Bhagyalakshmi: ಕುಸುಮಾ ಕೈಗೆ ಸಿಕ್ಕಿ ಬೀಳ್ತಾನಾ ತಾಂಡವ್?
ಯಶೋಧ ಮಗಳು ಹೇಗೋ ಕುಸುಮಾಗೆ ಪರಿಚಯವಿರುವುದು ಒಳ್ಳೆಯದಾಯಿತು ಅಂದುಕೊಂಡಿದ್ದಾಳೆ. ಆದರೆ ಶ್ರೇಷ್ಠಗೆ ಮಾತ್ರ ಇದು ಯಾಕೋ ಸರಿಯಾಗುವಂತೆ ಕಾಣುತ್ತಿಲ್ಲ. ಕುಸುಮಾ ಶ್ರೇಷ್ಠಾಳ ಬೆನ್ನು ಬಿದ್ದಿದ್ದಾಳೆ. ಯಶೋಧ ತಮ್ಮ ಮಗಳ ಬಗ್ಗೆ ಹೇಳುವಾಗ ಕುಸುಮಾ ನಿಮ್ಮ ಮಗಳು ಶುದ್ಧ ಸೋಮಾರಿ. ಯಾವಾಗಲೂ ಮಿಡಿ, ಚಡ್ಡಿ ಹಾಕಿಕೊಂಡು ಆಫೀಸಿಗೆ ಹೋಗುತ್ತಾಳೆ ಅಷ್ಟೇ ಎಂದಿದ್ದಾಳೆ.
ನಾನು ಮದುವೆಯ ಬಗ್ಗೆ ಕೇಳಿದರೆ ಈಗ ಆಗುವುದಿಲ್ಲ ಎನ್ನುತ್ತಿದ್ದಳು. ನನ್ನ ಸೊಸೆಯ ತಂಗಿಯ ಮದುವೆ ನಡೆಯಿತು ಅಲ್ಲಿಗೆ ಇವಳು ಸಹ ಬಂದಿದ್ದಳು. ಅಲ್ಲಿ ಏನು ಪವಾಡ ನಡೀತೋ ಗೊತ್ತಿಲ್ಲ ನನ್ನ ಬಳಿ ಬಂದು ಆಂಟಿ ನಾನು ಸಹ ಮದುವೆ ಆಗುತ್ತೇನೆ ಎಂದು ಹೇಳಿದಳು. ಶ್ರೇಷ್ಠ ಮದುವೆಯಾಗಲು ಒಂದು ರೀತಿಯಲ್ಲಿ ನಾನು ಸಹ ಕಾರಣವಾಗಿದ್ದೇನೆ ಎಂದು ಕುಸುಮಾ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾಳೆ. ಆದರೆ ನಿಮ್ಮ ಮಗಳು ಶ್ರೇಷ್ಠ ಲವ್ ಮಾಡುತ್ತಿರುವ ವಿಚಾರ ನಮ್ಮ ಬಳಿ ಹೇಳಿರಲಿಲ್ಲ. ಈ ಶ್ರೇಷ್ಠ ಕೆಲಸ ಮಾಡುವ ಕಂಪನಿಯಲ್ಲಿ ನನ್ನ ಮಗ ಸಹ ಕೆಲಸ ಮಾಡುತ್ತಾನೆ ಎಂದು ಕುಸುಮಾ ಹೇಳಿದ್ದಾಳೆ.

ಇನ್ನು ಶ್ರೇಷ್ಠ ತನ್ನ ಕೆಲಸ ಕೆಟ್ಟು ಹೋಗುತ್ತದೆ ಎಂದು ನಾನು ಲವ್ ಮಾಡುತ್ತಿರುವ ವಿಚಾರ ತಾಂಡವ್‌ಗೆ ಗೊತ್ತಿಲ್ಲ. ಆಫೀಸ್ ನಾ ಬೇರೆ ಬ್ರ್ಯಾಂಚಲ್ಲಿ ಅವರು ಕೆಲಸ ಮಾಡೋದು ಎಂದಿದ್ದಾಳೆ, ಅಷ್ಟರಲ್ಲಿ ಯಶೋಧ ಹುಡುಗನ ಹೆಸರು ತರುಣ್ ಎಂದು 45 ವರ್ಷವಾಗಿದೆ ಎಂದಾಗ ಶ್ರೇಷ್ಠಗೆ ಕುಸುಮಾ ಬೈದಿದ್ದಾಳೆ. ನಿನ್ನ ವಯಸ್ಸಿಗೆ ತಕ್ಕನಾಗಿ ಹುಡುಗನನ್ನ ನೋಡಿ ಲವ್ ಮಾಡಬೇಕು ತಾನೇ ಅಷ್ಟು ವಯಸ್ಸಾಗಿರುವ ಹುಡುಗನನ್ನ ಲವ್ ಮಾಡಿದ್ದೀಯಲ್ಲ ಎಂದಿದ್ದಾಳೆ. ಆದರೆ ಶ್ರೇಷ್ಠಾಗೆ ಒಳಗೊಳಗೆ ಭಯವಾಗುತ್ತಿದೆ. ತಾಂಡವ ಏನಾದರೂ ಕುಸುಮಾ ಆಂಟಿ ಕೈಗೆ ಸಿಕ್ಕಿ ಬಿದ್ದರೆ ಅಷ್ಟೇ ಗತಿ ಎಂದು ಯೋಚಿಸುತ್ತಿದ್ದಾಳೆ.
ಅಮ್ಮನಿಗೆ ಹುಷಾರಿಲ್ಲ ಎಂದ ತಾಂಡವ್
ಗುಂಡಣ್ಣ ತನ್ನ ತಂದೆಗೆ ಕರೆ ಮಾಡಿ ಅಪ್ಪಾ, ಅಜ್ಜಿ ಯಾಕೋ ತುಂಬಾ ಅಳ್ತಿದ್ದಾರೆ ಎಂದು ಹೇಳಿದ್ದಾನೆ. ತಾಂಡವ್ ನನ್ನ ಅಮ್ಮ ಯಾಕೆ ಅಳ್ತಿದ್ದಾರೆ ಎಂದು ಅಲ್ಲಿಂದ ಹೊರಟಿದ್ದಾನೆ. ಈ ವೇಳೆ ಮಹೇಶ ಯಾಕೆ ಮಗನೇ ಎಂದಾಗ ನನ್ನ ಅಮ್ಮನಿಗೆ ಹುಷಾರಿಲ್ಲ ಎಂದು ಓಡೋಡಿ ಹೋಗುತ್ತಾ ಇದ್ದಾನೆ. ಇನ್ನೂ ಇದನ್ನೆಲ್ಲ ಶ್ರೇಷ್ಠ ತಂದೆ ನೋಡುತ್ತಿದ್ದಾರೆ. ಸುಂದರಿ ಕೆಲಸ ಕೆಡ್ತು ಎಂದು ಮಹೇಶನಿಗೆ ಸಿಗ್ನಲ್ ಮಾಡಿ ಇವನ್ಯಾಕೆ? ಈ ರೀತಿ ಆಡುತ್ತಿದ್ದಾನೆ ಓಡಿಹೋಗಿ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾಳೆ.

ಕುಸುಮಾಗೆ ಅನುಮಾನ
ಮಹೇಶ ಮಗನೇ ಎಂದು ಹಿಂದೆ ಬರುತ್ತಿದ್ದಾನೆ . ಇದೇ ವೇಳೆ ತಾಂಡವ್ ದೇವಸ್ಥಾನದಿಂದ ಹೊರಗಡೆ ಬಂದಿದ್ದಾನೆ. ಆ ಕಡೆಯಿಂದ ಕುಸುಮಾ ಹಾಗೂ ಧರ್ಮರಾಜ್ ಇಬ್ಬರೂ ಸಹ ದೇವಸ್ಥಾನದ ಒಳಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಕುಸುಮಾ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದಕ್ಕೂ ತಾಂಡವ್ ದೇವಸ್ಥಾನದ ಗೇಟ್ ದಾಟುವುದಕ್ಕೂ ಒಂದೇ ಆಗಿದೆ. ಕೊನೆಗೆ ಕುಸುಮಾಗೆ ಇಲ್ಲಿಗೆ ತಾಂಡವ್ ಬಂದಿದ್ನಾ? ಎಂದು ತಿರುಗಿ ನೋಡುತ್ತಾ ಇದ್ದಾರೆ. ಧರ್ಮರಾಜ್‌ಗೂ ಸಹ ಯಾಕೋ ನನ್ನ ಮಗ ಇಲ್ಲಿಗೆ ಬಂದಿದ್ದಾನೆ ಎಂದು ಅನಿಸಿದೆ.
ಅಳುತ್ತಾ ಕುಳಿತ ಸುನಂದ
ಮನೆಯಿಂದ ಹೊರಗಡೆ ಬಂದು ಜಗಲಿ ಮೇಲೆ ಕುಳಿತು ಸುನಂದಾ ಅಳುತ್ತಾ ಕುಳಿತಿದ್ದಾಳೆ. ನನ್ನ ಮಗಳಿಗೆ ಈ ರೀತಿ ಅನ್ಯಾಯ ಮಾಡಲು ಮನಸ್ಸಾದರೂ ಹೇಗೆ ಬಂತು? ಎಂದು ನಾನು ಕೇಳುವ ಪ್ರಶ್ನೆಗಳಿಗೆ ನನ್ನ ಅಳಿಯ ಉತ್ತರಿಸಲೇಬೇಕು. ನನ್ನ ಮಗಳಿಗೆ ಆಗಿರುವ ಅನ್ಯಾಯ ನಾನೇ ಸರಿಪಡಿಸುತ್ತೇನೆ ಎಂದುಕೊಂಡು ಗೋಳಾಡುತ್ತಾ ಇದ್ದಾಳೆ. ನನ್ನ ಮಗಳು ಯಾವ ಮೋಸ ಮಾಡಿದ್ದಳು ಇನ್ನೊಬ್ಬರ ಜೊತೆ ಸಂಬಂಧ ಯಾಕೆ ಇಟ್ಟುಕೊಳ್ಳಬೇಕಾಗಿತ್ತು? ಹೆತ್ತ ಹೊಟ್ಟೆಗೆ ಎಷ್ಟೆಲ್ಲಾ ನೋವಾಗುತ್ತಿದೆ ಎಂದು ಕಣ್ಣೀರು ಹಾಕಿದ್ದಾಳೆ.


Click it and Unblock the Notifications











