Bhagyalakshmi: ತಾಂಡವ್‌ಗೆ ಶಾಕ್ ಕೊಟ್ಟ ಕುಸುಮಾ..! ಭಾಗ್ಯ ಹೆಸರಿಗೆ ಮನೆ ಬರೆಯುತ್ತಾನಾ ಕೋಪಿಷ್ಟ ಗಂಡ..?!
ಭಾಗ್ಯಲಕ್ಷ್ಮಿ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗವನ್ನ ಸೃಷ್ಟಿ ಮಾಡಿಕೊಂಡಿದೆ. ಪ್ರತಿದಿನವೂ ಕೂಡ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಧಾರವಾಹಿ ಸಾಗುತ್ತಿದೆ. ಈಗ ತಾಂಡವ್ ಮನೆ ಬಿಟ್ಟು ಹೋಗಿದ್ದು ತಾಂಡವ್‌ಗೆ ಯಾಕಾದರೂ ಮನೆ ಬಿಟ್ಟು ಹೋದೆನೋ ಎಂಬ ಪರಿಸ್ಥಿತಿ ಬಂದಿದೆ. ಅತ್ತ ಡೂಪ್ಲಿಕೇಟ್ ತಾಯಿ ಹಾಗೂ ಡುಪ್ಲಿಕೇಟ್ ತಂದೆಯ ಟಾರ್ಚರ್ ಒಂದು ಕಡೆ ಆದರೆ ಈ ಕಡೆ ಕುಸುಮಾ ಪ್ರತಿ ದಿನವೂ ಕೂಡ ಹೊಸ ಸವಾಲುಗಳನ್ನ ಮಗನಿಗೆ ಹಾಕುತ್ತಾ ಬಂದಿದ್ದಾರೆ. ಯಾವಾಗಲೂ ನಾನು ಸೊಸೆಯ ಪರ ಎಂಬುದನ್ನು ನಿರೂಪಿಸುತ್ತಾ ಬಂದಿದ್ದಾರೆ. ಈಗ ಧಾರಾವಾಹಿಯಲ್ಲಿ ತಾಂಡವ್ ಊಹೆ ಮಾಡಿರದ ಒಂದು ಟ್ವಿಸ್ಟ್ ಸಿಕ್ಕಿದೆ.
ಶ್ರೇಷ್ಠಾ ಬಳಿಯಲ್ಲಿ ನನ್ನ ಅಮ್ಮ ಇಂದು ಬಂದು ರಾಜ ನನ್ನದು ತಪ್ಪಾಯಿತು ಮನೆಗೆ ಬಾ ಎಂದು ಕರೆಯುತ್ತಾರೆ ಎಂದು ತಾಂಡವ್ ಹೇಳಿದ್ದನು. ಆದರೆ ಇಲ್ಲಿ ಅದೆಲ್ಲವೂ ಸಹ ಉಲ್ಟಾ ಪಲ್ಟಾ ಆಗಿದೆ. ತಾಂಡವ್‌ಗೆ ತಿರುಗು ಬಾಣವಾಗಿ ಪರಿಣಮಿಸಿದೆ. ಕುಸುಮಾ ಮಗನಿಗೆ ಫೋನ್ ಮಾಡಿದಾಗಲೇ ಯಾವುದೋ ಒಂದು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದನ್ನ ಈಗ ಮಗನಿಗೆ ತಿಳಿಸುವುದಷ್ಟೇ ಬಾಕಿ ಇದ್ದು ಮಗನನ್ನು ಭೇಟಿಯಾಗಿದ್ದಾರೆ. ತಾಂಡವ್ ತನ್ನ ಅಮ್ಮ ಹೇಳಿದ ಸ್ಥಳಕ್ಕೆ ಬಂದು ಅಮ್ಮನಿಗಾಗಿ ಕಾದು ಕುಳಿತು ಏನು ವಿಷಯ ಎಂಬುದನ್ನೆಲ್ಲಾ ಕೇಳಿದ್ದಾನೆ. ಕೊನೆಗೆ ಕುಸುಮಾ ಅವರು ಲಾಯರ್ ಮೂಲಕ ಒಂದು ಪತ್ರವನ್ನು ತಾಂಡವ್ ಕೈಗೆ ಇಟ್ಟಿದ್ದಾರೆ.

ಈಗ ತಾಂಡವ್‌ಗೆ ಎಲ್ಲವೂ ಕೂಡ ಸ್ಪಷ್ಟವಾಗುತ್ತಾ ಹೋಗುತ್ತಿದೆ ಅಮ್ಮ ಏನೇ ಆದರೂ ಕೂಡ ತನ್ನ ಸೊಸೆಯನ್ನ ಬಿಟ್ಟು ಕೊಡುವುದಿಲ್ಲ. ಮಗನನ್ನ ಬೇಕಾದರೆ ಬಿಟ್ಟು ಕೊಡುತ್ತಾರೆ ಎಂಬುದು ಈಗ ತಾಂಡವ್‌ಗೆ ಅರ್ಥವಾಗಿದೆ. ನನ್ನ ಸೊಸೆಗೂ ಕೂಡ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿಯಲಿ ಎಂದು ಸ್ಕೂಲ್‌ಗೆ ರಜಾ ಹಾಕಿಸಿಕೊಂಡು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಈ ಕಡೆ ಪೂಜಾ ಹಾಗೂ ಭಾಗ್ಯಳ ಅಮ್ಮ ಸುನಂದಾ ಇಬ್ಬರೂ ಕೂತು ತಾಂಡವ್ ಯಾಕೆ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಪೂಜಾಗೆ ಆ ವಿಡಿಯೋ ಸಿಕ್ಕರೆ ಸಾಕು, ಭಾವನನ್ನು ಮನೆಗೆ ಕರೆಸಿಕೊಳ್ಳಬಹುದು ಅಂದುಕೊಂಡಿದ್ದಾಳೆ.
ತಾಂಡವ್‌ಗೆ ಶಾಕ್ ಕೊಟ್ಟ ಕುಸುಮಾ
ಹೀರೋ ಅಂತ ಬಂದು ಅಮ್ಮನ ಮುಂದೆ ಜೀರೋ
ತಾಂಡವ್ ತನ್ನ ಅಮ್ಮ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಅಂದು ಕೊಂಡಿರಲಿಲ್ಲ ಆ ರೀತಿಯ ನಿರ್ಧಾರವನ್ನು ಕುಸುಮಾ ತೆಗೆದುಕೊಂಡಿದ್ದಾರೆ. ಲಾಯರನ್ನು ಜೊತೆಗೆ ಕರೆದುಕೊಂಡು ಬಂದಿದ್ದು ನಾನು ಹೇಳಿದಂತೆ ಎಲ್ಲವನ್ನು ಬರೆದಿದ್ದೀರ ತಾನೇ ಎಂದು ಕೇಳಿದ್ದಾರೆ. ಇದಕ್ಕೆ ಲಾಯರ್ ಹೌದು ನೀವು ಹೇಳಿದಂತೆ ಬರೆದಿದ್ದೇನೆ ಎಂದು ಕಾಗದವನ್ನು ತೋರಿಸಿದ್ದಾರೆ. ಈ ಕಾಗದವನ್ನು ಸರಿಯಾದ ರೀತಿ ಓದಿಕೋ ಎಂದು ತಾಂಡವ್ ಕೈಗೆ ಕುಸುಮಾ ಲೆಟರ್ ಕೊಟ್ಟಿದ್ದು ಲೆಟರ್ ಓದಿದ ತಾಂಡವ್ ಮುಖದಲ್ಲಿ ಬದಲಾವಣೆ ಕಾಣುತ್ತಿದೆ.

ಬೀದಿಯಲ್ಲಿ ಹೋಗುವವನು ಯಾರೋ ಆ ಮನೆಯಲ್ಲಿ ನಾನು ಇಲ್ಲ ಎಂದು ನನ್ನ ಸೊಸೆಗೆ ಹೇಳಿದ್ದಾನೆ. ಈ ಪೆದ್ದು ಹೋಗಿ ಮನೆಯ ಸಾಲವನ್ನು ಕಟ್ಟಿ ಬಂದಿದೆ. ಆದರೆ ಇವಳಿಗೆ ಗಂಡನೇ ಮುಖ್ಯವಾಗಿದ್ದ ನನಗೆ ನನ್ನ ಸೊಸೆಯೇ ಮುಖ್ಯ. ನಾನು ಅವಳ ರೀತಿ ಪೆದ್ದು ಅಲ್ಲ ನನಗೆ ಎಲ್ಲದಕ್ಕೂ ಕೂಡ ದಾಖಲೆ ಬೇಕು ಇಲ್ಲದಿದ್ದರೆ ನಾನು ಏನನ್ನು ಕೂಡ ಮಾಡೋದಿಲ್ಲ ಎಂದು ಕುಸುಮಾ ಹೇಳಿದ್ದಾಳೆ. ನೀನು ನನ್ನ ಸೊಸೆಗೆ ಮನೆಯ ಸಾಲವನ್ನ ಕಟ್ಟಬೇಕು ಎಂದು ಹೇಳಿದ್ದೀಯಾ, ನನಗೆ ದಾಖಲೆ ಬೇಕು ಮನೆಯನ್ನು ನನ್ನ ಸೊಸೆಯ ಹೆಸರಿಗೆ ಬರೆದುಕೊಡು. ಆಗ ನನ್ನ ಸೊಸೆ ಸಾಲ ಕಟ್ಟುತ್ತಾಳೆ ಎಂದು ಮಗನಿಗೆ ಸವಾಲು ಹಾಕಿದ್ದಾರೆ.
ಮನೆ ಬರೆದುಕೊಡುತ್ತಾನ ತಾಂಡವ್?
ಮನೆ ಸಾಲ ಕಟ್ಟುವುದೊಂದೇ ದಾರಿ!
ಕುಸುಮಾ ಮಗನಿಗೆ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಿದ್ದು ಮನೆಯನ್ನು ಭಾಗ್ಯ ಹೆಸರಿಗೆ ಬರೆದು ಕೊಡು ಎಂದು ಕೇಳುತ್ತಿದ್ದಾರೆ. ಆದರೆ ಮೊದಲೇ ತನ್ನ ಹೆಂಡತಿ ಭಾಗ್ಯಳನ್ನು ಕಂಡರೆ ಆಗದ ತಾಂಡವ್ ಈಗ ಭಾಗ್ಯ ಹೆಸರಿಗೆ ಮನೆಯ ಬರೆದುಕೊಡುತ್ತಾನಾ ಎಂಬುದೇ ಕುತೂಹಲವಾಗಿದೆ. ಈಗ ತಾಂಡವ್ ಬಳಿ ಇರುವುದು ಎರಡು ಆಯ್ಕೆಗಳು ಒಂದು ಮನೆ ಬರೆದುಕೊಡುವುದು ಇಲ್ಲ ಸಾಲವನ್ನು ತಾನೇ ಕಟ್ಟುವುದು.
ತಮ್ಮ ಬುದ್ಧಿವಂತಿಕೆಯಿಂದ ಮಗನನ್ನೇ ಲಾಕ್ ಮಾಡಿದ್ದಾರೆ. ಹಿರೋನಂತೆ ಬಂದ ತಾಂಡವ್ ಕುಸುಮಾ ಮಾಡಿರುವ ಮುಂದೆ ಜೀರೋ ಆಗಿದ್ದಾನೆ. ನನ್ನ ಅಮ್ಮ ಇಷ್ಟೆಲ್ಲ ಬುದ್ಧಿ ಓಡಿಸುವುದಿಲ್ಲ ಎಂದು ತಾಂಡವ್ ಅಂದುಕೊಂಡಿದ್ದರು. ಆದರೆ ಕುಸುಮಾ ಮಗನಿಗೆ ಬುದ್ದಿಯನ್ನು ಕಲಿಸಲೇಬೇಕು ಎಂದು ಬಂದಿದ್ದಾರೆ. ಈಗ ತಾಂಡವ್ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನೋಡಬೇಕಾಗಿದೆ.


Click it and Unblock the Notifications











