Bhagyalakshmi: ಕೊನೆಗೂ ಕುಸುಮಾ ಮುಂದೆ ಶ್ರೇಷ್ಠಾ ಅಲಿಯಾಸ್ ಶಾಕು ಪ್ರತ್ಯಕ್ಷ!
ಭಾಗ್ಯಲಕ್ಷ್ಮಿ ಧಾರಾವಾಹಿ ಕಥೆ ದಿನಕ್ಕೊಂದು ತಿರುವು ಪಡೆದುಕೊಂಡು ವೀಕ್ಷಕರನ್ನು ಸೆಳೆಯುತ್ತಿದೆ. ಶ್ರೇಷ್ಠಾ, ತಾಂಡವ್‌ನನ್ನು ಮದುವೆಯಾಗಲೇ ಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಇದಕ್ಕಾಗಿ ತಾಂಡವ್‌ನನ್ನು ತನ್ನ ತಂದೆ ತಾಯಿಗೆ ಪರಿಚಯ ಮಾಡಿಸಿದ್ದಾಳೆ. ಶ್ರೇಷ್ಠ ಒತ್ತಾಯಕ್ಕೆ ಅವರ ತಂದೆ ತಾಯಿಯನ್ನು ಒಲ್ಲದ ಮನಸ್ಸಿನಿಂದಲೇ ತಾಂಡವ್ ಭೇಟಿಯಾಗಿದ್ದಾನೆ. ನಂತರ ಡೂಪ್ಲಿಕೇಟ್ ಅಪ್ಪ-ಅಮ್ಮನನ್ನು ಕರೆಸಿ, ಮದುವೆ ಮಾತುಕತೆ ನಡೆಸಲಾಗಿದೆ.
ಮಹೇಶ್, ಕುಸುಮಾ ಕೈಲಿ ಸಿಕ್ಕಿ ವಿಲವಿಲ ಎಂದು ಒದ್ದಾಡುತ್ತಿದ್ದಾನೆ. ಮುದಿ ಗೂಬೆಗಳ ಎಂದು ಕುಸುಮಾ ಹಾಗೂ ಧರ್ಮರಾಜಗೆ ಮಹೇಶ್ ಬೈದಿದ್ದನು. ಇದನ್ನು ಕೇಳಿದ ಕುಸುಮ ಕೋಪದಿಂದ ಮಹೇಶ್ ಕೆನ್ನೆಗೆ ಬಾರಿಸಿದ್ದಳು. ನಮ್ಮನ್ನೇ ಮುದಿಗೂಬೆಗಳು ಎನ್ನುತ್ತೀಯಾ ನಿನಗೆ ಎಷ್ಟು ಧೈರ್ಯ? ನನ್ನ ಗಂಡನಿಗೆ ಮಾಡಿರುವ ಅವಮಾನಕ್ಕೆ ನೀನು ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಲೇಬೇಕು ಎಂದು ಪಟ್ಟುಹಿಡಿದಿದ್ದಾಳೆ. ಇದಕ್ಕೆ ಮಹೇಶ ಆಗಲ್ಲ ನೀವೇ ನನ್ನ ಕಾಲಿಗೆ ಬಿದ್ದು ಐದು ಸಾವಿರ ರೂಪಾಯಿಯನ್ನು ಕೊಡಿ ಎಂದು ಕೇಳಿದ್ದಾನೆ.

ಸರಿ ಕೊಡುತ್ತೇನೆ ಎಂದ ಕುಸುಮಾ ಧರ್ಮರಾಜ್ ಕಡೆ ತಿರುಗಿ ರೀ ಮೊದಲು ಪೊಲೀಸರಿಗೆ ಫೋನ್ ಮಾಡಿ ಅವರು ಬಂದ ನಂತರ ಇವನಿಗೆ 5 ಸಾವಿರ ಕೊಡೋಣ ಎಂದಿದ್ದಾಳೆ. ಪೊಲೀಸರ ವಿಷಯ ತೆಗೆಯುತ್ತಿದ್ದಂತೆ ಮಹೇಶ್ ತಣ್ಣಗಾಗಿ ಹೋಗಿದ್ದಾನೆ. ಸುಂದರಿ ಸಹ ಸುಮ್ಮನೆ ಕಾಲಿಗೆ ಬಿದ್ದು ಕ್ಷಮೆ ಕೇಳು ಎಂದು ಮಹೇಶನಿಗೆ ತಿಳಿಸಿದ್ದಾಳೆ. ಕೂಡಲೇ ಮಹೇಶ, ಧರ್ಮರಾಜ್‌ರವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.
ಕುಸುಮಾ ಮುಂದೆ ನಿಂತ ಶ್ರೇಷ್ಠ
ಶ್ರೇಷ್ಠ, ಮಹೇಶ ಹಾಗೂ ಸುಂದರಿಯನ್ನ ಹುಡುಕುತ್ತಾ ಬರುತ್ತಿದ್ದಳು. ಅಷ್ಟರಲ್ಲೇ ಕುಸುಮಾಗೆ ಸಿಕ್ಕಿದ್ದಾಳೆ. ಇನ್ನು ಶ್ರೇಷ್ಠಳನ್ನ ನೋಡಿದ ಕುಸುಮ ಏನು ಇಲ್ಲಿ ಎಂದು ಪ್ರಶ್ನೆ ಮಾಡಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ಯಶೋಧ ಸಹ ಬಂದು ಇವಳೇ ನನ್ನ ಮಗಳು ಶಾಕುಂತಲ ಎಂದು ಕುಸುಮಾಗೆ ಪರಿಚಯ ಮಾಡಿಕೊಟ್ಟಿದ್ದಾಳೆ. ಅಯ್ಯೋ ಇವಳು ಶ್ರೇಷ್ಠ ಅಲ್ವಾ ಎಂದು ಕುಸುಮಾ, ಯಶೋಧಗೆ ಕೇಳಿದ್ದಾಳೆ. ಹೌದು ಇವಳ ಹೆಸರು ಶ್ರೇಷ್ಠನೇ ಅದು ಇವಳೇ ಇಟ್ಟುಕೊಂಡಿರುವ ಹೆಸರು. ನಾವು ಮನೆಯಲ್ಲಿ ಶಾಕು ಎಂದು ಕರೆಯುತ್ತೇವೆ ಎಂದಿದ್ದಾರೆ ಯಶೋಧ.

ಕುಸುಮಾ ಮಾತಿಗೆ ಯಶೋಧ ಶಾಕ್
ನಿಮ್ಮ ಮಗಳ ಪರಿಚಯ ನಮಗೆ ಇದೆ ಎಂದಾಗ ಯಶೋಧಗೆ ತುಂಬಾನೇ ಶಾಕ್ ಆಗಿದೆ. ಯಾಕೆಂದರೆ ಬೆಂಗಳೂರಿನಲ್ಲಿ ನನ್ನ ಮಗಳಿಗೆ ಯಾರು ಪರಿಚಯವಿಲ್ಲ ಎಂದುಕೊಂಡಿದ್ದರು. ಕುಸುಮಾ ನಿಮ್ಮ ಮಗಳು ನಮಗೆ ಪರಿಚಯವಿದ್ದಾಳೆ ಎಂದಾಗ ಶಾಕ್ ಆಗಿದೆ . ನಾಲ್ಕೈದು ವರ್ಷಗಳಿಂದ ಸಹ ನಿಮ್ಮ ಮಗಳು ನಮ್ಮ ಮನೆಗೆ ಬರುತ್ತಾಳೆ ಎಂದು ಕುಸುಮಾ, ಯಶೋಧ ಬಳಿ ಹೇಳಿದ್ದಾರೆ. ಕುಸುಮಾ ಮಾತುಗಳು ಯಶೋಧಗೆ ಒಗಟು ಒಗಟಾಗಿ ಕೇಳಿಸುತ್ತಿದೆ. ಅದಕ್ಕೆ 108 ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ.
ಶ್ರೇಷ್ಠಾಗೆ ಶುರುವಾಯ್ತು ಸಂಕಟ
ಯಶೋಧಗೆ ಕುಸುಮಾ ನನ್ನ ಮಗ ಹಾಗೂ ಈಕೆ ಇಬ್ಬರು ಸಹ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಹೊರಗಡೆ ಊಟ ಸೆಟ್ ಆಗದೇ ಹೋದಾಗ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಾಳೆ ಎಂದು ಹೇಳಿದ್ದಾಳೆ. ಈ ಮಾತನ್ನ ಕೇಳಿದ ಯಶೋಧಗೆ ತುಂಬಾ ಖುಷಿಯಾಗಿದೆ. ಅದಕ್ಕೆ ಹೇಳೋದು ಭೂಮಿ ತುಂಬಾ ಚಿಕ್ಕದಾಗಿದೆ ಎಂದು. ನಾವು ಅಲ್ಲಲ್ಲೇ ಭೇಟಿ ಮಾಡುತ್ತಾ ಇರುತ್ತೇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ತಪ್ಪಿಸಿಕೊಳ್ಳಲು ಶ್ರೇಷ್ಠಾ ಪ್ಲ್ಯಾನ್
ಶ್ರೇಷ್ಠ ಮದುವೆಯಾಗಲು ಸಹ ನಾನೇ ಕಾರಣ. ನಾನು ಹೇಳಿದೆ ಎಂಬ ಒಂದೇ ಕಾರಣಕ್ಕೆ ಶ್ರೇಷ್ಠ ಮದುವೆಯಾಗುತ್ತಿದ್ದಾಳೆ ಎಂದು ಕುಸುಮಾ, ಯಶೋಧಗೆ ತಿಳಿಸಿದ್ದಾಳೆ. ಈ ಕಡೆ ಶ್ರೇಷ್ಠಾಗೆ ತಾಂಡವ್ ಸಹ ಇಲ್ಲೇ ಇದ್ದಾನೆ ಏನಾದರೂ ನಾವಿಬ್ಬರು ಸಿಕ್ಕಿ ಬಿದ್ದರೆ ಗತಿ ಏನು? ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ಲಾನ್ ರೆಡಿ ಮಾಡುತ್ತಾ ಇದ್ದಾಳೆ.


Click it and Unblock the Notifications











