Bhagyalakshmi: ಕುಸುಮಾಳಿಗೆ ಮಗನ ಮೇಲೆ ಅನುಮಾನ ಬಂದರೂ ಸೊಸೆ ಮುಂದೆ ತೋರಿಸಿಕೊಳ್ಳುತ್ತಿಲ್ಲ !

By ಎಸ್ ಸುಮಂತ್

ಮನೆಯಲ್ಲಿ ಆದ ಅವಾಂತರ ಒಂದಿಷ್ಟಲ್ಲ. ತಂದೆಗೆ ಆರೋಗ್ಯ ತಪ್ಪಿದೆ, ಗೊತ್ತಿಲ್ಲದೆ ಮೂರು ಲಕ್ಷ ಹಣ ಕಳ್ಳರ ಪಾಲಾಗಿದೆ. ಆದರೂ ರಾಜಾ ಕೈಗೆ ಸಿಕ್ತಾ ಇಲ್ಲ. ಎಷ್ಟು ಫೋನ್ ಕಾಲ್ ಮಾಡಿದರು ರೆಸ್ಪಾನ್ಸ್ ಇಲ್ಲ. ಮನೆಯ ಸಮಸ್ಯೆಗಳ ನಡುವೆ ಮಗನ ಬಗ್ಗೆಯೂ ಯೋಚಿಸಬೇಕಾದ ಸ್ಥಿತಿ ಬಂದಿದೆ. ಆಫೀಸಿಗೆ ಕರೆ ಮಾಡಿ ಕೇಳಿದರೆ ಇಲ್ಲ ಎಂಬ ಉತ್ತರ ಬಂದಿದೆ. ಇದು ಕುಸುಮಾಗೆ ತಲೆ ಕೆಟ್ಟಂತೆ ಆಗಿದೆ.

ತಾಂಡವ್ ಪದೇ ಪದೆ ಆಫೀಸಲ್ಲಿ ಕೆಲಸ ಇದೆ‌ ಕೆಲಸ ಇದೆ ಎಂದೇ ಮನೆಯಿಂದ ಹೊರಗೆ ಹೋಗುತ್ತಿದ್ದ. ಭಾನುವಾರವೂ ಮನೆಯಲ್ಲಿ ಇರುತ್ತಿರಲಿಲ್ಲ. ಶ್ರೇಷ್ಠಾಳನ್ನು ಭೇಟಿ ಮಾಡುವುದಕ್ಕೆಂದು ಹೋಗುತ್ತಿದ್ದ. ಆದರೆ ಮನೆಯಲ್ಲೆಲ್ಲಾ ಕೆಲಸವಿದೆಯೇನೋ ಎಂಬಂತೆ ನಂಬಿದ್ದರು. ಯಾಕಂದ್ರೆ, ತಾಂಡವ್ ಆಫೀಸಲ್ಲಿ ಒಳ್ಳೆ ಹುದ್ದೆಯಲ್ಲಿದ್ದ.

Bhagyalakshmi serial Written Update on April 27th episode

ತಾಂಡವ್ ಆಫೀಸಿಗೆ ಬಂದ ಕುಸುಮಾ

ಈ ಕಡೆ ಮೂರು ಲಕ್ಷ ಹೋದ ಚಿಂತೆಯಲ್ಲಿದ್ದಾಳೆ ಕುಸುಮಾ. ಮಗ ರಾಜನಿಂದ ಎಲ್ಲವೂ ಸರಿಯಾಗುತ್ತೆ ಎಂಬ ಅಪಾರ ನಂಬಿಕೆ ಬೇರೆ. ಅದಕ್ಕೆ ರಾಜನಿಗೆ ಕಾಲ್ ಮಾಡಿ ಮಾಡಿ ಸಾಕಾದ್ರೂ, ರಾಜ ಸಿಗಲೇ ಇಲ್ಲ. ಆಫೀಸಿಗೆ ಕರೆ ಮಾಡಿದರೆ, ರಜೆ ಅಂತಾರೆ. ಇದನ್ನು ನಂಬುವುದಕ್ಕೆ ಕುಸುಮಾ ಸೀದಾ ಆಫೀಸಿಗೆ ನಡೆದಿದ್ದಾಳೆ. ಅಲ್ಲಿಯೂ ರಿಸೆಪ್ಶನ್ ಹುಡುಗಿ ಕೊಟ್ಟಿದ್ದು ಅದೇ ಉತ್ತರ.

ಕುಸುಮಾ ರಿಸೆಪ್ಶನ್ ಹುಡುಗಿ ಹೇಳಿದ್ದನ್ನು ನಂಬುವುದಕ್ಕೆ ರೆಡಿ ಇಲ್ಲ. ಅಷ್ಟರಲ್ಲಿ ತಾಂಡವ್ ಬಾಸ್ ಬರ್ತಾರೆ. ಕುಸುಮಾಳ ಟೆನ್ಶನ್, ಕುಸುಮಾಳ ಮಾತು ಕೇಳಿ ಏನೋ ಸಮಸ್ಯೆಯಾಗಿದೆ ಎಂಬುದು ಗೊತ್ತಾಗುತ್ತೆ. ಆಗ ತನ್ನ ಕ್ಯಾಬಿನ್‌ಗೆ ಕರೆದುಕೊಂಡು ಹೋಗಿ, ವಿಚಾರ ಕೇಳುತ್ತಾನೆ. ಆಗ ತಾಂಡವ್, ಭಾನುವಾರವೂ ಕೆಲಸವಿದೆ ಅಂತ ಸುಳ್ಳು ಹೇಳಿ ಬರುವ ವಿಚಾರ ಗೊತ್ತಾಗುತ್ತೆ. ಅಷ್ಟೇ ಅಲ್ಲ ಕುಸುಮಾ ಕಳೆದುಕೊಂಡಿರುವ ಹಣ ಮರಳಿ ಪಡೆಯಲು ಸಹಾಯ ಮಾಡಲು, ಒಬ್ಬರಿಗೆ ಬಾಸ್ ಹೇಳುತ್ತಾರೆ. ಕುಸುಮಾ ನೆಮ್ಮದಿಯಿಂದ ಮನೆಗೆ ಹೋಗುತ್ತಾಳೆ‌.

ತಲೆ ತಗ್ಗಿಸಿದ ತಾಂಡವ್

ತಾಂಡವ್ ಎಷ್ಟೇ ಬೇಡವೆಂದರೂ ಕುಡಿಲೇಬೇಕು ಅಂತ ಶ್ರೇಷ್ಠಾ ಹಠ ಮಾಡುತ್ತಾಳೆ. ಆ ಹಠದಿಂದ ಮನೆ ಓನರ್ ಕೈನಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಸಂದರ್ಭ ಬಂದಿದೆ. ಅಗ್ರಿಮೆಂಟ್ ಪೇಪರ್ ಓದಿಸಿ, ಎಲ್ಲದನ್ನು ನೆನಪು ಮಾಡಿ ಹೋಗಿದ್ದಾರೆ. ಈಗ ತಾಂಡವ್ ಗೆ ಶ್ರೇಷ್ಠಾ ಮೇಲೆ ಕೋಪ ನೆತ್ತಿಗೇರಿದೆ. ಆ ಕಡೆ ಲೋಕಲ್ ಕಾರ್ಪೋರೇಟರ್ ಐವತ್ತು ಸಾವಿರ ಹಣ ವಾಪಾಸ್ ಕೇಳುತ್ತಿದ್ದಾನೆ‌. ಅದು ಭಾಗ್ಯಾ ತೆಗೆದುಕೊಂಡಿರುವ ಹಣ. ಚೀಟಿಯನ್ನು ಅವಳೇ ಬರೆದಿಟ್ಟಿದ್ದಾಳೆ. ಮನೆಯಲ್ಲಿ ಏನಾಗಿದೆ ಎಂಬುದು ಗೊತ್ತಿದ್ದರೆ ಅಲ್ವಾ ಕಾರ್ಪೋರೆಟರ್ ಯಾಕೆ ಕಾಲ್ ಮಾಡ್ತಾ ಇದ್ದಾನೆ ಎಂಬುದು ಗೊತ್ತಾಗೋದು.

Bhagyalakshmi serial Written Update on April 27th episode

ಶ್ರೇಷ್ಠಾ ಮೇಲೆ ಮೊದಲಿನಿಂದಲೂ ಕುಸುಮಾಗೆ ಕಣ್ಣಿದೆ. ಅವಳಿಗೆ ಈಗಾಗಲೇ ಬುದ್ಧಿ ಹೇಳಿ ಸುಮ್ಮನೆ ಆಗಿದ್ದಾಳೆ. ಆದರೂ ಶ್ರೇಷ್ಠಾ ಬುದ್ದಿ ಕಲಿತಿಲ್ಲ. ಕುಸುಮಾಗೆ ಅದು ಇನ್ನು ಅರ್ಥವಾಗಿಲ್ಲ. ಸರಿಯಿದ್ದಾಳೆ ಎಂದುಕೊಂಡಿದ್ದಾಳೆ. ಈಗ ತಾಂಡವ್ ಆಫೀಸಿಗೆ ಭೇಟಿ ಕೊಟ್ಟಾಗ ಒಂದು ಸಣ್ಣ ಅನುಮಾನ ಕಾಡಿದೆ. ಇಬ್ಬರು ರಜೆ ಹಾಕಿರುವ ಕಾರಣ ಅನುಮಾನ ಮೂಡಿದೆ. ಯೋಚನೆ ಮಾಡುತ್ತಿದ್ದ ಬಾಯಲ್ಲಿ ಸಡನ್ ಆಗಿ ಇಬ್ಬರ ವಿಚಾರ ಬಂದಿದೆ. ಸೊಸೆ ಕಣ್ಣ ಮುಂದೆ ಇದ್ದ ಕಾರಣ, ಹಂಗೆ ಮನಸ್ಸಲ್ಲಿಯೇ ಇಟ್ಟುಕೊಂಡು ಸುಮ್ಮನೆ ಆಗಿದ್ದಾಳೆ.

More from Filmibeat

English summary
colors kannada Bhagyalakshmi serial Written Update on April 27th episode. Here is the details Kusuma's doubt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X