Bhagyalakshmi: ಮಹೇಶನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಕುಸುಮಾ

By ಶೃತಿ ಹರೀಶ್ ಗೌಡ

ತಾಂಡವ್ ಮಾಡುತ್ತಿರುವ ಮೋಸ ನೆನೆದು ಸುನಂದ ಕಣ್ಣೀರು ಹಾಕಿದ್ದಾಳೆ. ಈ ವೇಳೆ ಭಾಗ್ಯ ಎಷ್ಟೇ ಸಮಾಧಾನ ಮಾಡಿದರು ಸಹ ಅವಳು ಸಮಾಧಾನ ಮಾಡಿಕೊಳ್ಳದೆ ಪ್ರಜ್ಞೆ ತಪ್ಪಿ ಹೋಗಿದ್ದಾಳೆ. ಭಾಗ್ಯಳಿಗೆ ತನ್ನ ಅಮ್ಮನಿಗೆ ಏನಾಯಿತೋ ಏನೋ ಎನ್ನುವ ಗಾಬರಿಯಾಗಿದೆ. ಅಮ್ಮ ಅಮ್ಮ ಎಂದು ಕೂಗಿ ಕರೆಯುತ್ತಿದ್ದರು ಸಹ ಸುನಂದಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಚೆನ್ನಾಗಿ ಇದ್ದ ಅಮ್ಮ ಯಾಕೆ ಕಣ್ಣೀರು ಹಾಕುತ್ತಿದ್ದಾಳೆ ಅನ್ನೋದು ಭಾಗ್ಯಗೆ ಯಕ್ಷಪ್ರಶ್ನೆಯಾಗಿದೆ.

ಈ ಕಡೆ ತಾಂಡವ್, ಶ್ರೇಷ್ಠ ತಂದೆಯೊಂದಿಗೆ ಕಿರಿಕಿರಿ ಮಾಡಿಕೊಂಡಿದ್ದಾನೆ. ಇನ್ನು ಮಹೇಶ್ ಹಾಗೂ ಸುಂದರಿ ಇಬ್ಬರೂ ಸಹ ಮಾತನಾಡಿಕೊಂಡು ಬರುತ್ತಿದ್ದಾರೆ. ಇನ್ನು ಶ್ರೇಷ್ಠಗೆ ಕಾಲ್ ಮಾಡಿದ ತಾಂಡವ್ ಆ ಡೂಪ್ಲಿಕೇಟ್ ಅಪ್ಪ, ಅಮ್ಮನನ್ನು ಕರೆಸು ನನಗೆ ಇಲ್ಲಿ ನಿನ್ನ ತಂದೆ ಕೊಡುತ್ತಿರುವ ಟಾರ್ಚರ್ ಹೆಚ್ಚಾಗಿದೆ ಎಂದು ಹೇಳಿದ್ದಾನೆ. ಶ್ರೇಷ್ಠಗೆ ಈ ಡ್ಯೂಪ್ಲಿಕೇಟ್ ಅಪ್ಪ ಅಮ್ಮನಿಂದ ತುಂಬಾನೇ ಕಿರಿಕಿರಿಯಾಗುತ್ತಿದೆ. ಯಾಕೆಂದರೆ ಮಹೇಶ್‌ನ ಡಿಮ್ಯಾಂಡ್ ಅಷ್ಟೊಂದು ಇದೆ.

Bhagyalakshmi-serial

ಈ ಕಡೆ ತನ್ನ ಮಗಳನ್ನು ಕುಸುಮ ಬಳಿ ಕರೆದುಕೊಂಡು ಹೋಗಬೇಕು ಎಂದು ಶ್ರೇಷ್ಠ ತಾಯಿ ಯಶೋಧ ಅಂದುಕೊಂಡಿದ್ದಾಳೆ. ಆದರೆ ಶ್ರೇಷ್ಠ ಮಾತ್ರ ನಾನು ಎಲ್ಲಿಗೂ ಬರುವುದಿಲ್ಲ ಯಾರನ್ನು ಭೇಟಿಯಾಗುವುದಿಲ್ಲ ಎಂದು ಸಿಡಿಮಿಡಿಗೊಂಡಿದ್ದಾಳೆ. ಯಶೋಧಗೆ ಏನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ. ಕುಸುಮಾ ಮಾತ್ರ ಧರ್ಮರಾಜ್ ಮೇಲೆ ಹಣವನ್ನು ಎಸೆದು ಹೋದ ಮಹೇಶನಿಗೋಸ್ಕರ ಕಾಯುತ್ತಿದ್ದಾಳೆ. ಅವನು ವಾಪಸ್ ಬರುವವರೆಗೂ ಜಾಗದಿಂದ ಕದಲುವ ಮಾತೇ ಇಲ್ಲ ಎಂದು ಧರ್ಮರಾಜ್ ಬಳಿ ಹೇಳಿದ್ದಾಳೆ.

ಕುಸುಮಾ ಮಾತಿಗೆ ಮಹೇಶ ತತ್ತರ

ಮಹೇಶ ಮಾತನಾಡಿಕೊಂಡು ಹೊರಗೆ ಕಾರಿನ ಬಳಿ ಬಂದಿದ್ದಾನೆ. ಮಹೇಶನನ್ನು ಕಾಯುತ್ತಾ ಕುಳಿತಿದ್ದ ಕುಸುಮಾ, ಮಹೇಶನಿಗೆ ಸರಿಯಾಗಿ ಕ್ಲಾಸ್ ತಗೆದುಕೊಂಡಿದ್ದಾಳೆ. ನಿನಗೇನು ಗೊತ್ತಾಗೋದಿಲ್ಲ ಯಾವ ರೀತಿ ಮಾತನಾಡಬೇಕು ಎಂದು ಎಂದೆಲ್ಲ ಕೇಳಿದ್ದಾಳೆ. ಇದಕ್ಕೆ ಮಹೇಶ್ ವಯಸ್ಸಾದ ಪೀಪಲ್ಸ್ ಜೊತೆ ನನ್ನದೇನು ಮಾತು ಮುದೆ ಗೂಬೆಗಳ ಎಂದೆಲ್ಲಾ ಬೈದಿದ್ದಾರೆ. ಮುದಿ ಗೂಬೆಗಳ ಎಂಬ ಪದವನ್ನು ಕೇಳಿದ ತಕ್ಷಣವೇ ಮಹೇಶನ ಕೆನ್ನೆಗೆ ಕುಸುಮಾ ಎರಡೇಟು ಬಿಟ್ಟಿದ್ದಾಳೆ.‌ ಏನು ನಮ್ಮನ್ನೇ ಮುದಿ ಗೂಬೆಗಳು ಅನ್ನುತ್ತೀಯಾ ಮರ್ಯಾದೆ ಕೊಟ್ಟು ಮಾತನಾಡಲು ನಿನಗೆ ಬರೋದಿಲ್ಲ ಎಂದೆಲ್ಲಾ ಕ್ಲಾಸ್ ತೆಗೆದುಕೊಂಡಿದ್ದಾಳೆ.

Bhagyalakshmi-serial

ಒದೆ ತಿಂದು ಮಹೇಶ ಸೈಲೆಂಟ್

ಇನ್ನು ಮಹೇಶ ಒದೆ ತಿಂದ ನಂತರ ಸುಮ್ಮನೆ ನಿಂತುಕೊಂಡಿದ್ದಾನೆ. ನನ್ನ ಗಂಡ ಮರೆಯಬಹುದು ಆದರೆ ನಾನು ಮಾತ್ರ ಯಾವುದನ್ನು ಮರೆಯೋದಿಲ್ಲ, ನನ್ನ ಗಂಡನ ಮೇಲೆ ದುಡ್ಡನ್ನ ಎಸೆಯಲು ನಿನಗೆ ಎಷ್ಟು ಧೈರ್ಯ ಎಂದೆಲ್ಲಾ ಕುಸುಮ ಪ್ರಶ್ನೆ ಮಾಡಿದ್ದಾಳೆ. ಇದೇ ವೇಳೆ ಕುಸುಮಾ ಆಡುತ್ತಿರುವ ಮಾತುಗಳನ್ನ ಕೇಳುತ್ತಿರುವ ಮಹೇಶನಿಗೆ ತಲೆ ಚಿಟ್ಟಿಡಿದಂತೆ ಆಗಿದೆ‌. ನಾನೇ ಗಯ್ಯಾಳ ಎಂದರೆ ಇವಮ್ಮ ನನಗಿಂತ ಗಯ್ಯಾಳಿ ಸುಮ್ಮನೆ ಬಿಡಬಾರದು ಎಂದುಕೊಂಡು ಮತ್ತೆ ಮಹೇಶ ಜೋರಾಗಿ ಪ್ರಶ್ನೆ ಮಾಡ್ತಾ ಇದ್ದಾನೆ.

ಕುಸುಮಾ ಬಳಿ 5,000ಕ್ಕೆ ಡಿಮ್ಯಾಂಡ್

ಈಗ ಕುಸುಮಾ ಬಳಿ ಮಹೇಶ್ 5000 ರೂ. ಬೇಡಿಕೆ ಇಟ್ಟಿದ್ದಾನೆ. ನನ್ನ ಕೆನ್ನೆಗೆ ಒಡೆದಿದ್ದಕ್ಕೆ ಒಂದು ಸಾವಿರ ನನ್ನ ಕಾರಿನ ನಾಲ್ಕು ಚಕ್ರಗಳನ್ನು ಪಂಚರ್ ಮಾಡಿದ್ದಕ್ಕೆ ನಾಲ್ಕು ಸಾವಿರ ಒಟ್ಟು ಐದು ಸಾವಿರ ರೂಪಾಯಿ ನೀವೇ ನೀಡಬೇಕು ಎಂದು ಮಹೇಶ್ ಹೊಸವರಸೆಯನ್ನ ತೆಗೆದಿದ್ದಾನೆ. ಕುಸುಆ ಇದು ಯಾವುದಕ್ಕೂ ಹೆದರದೇ ಹೌದ ನಾನೇ 5 ಸಾವಿರ ರೂ. ಕೊಡುತ್ತೇನೆ ಎಂದು ಹೇಳಿದ್ದಾಳೆ. ಇನ್ನೂ ಮಹೇಶನಿಗೆ ಕುಸುಮಾಳ ಮಾತನ್ನು ಕೇಳಿ ತುಂಬಾ ಸಂತೋಷವಾಗಿದೆ.

ಮಹೇಶ-ಸುಂದ್ರಿಗೆ ಶಾಕ್

ಕೂಡಲೇ ಕುಸುಮಾ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿ ಪೊಲೀಸರೇ ಇಲ್ಲಿಗೆ ಬರಲಿ ಎಂದು ಹೇಳಿದಾಗ ಮಹೇಶ್ ಹಾಗೂ ಸುಂದರಿ ಇಬ್ಬರಿಗೂ ಸಹ ಭಯವಾಗಿದೆ‌. ಏನಾದರೂ ಪೊಲೀಸರು ಬಂದು ನಮ್ಮನ್ನ ಹಿಡಿದುಕೊಂಡರೆ ಖಂಡಿತವಾಗಿಯೂ ನಾವು ಜೈಲು ಸೇರುತ್ತೇವೆ. ಇದೆಲ್ಲವೂ ಸಹ ನಾಟಕ ಎಂದು ತಿಳಿಯುತ್ತದೆ ಎಂದುಕೊಂಡು ಮಹೇಶನಿಗೆ ಭಯವಾಗುತ್ತಿದೆ.

More from Filmibeat

English summary
Bhagyalakshmi Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X