Bhagyalakshmi: ತಾಂಡವ್‌ಗೆ ಶ್ರೇಷ್ಠಾ ಕೊಟ್ಟ ಗ್ರೀಟಿಂಗ್ ಸುನಂದಾ ಕೈಲಿ..!? ತಾಂಬೂಲ ಬದಲಾಯಿಸಿಕೊಳ್ಳಲು ಸಿದ್ಧತೆ..!

By ಶೃತಿ ಹರೀಶ್ ಗೌಡ

ಪೂಜಾಗೆ ತನ್ನ ಅಕ್ಕ ಓದಲು ಹೋಗಿ ತನ್ನ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾಳೆ ಎಂದು ಎನಿಸುತ್ತಿದೆ. ಇದಕ್ಕಾಗಿ ನೀನು ಓದಲು ಹೋಗಿ ನಿನ್ನ ಸಂಸಾರದ ಕಡೆಗೆ ಗಮನವನ್ನು ಕೊಡುತ್ತಿಲ್ಲ ಸೂಪರ್ ಮ್ಯಾನ್ ರೀತಿ ಆಡುತ್ತಿದ್ದೀಯಾ ಎಂದು ಪೂಜಾ, ಭಾಗ್ಯಗೆ ಬೈಯ್ಯುತ್ತಿದ್ದಾಳೆ.

ನಿನ್ನ ಅತ್ತೆ ಸಹ ನಿನ್ನ ತಾಳಕ್ಕೆ ತಕ್ಕಂತೆ ಕುಣಿತಿದ್ದು ನಿನ್ನನ್ನು ಓದಲು ಕಳುಹಿಸುತ್ತಿದ್ದಾರೆ. ಆದರೆ ನಿನ್ನ ಬೆನ್ನ ಹಿಂದೆ ನಡೆಯುತ್ತಿರುವುದೇ ಬೇರೆ ಎಂದು ಪೂಜಾ ಹೇಳಿದ್ದಾಳೆ. ನನ್ನ ಅತ್ತೆ ನನ್ನ ತಾಯಿಯಂತೆ ನೀನು ಅವರ ಬಗ್ಗೆ ಏನೇನೋ ಮಾತನಾಡಬೇಡ. ನಾನು ಓದಲು ಹೋಗುತ್ತಿರುವುದಕ್ಕೆ ನನಗೆ ಹಲವಾರು ವಿಷಯಗಳನ್ನ ತಿಳಿದುಕೊಂಡೆ. ಇಲ್ಲದಿದ್ದರೇ ನನಗೆ ಯಾವುದು ಸಹ ಅರ್ಥವಾಗುತ್ತಿರಲಿಲ್ಲ ಎಂದು ಪೂಜಾಗೆ ಭಾಗ್ಯ ಬೈದಿದ್ದಾಳೆ.

Bhagyalakshmi serial Written Update on Aug 24th episode

ನನ್ನತ್ತೆ ಹೇಳಿದಂತೆ ನಾನು ಓದನ್ನ ಮುಂದುವರಿಸುತ್ತೇನೆ. ಯಾವುದೇ ಕಾರಣಕ್ಕೂ ಬಿಡೋದಿಲ್ಲ ಎಂದು ದೃಢ ಸಂಕಲ್ಪ ಮಾಡಿಕೊಂಡವಳಂತೆ ಪೂಜಾ ಬಳಿ ಹೇಳಿದ್ದಾಳೆ. ಗುಂಡಣ್ಣಗೆ ತನ್ನ ಅಮ್ಮನ ಮಾತಿನಿಂದ ಖುಷಿಯಾದರೆ ತನ್ವಿಗೆ ಮಾತ್ರ ಬೇಸರವಾಗುತ್ತಿದೆ. ಈ ಅಮ್ಮ ನನ್ನ ಶಾಲೆಗೆ ಬಂದು ಸೇರಿಕೊಂಡು ಬಿಟ್ಟಿದ್ದಾಳೆ ಎಂದು ಮುಖವನ್ನೆಲ್ಲ ಊದಿಸಿಕೊಂಡು ನಿಂತಿದ್ದಾಳೆ.

ಈ ಕಡೆ ತಾಂಡವ್ ಡ್ಲೂಪ್ಲಿಕೇಟ್ ಅಪ್ಪ ಮಹೇಶ್ ನಾವು ಮುಂದಿನ ವರ್ಷ ಮದುವೆ ಮಾಡುತ್ತೇವೆ ಈಗ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಇದೇ ಅಲ್ಲಿ ಎಡವಟ್ಟಾಗಿ ಹೋಗಿದ್ದು, ಯಾಕೆಂದರೆ ಮುಂದಿನ ವರ್ಷ ಮದುವೆ ಎಂದರೆ ಯಾವ ತಂದೆ ತಾಯಿಗೆ ತಾನೇ ಭಯ ಆಗುವುದಿಲ್ಲ. ಇದಕ್ಕಾಗಿ ತಾಂಬೂಲ ಎಕ್ಸ್‌ಚೇಂಜ್ ಮಾಡಿಕೊಂಡು ಬಿಡೋಣ ಎಂದು ಶ್ರೇಷ್ಠ ತಂದೆ ಹೇಳಿದ್ದಾರೆ.

ಶ್ರೇಷ್ಠಾ ಮಾತು ಕೇಳದ ಯಶೋಧ

ತಾಂಡವ್ ಡೂಪ್ಲಿಕೇಟ್ ಅಪ್ಪ ಮಹೇಶ್ ಮುಂದಿನ ವರುಷ ಮದುವೆ ಮಾಡುತ್ತೇವೆ ಎಂದಿದ್ದಕ್ಕೆ, ಶ್ರೇಷ್ಠ ತಂದೆ ಈಗಲೇ ತಾಂಬೂಲವನ್ನ ಬದಲಾಯಿಸಿಕೊಳ್ಳೋಣ. ಇಂದು ಒಳ್ಳೆಯ ದಿನವಿದೆ ಎಂದು ಪುರೋಹಿತರು ಹೇಳಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಶ್ರೇಷ್ಠ ತಾಯಿ ಯಶೋಧ ನಾನು ತಾಂಬೂಲ ಬದಲಾಯಿಸಿಕೊಳ್ಳಲು ಬೇಕಾದ ಏರ್ಪಾಟುಗಳನ್ನ ಮಾಡಿಕೊಳ್ಳುತ್ತೇನೆ ಎಂದು ಬಂದಿದ್ದಾರೆ. ಶ್ರೇಷ್ಠ ತನ್ನ ತಾಯಿಯನ್ನೇ ಹಿಂಬಾಲಿಸಿ ಬಂದು ಈ ತಾಂಬೂಲ ಬದಲಾಯಿಸಿಕೊಳ್ಳುವುದೆಲ್ಲ ಯಾಕೆ ಎಂದು ಕೇಳಿದ್ದಾಳೆ.

ತಾಯಿ ಮಾತಿನಿಂದ ಶ್ರೇಷ್ಠಾಗೆ ಶಾಕ್

ಶ್ರೇಷ್ಠಳ ತಾಯಿ ಒಂದು ವರ್ಷ ಬಿಟ್ಟು ಮದುವೆ ಮಾಡುತ್ತೇನೆ ಎನ್ನುತ್ತಿದ್ದಾರೆ, ನಮಗೆ ನಂಬಿಕೆ ಬರಬಾರದಾ ಅದಕ್ಕಾಗಿ ತಾಂಬೂಲವನ್ನ ಬದಲಾಯಿಸಿಕೊಳ್ಳೋಣ ಮುಂದಿನ ವರ್ಷವೇ ಮದುವೆಯನ್ನ ಮಾಡೋಣ ಎಂದು ಹೇಳಿದ್ದಾರೆ. ನಿನಗೆ ಇದೆಲ್ಲವೂ ಗೊತ್ತಾಗುವುದಿಲ್ಲ ಸುಮ್ಮನೆ ಇರು ನಾನು ಹೋಗಿ ತಾಂಬೂಲ ಬದಲಾಯಿಸಿಕೊಳ್ಳಲು ಬೇಕಾದ ಸಾಮಗ್ರಿಗಳೆಲ್ಲವನ್ನು ತರುತ್ತೇನೆ ಎಂದು ಶ್ರೇಷ್ಠ ಮಾತಿಗೂ ಕಾಯದೇ ಹೋಗಿದ್ದಾರೆ.

ಅತ್ತೆ ಕೈಲಿದೆ ತಾಂಡವ್ ಗುಟ್ಟು

ಸುನಂದ ಮನೆಯನ್ನು ಕ್ಲೀನ್ ಮಾಡಬೇಕಾದರೆ ಗ್ರೀಟಿಂಗ್ ಕಾರ್ಡ್ ಸಿಕ್ಕಿದೆ. ಅದರಲ್ಲಿ ಮೈ ಡಿಯರ್ ಎಂದು ಬರೆದಿದೆ. ಇದೇ ವೇಳೆ ಸುನಂದ, ಗುಂಡಣ್ಣನಿಗೆ ಯಾರು ಮೈ ಡಿಯರ್ ಎಂದು ಬರೆಯುವುದಿಲ್ಲ, ಇದರಲ್ಲಿ ಏನೋ ಇದೆ ಎಂದುಕೊಳ್ಳುವಾಗಲೇ ಅಲ್ಲಿಗೆ ಪೂಜಾ ಬಂದಿದ್ದಾಳೆ. ಸುನಂದ ಹೋಗು ಇಲ್ಲಿಗೆ ಏಕೆ ಬಂದೆ ಅಕ್ಕನಿಗೆ ಸಹಾಯ ಮಾಡು ಎಂದು ಹೇಳಿದ್ದಾರೆ. ನಾನು ರೀಲ್ಸ್‌ ಮಾಡಲು ಬಂದೇ ಎಂದಾಗ ಚಿಕ್ಕ ಹುಡುಗನ ಜೊತೆ ನಿನ್ನದು ಏನು? ಮೊದಲು ಹೋಗಿ ಅಕ್ಕನಿಗೆ ಸಹಾಯ ಮಾಡು ಎಂದು ಚೆನ್ನಾಗಿ ಬೈದು ಪೂಜಾಳನ್ನ ಅಲ್ಲಿಂದ ಕಳುಹಿಸಿದ್ದಾರೆ.

ಈ ಕಡೆ ಪೂಜಾ ಕೋಪ ಮಾಡಿಕೊಂಡು ಹೊರಗಡೆ ಬರುವಾಗ ಭಾಗ್ಯ ಸಿಕ್ಕಿದ್ದು ನಿನ್ನ ಅಮ್ಮನಿಗೆ ಹುಚ್ಚು ಹಿಡಿದಿದೆ ಹೋಗಿ ಹುಚ್ಚು ಬಿಡಿಸು, ಅಲ್ಲಿಗೆ ಹೋದರೆ ಬಾಯಿಗೆ ಬಂದಂತೆ ಬೈದು ನನ್ನನ್ನ ಕಳುಹಿಸಿದಳು ಎಂದು ಹೇಳಿದ್ದಾಳೆ. ಭಾಗ್ಯ, ಅಮ್ಮನಿಗೆ ಏನಾಯಿತು ಯಾಕೆ ಬೈದಳು ಎಂದುಕೊಂಡು ಅಮ್ಮ ರೂಮ್ ಕ್ಲೀನ್ ಮಾಡುತ್ತಿರುವಲ್ಲಿಗೆ ಬಂದಿದ್ದಾಳೆ. ಸುನಂದಾ ಏನಾದರೂ ಗ್ರೀಟಿಂಗ್ಸ್ ಭಾಗ್ಯಗೆ ಕೊಟ್ಟರೆ ಅದು ಶ್ರೇಷ್ಠ ಬರೆದಿರುವುದು ಎಂದು ಗೊತ್ತಾಗುತ್ತದೆ.

More from Filmibeat

English summary
Bhagyalakshmi Kannada serial Today Episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X