Bhagyalakshmi: ಗಂಡ ಆಸ್ಪತ್ರೆಯಲ್ಲಿರುವಾಗ ರಾಜಾ– ಶ್ರೇಷ್ಠಾ ಮನೆಯಲ್ಲಿರುವುದು ತಿಳಿದರೆ ಬಿಡ್ತಾಳಾ ಕುಸುಮಾ..?

By ಎಸ್ ಸುಮಂತ್

ತಾಂಡವ್‌ಗೂ ಗ್ರಹಚಾರ ಕೆಟ್ಟಿದೆ ಅನ್ಸುತ್ತೆ. ಯಾಕಂದ್ರೆ, ಮನೆಯಿಂದ ರಾತ್ರಿ ಸಮಯದಲ್ಲಿ ಯಾವತ್ತು ಹೊರಗೆ ಬಂದವನಲ್ಲ. ಆದರೆ ಇವತ್ತೇ ಹೋಗಿದ್ದಾನೆ. ಆ ಕಡೆ ಮನೆಯಿಂದ ಬ್ಯಾಕ್ ಟು ಬ್ಯಾಕ್ ಕಾಲ್ ಗಳು ಬರ್ತಾ ಇದ್ರು ಒಮ್ಮೆ ರಿಸೀವ್ ಮಾಡಿ ಮಾತನಾಡದೆ ನೆಗ್ಲೆಕ್ಟ್ ಮಾಡುತ್ತಿದ್ದಾನೆ. ಬೇಕಾಂತಾನೇ ಕಾಲ್ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಿದ್ದಾನೆ.

ರಾಜಾ ಅಂದ್ರೆ, ಕುಸುಮಾಗೆ ಅಷ್ಟಿಷ್ಟಲ್ಲ. ಪ್ರತಿ ಸಲ ಮಗನನ್ನೇ ವಹಿಸಿಕೊಂಡು ಬರ್ತಾಳೆ. ಕೆಲವೊಮ್ಮೆ ರಾಜನ ಮುಂದೆ ಭಾಗ್ಯಾಳಿಗೆ ಬೈಯ್ಯುತ್ತಾಳೆ. ಆದರೆ ಈಗ ಮಗ ಮಾಡಿದ್ದಾದರೂ ಏನು. ಕುಸುಮಾ ಕೂಡ ಶಪಿಸುತ್ತಿದ್ದಾಳೆ. ಇತ್ತೀಚೆಗೆ ಇದು ನನ್ನ ಮನೆ ಎಂದಾಗಲೇ ಕುಸುಮಾ ಎಲ್ಲಾ ಮನೆಯ ಜವಾಬ್ದಾರಿಯ ಕೀ ಕೊಟ್ಟು ಸುಮ್ನೆನೆ ಇರಲು ನೋಡಿದ್ದಳು. ತಾಂಡವ್ ಹೊರಗೆ ಏನೇ ಇರಬಹುದು. ಆದರೆ ತಾಯಿಗೆ ತುಂಬಾ ಬೆಲೆ ಗೌರವ ಕೊಡ್ತಾನೆ. ಆದ್ರೆ, ಭಾಗ್ಯಾಳಾ ವಿಚಾರಕ್ಕೆ ಬಂದ್ರೆ ಶ್ರೇಷ್ಠಾಳೇ ಮುಖ್ಯ ಆಗ್ತಾಳೆ.

Bhagyalakshmi serial Written Update on April 21st episode

ಭಾಗ್ಯಾಳ ಕರೆಗೆ ನೋ ರೆಸ್ಪಾನ್ಸ್

ಮಾವನಿಗೆ ಎದೆ ನೋವು ಶುರುವಾದಾಗಿನಿಂದಲು ಭಾಗ್ಯಾ ಫೋನ್ ಮಾಡ್ತಾನೆ ಇದ್ದಾಳೆ. ಆದರೆ, ತಾಂಡವ್ ಮಾತ್ರ ಫೋನ್ ಎತ್ತುತ್ತಿಲ್ಲ. ಹಾಗೋ ಹೀಗೋ ಕಷ್ಟ ಪಟ್ಟು ಮಾವನನ್ನು ಆಸ್ಪತ್ರೆಗೆ ಸೇರಿಸಿದಳು. ಅಲ್ಲಿಯೂ ಸಾಕಷ್ಟು ಸಲ ಕರೆ ಮಾಡಿದಳು ಆಗಲೂ ಎತ್ತಲಿಲ್ಲ. ಕಡೆಗೆ ಕುಸುಮಾನೆ, ಶ್ರೇಷ್ಠಾಗೆ ಒಮ್ಮೆ ಕಾಲ್ ಮಾಡುವುದಕ್ಕೆ ಹೇಳಿದಳು. ಈಗ ಭಾಗ್ಯಾಳ ಕಾಲ್ ಅಂದ್ರೆ, ನನ್ನ ಬಿಟ್ಟು ಹೋಗಿ ಬಿಡುತ್ತಾನೆ ಅಂತ ಶ್ರೇಷ್ಠಾ ಸುಳ್ಳು ಹೇಳಿದ್ದಾಳೆ. ಅಲ್ಲಿಗೆ ಕಾಲ್ ಮಾಡುವ ಸಾಹಸಕ್ಕೆ ಭಾಗ್ಯ ಮೊದಲು ಬ್ರೇಕ್ ಹಾಕಿ, ಆಗಬೇಕಾದ ಕೆಲಸ ಮುಂದುವರೆಸಿದ್ದಾಳೆ.

ಆಸ್ಪತ್ರೆಗೆ ಬರುವ ಅವಸರದಲ್ಲಿ ಹಣ ತಂದಿಲ್ಲ. ಇನ್ಸೂರೆನ್ಸ್ ಇದ್ಯ ಅಂದ್ರೆ ಭಾಗ್ಯಾಗಾಗಲೀ, ಅವರ ಅತ್ತೆ ಕುಸುಮಾಗಾಗಲೀ ತಿಳಿದಿಲ್ಲ. ಹಣ ಕಟೋಣಾ ಅಂದ್ರೆ ಇಬ್ಬರ ಬಳಿಯೂ ಸಾಕಷ್ಟು ಹಣವಿಲ್ಲ. ನೇರವಾಗಿ ಮನೆಗೆ ಹೋದ ಭಾಗ್ಯಾ, ಹುಡುಕಾಟ ಶುರು ಮಾಡಿದಳು. ಅದೃಷ್ಟಕ್ಕೆ ತಾಂಡವ್ ಒಂದಷ್ಟು ಕ್ಯಾಶ್ ಇಟ್ಟಿದ್ದ. ಆ ಪರ್ಸ್‌ನಲ್ಲಿ ಆಪರೇಷನ್‌ಗೆ ಬೇಕಾದ 50 ಸಾವಿರ ತೆಗೆದುಕೊಂಡು, ಮತ್ತೆ ತಾಂಡವ್‌ಗೆ ಕಾಲ್ ಮಾಡಿದಳು. ಆಗಲೂ ಪಿಕ್ ಮಾಡದೆ ಇದ್ದಾಗ, ಲೆಟರ್ ಬರೆದಿಟ್ಟು ಹೊರಟಿದ್ದಾಳೆ.

ರಾಜನ ನಡವಳಿಕೆಗೆ ಕುಸುಮಾ ಬೇಸರ

ಆ ಕಡೆ ಶ್ರೇಷ್ಠಾ ಇವತ್ತು ಒಂದು ದಿನ ನನ್ನ ಜೊತೆಗೆ ಇರು ಅಂತ ಕೇಳಿಕೊಂಡಿದ್ದಾಳೆ. ರಾತ್ರಿ ಇರಬೇಕಾ ಎಂದು ತಾಂಡವ್ ಯೋಚನೆ ಮಾಡಿದಾಗ, ಶ್ರೇಷ್ಠಾ, ಮತ್ತೆ ಎಮೋಷನಲ್ ಬ್ಲಾಕ್ ಮೇಲ್ ಮಾಡಿದ್ದಾಳೆ. ಅವಳ ಮೊಂಡುತನಕ್ಕೆ ಅಲ್ಲಿಯೆ ತಾಂಡವ್ ಉಳಿದುಕೊಂಡಿದ್ದಾನೆ. ಆದರೆ ಅಷ್ಟು ಬಾರಿ ಕಾಲ್ ಮಾಡಿದರು ರಿಸೀವ್ ಮಾಡದ ಮಗನನ್ನು ನೆನೆದು ಆಕ್ರೋಶಗೊಂಡಿದ್ದಾಳೆ ಕುಸುಮಾ. ತಂದೆಗೆ ಹುಷಾರಿಲ್ಲದೆ ಇದ್ದಾಗಲೇ ಮಕ್ಕಳು ಜೊತೆಗಿಲ್ಲವಾದರೆ ಏನು ಪ್ರಯೋಜನ ಎಂದಿದ್ದಾಳೆ.

Bhagyalakshmi serial Written Update on April 21st episode

ಹಣ ಒದಗಿಸುವುದಕ್ಕೆ ಭಾಗ್ಯ ಒಬ್ಬಳೆ ಓಡಾಡಿದ್ಲು. ಈಗ ಔಷಧಿ ತರಬೇಕಾಗಿದೆ. ಅದಕ್ಕೂ ಭಾಗ್ಯಾ ನಾನೇ ಹೋಗ್ತೀನಿ ಎಂದಾಗ ಕುಸುಮಾಗೆ ಹೊಟ್ಟೆ ಚುರ್ ಎಂದಿದೆ. ನಿಂಗೆ ಗೊತ್ತಾಗುತ್ತಾ ಭಾಗ್ಯಾ. ರಾಜಾ ಇದ್ದಿದ್ರೆ ಎಷ್ಟು ಸಹಾಯ ಆಗ್ತಾ ಇತ್ತು ಎಂದು ನೆನೆದು ಬೇಸರ ಮಾಡಿಕೊಂಡಿದ್ದಾಳೆ. ಆದರೆ ಸೊಸೆಯಾದ ಭಾಗ್ಯಾ, ತಾನು ಶಕ್ತಳು ಎಂಬುದನ್ನು ಎಲ್ಲಾ ಕಡೆಯೂ ತೋರಿಸಿದ್ದಾಳೆ.

More from Filmibeat

English summary
Colors Kannada serial Bhagyalakshmi serial Written Update on April 21st episode. Here is the details about Kusuma upset.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X