Bhagyalakshmi: ಭಾಗ್ಯ ಕರ್ಕೊಂಡು ಹೋದ್ರೆ ತಾಂಡವ್‌ಗೆ ಅವಮಾ‌ನ.. ಹೆಂಡತಿಯೇ ಜಡ್ಜ್ ಆದ್ರೆ ಏನು ಕಥೆ?

By ಎಸ್ ಸುಮಂತ್

ತಾಂಡವ್‌ಗೆ ಭಾಗ್ಯಾಳನ್ನು ಮದುವೆಯಾಗಿದ್ದೇನೆ ಎಂಬುದಷ್ಟೇ ಸತ್ಯ. ಭಾಗ್ಯಾ ಜೊತೆಯಲ್ಲಿದ್ದರೆ ಅವಮಾನ ಎಂದೇ ಭಾವಿಸುತ್ತಾನೆ ತಾಂಡವ್. ಯಾರಾದರೂ ನಿಮ್ಮ ಹೆಂಡತಿಯನ್ನು ಕರೆದುಕೊಂಡು ಬನ್ನಿ ಎಂದರೆ ಅದಕ್ಕೆ ಒಲ್ಲೆ‌ ಅಂತಾನೇ ಎನ್ನುತ್ತಾನೆ. ಭಾಗ್ಯಾ ಬಂದರೆ ಅವಮಾನ ಎಂದೇ ಭಾವಿಸುತ್ತಾನೆ. ಆದರೆ ಅವನಿಗೆ ಗೊತ್ತಿಲ್ಲ ಭಾಗ್ಯಾಳ ಸಾಮರ್ಥ್ಯ ಎಂಥದ್ದು ಅಂತ.

ತಾಂಡವ್ ಎಂಥವನೇ ಆಗಲಿ. ಆದರೆ ಭಾಗ್ಯಾ ಗಂಡನಿಗೆ ತುಂಬಾ ಗೌರವ ಕೊಡುತ್ತಾಳೆ. ಅದರ ಉದಾಹರಣೆ ಇತ್ತೀಚೆಗಷ್ಟೇ ನೋಡಿದ್ದೇವೆ. ಕಳ್ಳನೊಬ್ಬ ತಾಳಿ ಕಿತ್ತುಕೊಂಡು ಹೋದಾಗ ಅವನ ಹಿಂದೆಯೇ ಓಡಿ ಹೋಗಿ, ತಾಳಿಯನ್ನು ವಾಪಾಸ್ ಪಡೆದವಳು ಭಾಗ್ಯ. ಆ ಸಾಹಸಕ್ಕೆ ಹೊಗಳಿದವರೆಷ್ಟೋ. ಆದರೆ ಇದಕ್ಕೂ ತಾಂಡವ್ ಬೆಂಬಲವಿರಲಿಲ್ಲ. ಮತ್ತದೆ ಗೇಲಿ.

Bhagyalakshmi serial Written Update on April 3rd episode

ಶ್ರೇಷ್ಠಾ-ತಾಂಡವ್ ಮದುವೆ ಗುಸುಗುಸು

ಶ್ರೇಷ್ಠಾಳಿಗೆ ತಾಂಡವ್‌ನನ್ನು ಮದುವೆಯಾಗಲೇಬೇಕೆಂಬ ಹಠ ಬಂದಿದೆ. ಆದರೆ ಅದಕ್ಕೆ ತಾಂಡವ್ ಒಪ್ಪಿಗೆ ಸಿಕ್ತಾ ಇಲ್ಲ. ಹಾಗಂತ ಶ್ರೇಷ್ಠಾ ಸುಮ್ಮನೆ ಇರುವವಳೇ ಅಲ್ಲ. ಅದಕ್ಕಾಗಿಯೇ ಈಗ ತಾಂಡವ್‌ನನ್ನು ಆಟ ಆಡಿಸುವುದಕ್ಕೆ ಶುರು ಮಾಡಿದ್ದಾಳೆ. ತಾಂಡವ್‌ನ ಕಾಲ್ ರಿಸೀವ್ ಮಾಡದೆ, ಆಫೀಸ್‌ಗೆ ಹೋಗಿದ್ದಾಳೆ. ಸದ್ಯ ತಾಂಡವ್ ಹುಡುಕಿಕೊಂಡು ಬಂದಾಗ ಶ್ರೇಷ್ಠಾ, ಎಲ್ಲರಿಗೂ ಹೇಳಿಕೊಂಡು ಬಂದಿರುವುದು ಗೊತ್ತಾಗಿದೆ. ಅಕ್ಕ ಪಕ್ಕದವರೆಲ್ಲಾ ಮದುವೆ ಯಾವಾಗ ಅಂತಿದ್ದಾರೆ.

ಸೊಸೆಯ ಪರವಾಗಿ ಕುಸುಮ ಎಷ್ಟರ ಮಟ್ಟಿಗೆ ನಿಲ್ಲುತ್ತಾಳೋ, ಅಷ್ಟೇ ಪ್ರಭಾವಿ ಅತ್ತೆ ಕೂಡ. ಸೊಸೆ ಯಾವಾಗಲೂ ತನ್ನ ಕಂಟ್ರೋಲ್‌ನಲ್ಲಿಯೇ ಇರಬೇಕು ಎಂದೇ ಭಾವಿಸುತ್ತಾಳೆ. ಅದಕ್ಕೆ ಭಾಗ್ಯಾಳಿಗೆ ಬಿಡದೆ ಹಲವು ನಿರ್ಧಾರಗಳನ್ನು ಕುಸುಮಾಳೆ ಮಾಡಿಬಿಡುತ್ತಾಳೆ. ಈಗ ಭಾಗ್ಯಾಳನ್ನು ಕಾರ್ಯಕ್ರಮವೊಂದರಲ್ಲಿ ಅಡುಗೆ ವಿಚಾರದಲ್ಲಿ ಜಡ್ಜ್ ಆಗಿ ಕರೆದಿದ್ದಾರೆ. ಆದರೆ ಕುಸುಮಾ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ನಿನಗೆ ಅದೆಲ್ಲಾ ಗೊತ್ತಾಗಲ್ಲ. ಅದಕ್ಕೆ ಆ ಪ್ರೋಗ್ರಾಂ ಕ್ಯಾನ್ಸಲ್ ಮಾಡಿದ್ದೀನಿ ಅಂದಿದ್ದಾಳೆ ಕುಸುಮಾ.

Bhagyalakshmi serial Written Update on April 3rd episode

ಭಾಗ್ಯಳ ಮಗನಿಗೆ ಫುಲ್ ಖುಷಿ

ಭಾಗ್ಯಾಳಿಗೆ ತನ್ನ ಸಾಮರ್ಥ್ಯ ಗೊತ್ತಾಗಿಲ್ಲ. ಹೀಗಾಗಿ ಅತ್ತೆ ಹೇಳಿದ್ದೆ ಸರಿ ಎಂದುಕೊಂಡು, "ಹೌದು ಅತ್ತೆ ನೀವೂ ಮಾಡಿದ್ದೇ ಸರಿ" ಎಂದಿದ್ದಾಳೆ. ಆದರೆ, ಅದನ್ನು ಗುಂಡಣ್ಣ ಒಪ್ಪಿಲ್ಲ. "ಅಪ್ಪನೂ ಹೀಗೆ ಮಾಡ್ತಾರೆ. ಈಗ ನೀವೂ ಹೀಗೆ ಮಾಡುತ್ತಾ ಇದ್ದೀರಾ. ಅಮ್ಮನನ್ನು ಹೊರಗೆ ಕಳುಹಿಸುವುದೇ ಇಲ್ಲ" ಅಂತ ಬೇಸರ ಮಾಡಿಕೊಂಡ. ಆಗ ಭಾಗ್ಯಾಳ ಮಾವ ಫೋನ್ ತೆಗೆದುಕೊಂಡು, ಕಾರ್ಯಕ್ರಮದವರಿಗೆ ಹೇಳಿಯೆ ಬಿಟ್ಟಿದ್ದಾರೆ. ಭಾಗ್ಯಾ ಜಡ್ಜ್ ಆಗಿ ಬರ್ತಾರೆ ಅಂತ.

ಇತ್ತ ಭಾಗ್ಯಾ ಜಡ್ಜ್ ಆಗಿ ಬರ್ತಾರೆ ಎಂದು ಕೇಳಿದ ಕೂಡಲೆ ಈ ವಿಚಾರವನ್ನು ತಾಂಡವ್ ಬಳಿ ಹೇಳಿದ್ದಾರೆ ಪ್ರೋಗ್ರಾಂ ಸಕ್ಷನ್ ನವರು‌‌. ಆದರೆ ತಾಂಡವ್ ಗೆ ಇದ್ಯಾವುದು ಗೊತ್ತೆ ಇಲ್ಲ. ನಾಳೆ ಕಾರ್ಯಕ್ರಮವೊಂದಿದೆ ಅಂತ ಅಷ್ಟೇ ಮಾಹಿತಿ ನೀಡಿದ್ದಾರೆ. ಜೊತೆಗೆ ಈ ಕಾರ್ಯಕ್ರಮಕ್ಕಾದರೂ ನಿಮ್ಮ ಹೆಂಡತಿಯನ್ನು ಕರೆದುಕೊಂಡು ಬನ್ನಿ ಅಂದ್ರೆ, ಮನಸ್ಸಲ್ಲಿಯೇ ವ್ಯಂಗ್ಯವಾಡಿದ್ದಾನೆ. "ಅವಳನ್ನು ಕರೆದುಕೊಂಡು ಬಂದ್ರೆ, ಅವಮಾನ ಆಗೋದು ಗ್ಯಾರಂಟಿ" ಎಂದುಕೊಳ್ಳುತ್ತಿದ್ದಾನೆ. ಆದರೆ ತಾಂಡವ್‌ಗೆ ಗೊತ್ತಿಲ್ಲ ಅದೇ ಕಾರ್ಯಕ್ರಮಕ್ಕೆ ಭಾಗ್ಯಾಳೆ ಜಡ್ಜ್ ಎಂಬುದು.

More from Filmibeat

English summary
Colors Kannada Bhagyalakshmi serial Written Update on April 3rd episode. Here is the details about Bhagya new program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X