Bhagyalakshmi: ಕಳಚಿ ಬೀಳುತ್ತಾ ಶ್ರೇಷ್ಠ- ತಾಂಡವ್ ಕಟ್ಟಿರುವ ಸುಳ್ಳಿನ ಸಾಮ್ರಾಜ್ಯ!?

By ಶೃತಿ ಹರೀಶ್ ಗೌಡ

ಶ್ರೇಷ್ಠ ಹಾಗೂ ತಾಂಡವ್ ಇಬ್ಬರೂ ಸಹ ದೇವಸ್ಥಾನಕ್ಕೆ ಬಂದಿದ್ದಾರೆ. ಇದೇ ವೇಳೆ ತಾಂಡವ್‌ನನ್ನು ಶ್ರೇಷ್ಠ ತಂದೆ ತಾಯಿ ಪ್ರಶ್ನೆ ಮಾಡುತ್ತಿದ್ದಾರೆ. ಯಾಕೆಂದರೆ ಹುಡುಗನ ತಂದೆ ತಾಯಿ ಯಾವ ರೀತಿ ಇರುತ್ತಾರೆ ಎಂಬುದರ ಮೇಲೆ ಹುಡುಗನ ಸಂಸ್ಕಾರ ನಿರ್ಣಯವಾಗುತ್ತದೆ ಎಂದು ಕುಸುಮಾ ಹೇಳಿದ ಹಿನ್ನೆಲೆಯಲ್ಲಿ ಅದೇ ರೀತಿ ಪ್ರಶ್ನೆಗಳನ್ನ ಮಾಡುತ್ತಿದ್ದಾರೆ. ತಾಂಡವ್, ಶ್ರೇಷ್ಠ ತಂದೆ ತಾಯಿ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಇದ್ದಾನೆ.

ನಗುನಗುತ್ತಲೇ ತಾಂಡವ್ ಉತ್ತರವನ್ನು ನೀಡುತ್ತಿದ್ದು ಶ್ರೇಷ್ಠ ತಂದೆ ತಾಯಿಗೂ ಸಹ ಖುಷಿಯಾಗುತ್ತಿದೆ. ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ ಎಂದು ಕೇಳಿದ್ದಕ್ಕೆ ಅವರು ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ನಿವೃತ್ತರಾಗಿದ್ದು ಮನೆಯಲ್ಲೇ ಇದ್ದಾರೆ ಎಂದು ಹೇಳಿದ್ದಾನೆ. ಇನ್ನೂ ಸರ್ಕಾರಿ ಕೆಲಸ ಎಂದರೆ ಕೇಳಬೇಕಾ? ಅದು ಅಲ್ಲದೇ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದವರಿಗೆ ಸ್ವಲ್ಪ ಸಂಸ್ಕಾರವಿರುತ್ತದೆ ಎಂದು ಶ್ರೇಷ್ಠ ತಂದೆ ಹೇಳಿದ್ದಾರೆ.

Bhagyalakshmi-serial

ನಿಮ್ಮ ತಾಯಿ ಯಾವುದಾದರೂ ಕಂಪನಿಗೆ ಕೆಲಸಕ್ಕೆ ಹೋಗುತ್ತಾರಾ ಎಂದು ಶ್ರೇಷ್ಠ ತಾಯಿ ಕೇಳಿದ್ದಕ್ಕೆ ಇಲ್ಲ ಅವರೇ ಒಂದು ಯೂನಿವರ್ಸಿಟಿ ಇದ್ದಂತೆ, ಅಕ್ಕಪಕ್ಕದ ಜನರಿಗೆಲ್ಲರಿಗೂ ಸಹ ತಮ್ಮಲ್ಲಿರುವ ಸಂಸ್ಕಾರವನ್ನು ಹಂಚುತ್ತಾರೆ ಎಂದು ತಾಂಡವ್ ಹೇಳಿದ್ದಾನೆ. ತಾಂಡವ್ ಈ ರೀತಿ ಮಾತನಾಡಿದ್ದನ್ನು ಕೇಳಿದ ಶ್ರೇಷ್ಠ ತಾಯಿಗೆ ತುಂಬಾ ಖುಷಿಯಾಗಿದೆ. ಈಗ ಅವರಿಬ್ಬರು ತಾಂಡವ್‌ನ ತಂದೆ ತಾಯಿಯನ್ನ ಭೇಟಿ ಮಾಡಲು ಬಹಳ ಉತ್ಸಾಹಕರಾಗಿದ್ದಾರೆ.

ಚಿಕ್ಕಿ ಮೇಲೆ ಕೋಪಗೊಂಡ ಗುಂಡಣ್ಣ

ಭಾಗ್ಯ ಓದುತ್ತಿರುವುದು ಪೂಜಾಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ಇದಕ್ಕಾಗಿ ಅಕ್ಕ ನೀನು ಮೊದಲಿನಂತೆ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದಿದ್ದರೆ ಆಗುತ್ತಾ ಇತ್ತು. ಯಾಕೆ ನೀನು ಓದಲು ಹೋಗುತ್ತಿದ್ದೀಯಾ? ನೀನು ಓದಲು ಹೋಗುತ್ತಿರುವುದು ನಂಗೆ ಸ್ವಲ್ಪವೂ ಸಹ ಇಷ್ಟವಿಲ್ಲ ಎಂದಿದ್ದಾಳೆ. ಗುಂಡಣ್ಣ, ಪೂಜಾ ಆಡುತ್ತಿರುವ ಮಾತಿಂದ ಕೋಪ ಮಾಡಿಕೊಂಡಿದ್ದಾನೆ. ಅಮ್ಮ ಈ ಚುಕ್ಕಿಗೆ ಸುಮ್ಮನೆ ಇರಲು ಹೇಳು ಇಲ್ಲದಿದ್ದರೇ ನನಗೆ ಕೆಟ್ಟ ಕೋಪ ಬರುತ್ತದೆ ಎಂದು ಹೇಳಿದ್ದಾನೆ.

Bhagyalakshmi-serial

ಮಹೇಶನನ ಮೇಕೆ ಕುಸುಮಾ ಕೋಪ

ಈ ಕಡೆ ಭಾಗ್ಯ, ಪೂಜಾಗೆ ಬೈದಿದ್ದಾಳೆ. ನನಗೆ ಅವಕಾಶ ಸಿಕ್ಕಿದೆ, ನಾನು ಓದಲು ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಇನ್ನೂ ದೇವಸ್ಥಾನದಲ್ಲಿ ತಾಂಡವ್, ತಂದೆ ಧರ್ಮರಾಜ್ ಗಾಡಿಗೆ ಮಹೇಶ್ ಗುದ್ದಿ ಬಂದಿದ್ದಾನೆ. ಅದನ್ನು ಕೇಳಲು ಹೋದ ಧರ್ಮರಾಜ್ ಮುಖದ ಮೇಲೆ ಹಣವನ್ನು ಎಸೆದು ಹೋಗಿದ್ದಾನೆ. ಈ ವಿಷಯವನ್ನು ಕುಸುಮಾ ಬಳಿಯೂ ಸಹ ಧರ್ಮರಾಜ್ ಹೇಳಿದ್ದು, ಎಲ್ಲಿದ್ದಾನೆ ಅವನು, ಅವನ ಮುಖಕ್ಕೆ ಉಗಿದು ಬರ್ತೀನಿ, ಅವನು ಯಾವ ಕಡೆ ಹೋದ ಹೇಳಿ ಎಂದು ಕುಸುಮಾ, ಧರ್ಮರಾಜ್ ಬಳಿ ಕೇಳಿದ್ದಾಳೆ.

ಕಳಚಿ ಬೀಳುತ್ತಾ ನಾಟಕ?

ತಾಂಡವ್ ಹೇಳಿದ ಮಾತಿಗೆ ಮಹೇಶ್ ತದ್ವಿರುದ್ಧವಾಗಿ ಬಂದಿದ್ದಾನೆ. ಅದು ಯಾವ ರೀತಿ ಎಂದರೆ ಎಲ್ಲಾ ಬೆರಳಿಗೂ ಉಂಗುರ ಹಾಕಿಕೊಂಡು ಕೋಟನ್ನು ಧರಿಸಿ, ಸ್ಟೈಲಿಶ್ ಆಗಿ ಕನ್ನಡಕ ಹಾಕಿಕೊಂಡು ಶ್ರೇಷ್ಠ ತಂದೆಯ ಮುಂದೆ ಬಂದು ನಿಂತಿದ್ದಾನೆ. ತಾಂಡವ್ ಹೇಳಿರುವ ಯಾವ ಗುಣಲಕ್ಷಣಗಳು ಸಹ ಡುಪ್ಲಿಕೇಟ್ ತಂದೆಯಲ್ಲಿ ಕಾಣಿಸುತ್ತಿಲ್ಲ. ಇನ್ನು ತಾಂಡವ್ ತಾಯಿಯೂ ಅಷ್ಟೇ ಸಂಸ್ಕೃತ ಸಂಪನ್ನಳು ಎಂದು ಹೇಳಿದ್ದನು‌.

ಮಹೇಶನ ಮೇಲೆ ತಾಂಡವ್ ಗರಂ

ಆಕೆಯೂ ಸಹ ಗ್ಲಾಸ್ ಹಾಕಿಕೊಂಡು ಎಲ್ಲಾ ಬೆರಳಿಗೆ ಉಂಗುರಗಳನ್ನ ಹಾಕಿಕೊಂಡು ಬಂದು ನಿಂತಿದ್ದಾಳೆ. ಇವರಿಬ್ಬರನ್ನು ನೋಡಿದ ತಾಂಡವ್‌ಗೆ ಕೋಪ ಬಂದಿದೆ‌. ಕೊಟ್ಟ ದುಡ್ಡಿಗೆ ಈ ರೀತಿಯಲ್ಲ, ರೆಡಿ ಮಾಡಿಕೊಂಡು ಬಂದು ನಿಂತಿದ್ದಾನಲ್ಲ ಎಂದು ತಾಂಡವ್ ಅಂದುಕೊಂಡಿದ್ದಾನೆ. ಶ್ರೇಷ್ಟ ತಂದೆ ತಾಯಿಗಂತೂ ಇವರಿಬ್ಬರನ್ನ ನೋಡಿ ಶಾಕ್ ಆಗಿದೆ.

More from Filmibeat

English summary
Bhagyalakshmi Kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X