Bhagyalakshmi: ಅಪ್ಪನ ಮೇಲೆ ದ್ವೇಷ ಕಾರಿದ ತನ್ವಿ: ಮದುವೆ ಸಂಭ್ರಮ ಬಿಟ್ಟು ಮಗಳಿಗಾಗಿ ಬರ್ತಾನಾ ತಾಂಡವ್!?
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಯಾರು ಊಹಿಸಿರದ ತಿರುವೊಂದು ಪಡೆದುಕೊಂಡಿದೆ. ತಾಂಡವ್ ಶ್ರೇಷ್ಠಾ ಜೊತೆಯಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುವುದಿಲ್ಲ ಎಂದೇ ಊಹಿಸಲಾಗಿತ್ತು. ಆದರೆ ತಾಂಡವ್ ಈಗ ಶ್ರೇಷ್ಠ ಜೊತೆಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆ. ಕಾವ್ಯ ಈ ಎಂಗೇಜ್ಮೆಂಟನ್ನು ತಡೆಯಬೇಕು ಎಂದುಕೊಂಡಿದ್ದಳು. ಆದರೆ ಶ್ರೇಷ್ಠಾ ಓಡಿ ಬಂದು ಕಿವಿಯಲ್ಲಿ ನನ್ನ ತಂದೆ ತಾಯಿಗೆ ಹಾರ್ಟ್ ಪ್ರಾಬ್ಲಮ್ ಇದೆ. ನೀನು ಏನಾದರೂ ಸತ್ಯ ಹೇಳಿದರೆ ನಾನು ನನ್ನ ತಂದೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ಕಾವ್ಯಳ ಬಾಯಿ ಮುಚ್ಚಿಸಿದ್ದಾಳೆ.
ಕಾವ್ಯಗೆ ತಾಂಡವ್ ಬಳಿ ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ಹೇಳಬೇಕು ಅಂದುಕೊಂಡಿದ್ದಾಳೆ. ಆದರೆ ಯಾವ ರೀತಿ ಹೇಳಬೇಕು ಎಂದು ತಿಳಿಯುತ್ತಿಲ್ಲ. ತಾಂಡವ್‌ಗೆ ಎಲ್ಲೋ ಒಂದು ಕಡೆ ಅಂಜಿಕೆ ಕಾಡುತ್ತಿದೆ ನನ್ನ ಅಮ್ಮನಿಗೆ ಏನಾದರೂ ನಾನು ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಚಾರ ಗೊತ್ತಾದರೆ ನನ್ನನ್ನು ಸುಮ್ಮನೆ ಬಿಡೋದಿಲ್ಲ ಎಂದು ಯೋಚನೆ ಮಾಡುತ್ತಿದ್ದಾನೆ. ಈ ಕಡೆ ತಾಂಡವ್ ಡೂಪ್ಲಿಕೇಟ್ ಅಪ್ಪ ಅಮ್ಮ ಪ್ರತಿ ಒಂದನ್ನು ವಿಡಿಯೋ ಮಾಡಿಕೊಳ್ಳುತ್ತಾ ಇದ್ದಾರೆ.

ಶ್ರೇಷ್ಠಾಗೆ ಮಾತ್ರ ತಾನು ಎಂಗೇಜ್ಮೆಂಟ್ ಮಾಡಿಕೊಂಡಿರುವುದು ಖುಷಿಯನ್ನ ತಂದಿದೆ. ಪದೇ-ಪದೇ ಎಂಗೇಜ್ಮೆಂಟ್ ವಿಷಯ ಬಂದಾಗ ಅದು ಏನಾದರೂ ಒಂದು ಕಾರಣದಿಂದ ಮುಂದೆ ಹೋಗುತ್ತಿತ್ತು. ಯಾವುದೇ ತೊಂದರೆಯಾಗದೆ ಶ್ರೇಷ್ಠಾ ಹಾಗೂ ತಾಂಡವ್ ಎಂಗೇಜ್ಮೆಂಟ್ ನಡೆದಿರುವುದು ಅವರ ತಂದೆ ತಾಯಿ ಹಾಗೂ ಶ್ರೇಷ್ಠಾಗೆ ತುಂಬಾನೇ ಖುಷಿ ತಂದಿದೆ.
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ತನ್ವಿ, ತಂದೆ ಸರಿಯಿಲ್ಲ ಎಂದ ಮಗಳು!
ತನ್ವಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟವನ್ನು ನಡೆಸುತ್ತಾ ಇದ್ದಳು. ಈಗ ಹೇಗೋ ವೈಷ್ಣವ್ ಬಂದು ರಕ್ತ ಕೊಟ್ಟ ಮೇಲೆ ಸರಿ ಹೋಗುತ್ತಿದ್ದಾಳೆ. ಸದ್ಯಕ್ಕೆ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತಿದೆ. ತನ್ವಿ ಯಾವಾಗ ಮಾತನಾಡುತ್ತಾಳೆ ಎಂಬ ಕಾತುರದಲ್ಲಿ ಮನೆಯವರು ಇದ್ದರು. ಸದ್ಯಕ್ಕೆ ತನ್ವಿ ಚೇತರಿಸಿಕೊಂಡಿದ್ದು ಮನೆಯವರ ಮುಖವನ್ನೆಲ್ಲ ನೋಡಿದ್ದಾಳೆ. ಭಾಗ್ಯಗೆ ಮಗಳು ತನ್ನ ಬಳಿ ಮಾತನಾಡುತ್ತಾ ಇರುವುದು ಸ್ವಲ್ಪ ಸಂತಸ ತಂದಿದೆ.
ಕುಸುಮ ಅವರು ಮೊಮ್ಮಗಳಿಗೆ ಧೈರ್ಯವನ್ನು ಹೇಳುತ್ತಾ ಇದ್ದಾರೆ ನೀನು ಏನು ಹೆದರಿಕೊಳ್ಳಬೇಡ ಅಜ್ಜಿ ನಿನ್ನನ್ನು ಬೈಯೋದಿಲ್ಲ ಎಂದು ಹೇಳಿದ್ದಾರೆ. ತನ್ವಿ ಅಂದು ಏನು ನಡೆಯಿತು ಎಂಬುದನ್ನು ನೆನಪಿಸಿಕೊಳ್ಳುತ್ತಾ ಇದ್ದಾಳೆ. ತನ್ನ ತಂದೆ ತನ್ನ ಮೇಲೆ ಕೈ ಮಾಡಲು ಬಂದಿದ್ದರು ನನಗೆ ನನ್ನ ತಂದೆ ಇಷ್ಟವಿಲ್ಲ ಎಂದು ಹೇಳುತ್ತಾ ಇದ್ದಾಳೆ. ನನ್ನ ಮೇಲೆ ನನ್ನ ತಂದೆ ಕೈ ಮಾಡಲು ಬಂದರು ಐ ಹೇಟ್ ಯು ಪಪ್ಪಾ ಎಂದು ಬಡ ಬಡಿಸುತ್ತಾ ಇದ್ದಾಳೆ. ಭಾಗ್ಯಗೆ ಸ್ವಲ್ಪ ಅರ್ಥವಾಗುತ್ತಾ ಇದೆ ಆದರು ಕೂಡ ಮಗಳ ಪರಿಸ್ಥಿತಿ ಕಂಡು ಕಣ್ಣೀರನ್ನು ಹಾಕುತ್ತಾ ಇದ್ದಾಳೆ.

ಮಗಳನ್ನು ನೋಡಲು ಬರುತ್ತಾನ ತಾಂಡವ್..?!
ತಾಂಡವ್ ತನ್ನ ಮಗಳನ್ನು ನೋಡಲು ಬರುತ್ತಾನಾ ಎಂಬ ಕುತೂಹಲ ಎಲ್ಲರಲ್ಲೂ ಕೂಡ ಮನೆ ಮಾಡಿದೆ. ಕಾವ್ಯ ತನ್ವಿಗೆ ಆಕ್ಸಿಡೆಂಟ್ ಆಗಿರುವ ವಿಚಾರವನ್ನು ತಾಂಡವ್ ಬಳಿ ಹೇಳುತ್ತಾಳ ನೋಡಬೇಕು. ಯಾಕೆಂದರೆ ತಾಂಡವ್ ಈಗ ಶ್ರೇಷ್ಠಾಳನ್ನು ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಸಂಭ್ರಮದಲ್ಲಿ ಇದ್ದಾನೆ. ಹೀಗಾಗಿ ತಾಂಡವ್‌ಗೆ ವೈಷ್ಣವ್, ಕುಸುಮಾ, ಭಾಗ್ಯ ಪದೇ ಪದೇ ಕಾಲ್ ಮಾಡಿರುವುದು ಗೊತ್ತಿಲ್ಲ.
ತನ್ವಿಯನ್ನು ತಾಂಡವ್ ಬಹಳಷ್ಟು ಹಚ್ಚಿಕೊಂಡಿದ್ದನು. ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ತಿಳಿದುಕೊಂಡ ಕೂಡಲೇ ಅಲ್ಲಿಂದ ಹೊರಡಲಿದ್ದು, ಶ್ರೇಷ್ಠಾ ತಾಂಡವ್‌ಗೆ ಮದುವೆಯಾಗಿರುವ ವಿಚಾರವನ್ನು ತನ್ನ ಮನೆಯವರ ಮುಂದೆ ಹೇಳುತ್ತಾಳ ಎಂಬುದೇ ಈಗ ಹುಟ್ಟಿಕೊಂಡಿರುವ ಕುತೂಹಲವಾಗಿದೆ.


Click it and Unblock the Notifications











