Bhagyalakshmi: ಅಳಿಯನಿಗೆ ಸುನಂದ ಕಪಾಳಮೋಕ್ಷ .. ಕುಸುಮಾ ಮಾತಿಗೆ ಮಹೇಶ್ ತತ್ತರ
ತಾಂಡವ್‌ಗೆ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಶ್ರೇಷ್ಠ ತಂದೆ ತಾಯಿ ನೀಡುತ್ತಿರುವ ಟಾರ್ಚರ್‌ಗೆ ತಾಂಡವ್ ತಲೆ ಬ್ಲಾಂಕ್ ಆಗಿ ಹೋಗಿದೆ. ನಾನು ಏನು ಮಾತನಾಡುತ್ತಿದ್ದೇನೆ ಏನು ಮಾಡುತ್ತಿದ್ದೇನೆ ಎನ್ನುವ ಪರಿಜ್ಞಾನವೇ ಇಲ್ಲ. ಈಗ ತಾಂಬೂಲ ಬದಲಾಯಿಸಿಕೊಳ್ಳುವ ವೇಳೆ ದೇವಸ್ಥಾನದಿಂದ ನನ್ನ ತಾಯಿಗೆ ಹುಷಾರಿಲ್ಲ ಎಂದು ಓಡೋಡಿ ಬಂದಿದ್ದಾನೆ.
ತಾಂಡವ್‌ನ ಧರ್ಮರಾಜ್ ಹಾಗೂ ಕುಸುಮ ಇಬ್ಬರು ನೋಡಿದ್ದಾರೆ. ನನ್ನ ಮಗ ಇಲ್ಲಿಗೆ ಏಕೆ ಬಂದ ಎಂದು ತಲೆ ಕೆಡಿಸಿಕೊಳ್ಳುತ್ತಾ ಇದ್ದಾರೆ. ಇನ್ನು ಇದೇ ವೇಳೆ ಧರ್ಮರಾಜ್ ಮಗನಿಗೆ ಕಾಲ್ ಮಾಡಿದಾಗ ಬರ್ತಿದ್ದೇನೆ ಮನೆಯ ಕಡೆಯ ಹೊರಟಿದ್ದಾನೆ. ಆ ಕಡೆ ಸುನಂದ ಗೋಳಾಡುತ್ತಾ ತನ್ನ ಅಳಿಯನಿಗೋಸ್ಕರ ಕಾದಿದ್ದಾಳೆ. ಕುಸುಮ ಹೋಗಿ ಶ್ರೇಷ್ಠ ಬಳಿಯಲ್ಲಿ ನನ್ನ ಮಗ ಬಂದಿದ್ನಾ? ಎಂದು ಪ್ರಶ್ನೆ ಮಾಡಿದ್ದಾಳೆ. ಆದರೆ ಶ್ರೇಷ್ಠ ಇಲ್ಲ ಎಂದು ಸುಳ್ಳು ಹೇಳಿದ್ದಾಳೆ. ನಂತರ ಅಲ್ಲೇ ಇದ್ದ ಮಹೇಶ್ ಹಾಗೂ ಸುಂದರಿ ಅಯ್ಯೋ ಇವಮ್ಮ ಯಾಕೆ ಇಲ್ಲಿಗೆ ಬಂದರು ಎಂದು ಮುಖ ಮುಚ್ಚಿಕೊಳ್ಳುತ್ತಿದ್ದಾರೆ.

ಯಶೋಧ ಬಳಿ ಕುಸುಮಾ ಏನಾಯ್ತು ಯಾಕೆ ದೇವಸ್ಥಾನದಿಂದ ಹೊರಗಡೆ ಬಂದಿದ್ದೀರಾ ಎಂದು ಕೇಳಿದ್ದಾರೆ. ಯಶೋಧ ಆ ಹುಡುಗ ಯಾಕೋ ತಾಂಬೂಲ ಬದಲಾಯಿಸಿಕೊಳ್ಳುವ ವೇಳೆಗೆ ಓಡೋಡಿ ಹೋದ ಎಂದಿದ್ದಾರೆ. ನಂತರ ಮಹೇಶ್ ಹಾಗೂ ಆಕೆಯ ಪತ್ನಿ ಸುಂದರಿ ನೋಡಿ ಕುಸುಮಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಓ ಇವರೇನಾ ನಿಮ್ಮ ಬೀಗರು ಎಂದಿದ್ದಾರೆ. ಆಗ ಯಶೋಧ ಹೌದು ಇವರೇ ಆ ಹುಡುಗನ ತಂದೆ ತಾಯಿ ಎಂದು ಹೇಳಿದಾಗ ಕೋಪ ಮಾಡಿಕೊಂಡಿದ್ದಾರೆ.
ಏಟು ತಿಂದು ತಾಂಡವ್ ಶಾಕ್
ಸುನಂದ ತನ್ನ ಅಳಿಯ ತಾಂಡವ್‌ಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅತ್ತೆ ತನ್ನ ಕೆನ್ನೆಗೆ ಒಡೆಯುತ್ತಿದ್ದಾಗ ತಾಂಡವ್ ತಡೆದು ನಿಮಗೆ ಏನಾದರೂ ಹುಚ್ಚು ಹಿಡಿದಿದ್ಯಾ? ಯಾಕೆ ನನ್ನ ಕಪಾಳಕ್ಕೆ ಹೊಡೆಯುತ್ತಿದ್ದೀರಾ? ನಾನು ನಿಮ್ಮ ಮಗಳ ಗಂಡ ಎಂದು ಹೇಳಿದ್ದಾನೆ. ಹೌದು ನನ್ನ ಅಳಿಯ ಎಂದು ತಲೆಯ ಮೇಲೆ ಕೂರಿಸಿಕೊಂಡು ಮೆರೆಸಿದಕ್ಕೆ ಸರಿಯಾಗಿ ಮಾಡಿದ್ದೀರಾ? ನನ್ನ ಮಗಳಿಗೆ ಮೋಸ ಮಾಡಲು ನಿಮಗೆ ಮನಸಾದರೂ ಹೇಗೆ ಬಂತು ಎಂದು ಸುನಂದ ಪ್ರಶ್ನೆ ಮಾಡಿದ್ದಾಳೆ. ನಾನು ಪೂಜಿಸುವ ದೇವರಿಗಿಂತ ಹೆಚ್ಚಾಗಿ ನಿಮ್ಮನ್ನ ಹಾಡಿ ಹೊಗಳುತ್ತಿದ್ದೆ ಇನ್ನೇನಿದ್ದರೂ ಅಂಬಾರಿಯ ಮೇಲೆ ಕೂರಿಸಿ ಮೆರವಣಿಗೆ ಮಾಡುವುದೊಂದು ಬಾಕಿ ಇತ್ತು. ಆದರೆ ನೀವು ಮಾಡಿದ್ದಾದರೂ ಏನು ಎಂದು ಅಳಿಯನಿಗೆ ಪ್ರಶ್ನೆ ಮಾಡಿದ್ದಾಳೆ.

ಸುನಂದ ಪ್ರಶ್ನೆಗೆ ತಾಂಡವ್ ಸುಸ್ತು
ಅತ್ತೆ ನಾನೇನು ಮಾಡಿದೆ? ಯಾಕೆ ಈ ರೀತಿ ಆಡುತ್ತಿದ್ದೀರಾ? ಎಂದು ಕೇಳಿದಾಗ ನನ್ನ ಮಗಳನ್ನು ಹೊತ್ತುಕೊಂಡು ಸಾಕುತ್ತಿದ್ದೀರಾ ಎಂದು ನಾನು ನಿಮ್ಮನ್ನ ಮೆರೆಸುತ್ತಿದ್ದೆ. ಆದರೆ ನೀವು ನನ್ನ ಮಗಳಿಗೆ ಮೋಸ ಮಾಡಿಬಿಟ್ರಿ ನಾನು ನಿಮ್ಮ ಮೇಲೆ ಇಟ್ಟಿದ್ದ ನಂಬಿಕೆಗೆ ಮೋಸ ಮಾಡಿದ್ರಿ, ಎಂದು ತಾಂಡವ್‌ಗೆ ಸುನಂದ ಪ್ರಶ್ನೆ ಮಾಡುತ್ತಿದ್ದಾಳೆ. ನನ್ನ ಮಗಳು ಮನೆಯಲ್ಲಿ ಇರಬೇಕಾದರೆ ನೀವು ಇನ್ನೊಬ್ಬರ ಜೊತೆ ಹೇಗೆ ಅಕ್ರಮ ಸಂಬಂಧ ಇಟ್ಟುಕೊಂಡಿರಿ ಎಂದು ನೇರವಾಗಿ ಕೇಳಿದ್ದಾಳೆ. ಸುನಂದ ಆ ಪ್ರಶ್ನೆ ಕೇಳಿದ ತಕ್ಷಣವೇ ತಾಂಡವ್ ಶಾಕ್ ಆಗಿದ್ದಾನೆ.
ಬಯಲಾಗುತ್ತಾ ಶ್ರೇಷ್ಠ ನಾಟಕ?
ಮಹೇಶ ಹಾಗೂ ಸುಂದರಿಯನ್ನು ನೋಡಿ ಕುಸುಮಾ ಇವರೇಕೋ ನನಗೆ ಸರಿ ಬರುತ್ತಿಲ್ಲ ಎಂದು ಎನಿಸುತ್ತಿದೆ. ನೀವು ಇವರ ಮನೆಗೆ ನಾಳೆ ಹೋಗಿ ಅಕ್ಕ ಪಕ್ಕದ ಜನರನ್ನೆಲ್ಲ ಮೊದಲು ವಿಚಾರಿಸಿ. ಒಂದು ಕಡೆ ಅಲ್ಲ ಹತ್ತಾರು ಕಡೆ ವಿಚಾರಿಸಿ. ನಂತರ ಇವರ ಮಗನಿಗೆ ಮದುವೆ ಮಾಡಿಕೊಡಬೇಕಾ? ಬೇಡವ? ಎಂದು ಯೋಚನೆ ಮಾಡಿ, ನಿಮ್ಮ ನಿರ್ಧಾರವನ್ನ ತೆಗೆದುಕೊಳ್ಳಿ ಎಂದು ಯಶೋದ ಹಾಗೂ ಆಕೆಯ ಗಂಡನಿಗೆ ಹೇಳಿದ್ದಾಳೆ. ಕೊನೆಗೆ ಯಶೋಧಗೂ ಕುಸುಮಾ ಹೇಳುತ್ತಿರುವುದೇ ಸರಿ ಅನಿಸಿದೆ.
ಕುಸುಮಾ ಮಾತಿಗೆ ಶ್ರೇಷ್ಠಾ ಬೇಸರ
ಮಹೇಶ ಹಾಗೂ ಸುಂದರಿಗೆ ಕುಸುಮಾ ಮಾತುಗಳನ್ನು ಕೇಳಿ ಶಾಕ್ ಆಗುತ್ತಿದೆ. ಯಾಕೆಂದರೆ ಬಾಡಿಗೆ ಅಪ್ಪ- ಅಮ್ಮನಾಗಿದ್ದು ಈಗ ಎಲ್ಲಿಂದ ಮನೆಯನ್ನು ತರುತ್ತಾರೆ. ಅದಕ್ಕೂ ಸಹ ಬೇರೆ ರೀತಿಯಲ್ಲಿ ಅರೇಂಜ್ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಮುಂದೆ ಏನು ಮಾಡುವುದು ಎಂದು ತಿಳಿಯದೇ ಕಂಗಾಲಾಗಿ ಹೋಗಿದ್ದಾರೆ. ಇನ್ನು ಶ್ರೇಷ್ಠ ಸಹ ಕುಸುಮಾ ಮಾತು ಕೇಳಿ ಬೇಸರ ಮಾಡಿಕೊಂಡಿದ್ದಾಳೆ.


Click it and Unblock the Notifications











