BhagyaLakshmi : ಭಾಗ್ಯಗೆ ಡಿವೋರ್ಸ್ ಕೊಡಲು ತಾಂಡವ್ ನಿರ್ಧಾರ: ಮಗಳ ಭವಿಷ್ಯದ ಬಗ್ಗೆ ಚಿಂತೆಯಲ್ಲಿ ಸುನಂದಾ
ಭಾಗ್ಯಲಕ್ಷ್ಮಿ ಧಾರಾವಾಹಿ ಪ್ರತಿದಿನವೂ ಕೂಡ ತಿರುವುಗಳನ್ನ ಪಡೆದುಕೊಂಡು ಮುಂದೆ ಸಾಗುತ್ತಿದೆ. ಈಗ ತಾಂಡವ್ ಶ್ರೇಷ್ಠಾ ಮನೆಯಲ್ಲಿ ಇದ್ದಾನೆ. ಕುಸುಮಾ ಆಡಿರುವ ಪ್ರತಿಯೊಂದು ಮಾತುಗಳು ಕೂಡ ತಾಂಡವ್‌ಗೆ ಬೇಸರ ತರಿಸಿವೆ. ಮನೆಗೆ ಬಂದವನೇ ಶ್ರೇಷ್ಠಾ ಮೇಲೆ ಜೋರಾಗಿ ಕೂಗಾಡಿದ್ದಾನೆ. ಇನ್ನು ಇದೇ ಸಮಯ ಎಂದುಕೊಂಡು ತಾನು ಏನನ್ನು ಹೇಳಬೇಕಿತ್ತು ಆ ಮಾತನ್ನು ತಾಂಡವ್ ಎದೆಗೆ ನಾಟುವಂತೆ ಹೇಳಿದ್ದಾಳೆ. ಇಷ್ಟು ದಿನದಲ್ಲಿ ತಾಂಡವ್ ಕೂಡ ಭಾಗ್ಯಗೆ ಡಿವೋರ್ಸ್ ನೀಡುವ ಯೋಜನೆ ಮಾಡಿ ಇರಲಿಲ್ಲ ಆದರೆ ಈಗ ತಾಂಡವ್ ಆ ನಿರ್ಧಾರಕ್ಕೆ ಬಂದಿದ್ದಾನೆ.
ಕುಸುಮಾ ತನ್ನ ಮಗ ಈ ರೀತಿ ಮನೆಬಿಟ್ಟು ಹೋಗುತ್ತಾನೆ ಎಂದು ಕೊಂಡಿರಲಿಲ್ಲ. ಮಗ ಮಾಡಿರುವ ಕೆಲಸ ಕುಸುಮಾ ಮನಸಿಗೆ ನೋವುಂಟು ಮಾಡಿದೆ. ಈ ಕಡೆ ತನ್ವಿಗೆ ತನ್ನ ತಂದೆಯ ನೆನಪು ಪ್ರತಿದಿನವೂ ಕೂಡ ಕಾಡುತ್ತಿದೆ. ಅಪ್ಪ ಇದ್ದಿದ್ದರೆ ನಂಗೆ ಪಾಕೆಟ್ ಮನಿ ಸಿಗುತ್ತಿತ್ತು ಎಂದುಕೊಂಡು ಅಮ್ಮನ ಬಳಿ ಬಹಳ ಕಠೋರವಾಗಿ ನಡೆದುಕೊಳ್ಳುತ್ತಾ ಇದ್ದಾಳೆ. ತನ್ವಿ ಶಾಲೆಯಿಂದ ಪ್ರವಾಸಕ್ಕೆ ವ್ಯವಸ್ಥೆ ಮಾಡಿದ್ದು ಟ್ರಿಪ್ಪಿಗೆ ಹೋಗಲು ಕುಸುಮಾ ಬಳಿ ಹತ್ತು ಸಾವಿರ ರೂಪಾಯಿ ಕೇಳಿದ್ದಾಳೆ. ಇದೆ ವೇಳೆ ಭಾಗ್ಯ ಮಗಳಿಗೆ ಬುದ್ಧಿ ಹೇಳಿದರು ಕೂಡ ತನ್ವಿ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ.

ಅಮ್ಮನಿಗೆ ಬೈದಿದ್ದಕ್ಕೆ ಗುಂಡಣ್ಣನಿಗೆ ಕೋಪ ಬಂದಿದೆ. ತನ್ನ ಅಮ್ಮನಿಗೆ ಬೈದಿದ್ದಕ್ಕಾಗಿ ಅಕ್ಕನ ಜೊತೆಯಲ್ಲಿ ಜಗಳವಾಡುತ್ತಾ ಇದ್ದಾನೆ. ಭಾಗ್ಯ ಅಷ್ಟರಲ್ಲಿ ರೂಮಿಗೆ ಬಂದಿದ್ದು ತನ್ವಿಗೆ ಊಟ ಮಾಡುವಂತೆ ಹೇಳಿದ್ದಾಳೆ. ಆದರೂ ಕೂಡ ತನ್ವಿ ನನಗೆ ಊಟ ಬೇಡ ಎಂದು ಧಿಮಾಕು ತೋರಿಸಿದ್ದಾಳೆ. ಭಾಗ್ಯ ಇಬ್ಬರಿಗೂ ಕೂಡ ಸಮಾಧಾನವನ್ನು ಮಾಡಿ ಜಗಳವಾಡದಂತೆ ವಾರ್ನಿಂಗ್ ಮಾಡಿದ್ದಾಳೆ. ಆದರೂ ಕೂಡ ಗುಂಡಣ್ಣ ತನ್ನ ಅಕ್ಕನಿಗೆ ನಿನ್ನ ಪ್ರೀತಿಯ ಪಪ್ಪನ ಬಳಿಯಲ್ಲಿ ಹಣ ತಗೆದುಕೊಂಡು ಟ್ರಿಪ್ ಗೆ ಹೋಗು ಎಂದು ಚಾಲೆಂಜ್ ಹಾಕಿದ್ದಾನೆ.
ಭಾಗ್ಯಗೆ ಡಿವೋರ್ಸ್ ಕೊಡುವ ನಿರ್ಧಾರ ಮಾಡಿದ ತಾಂಡವ್
ತಾಂಡವ್ ತನ್ನ ಹೆಂಡತಿ ಭಾಗ್ಯಗೆ ಒಮ್ಮೆಯೂ ಕೂಡ ಡಿವೋರ್ಸ್ ಕೊಡುವ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಶ್ರೇಷ್ಠಾ ಈ ಬಗ್ಗೆ ಉಸಿರೆತ್ತಿದರೂ ಕೂಡ ನಾನು ಭಾಗ್ಯಗೆ ಡಿವೋರ್ಸ್ ಕೊಡಲು ಆಗುವುದಿಲ್ಲ ಎಂದು ಹೇಳುತ್ತಲೇ ಬರುತ್ತಿದ್ದನು. ಆದರೆ ಈಗ ಕುಸುಮಾ ಆಡಿದ ಮಾತುಗಳು ತಾಂಡವ್ ಮೇಲೆ ಪರಿಣಾಮ ಬೀರಿದ್ದು, ಭಾಗ್ಯಾಗೆ ನಾನು ಡೈವೋರ್ಸ್ ಕೊಟ್ಟೆ ಕೊಡುತ್ತೇನೆ. ನನ್ನ ಅಮ್ಮನನ್ನೇ ನನ್ನ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾಳೆ ಎಂದಿದ್ದಾನೆ. ತಾಳಿ ಕಟ್ಟಿರುವುದರಿಂದಲೇ ತಾನೇ ಇಷ್ಟೆಲ್ಲ ಮೆರೆಯುತ್ತಿರುವುದು ಎಂದು ಕೊಂಡಿರುವ ತಾಂಡವ್ ಅವಳ ಗೌರವವನ್ನೇ ನಾನು ಕಸಿದುಕೊಳ್ಳುತ್ತೇನೆ ತಾಳಿ ವಾಪಸ್ ಪಡೆದುಕೊಳ್ಳುತ್ತೇನೆ ಎಂದಿದ್ದಾನೆ.

ತಾಂಡವ್ ಈ ನಿರ್ಧಾರ ಮಾಡಿರುವುದು ಶ್ರೇಷ್ಠಾಗೆ ತುಂಬಾನೇ ಖುಷಿ ಕೊಟ್ಟಿದೆ. ನಾನು ಅಷ್ಟು ಹೇಳುತ್ತಿದ್ದರು ಕೂಡ ತಾಂಡವ್ ಒಮ್ಮೆಯೂ ಕೂಡ ಡಿವೋರ್ಸ್ ಬಗ್ಗೆ ಮಾತನಾಡುತ್ತಾ ಇರಲಿಲ್ಲ. ಈಗ ತಾನಾಗೆ ಈ ಬಗ್ಗೆ ಮಾತನಾಡಿದ್ದು ಆಗಾಗ ಸ್ವಲ್ಪ ಎಚ್ಚರಿಕೆ ನೀಡುತ್ತಿರಬೇಕು ಎಂದು ಅಂದುಕೊಂಡಿದ್ದಾಳೆ. ಸದ್ಯಕ್ಕೆ ಶ್ರೇಷ್ಠ ತುಂಬಾ ಖುಷಿ ಖುಷಿಯಲ್ಲಿ ಇದ್ದಾಳೆ ಈ ಖುಷಿಯನ್ನ ಹಾಳು ಮಾಡಲೆಂದೇ ತಾಂಡವ್ ಡುಪ್ಲಿಕೇಟ್ ಅಮ್ಮ ಇದ್ದು ಇದೆಲ್ಲವೂ ಸಾಧ್ಯ ಎಂದು ತಿಳಿಯಬೇಡ. ಅವನು ಅಮ್ಮನಿಗೆ ಸಾಕಷ್ಟು ಗೌರವವನ್ನು ಕೊಡುತ್ತಾನೆ ಜಾಸ್ತಿ ಬೀಗಬೇಡ ಎಂಬ ಮಾತನ್ನು ಹೇಳಿ ಶ್ರೇಷ್ಠಾ ಖುಷಿಗೆ ತಣ್ಣೀರು ಸುರಿದಿದ್ದಾಳೆ.
ಮಗಳ ಭವಿಷ್ಯದ ಬಗ್ಗೆ ಸುನಂದಾ ಯೋಚನೆ
ಸುನಂದಾಗೆ ಭಾಗ್ಯಳ ಭವಿಷ್ಯದ್ದೇ ಚಿಂತೆಯಾಗಿದೆ ಇದರಿಂದಾಗಿ ಕುಸುಮಾ ಬಳಿಯಲ್ಲಿ ಚರ್ಚೆ ಮಾಡಿದ್ದಾರೆ. ನೀವೇನೋ ನಿಮ್ಮ ಸ್ವಾಭಿಮಾನಕ್ಕಾಗಿ ಮಗನನ್ನ ದೂರ ಇಟ್ಟು ಬಂದಿದ್ದೀರಾ. ಆದರೆ ನನ್ನ ಮಗಳಿಗೆ ಗಂಡನೇ ಇಲ್ಲ ಅವನು ಮನೆ ಬಿಟ್ಟು ಹೋಗಿದ್ದಾನೆ ಎಂಬುವುದು ಗೊತ್ತಾದರೆ ಸಮಾಜ ಅವಳನ್ನು ಯಾವ ರೀತಿ ನೋಡುತ್ತದೆ ಎಂಬುದರ ಬಗ್ಗೆ ಚಿಂತೆ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ.
ಈ ಮಾತಿಗೆ ಕುಸುಮಾ ಅವರು ನಾನು ಭಾಗ್ಯಳಿಗೆ ಎಲ್ಲಾ ಆಗಿದ್ದೇನೆ ಅವಳನ್ನ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಭಾಗ್ಯಗೂ ಕೂಡ ಎಲ್ಲೋ ಒಂದು ಕಡೆ ತನ್ನ ಗಂಡ ಮನೆಗೆ ಬಂದಿದ್ದರೇ ಚೆನ್ನಾಗಿ ಇರುತ್ತಿತ್ತು ಎಂಬ ಚಿಂತೆ ಕಾಡುತ್ತಿದೆ. ಅದನ್ನು ಅತ್ತೆಯ ಮುಂದೆ ತೋರಿಸಿದರೆ ಅವರು ಮತ್ತಷ್ಟು ಕುಗ್ಗಿ ಹೋಗುತ್ತಾರೆ ಎಂದು ಸುಮ್ಮನೆ ಇದ್ದಾಳೆ.


Click it and Unblock the Notifications











