Bhagyalakshmi: ಭಾಗ್ಯಳ ಶಾಲೆ ಆಡ್ಮಿಶನ್ ಕ್ಯಾನ್ಸಲ್.. ಮುಂದೇನು..?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ಹೊಸದೊಂದು ತಿರುವು ಪಡೆದುಕೊಂಡಿದೆ. ಈ ಧಾರಾವಾಹಿ ಶುರುವಾದಾಗಿನಿಂದಲೂ ಸಹ ಪ್ರೇಕ್ಷಕರಿಗೆ ಎಲ್ಲೂ ಬೋರ್ ಹೊಡಿಸದೆ ಹೊಸ ಹೊಸ ತಿರುವು ಪಡೆದುಕೊಂಡು ಕುತೂಹಲವನ್ನು ಹುಟ್ಟಿಸುವ ಕೆಲಸವನ್ನು ಮಾಡಿದೆ. ಅದೇ ರೀತಿ ಈಗ ಧಾರಾವಾಹಿಯಲ್ಲಿ ಹೊಸದೊಂದು ತಿರುವು ಸಿಕ್ಕಿದೆ. ಈ ಕಡೆ ಶ್ರೇಷ್ಠ ತಂದೆ ತಾಯಿಗೆ ತಾಂಡವ್, ತನ್ನ ತಂದೆ ತಾಯಿಯನ್ನ ಭೇಟಿ ಮಾಡಿಸಬೇಕಾಗಿದೆ.

ಇನ್ನೊಂದು ಕಡೆ ಭಾಗ್ಯಳ ಅಡ್ಮಿಶನ್ ಕ್ಯಾನ್ಸಲ್ ಆಗಿ ಹೋಗಿದೆ. ತಾಂಡವ್‌ಗೆ ಒಂದು ರೀತಿ ಪೀಕಲಾಟವಾದರೆ ಭಾಗ್ಯಗೆ ಹೊಸ ಸಂಕಟ ಶುರುವಾಗಿದೆ. ಶಾಲೆಗೆ ಬಂದಿದ್ದ ಭಾಗ್ಯಗೆ ಆಡಳಿತ ಮಂಡಳಿ ಶಾಕ್ ನೀಡಿದೆ. ಶಾಲೆಯ ಅಟೆಂಡರ್ ಬಂದು ಭಾಗ್ಯಳನ್ನು ಕಳುಹಿಸಿಕೊಡುವಂತೆ ಟೀಚರ್ ಬಳಿ ಕೇಳಿದ್ದಾನೆ. ನಂತರ ವಿಶಾಲ ಮೇಡಮ್ ಏನಾಗಿದೆ ಹೋಗಿ ನೋಡಿಕೊಂಡು ಬನ್ನಿ ಎಂದು ಭಾಗ್ಯಾಳನ್ನ ಕಳುಹಿಸಿದ್ದಾರೆ. ಅಲ್ಲಿಯೇ ಸ್ವಲ್ಪ ಮಾಹಿತಿ ಅಟೆಂಡರ್, ವಿಶಾಲ ಮೇಡಂಗೆ ಹೇಳಿದ್ದಾನೆ.

Bhagyalakshmi- kannada- serial

ಭಾಗ್ಯ ಅವರ ಆಡ್ಮಿಶನ್ ಕ್ಯಾನ್ಸಲ್ ಆಗಿದೆ. ಅದಕ್ಕಾಗಿ ಕರೆಯುತ್ತಿದ್ದಾರೆ ಎಂದು ಹೇಳಿದ ಕೂಡಲೇ ತನ್ವಿಗೆ ಖುಷಿಯಾಗಿ ತನ್ನ ಸ್ನೇಹಿತರ ಜೊತೆಯಲ್ಲಿ ಹೈ ಫೈ ಮಾಡಿದ್ದಾಳೆ. ಈ ಕಡೆ ಭಾಗ್ಯ ಆಫೀಸ್ ರೂಂ ಗೆ ಬಂದಾಗ ಆಡ್ಮಿಷನ್‌ಗೆ ಎಂದು ನೀಡಿದ 30,000ಗಳನ್ನ ಒಂದು ಎನ್ವಲಪ್ ಕವರ್‌ಗೆ ಹಾಕಿ ಭಾಗ್ಯ ಕೈಗೆ ನೀಡಲಾಗಿದೆ. ಆಡ್ಮಿಷನ್ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಭಾಗ್ಯಗೆ ಶಾಕ್ ಆಗಿದೆ. ನನ್ನ ಅಡ್ಮಿಶನ್ ಯಾಕೆ ಕ್ಯಾನ್ಸಲ್ ಆಗಿದೆ ಎಂದು ಭಾಗ್ಯ ಅಲ್ಲಿದ್ದವರನ್ನು ಕೇಳುತ್ತಾ ಇದ್ದಾಳೆ.

ಕನ್ನಿಕಾಳನ್ನು ಭೇಟಿಯಾದ ಭಾಗ್ಯ

ಶಾಲೆಯ ಮ್ಯಾನೇಜಿಂಗ್ ಟ್ರಸ್ಟ್ರಿ ಆದ ಕನ್ನಿಕಾ ಕಾಮತ್‌ನಿಂದಲೇ ನನ್ನ ಆಡ್ಮಿಶನ್ ಕ್ಯಾನ್ಸಲ್ ಆಗಿದೆ ಎಂಬುದನ್ನ ತಿಳಿದ ಭಾಗ್ಯ ಭೇಟಿಯಾಗಲು ಕನ್ನಿಕಾ ಇರುವ ರೂಮ್‌ಗೆ ಬಂದಿದ್ದಾಳೆ. ಭಾಗ್ಯ ಬಂದಿದ್ದನ್ನು‌ ನೋಡಿದ ಕನ್ನಿಕಾ ಯಾರು ಎಂದು ಕೇಳಿದ್ದಾರೆ. ಇದಕ್ಕೆ ಭಾಗ್ಯ ನಾನು ನಿನ್ನೆ ಹೊಸದಾಗಿ ಅಡ್ಮಿಶನ್ ಆಗಿದ್ದೆ ನನ್ನ ಹೆಸರು ಭಾಗ್ಯ ಎಂದು ಹೇಳಿದ್ದಾಳೆ. ನಮ್ಮ ತಂದೆಗೆ ಮಾಡಲು ಕೆಲಸ ಇಲ್ಲ ನಿಮ್ಮಂಥವರನ್ನೆಲ್ಲ ಸೇರಿಸಿಕೊಳ್ಳುತ್ತಾರೆ, ನಿನ್ನ ಅಡ್ಮಿಶನ್ ಕ್ಯಾನ್ಸಲ್ ಆಗಿ ಹೋಗಿದೆ‌ ನೀನು ಈಗ ವಾಪಸ್ ಹೋಗಬಹುದು ಎಂದು ಕನ್ನಿಕಾ, ಭಾಗ್ಯಗೆ ಅವಮಾನ ಮಾಡಿದ್ದಾಳೆ.

Bhagyalakshmi- kannada- serial

ಕನ್ನಿಕಾ ದುರಹಂಕಾರದ ಮಾತು

ಭಾಗ್ಯ ಕೇಳುತ್ತಿರುವ ಪ್ರಶ್ನೆಗಳಿಗೆ ಯಾವುದೇ ಉತ್ತರವನ್ನು ನೀಡದ ಕನ್ನಿಕಾ ದುರಹಂಕಾರದಿಂದ ಮಾತನಾಡುತ್ತಿದ್ದಾಳೆ. ಬೇಸಿಕ್ ಭಾಷೆಯು ಸಹ ನಿನಗೆ ಗೊತ್ತಿಲ್ಲ ಆದರೂ ನಿನಗೆ ಇಂಥ ಶಾಲೆಯಲ್ಲಿ ಸೀಟ್ ಬೇಕಾ ? ಎಂದು ವ್ಯಂಗ್ಯ ಮಾಡಿದ್ದಾಳೆ. ಇದು ನನ್ನ ಹಣೆಬರಹ ನಾನು ಮೊದಲು ಶಾಲೆಯನ್ನ ಸರಿ ಮಾಡಬೇಕು ಎಂದು ಗೊಣಗಾಡಿದ್ದಾಳೆ. ಇದ್ಯಾವುದು ನನಗೆ ಅರ್ಥವಾಗುತ್ತಿಲ್ಲ ಎಂದಾಗ ನಿನಗೆ ಯಾವುದನ್ನು ನಿನಗೆ ಹೇಳುವ ಅಗತ್ಯ ನನಗೆ ಇಲ್ಲ. ನಿನಗೆ ಏನೇ ಬೇಕಾಗಿದ್ದರೂ ಆಫೀಸ್ ಇದೆ ಅಲ್ಲಿ ಹೋಗಿ ಕೇಳಿಕೋ ಎಂದೆಲ್ಲಾ ಭಾಗ್ಯಗೆ ಹೇಳಿದ್ದಾಳೆ. ಮೊದಲು ನೀನು ಇಲ್ಲಿಂದ ಹೋಗು ಎಂದು ಭಾಗ್ಯಗೆ ಹೇಳಿ ಹೊರಗೆ ಕನ್ನಿಕಾ ಕಳುಹಿಸಿದ್ದಾಳೆ.

ತಾಂಡವ್ ಅಪ್ಪನಾಗಿ ಮಹೇಶ್

ಶ್ರೇಷ್ಠ ತಂದೆ ತಾಯಿಗೆ ತಾಂಡವ್ ಅವರ ಅಪ್ಪ ಅಮ್ಮನನ್ನು ಭೇಟಿ ಮಾಡಿಸಲೇಬೇಕಾಗಿದೆ. ಇದಕ್ಕಾಗಿ ಶ್ರೇಷ್ಠ ಬಾಡಿಗೆ ಅಪ್ಪ ಅಮ್ಮನನ್ನ ತರುವ ಐಡಿಯಾ ಮಾಡಿದ್ದಾಳೆ. ಕೊನೆಗೆ 'ಅಂತರ ಪಟ' ಮಹೇಶ್‌ನನ್ನು ಬಾಡಿಗೆ ತಂದೆಯಾಗಿ ಮಾಡಲಾಗಿದೆ. ಆದರೆ ಬಾಡಿಗೆ ತಾಯಿ ಎಂಬುದನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ. ತಾಂಡವ್‌ಗೆ ಯಾಕೋ ಇದೆಲ್ಲವೂ ಸರಿ ಎಂದು ಕಾಣುತ್ತಿಲ್ಲ. ಆದರೆ ಶ್ರೇಷ್ಠಾ ಒತ್ತಾಯದ ಮೇರೆಗೆ ತಾಂಡವ್ ಬಾಡಿಗೆ ತಂದೆ ತಾಯಿಯ ಮೂಲಕ ಶ್ರೇಷ್ಠಾ ಅಪ್ಪ ಅಮ್ಮನ ಬಳಿ ಮಾತನಾಡಿಸಲು ಯೋಚನೆ ಮಾಡಿದ್ದಾನೆ.

More from Filmibeat

English summary
Bhagyalakshmi kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X