ್ಸ್‌ ಮಾಡುತ್ತೇನೆ ಎಂದು ಹೇಳಿದಾಗ ಭಾಗ್ಯಾಗೆ ಬಹಳ ಖುಷಿಯಾಗುತ್ತೆ. ಕೆಲಸದಲ್ಲಿದ್ದ ವೇಳೆ ಭಾಗ್ಯಾಗೆ ಕಷ್ಟ ಗೊತ್ತಾಗುತ್ತಿರಲಿಲ್ಲ. ಆದರೆ ಇದೀಗ ಕೆಲಸ ಇಲ್ಲದೆ ಭಾಗ್ಯಾ ದೊಡ್ಡ ಪೇಚಿಗೆ ಸಿಲುಕಿದ್ದಾಳೆ.

ಮಗಳ ಪೀಸ್ ಕಟ್ಟಬೇಕು ಹಾಗೆಯೇ ಕಾರಿನ ಲೋನ್ ಅನ್ನು ತೀರಿಸಬೇಕು. ಹೇಗಪ್ಪ ಇದನ್ನೆಲ್ಲಾ ನಿಭಾಯಿಸುವುದು ಎನ್ನುವ ಯೋಚನೆಯಲ್ಲಿ ಭಾಗ್ಯಾ ಇರುತ್ತಾಳೆ. ತಾಯಿಯ ಪರಿಸ್ಥಿತಿಯನ್ನು ಕಂಡ ತನ್ವಿಗೆ ಆಕೆಗೆ ಕೋರ್ಸ್ ಮಾಡುವ ವಿಚಾರ ಹೇಳಲು ಆಗುವುದಿಲ್ಲ. ಈ ಬಗ್ಗೆ ತಾಯಿಯ ಬಳಿ ಪ್ರಸ್ತಾಪ ಮಾಡಿದ್ದ ತನ್ವಿ, ತಂದನಂತರ ಒತ್ತಾಯ ಮಾಡಲು ಹೋಗಲಿಲ್ಲ. ಭಾಗ್ಯಾ ಕೆಲಸ ಹೋದ ಬಳಿಕ ತನ್ವಿ ತಾಯಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಈಗ ನಾನು ತಾಯಿಯ ಬಳಿ ಹಣದ ವಿಚಾರ ಎತ್ತಿದರೆ ಆಕೆಗೆ ಬಹಳಷ್ಟು ಕಷ್ಟವಾಗಬಹುದು ಎನ್ನುವ ಕಾರಣಕ್ಕೋಸ್ಕರ ಮೆತ್ತಗಾಗುತ್ತಾಳೆ. ಇತ್ತ ತನ್ವಿ ತಂದೆಯ ಬಳಿ ಬಹಳ ಪ್ರೀತಿಯಿಂದ ಒಂದು ಕೋರ್ಸ್ ಮಾಡುತ್ತೇನೆ. ನನಗೆ ಹಣದ ಸಹಾಯವನ್ನು ಮಾಡುತ್ತೀರಾ ಎಂದು ಕೇಳಿದಾಗ ಹಿಂದೂ ಮುಂದೆ ನೋಡದೆ ಮಗಳ ಫೀಸ್ ಅನ್ನು ಕಟ್ಟಿ ಬಿಡುತ್ತಾನೆ.

Bhagyalakshmi serial todays 2025 episode Thandav paid Thanvi school fees

ಇದೆಲ್ಲ ಶ್ರೇಷ್ಠಾಗೆ ಹೇಗೋ ಗೊತ್ತಾಗಿ ಬಿಟ್ಟಿದೆ. ಶ್ರೇಷ್ಠಾಗೆ ಈ ವಿಷಯ ಕೇಳಿ ಬಹಳ ಕೋಪ ಬಂದಿದೆ. ನಾನು ಮದುವೆ ಆಗುವ ಹುಡುಗನ ಜೊತೆ ಈ ಭಾಗ್ಯಾ ಹಣ ತೆಗೆದುಕೊಳ್ಳುವ ಸಂಚು ಮಾಡಿದ್ದಾಳೆ. ಹೇಗಾದರೂ ಮಾಡಿ ಭಾಗ್ಯಾಗೆ ಬುದ್ಧಿ ಕಲಿಸಲೇಬೇಕು ಎಂದು ಯೋಚನೆ ಮಾಡುತ್ತಾಳೆ. ಇತ್ತ ತಾಂಡವ್ ಭಾಗ್ಯಾಗೆ ಸವಾಲಿಸಿರುತ್ತಾನೆ. ನಿನ್ನಿಂದ ನಿನ್ನ ಮಗಳು ಮಗ ಹಾಗೆಯೇ ನನ್ನ ತಂದೆ ತಾಯಿಯನ್ನ ಹೇಗೆ ಕಸಿದು ಕೊಳ್ಳುತ್ತೇನೆ ನೋಡುತ್ತಿರು ಎಂದು ಸವಾಲು ಹಾಕಿರುತ್ತಾನೆ.

ಭಾಗ್ಯಾ ಮೇಲೆ ಕಿಡಿಕಾರಿದ ಶ್ರೇಷ್ಠಾ

ಇತ್ತ ಶ್ರೇಷ್ಠಾ ಕೋಪಿಸಿಕೊಂಡು ತಾಂಡವ್‌ ಮನೆಗೆ ಬರುತ್ತಾಳೆ. ಜೋರಾಗಿ ಭಾಗ್ಯಾನ ಮೇಲೆ ಕೂಗಾಡುತ್ತಾಳೆ. ಇದನ್ನು ನೋಡಿದ ಭಾಗ್ಯಾಗೆ ಬಹಳ ಕೋಪ ಬರುತ್ತದೆ. ಭಾಗ್ಯಾಳ ತಾಯಿ ಶ್ರೇಷ್ಠಾ ಮಾತಿಗೆ ಕೋಪಗೊಂಡು ಆಕೆಯನ್ನು ಬೀಳಿಸುತ್ತಾರೆ. ಇದು ಶ್ರೇಷ್ಠಾಗೆ ಕೋಪಕ್ಕೆ ಕಾರಣವಾಗುತ್ತೆ. ಸುನಂದಾಗೆ ಏಕವಚನದಲ್ಲಿ ಮಾತನಾಡಿದಾಗ ಕೋಪಗೊಂಡ ಭಾಗ್ಯಾ ಈ ಜಾಗ ನನ್ನ ಮಾವನ ಹೆಸರಲ್ಲಿದೆ. ನನ್ನ ಗಂಡನೇ ಈ ಮನೆ ಬೇಡ ಎಂದು ಹೋಗಿರಬೇಕಾದರೆ ನಿನ್ನದು ಏನು? ಎಂದು ಜೋರಾಗಿ ಆವಾಜ್ ಹಾಕುತ್ತಾಳೆ.

Bhagyalakshmi serial todays 2025 episode Thandav paid Thanvi school fees

ಶ್ರೇಷ್ಠಾಗೆ ಕಪಾಳ ಮೋಕ್ಷ ಮಾಡಿದ ತಾಂಡವ್

ಕುಸುಮಾ ತಾಂಡವನಿಗೇ ಕರೆ ಮಾಡಿ ಸಖತ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಶ್ರೇಷ್ಠಾ ಮೇಲೆ ಮುನಿಸಿಕೊಂಡ ತಾಂಡವ್ ನೇರವಾಗಿ ತಾಯಿಯ ಮನೆಗೆ ಬರುತ್ತಾನೆ. ಶ್ರೇಷ್ಠಾಗಳನ್ನು ನೋಡಿ ತಾಂಡವ್‌ಗೆ ಬಹಳ ಕೋಪ ಬರುತ್ತದೆ. ತಾಂಡವನನ್ನು ನೋಡಿ ಶ್ರೇಷ್ಠಾಗೆ ಹೇಳುತ್ತಾಳೆ. ನೋಡು ನಿನ್ನ ಮಗಳನ್ನು ಇಟ್ಟುಕೊಂಡು ಹೇಗೆಲ್ಲಾ ಇವರು ಆಟ ಆಡಿಸುತ್ತಿದ್ದಾರೆ. ನಿನಗೆ ಇದೆಲ್ಲ ಯಾವುದು ಕೂಡ ಅರ್ಥವಾಗುತ್ತಿಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಭಾಗ್ಯಾ ಕೂಡ ನಿನ್ನ ಹಣಕ್ಕಾಗಿ ಹೊಂಚು ಹಾಕುತ್ತಿದ್ದಾಳೆ ಎಂದು ಹೇಳಿದಾಗ ತಾಂಡವ್‌ಗೆ ಬಹಳ ಕೋಪ ಬಂದು ಶ್ರೇಷ್ಠಾ ಕೆನ್ನೆಗೆ ಬಾರಿಸುತ್ತಾನೆ. ಶ್ರೇಷ್ಠಾ ಬಳಿ ತಾಂಡವ "ನೀನಾ ಅಥವಾ ನನ್ನ ತಂದೆ ತಾಯಿ ಅಥವಾ ನನ್ನ ಮಕ್ಕಳು ಎಂದು ಬಂದರೆ ನಾನು ನನ್ನ ತಂದೆ ತಾಯಿ ಮಕ್ಕಳನ್ನು ಆಯ್ಕೆ ಮಾಡುತ್ತೇನೆ ಹೊರತು ನಿನ್ನನ್ನು ನಾನು ಯಾವತ್ತೂ ಕೂಡ ಆಯ್ಕೆ ಮಾಡುವುದಿಲ್ಲ. ಇದು ನೀನು ನೆನಪಿನಲ್ಲಿ ಇಟ್ಟುಕೋ" ಎಂದು ಹೇಳಿದಾಗ ಶ್ರೇಷ್ಠಾಗೆ ಶಾಕ್ ಆಗುತ್ತದೆ.

More from Filmibeat

English summary
Bhagyalakshmi serial todays 2025 episode Thandav paid Thanvi school fees
Read more about: tv serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X