Bhagyalakshmi: ಮೋಸಗಾರರಿಂದ ಹಣ ಕಳೆದುಕೊಂಡ ಕುಸುಮಾ .. ಕಷ್ಟ ಎಂದರೂ ಕೈಗೆ ಸಿಗ್ತಿಲ್ಲ ಮಗ!

By ಎಸ್ ಸುಮಂತ್

ಶ್ರೇಷ್ಠಾ ತಾನೂ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಿದ್ದಾಳೆ‌. ತಾಂಡವ್‌ನನ್ನು ಹೇಗಾದರೂ ಮಾಡಿ ತನ್ನತ್ತ ಎಳೆದುಕೊಳ್ಳಬೇಕೆಂದು ಮನಸ್ಸು ಮಾಡಿದಳು. ಅದಕ್ಕೆ ಈಗ ಬೇಕಾದ ಎಲ್ಲಾ ಬುನಾದಿಯನ್ನು ಹಾಕಿಕೊಂಡಿದ್ದಾಳೆ. ಈಗ ಶ್ರೇಷ್ಠಾ ಅಂದುಕೊಂಡಂತೆ ತಾಂಡವ್ ಆಡುತ್ತಿದ್ದಾನೆ. ಮನೆಯವರು ಕಷ್ಟದಲ್ಲಿದ್ದರು, ತಾಂಡವ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸದ್ಯಕ್ಕೆ ತಾಂಡವ್‌ಗೆ ಹರ್ಟ್ ಆಗಬಾರದು ಅಷ್ಟೆ.

ಆ ಕಡೆ ತಂದೆಗೆ ಹುಷಾರಿಲ್ಲದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಈಗ ಆರೋಗ್ಯ ಸರಿ ಮಾಡಿಕೊಂಡು ಬಂದಿದ್ದಾರೆ. ಮನೆಯಿಂದ ಅಷ್ಟೊಂದು ಕಾಲ್ ಬಂದಿದ್ದರು. ವಾಪಾಸ್ ಮಾಡಬೇಕು ಎಂಬುದಿಲ್ಲ. ತನ್ನ ಪಾಡಿಗೆ ತಾನು ಖುಷಿಯ ಅಲೆಯಲ್ಲಿ ತೇಲುತ್ತಿದ್ದಾನೆ. ಈ ಅಲೆಗೆ ಆದಷ್ಟು ಬೇಗ ಸಮಸ್ಯೆಗಳು ಅಪ್ಪಳಿಸಲಿದೆ.

Bhagyalakshmi serial Written Update on April 25th episode

ಬಾಲ್ಕನಿಯಲ್ಲಿಯೇ ಕೂತು ತಾಂಡವ್ - ಶ್ರೇಷ್ಠಾ ಪಾರ್ಟಿ

ಆಫೀಸಲ್ಲಿ ನಡೆದ ಘಟನೆಯಿಂದ ಡಿಸ್ಟರ್ಬ್ ಆಗಿದ್ದ ಶ್ರೇಷ್ಠಾಳನ್ನು ಸಮಾಧಾನ ಮಾಡಲು ತಾಂಡವ್ ಇಡೀ ರಾತ್ರಿ ಜೊತೆಗೆ ಇದ್ದ. ಅಷ್ಟೇ ಅಲ್ಲ ಬೆಳಗ್ಗೆ ಕೂಡ ಶ್ರೇಷ್ಠಾಳಿಗಾಗಿ ಸಮಯ ಕೊಟ್ಟಿದ್ದಾನೆ. ಇದೇ ಖುಷಿಯಲ್ಲಿರುವ ಶ್ರೇಷ್ಠಾ ಬಾಲ್ಕನಿಯಲ್ಲಿ ತಾಂಡವ್‌ಗಾಗಿ ಫ್ಲವರ್ ಡೆಕೊರೇಷನ್ ಮಾಡಿ, ವೈನ್ ಪಾರ್ಟಿ ಕೂಡ ಅರೆಂಜ್ ಮಾಡಿದ್ದಾಳೆ‌. ಬಾಲ್ಕನಿಯಲ್ಲಿ ಬೇಡ ಹನಿ ಎಂದು ತಾಂಡವ್ ಹೇಳಿದಾಗಲೂ ಶ್ರೇಷ್ಠಾ ಕೇಳಿಲ್ಲ. ಹಠ ಮಾಡಿ ಅಲ್ಲಿಯೇ ಪಾರ್ಟಿ ಮಾಡುವಂತೆ ಮಾಡಿದ್ದಾಳೆ.

ಮನೆಯ ಮಾಲೀಕರಿಂದ ಕ್ಲಾಸ್

ಮನೆಯ ಓನರ್ ಅದೇ ಸಮಯಕ್ಕೆ ಬಂದಿದ್ದಾಳೆ. ಮನೆಯಲ್ಲಿ ಪೂಜೆ ಪುನಸ್ಕಾರ ಮಾಡುತ್ತೇವೆ. ಅಲ್ಲಿ ಪಾರ್ಟಿ ಮಾಡುತ್ತಿದ್ದಾರೆ. ಅದು ಬಾಟಲ್ ಹಿಡಿದುಕೊಂಡು ಕೋಪಗೊಂಡಿದ್ದಾರೆ. ನೇರವಾಗಿ ಶ್ರೇಷ್ಠಾ ಮತ್ತು ತಾಂಡವ್ ಬಳಿ ಹೋಗಿ ಜಗಳವಾಡಿದ್ದಾರೆ. ಮನೆಯ ಓನರ್‌ಗೆ ಎದುರು ಮಾತನಾಡಿದ್ದು, ಪಾರ್ಟಿ ಮಾಡಿದರೆ ತಪ್ಪೇನು ಎಂದು ಕೇಳಿದ್ದಾಳೆ ಶ್ರೇಷ್ಠಾ. ಇದಕ್ಕೆ ಜೋರು ಗದರಿದ ಮನೆ ಓನರ್, ಮೊದಲು ಅಗ್ರಿಮೆಂಟ್ ತಗೊಂಡು ಬಾ. ಅದರಲ್ಲಿ ಬರೆದಿರುವುದನ್ನು ಸರಿಯಾಗಿ ನೋಡು ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

ಸೊಸೆ ಮಾತು ಕೇಳದ ಕುಸುಮಾ

ಇತ್ತ‌ ಕುಸುಮಾ ಮೋಸಗಾರನ ಕರೆಗೆ ಯಾಮಾರಿದ್ದಾಳೆ. ಬ್ಯಾಂಕ್ ಡಿಟೈಲ್ ಕೇಳಿದವರಿಗೆ ಒಟಿಪಿ ಸಮೇತ ನೀಡಿದ್ದಾಳೆ. ಮೋಸಗಾರರು ಮೂರು ಲಕ್ಷ ಹಣವನ್ನು ಹೆಗರಿಸಿದ್ದಾರೆ. ಆದರೆ ಇದೆಲ್ಲ ಆದ್ಮೇಲೆ ಭಾಗ್ಯಾ ಹೇಳಿದರು ನಂಬಲಿಲ್ಲ. ಆದರೆ ಕುಸುಮಾ ಗಂಡ, ಜೋರಾಗಿ ಕಿರುಚಿ ಹಣ ಹೋಯ್ತು ಎಂದಾಗಲೇ ಕುಸುಮಾ ಗಾಬರಿಯಾಗಿದ್ದು. ಬ್ಯಾಂಕ್ ನವರಿಗೆ ಕರೆ ಮಾಡಿದರೆ ನಿಮ್ಮ ಹಣ ಸಿಗುವ ಗ್ಯಾರಂಟಿ ಇಲ್ಲ ಅಂತಾರೆ.

Bhagyalakshmi serial Written Update on April 25th episode

ಗಂಡನ ಮೂರು ಲಕ್ಷದ ಕಥೆಯೇನು?

ಗಂಡನ ಅಕೌಂಟ್ ನಲ್ಲಿ ಮೂರು ಲಕ್ಷ ಹೋಗಿದ್ದು ಕುಸುಮಾಗೆ ದಿಗಿಲು ಬಡಿದಿದೆ. ರಾಜಾ ಇದ್ದರೆ ಸಮಸ್ಯೆ ಸಾಲ್ವ್ ಆಗುತ್ತೆ ಎಂದು ಕರೆ ಮಾಡಿದರೆ ಮತ್ತೆ ರಿಸೀವ್ ಮಾಡಲ್ಲ. ಆಫೀಸಲ್ಲಿ ಕೇಳಿದರೆ ತಾಂಡವ್ ಬಂದಿಲ್ಲ ಅಂತಿದ್ದಾರೆ. ಈ ಕಡೆ ಹಣವನ್ನು ಕಳೆದುಕೊಂಡು ಆತಂಕದಲ್ಲಿರುವ ಕುಸುಮಾ, ಇದು ಮಗನಿಂದ ಸಾಧ್ಯವಾಗುತ್ತೆ ಎಂದು ತಾನೇ ಆಫೀಸ್‌ಗೆ ಹೊರಟಿದ್ದಾಳೆ‌. ಕುಸುಮಾ ಒಬ್ಬಳೇ ಹೋದರೆ ಕಷ್ಟ ಎಂದು ಭಾಗ್ಯಾ ಕೂಡ ಹೊರಟಿದ್ದಾಳೆ. ಆ ಕಡೆ ಶ್ರೇಷ್ಠಾಳಿಗೆ ಬಾಡಿಗೆ ಮನೆ ಕಂಟಿನ್ಯೂ ಮಾಡುವುದು ಅನುಮಾನವಾಗಿದೆ. ಹೀಗಾಗಿ ಮನೆಯವರ ಕಷ್ಟಕ್ಕಿಂತ ತಾಂಡವ್‌ಗೆ ಶ್ರೇಷ್ಠಾ ಮುಖ್ಯವಾಗ್ತಾಳೆ. ಎಲ್ಲಾ ಕಡೆಯಿಂದ ಗ್ರಹಚಾರ ಹುಡುಕೊಂಡು ಬಂದಂತಿದೆ.

More from Filmibeat

English summary
Colors Kannada Bhagyalakshmi serial Written Update on April 25th episode. Here is the details Kusuma tried to Tandav call.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X