Bhagyalakshmi: ಅಪ್ಪ ಆಸ್ಪತ್ರೆಯಲ್ಲಿ.. ಮಗ ಪ್ರಿಯತಮೆ ಮನೆಯಲ್ಲಿ.. ಭಾಗ್ಯಾಳ ಶ್ರದ್ಧೆ, ಕುಸುಮಾಗೆ ಹೆಮ್ಮೆ..!
ತಾಂಡವ್‌ಗೆ ಭಾಗ್ಯಾ ಎಂಬ ಮುದ್ದು ಹೆಂಡತಿಯಿದ್ದರು, ಶ್ರೇಷ್ಠಾಳಂತ ಗರ್ಲ್ ಫ್ರೆಂಡ್ ಬೇಕಾಗಿದೆ. ಅದಕ್ಕೆ ಶ್ರೇಷ್ಠಾಳ ಜೊತೆಗೆ ಸಂಬಂಧವನ್ನು ಮುಂದುವರೆಸಿದ್ದಾನೆ. ತಾಂಡವ್‌ಗೆ ಶ್ರೇಷ್ಠಾ ಬೇಕು ಎಂಬ ಆಸೆ ಎಷ್ಟಿದೆಯೋ ಅಮ್ಮನ ಭಯ ಅದರ ಡಬ್ಬಲ್ ಇದೆ. ಹೀಗಾಗಿಯೇ ಶ್ರೇಷ್ಠಾಳನ್ನು ತೀರಾ ಸಪೋರ್ಟ್ ಮಾಡುವುದಕ್ಕೆ ಆಗುತ್ತಿಲ್ಲ. ಈಗ ಶ್ರೇಷ್ಠಾಳ ಗೋಳಾಟಕ್ಕೆ ಅದೇ ಕಾರಣವಾಗಿದೆ.
ಇತ್ತೀಚೆಗೆ ತಾಂಡವ್ ಆಫೀಸಲ್ಲಿ ಅದ್ಧೂರಿಯಾಗಿ ಅಡುಗೆ ಸ್ಪರ್ಧೆ ನಡೆಸಿದ್ದರು. ಆ ಸ್ಪರ್ಧೆಗೆ ಭಾಗ್ಯಾಳೇ ಜಡ್ಜ್. ಎಲ್ಲರ ಮುಂದೆ ಭಾಗ್ಯಾಳನ್ನು ಹೊಗಳಲೇಬೇಕಾದ ಪರಿಸ್ಥಿತಿ ತಾಂಡವ್‌ಗೆ ಸೃಷ್ಟಿಯಾಗಿತ್ತು. ಎಲ್ಲರ ಮುಂದೆ ಹೆಂಡತಿಯನ್ನೇನೋ ಹೊಗಳಿಬಿಟ್ಟ ಆದರೆ ಶ್ರೇಷ್ಠಾಳ ಕೆಂಗಣ್ಣಿಗೆ ಗುರಿಯಾಗಿ ಬಿಟ್ಟ.

ತಾಂಡವ್ ಅಪ್ಪನಿಗೆ ಹಾರ್ಟ್ ಅಟ್ಯಾಕ್
ತಾಂಡವ್ ಈಗ ಮನೆಯಲ್ಲಿ ಇಲ್ಲ. ಆದರೆ ದಿಢೀರನೇ ಅವರ ತಂದೆಗೆ ಜೋರು ಎದೆನೋವು ಬಂದಿದೆ. ಕುಸುಮಾ ಗಾಬರಿಯಾಗಿದ್ದಾಳೆ. ತಾಂಡವ್‌ಗೆ ಕಾಲ್ ಮಾಡಿ ಭಾಗ್ಯಾ ಸುಸ್ತಾಗಿದ್ದಾಳೆ. ಏನು ಮಾಡಬೇಕು ಎಂದು ತೋಚದೆ ಇಬ್ಬರು ಒದ್ದಾಡುತ್ತಿದ್ದಾರೆ. ತಕ್ಷಣ ಪಕ್ಕದ ಮನೆಯ ಆಟೋದವರನ್ನ ಕರೆದು ಮೊದಲು ಮಾವನನ್ನ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆಯಾಗಿದೆ. ಆಸ್ಪತ್ರೆಗೆ ಬರುವ ತನಕವೂ ಭಾಗ್ಯಾಳ ಮಾವ ಎದೆ ನೋವಿನಿಂದಾನೇ ಒದ್ದಾಡಿದ್ದಾರೆ.
ಆಫೀಸಿಗೆ ಭಾಗ್ಯಾ ಬಂದಿದ್ದು, ಭಾಗ್ಯಾಳನ್ನು ತಾಂಡವ್ ಹೊಗಳಿದ್ದು ಯಾವುದು ಶ್ರೇಷ್ಠಾಗೆ ಇಷ್ಟವಾಗಲಿಲ್ಲ. ಅದಕ್ಕೆ ದೊಡ್ಡ ಹೈಡ್ರಾಮಾವನ್ನೇ ಶುರು ಮಾಡಿಕೊಂಡಿದ್ದಾಳೆ. ತಾಂಡವ್ ಬರುವ ತನಕ ರೂಮಿನ ಬಾಗಿಲು ಹಾಕಿಕೊಂಡು ಅಳುತ್ತಾ ಕೂತಿದ್ದಾಳೆ. ಕಾವ್ಯಾ, ತಾಂಡವ್‌ಗೆ ಕಾಲ್ ಮಾಡಿ ಕರೆಸಿದ್ದಾಳೆ. ಶ್ರೇಷ್ಠಾ ಬಾಗಿಲು ತೆಗೆಯುವುದ್ದನ್ನು ಕಂಡು ತಾಂಡವ್ ಗಾಬರಿಯಾಗಿದ್ದಾನೆ. ಬಾಗಿಲನ್ನೇ ಒಡೆಯಲು ಯತ್ನಿಸಿದ್ದಾನೆ. ಆ ಟೈಮ್‌ನಲ್ಲಿಯೇ ಭಾಗ್ಯಾಳ ಕಾಲ್ ಬಂದರೂ ರಿಸೀವ್ ಮಾಡುವ ಉಸಾಬರಿಗೆ ಹೋಗಿಲ್ಲ. ಕಾವ್ಯಾ ಹೇಳಿದರೂ ಕೇಳುವ ಗುಂಗಿಗೆ ಜಾರಿಲ್ಲ. ಮನೆಗಿಂತ ಮೊದಲು ಶ್ರೇಷ್ಠಾಳೇ ಹೆಚ್ಚಾಗಿದ್ದಳು.
ಅತ್ತೆಗೆ ತಕ್ಕ ಸೊಸೆ ಭಾಗ್ಯಾ
ಇತ್ತ ಭಾಗ್ಯಾ ಕಷ್ಟಪಟ್ಟು ಮಾವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾಳೆ. ಮೈಲ್ಡ್ ಹಾರ್ಟ್ ಅಟ್ಯಾಕ್ ಆಗಿರಬಹುದೆಂದು ವೈದ್ಯರು ಹೇಳಿದಾಗ ಅದನ್ನು ಕೇಳಿ ಕುಸುಮಾ ಮತ್ತು ಭಾಗ್ಯಾ ಶಾಕ್ ಆಗಿದ್ದಾರೆ. ಹಣ ಬೇರೆ ಹೊಂದಿಸಬೇಕಾಗಿತ್ತು. ಭಾಗ್ಯಾಳಿಗೆ ದಾರಿಯೇ ಕಾಣುತ್ತಿಲ್ಲ. ಆದರೂ ಹೇಗೋ ಮಾಡಿ ಹಣವನ್ನು ಹೊಂದಿಸಿದ್ದಾಳೆ. ಮೆಡಿಸನ್, ಡಾಕ್ಟರ್ ಅಂತ ಒಬ್ಬಳೇ ಹುಚ್ಚಿಯಂತೆ ಓಡಾಡಿದ್ದಾಳೆ. ಇದನ್ನು ಕಂಡ ಕುಸುಮಾಗೆ ನನ್ನ ಸೊಸೆ ಚಿನ್ನದಂತೆ ಸೊಸೆ ಎನಿಸಿದೆ. ಭಾಗ್ಯಾಳನ್ನು ಪಡೆದ ನಾವೇ ಧನ್ಯ ಎಂದುಕೊಂಡಿದ್ದಾಳೆ.

ಇತ್ತ ಶ್ರೇಷ್ಠಾ ಎಷ್ಟು ದೊಡ್ಡ ನಾಟಕ ಶುರು ಮಾಡಿದ್ದಾಳೆ ಎಂದರೆ, "ಸಮಾಜದಲ್ಲಿ ನನಗೆ ಅಂತ ಸ್ಥಾನ ಕೊಡು, ಇಲ್ಲ ಅಂದ್ರೆ ಇಟ್ಟುಕೊಂಡವಳು ಎನ್ನುತ್ತಾರೆ. ಭಾಗ್ಯಾಳಿಗಿರುವ ಸ್ಥಾನದಲ್ಲಿ ಕಾಲು ಪರ್ಸೆಂಟ್ ನನಗೆ ಇಲ್ಲ. ಫ್ರೆಂಡ್ ಆಗಿ ಇವಳೇ ಆ ರೀತಿ ಕೆಟ್ಟದಾಗಿ ಮಾತನಾಡುತ್ತಾಳೆ. ಅವಳು ಮಾತನಾಡುವುದರಲ್ಲೂ ತಪ್ಪಿಲ್ಲ. ನಾನು ನಿನ್ನ ಕಳೆದುಕೊಂಡು ಬಿಡುತ್ತೀನಿ ಎಂಬ ಭಯ ಕಾಡುತ್ತಿದೆ. ನನ್ನ ನೀನು ಪ್ರೀತಿಸುತ್ತಾ ಇದ್ದೀಯಾ ಅಲ್ವಾ. ನಾನು ಯೂಸ್ ಆಗ್ತಿಲ್ಲ ಅಲ್ವಾ. ನಂಗೆ ನಿನ್ನ ಜೊತೆಗೆ ಸ್ಥಾನಮಾನವೂ ಬೇಕು" ಎಂದಿದ್ದಾಳೆ. ಶ್ರೇಷ್ಠಾಳ ಡಿಮ್ಯಾಂಡ್ ಕೇಳಿ ತಾಂಡವ್ ಗೆ ಮಾತೇ ಬರುತ್ತಿಲ್ಲ. ಆದರೆ ಜೀವನ ಪೂರ್ತಿ ಜೊತೆಗೆ ಇರುತ್ತೀನಿ ಅಂತ ಮಾತ್ರ ಮಾತು ಕೊಡ್ತಿದ್ದಾನೆ.


Click it and Unblock the Notifications











