Bhagyalakshmi: ಕುಸುಮಾಗೆ ತಿಳಿಯುತ್ತಾ ತಾಂಡವ್ ಶ್ರೇಷ್ಠಾ ಸಂಬಂಧ?
ಸುನಂದಾಗೆ ಶ್ರೇಷ್ಠಳ ಮೇಲೆ ಅನುಮಾನ ಬಂದಿದೆ. ನನ್ನ ಅಳಿಯನನ್ನು ಮರಳು ಮಾಡಿ ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾಳೆ, ಅದಕ್ಕಾಗಿ ಅವಳು ಪದೇಪದೇ ನನ್ನ ಮಗಳ ಮನೆಗೆ ಬರುತ್ತಾಳೆ ಎಂದುಕೊಂಡಿದ್ದಾಳೆ. ಹೇಗಾದರೂ ಮಾಡಿ ಅದನ್ನು ಕಂಡುಹಿಡಿದು ಅವರ ಅಪ್ಪ ಅಮ್ಮನಿಗೆ ತಿಳಿಸಬೇಕು ಎಂದು ಶ್ರೇಷ್ಠಳ ಆಫೀಸ್‌ವರೆಗೂ ಪೂಜಾ ಹಾಗೂ ಸುನಂದ ಹೋಗಿದ್ದರು.
ಸುನಂದ ಮಗಳಿಗೆ ಎಲ್ಲಾ ಕೆಲಸವನ್ನ ಮಾಡಿಕೊಡುತ್ತಿದ್ದಳು. ತಾಂಡವ್ ವಾರ್ಡ್ ರೂಬ್ ಎಂದು ತಿಳಿಯದೇ ಗುಂಡಣ್ಣನದ್ದು ಎಂದು ಕೊಂಡು ಹೋಗಿ ಬಟ್ಟೆಯನ್ನು ಇಟ್ಟಿದ್ದಳು. ಈ ವೇಳೆ ಎರಡು ಚಿನ್ನದ ಬಳೆಗಳು ಸಿಕ್ಕಿವೆ. ಅಯ್ಯೋ ಈ ಭಾಗ್ಯಗೆ ಯಾವುದನ್ನು ಎಲ್ಲಿ ಇಡಬೇಕು ಎಂದು ಗೊತ್ತಿಲ್ಲ ಎಂದು ಬೈದುಕೊಂಡು ತಾನೇ ಬಳೆಗಳನ್ನು ಎತ್ತಿಡುವ ಸಂದರ್ಭದಲ್ಲಿ ಕೆಲವು ಗ್ರೀಟಿಂಗ್ ಕಾರ್ಡ್‌ಗಳು ಸಿಕ್ಕಿವೆ. ಇದನ್ನೆಲ್ಲವನ್ನು ಓದಬೇಕು ಯಾರು ಬರೆದಿದ್ದಾರೆ ಎಂಬುದನ್ನು ಓದಬೇಕು ಎಂದುಕೊಂಡಿದ್ದಾಳೆ.

ಭಾಗ್ಯ ಅಮ್ಮನ ಬಳಿ ಬಂದವಳೇ ಅಮ್ಮ ಅದು ತಾಂಡವ್ ವಾರ್ಡ್ ರೂಬ್ ಅದನ್ನು ಮುಟ್ಟಿದರೆ ಅವರಿಗೆ ಕೋಪ ಬರುತ್ತದೆ ಎಂದಿದ್ದಾಳೆ. ಭಾಗ್ಯ ಬಳಿಯೂ ಸಹ ಸುನಂದ ಗ್ರೀಟಿಂಗ್ ಕಾರ್ಡ್ ಬಗ್ಗೆ ಹೇಳಲಿಲ್ಲ. ನಾನೇ ಎಲ್ಲವನ್ನೂ ಕಂಡು ಹಿಡಿಯಬೇಕು ಎಂದುಕೊಂಡಿದ್ದಾಳೆ. ಇದಕ್ಕಾಗಿ ಯಾವುದಾದರೂ ಒಂದು ಕ್ಲೂ ಸಿಗುತ್ತಾ ಎಂದು ಹುಡುಕುತ್ತಾ ಇದ್ದಾಳೆ. ಈಗ ಸುನಂದ ಕೈಗೆ ಶ್ರೇಷ್ಠ ಬರೆದಿರುವ ಗ್ರೀಟಿಂಗ್ ಕಾರ್ಡ್ ಸಿಕ್ಕಿದ್ದು ಅವುಗಳನ್ನ ಯಾರು ಬರೆದಿದ್ದಾರೆ ಎಂಬುದನ್ನು ಸುನಂದ ಪತ್ತೆ ಹಚ್ಚಬೇಕಾಗಿದೆ.
ಬಯಲಾಗುತ್ತಾ ತಾಂಡವ್ -ಶ್ರೇಷ್ಠ ಸಂಬಂಧ!?
ಕುಸುಮಾ ತನ್ನ ಗಂಡನ ಮೇಲೆ ಹಣ ಎಸೆದು ಹೋದವನ ಆಗಮನಕ್ಕಾಗಿ ಕಾಯುತ್ತಾ ನಿಂತಿದ್ದಾಳೆ. ಈ ವೇಳೆ ಶ್ರೇಷ್ಠ ಅಮ್ಮ ಯಶೋಧ ತಾಂಬೂಲದ ಸಾಮಗ್ರಿ ತರಲು ದೇವಸ್ಥಾನದಿಂದ ಹೊರಗೆ ಬಂದಿದ್ದಾರೆ. ಅಲ್ಲೇ ನಿಂತಿದ್ದ ಕುಸುಮಾರನ್ನು ನೋಡಿ ಮಾತನಾಡಿಸಿದ್ದಾರೆ. ಹುಡುಗನ ಕಡೆಯವರು ಇಷ್ಟ ಆದ್ರ ಎಂದು ಕುಸುಮಾ, ಯಶೋಧಗೆ ಕೇಳಿದ್ದಾರೆ. ಇದಕ್ಕೆ ಯಶೋಧ ನಮಗೆ ಒಂದು ಸ್ವಲ್ಪವೂ ಸಹ ಇಷ್ಟವಾಗಲಿಲ್ಲ, ಮಗಳ ಒತ್ತಾಯಕ್ಕೆ ಮಣಿದು ಮದುವೆ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.

ಕುಸುಮಾಗೆ ಸಿಟ್ಟು
ಆ ಹುಡುಗ ಹೇಳಿದ್ದಕ್ಕೂ ಅವರ ತಂದೆ ತಾಯಿಯೇ ನಡೆದುಕೊಳ್ಳುತ್ತಿರುವ ರೀತಿಗೂ ತುಂಬಾ ವ್ಯತ್ಯಾಸವಿದೆ ಎಂದು ಯಶೋಧ ಕುಸುಮಾಗೆ ಹೇಳುತ್ತಿದ್ದಾರೆ. ನಮ್ಮ ಮಗಳು ನಮ್ಮ ಮಾತನ್ನೇ ಕೇಳುತ್ತಿಲ್ಲ, ಮದುವೆಗೆ ಇನ್ನೂ ಒಂದು ವರ್ಷ ಬೇಕು ಎಂದು ಹುಡುಗನ ಮನೆಯವರು ಕೇಳಿದ್ದಾರೆ ಎಂದು ಹೇಳಿದ ಕೂಡಲೇ ಕುಸುಮಾಗೆ ಸಿಟ್ಟು ಬಂದಿದೆ. ಏನು ಇನ್ನೂ ಒಂದು ವರ್ಷನಾ ನಿಮ್ಮ ಮಗಳು ಯಾರು ಅವಳನ್ನು ಇಲ್ಲಿಗೆ ಕರೆದುಕೊಂಡು ಬನ್ನಿ ನಾನು ಅವಳಿಗೆ ಬುದ್ಧಿ ಹೇಳುತ್ತೇನೆ ಎಂದು ಹೇಳಿದ್ದಾರೆ.
ಹೆದರಿಸಿ ಮದುವೆಯಾಗುತ್ತಿರುವುದು ತಪ್ಪು
ಅಪ್ಪ ಅಮ್ಮನ ಮಾತನ್ನ ಧಿಕ್ಕರಿಸಿ ಮದುವೆಯಾಗುವುದು ತಪ್ಪು ಅದು ಅಲ್ಲದೆ ಇನ್ನು ಹೆದರಿಸಿ ಮದುವೆಯಾಗುತ್ತಿರುವುದು ದೊಡ್ಡ ತಪ್ಪು . ತಂದೆ ತಾಯಿಯ ಕಷ್ಟ ಏನೆಂದು ಮಕ್ಕಳಿಗೆ ಅರ್ಥವಾಗುವುದಿಲ್ಲ, ನಾನು ಒಬ್ಬ ತಾಯಿಯಾಗಿ ಮತ್ತೊಂದು ತಾಯಿಯ ಕಷ್ಟ ನನಗೆ ಅರ್ಥವಾಗುತ್ತದೆ ಎಂದು ಕುಸುಮ ಹೇಳಿದ್ದಾಳೆ.
ಗ್ರೀಟಿಂಗ್ ಕಾರ್ಡ್ ಓದುತ್ತಿರುವ ಕುಳಿತ ಸುನಂದ
ಗ್ರೀಟಿಂಗ್ ಕಾರ್ಡ್‌ಗಳನ್ನು ಓದುತ್ತಾ ಸುನಂದಾ ಕುಳಿತುಕೊಂಡಿದ್ದಾಳೆ. ಕನ್ನಡದಲ್ಲಿ ಮೈ ಡಿಯರ್ ಎಂದು ಬರೆದಿದೆ. ಇದನ್ನು ನೋಡಿ ಯಾರೋ ಹುಡುಗಿಯೇ ಬರೆದಿರಬೇಕು ಎಂದುಕೊಂಡಿದ್ದಾಳೆ. ಅಷ್ಟರಲ್ಲಿ ಭಾಗ್ಯ ಅದು ತಾಂಡವ್ ವಾರ್ಡ್ ರೂಬ್ ಎಂದು ಹೇಳಿದ್ದು ನೆನಪಾಗಿದೆ. ಈಗ ಸುನಂದ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಶ್ರೇಷ್ಟಾಳೇ ಗ್ರೀಟಿಂಗ್ ಕಾರ್ಡ್ ಕಳಿಸಿರಬಹುದು ಎಂದು ಅಂದುಕೊಂಡಿದ್ದಾಳೆ.


Click it and Unblock the Notifications











