Bhagyalakshmi: ಮನೆಯವರ ಮುಂದೆ ಶ್ರೇಷ್ಠಾ ನಗಣ್ಯ.. ತಾಂಡವ್ ಮೇಲಿನ ಕೋಪಕ್ಕೆ ತನ್ವಿ ಬಗ್ಗೆ ದೂರು!
ಭಾಗ್ಯಾಳಿಗೆ ತಂಗಿಯನ್ನು ತವರು ಮನೆಗೆ ಕಳುಹಿಸುವ ಶಾಸ್ತ್ರವಿತ್ತು. ಈ ಕಡೆ ತನ್ವಿಗೆ ಪರೀಕ್ಷೆ ಕೂಡ ಇತ್ತು. ಹೀಗಾಗಿ ಭಾಗ್ಯಾ ಅಂಡ್ ಫ್ಯಾಮಿಲಿ ಆ ಕಡೆ ಲಕ್ಷ್ಮೀ ಮನೆಗೆ ಹೋಗಿದ್ದರೆ ಈ ಕಡೆ ತನ್ವಿಗೆ ಓದಿಸಲು ಶ್ರೇಷ್ಠಾಳನ್ನು ಬಿಟ್ಟು ಹೋಗಿದ್ದರು. ಅಲ್ಲಿ ಶಾಸ್ತ್ರಗಳೆಲ್ಲಾ ಸುಸೂತ್ರವಾಗಿ ನಡೆದಿದ್ದವು. ಆದರೆ ಈ ಕಡೆ ಶ್ರೇಷ್ಠಾ ಮಾತ್ರ ಅವರ ಮಗಳನ್ನು ಅಪಾಯಕ್ಕೆ ದೂಡಿದ್ದಳು.
ತನ್ವಿಗೆ ಜಂಗ್ ಫುಡ್ ಎಂದರೆ ಆಗಿ ಬರಲ್ಲ. ತಿಂದ ತಕ್ಷಣ ಅದರ ರಿಯಾಕ್ಷನ್ ದೇಹದ ಮೇಲೆಯೇ ಕಾಣಿಸಿಕೊಳ್ಳುತ್ತದೆ. ತನ್ವಿಗೋ ಅಮ್ಮ ಮಾಡುವ ಆರೋಗ್ಯಕರ ಆಹಾರಕ್ಕಿಂತ ಹೊರಗಡೆ ಪಿಜ್ಹಾ- ಬರ್ಗರ್ ಮೇಲೆನೇ ಮೋಹ. ಮನೆಯಲ್ಲಿ ಬೇರೆ ಯಾರು ಇರಲಿಲ್ಲ. ಇದನ್ನೆಲ್ಲಾ ಗಮನಸಿದ ತನ್ವಿ, ಶ್ರೇಷ್ಠಾಳ ಬಳಿಯೇ ಕೇಳಿ, ತರಿಸಿಕೊಂಡು ತಿಂದಿದ್ದಾಳೆ. ಇದರ ಪರಿಣಾಮ ಮೈಯೆಲ್ಲಾ ಗುಳ್ಳೆಗಳು ಎದ್ದಿದ್ದವು.

ಕುಸುಮಾ ಬಳಿಯೇ ಸುಳ್ಳು ಹೇಳಿದ ಶ್ರೇಷ್ಠಾ
ತನ್ವಿಗೆ ಹುಷಾರಿಲ್ಲ ಅಂತ ತಿಳಿದಿದ್ದೆ ತಡ, ತಾಂಡವ್, ಲಕ್ಷ್ಮೀಯನ್ನು ಮನೆ ಮುಂದೆಯೇ ಇಳಿಸಿ ಬಂದೇ ಬಿಟ್ಟ. ಮನೆಗೆ ಬಂದು ನೋಡಿದರೆ ತನ್ವಿ ದೇಹದ ಮೇಲೆಲ್ಲಾ ಗುಳ್ಳೆಗಳು ಉಕ್ಕಿದ್ದವು. ಎಲ್ಲರೂ ಒಂದು ಕ್ಷಣ ಗಾಬರಿ. ಕುಸುಮಾಗೆ ಅನುಮಾನ ಬಂತು. ತಿಂದಿದ್ದು ಏನು ಅಂತ ಪ್ರಶ್ನೆ ಕೇಳಿದಳು. ಆದರೆ, ಶ್ರೇಷ್ಠಾ ಒಪ್ಪಿಕೊಳ್ಳುವುದಕ್ಕೆ ಸಿದ್ಧವಿರಲಿಲ್ಲ. ಆ ಕಡೆ ತನ್ವಿ ಕೂಡ ಹು ಅಂತಿಲ್ಲ. ಅಡುಗೆ ಮನೆಗೆ ಹೋಗಿ ನೋಡಿದಾಗ ಎಲ್ಲಾ ಆಹಾರ ಹಾಗೆಯೇ ಇದ್ದಿದ್ದು ಗೊತ್ತಾಗಿದೆ. ಆಗ ಮತ್ತೆ ಜೋರು ಮಾಡಿದಾಗ ತನ್ವಿ ಒಪ್ಪಿಕೊಂಡಿದ್ದಾಳೆ. ಅದು ಶ್ರೇಷ್ಠಾ ಆಂಟಿಯೇ ಕೊಡಿಇದ್ದು ಅಂತ, ಅವಳ ಮೇಲೆಯೇ ಹಾಕಿದ್ದಾಳೆ.
ಶ್ರೇಷ್ಠಾ ಪರ ನಿಲ್ಲುವ ತಾಂಡವ್ ಅವಕಾಶ ಸಿಕ್ಕಾಗೆಲ್ಲಾ ಭಾಗ್ಯಾಳ ವಿರುದ್ಧವೇ ನಿಲ್ಲುತ್ತಾನೆ. ಶ್ರೇಷ್ಠಾ ಹೇಳಿದ ಒಂದೇ ಒಂದು ಸುಳ್ಳಿಗೆ ಭಾಗ್ಯಾಳ ಅಡುಗೆಯನ್ನೇ ಅನುಮಾನಿಸಿದ್ದಾನೆ. ಅಡುಗೆಗೆ ಅದೇನು ಬೆರೆಸಿದ್ದೆ ಎಂದು ಬೈದಿದ್ದಾನೆ. ಅಪ್ಪ ಮಧ್ಯಪ್ರವೇಶಿಸಿದ ಮೇಲೆ ಸುಮ್ನನಾಗಿದ್ದಾನೆ. ಆದರೆ ಭಾಗ್ಯಾಳಿಗೆ ಇದೆಲ್ಲಾ ಯಾವುದು ಹೊಸೇನು ಅಲ್ಲವೇ ಅಲ್ಲ.
ಕುಸುಮಾಳಿಂದ ಹೊರ ದಬ್ಬಿಸಿಕೊಂಡ ಶ್ರೇಷ್ಠಾ
ಶ್ರೇಷ್ಠಾ ಒಂದಕ್ಕೊಂದು ಸುಳ್ಳು ಹೇಳಿದ್ದು ತಿಳಿದು, ಆ ಸುಳ್ಳಿನಿಂದ ಭಾಗ್ಯಾಳಿಗೆ ಅವಮಾನ ಆಗಿದ್ದನ್ನು ಕಂಡು ಕುಸುಮಾ ಗರಂ ಆಗಿದ್ದಾಳೆ. ಶ್ರೇಷ್ಠಾಳಿಂದ ನಮ್ಮ ಮನೆ ಮಗು ಟ್ಯೂಷನ್ ಹೇಳಿಸಿಕೊಂಡರೆ ಅವಳು ಇದೇ ಸುಳ್ಳು ಹೇಳುವುದನ್ನು ಕಲಿಯುತ್ತಾಳೆ ಎಂದಿದ್ದಾಳೆ. ಹೀಗಾಗಿ ನಿನ್ನ ಟ್ಯೂಷನ್ ಬೇಡ, ನೀನು ಈ ಮನೆಗೆ ಬರುವುದು ಬೇಡ ಎಂದು ಹೊರಗೆ ಕಳುಹಿಸಿದ್ದಾಳೆ.

ಶ್ರೇಷ್ಠಾ, ತಾಂಡವ್ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುವುದೇ ಮಹಾಪರಾಧ. ಯಾಕಂದ್ರೆ, ಹೆಂಡತಿಯನ್ನು ನಿಂದಿಸಿದಷ್ಟು ಸುಲಭವಾಗಿ ಅಮ್ಮನನ್ನು ಹೆದರಿಸುವ ಧೈರ್ಯ ತಾಂಡವ್ ಬಳಿ ಇಲ್ಲ. ಅಮ್ಮ ಒಮ್ಮೆ ಗದರಿದರೆ ತಲೆ ತಗ್ಗಿಸಿಕೊಂಡು ಕೇಳುತ್ತಾನೆ. ಈಗ ಅಮ್ಮ, ಶ್ರೇಷ್ಠಾಳನ್ನು ಬೈಯ್ಯುತ್ತಿದ್ದರೆ ಸುಮ್ಮನೆ ನೋಡುತ್ತಾ ನಿಂತಿದ್ದಾನೆ. ಅಷ್ಟೇ ಅಲ್ಲ ಅಮ್ಮನ ಮುಂದೆಯೇ ಶ್ರೇಷ್ಠಾಳಿಗೂ ಪ್ರಶ್ನೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ತನ್ನ ಜೊತೆಗೆ ತಾಂಡವ್ ನಿಲ್ಲದೆ ಇರುವುದನ್ನು ಕಂಡು ಶ್ರೇಷ್ಠಾ ಮನಸ್ಸೊಳಗೆ ಬೈದುಕೊಂಡಿದ್ದಾಳೆ. ತಾಂಡವ್ ಅಂದೇ ಕ್ಲಾರಿಟಿ ಕೊಟ್ಟಿದ್ದಾನೆ. ನಮ್ಮಿಬ್ಬರದ್ದು ಪ್ರೀತಿ ಅಷ್ಟೆ ಮದುವೆಯಾಗುವುದಕ್ಕೆ ಆಗಲ್ಲ ಅಂತ ಹೇಳಿದ್ದಾನೆ.


Click it and Unblock the Notifications











