Bhagyalakshmi: ಶ್ರೇಷ್ಠಾ ಸ್ವಾರ್ಥ; ಆತಂಕದಲ್ಲಿ ಭಾಗ್ಯ ಹಾಗೂ ಕುಟುಂಬ

By ಶೃತಿ ಹರೀಶ್ ಗೌಡ

ಈ ಕಡೆ ಮಗಳು ಅಪಘಾತದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಅತ್ತ ತಾಂಡವ್ ಯಾವುದರ ಪರಿವೆ ಇಲ್ಲದೆ ಮತ್ತೊಂದು ಎಂಗೇಜ್ಮೆಂಟ್ ಸಿದ್ಧತೆಯಲ್ಲಿದ್ದಾನೆ. ಎಲ್ಲರಿಂದಲೂ ದೂರವಾಗಿರುವ ತಾಂಡವ್‌ಗೆ ಈಗ ತನ್ನ ಮಕ್ಕಳು ಎನ್ನುವ ಮಮಕಾರವು ಹೋಗಿದೆ. ತನ್ವಿ ನನ್ನ ತಂದೆ 10 ಸಾವಿರ ಕೊಡುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡು ತಾಂಡವ್ ಬಳಿ ಹೋಗಿದ್ದಳು.

ಶ್ರೇಷ್ಠಾ ಮಧ್ಯಪ್ರವೇಶದಿಂದಾಗಿ ತನ್ವಿ ತನ್ನ ಅಪ್ಪ ಸರಿ ಇಲ್ಲ ಎಂದು ಮುಖಕ್ಕೆ ಹೊಡೆದ ರೀತಿ ಹೇಳಿ ಬಂದಿದ್ದಳು. ಈ ವೇಳೆ ತನ್ವಿಗೆ ಅಪಘಾತವಾಗಿದ್ದು ಸಾಕಷ್ಟು ರಕ್ತಸ್ರಾವವಾಗಿದೆ. ಬ್ಲಡ್ ಅರೇಂಜ್ ಮಾಡಲು ತಾಂಡವ್‌ಗೆ ಭಾಗ್ಯ ಫೋನ್ ಮಾಡಿ ಸುಸ್ತಾಗಿದ್ದಾಳೆ. ಕೊನೆಯ ಅಸ್ತ್ರ ಎಂಬಂತೆ ಕುಸುಮಾ ಕೂಡ ತನ್ನ ಮಗನಿಗೆ ಫೋನ್ ಮಾಡುತ್ತಾ ಇದ್ದಾಳೆ.

Bhagyalakshmi serial Written Update on january 9th episode

ಶ್ರೇಷ್ಠ ಮನೆಗೆ ತಾಂಡವ್ ಹೋಗಿದ್ದಾನೆ. ಅಲ್ಲಿ ಡುಪ್ಲಿಕೇಟ್ ಅಪ್ಪ-ಅಮ್ಮ ನೀಡುತ್ತಿರುವ ಹಾವಳಿಗೆ ಸುಸ್ತಾಗಿದ್ದಾನೆ. ಆದರೂ ಸಹ ಬುದ್ಧಿ ಕಲಿಯುವಂತೆ ಕಾಣುತ್ತಿಲ್ಲ. ಶ್ರೇಷ್ಠಾ ಹೇಳಿದ ತಾಳಕ್ಕೆ ತಕ್ಕಂತೆ ಕುಣಿದುಕೊಂಡು ಎಂಗೇಜ್ಮೆಂಟ್‌ಗೆ ರೆಡಿಯಾಗುತ್ತಾ ಇದ್ದಾನೆ. ಶ್ರೇಷ್ಠ ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ ಕೂಡ ಮಗಳ ಆಸೆಗೆ ವಿರುದ್ಧವಾಗಿ ಹೋಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ಎಂಗೇಜ್ಮೆಂಟ್ ಮಾಡುತ್ತಾ ಇದ್ದಾರೆ.

ಈ ಕಡೆ ಕಾವ್ಯ, ಶ್ರೇಷ್ಠ ಗೆ ಮತ್ತೆ ಉಪದೇಶ ಮಾಡುತ್ತಾ ಇದ್ದಾಳೆ. ಕುಸುಮಾ ಆಂಟಿ ಹಾಗೂ ಭಾಗ್ಯ ನೆಮ್ಮದಿ ಹಾಗೂ ಖುಷಿಯ ಮೇಲೆ ನೀನು ಸಮಾಧಿಯನ್ನು ಕಟ್ಟಿ ಖುಷಿ ಪಡುತ್ತಾ ಇದ್ದೀಯಾ ಎಂದು ಬೈಯುತ್ತಿದ್ದಾಳೆ. ಆದರೆ ಶ್ರೇಷ್ಠಗೆ ತನ್ನನ್ನು ಮನೆಯಿಂದ ಹೊರಗಡೆ ಹಾಕಿದ್ದೆ ದೊಡ್ಡ ತಪ್ಪು ಅಂತ ಕಾಣಿಸುತ್ತಿದೆ. ಅಂದು ನನ್ನನ್ನೇ ಮನೆಯಿಂದ ಹೊರಗಡೆ ಹಾಕಿದರು, ನಾನು ಕೂಡ ಅವರನ್ನು ಮನೆಯಿಂದ ಹೊರಗಡೆ ಆಗುತ್ತೇನೆ ಎಂದು ಹೇಳುತ್ತಿದ್ದಾಳೆ.

Bhagyalakshmi serial Written Update on january 9th episode

ಈಗ ಶ್ರೇಷ್ಠ ಮುಂದೆ ಇರುವ ಗುರಿ ಎಂದರೆ ತಾಂಡವ್‌ನ ಮದುವೆಯಾಗಿ ತಾಳಕ್ಕೆ ತಕ್ಕಂತೆ ಕುಣಿಸುವುದೇ ಆಗಿದೆ. ಮನೆಗೆ ಬಂದವರು ತಾಂಡವ್‌ನನ್ನು ನೋಡಿ 45 ವರ್ಷ ಮೇಲೆ ಆಗಿರುವಂತೆ ಕಾಣಿಸುತ್ತಾ ಇದೆ ಎಂದು ತಾಂಡವ್ ಮುಂದೆ ಹೇಳಿದ್ದು ಇದು ತಾಂಡವ್ ಬೇಸರಕ್ಕೆ ಕಾರಣವಾಗಿದೆ. ಡೂಪ್ಲಿಕೇಟ್ ಅಪ್ಪ ಅಮ್ಮ ಸಹ ತಾಂಡವ್‌ಗೆ ಇರಿಟೇಟ್ ಆಗುವ ರೀತಿಯಲ್ಲಿಯೇ ನಡೆದುಕೊಳ್ಳುತ್ತಾ ಇದ್ದಾರೆ.

ಸ್ವಾರ್ಥದಿಂದ ನಡೆದುಕೊಂಡ ಶ್ರೇಷ್ಠಾ..!

ಶ್ರೇಷ್ಠಾಗೆ ಭಾಗ್ಯ ತನ್ನ ಗಂಡ ಎಲ್ಲಿ ಇದ್ದಾರೆ ಎಂದು ಕೇಳಿಕೊಂಡು ಫೋನ್ ಮಾಡಿದ್ದಾಳೆ. ಯಾಕೆ ಎಂದು ಶ್ರೇಷ್ಠಾ ಕೇಳಿದಾಗ ಭಾಗ್ಯ, ತನ್ವಿಗೆ ಆಕ್ಸಿಡೆಂಟ್ ಆಗಿದೆ ಅವಳಿಗೆ ಈಗ ಬ್ಲಡ್ ಅವಶ್ಯಕತೆ ಇದೆ. ತನ್ವಿ ಹಾಗೂ ತಾಂಡವ್ ಇಬ್ಬರ ಬ್ಲಡ್ ಗುಂಪು ಒಂದೇ ಆಗಿದ್ದು ಅವರು ಬಂದರೆ ರಕ್ತ ಕೊಡಬಹುದು ಎಂದು ಹೇಳಿದ್ದಾಳೆ. ಒಮ್ಮೆ ಶ್ರೇಷ್ಠಾ ಯೋಚಿಸಿ ನೋಡಿದ್ದಾಳೆ. ತಾಂಡವ್‌ಗೆ ಏನಾದರೂ ಈ ವಿಷಯ ಗೊತ್ತಾದರೆ ಎಂಗೇಜ್ಮೆಂಟ್ ಬಿಟ್ಟು ಓಡಿ ಹೋಗುತ್ತಾನೆ. ಆಗ ನನ್ನ ಮದುವೆ ಮತ್ತಷ್ಟು ಮುಂದಕ್ಕೆ ಹೋಗುತ್ತದೆ ಎಂದುಕೊಂಡು ಭಾಗ್ಯ ಬಳಿಯಲ್ಲಿ ಸುಳ್ಳು ಹೇಳಿದ್ದಾಳೆ.

ಆಕ್ಸಿಡೆಂಟ್ ವಿಷಯ ತಿಳಿದರೂ ನಾಟಕ

ನೆಟ್ವರ್ಕ್ ಸಿಗದ ರೀತಿಯಲ್ಲಿ ಮಾತನಾಡಿ ಫೋನ್ ಶ್ರೇಷ್ಠಾ ಕಟ್ ಮಾಡಿದ್ದಾಳೆ. ಕಾವ್ಯ, ಭಾಗ್ಯ ಯಾಕೆ ಫೋನ್ ಮಾಡಿದ್ದರು? ಎಂದು ಕೇಳಿದ್ದಕ್ಕೆ ತನ್ನ ಗಂಡ ಎಲ್ಲಿದ್ದಾನೆ ಎಂದು ಕೇಳಿಕೊಂಡು ಫೋನ್ ಮಾಡಿದ್ದಾಳೆ. ನಾನೇನು ಅವಳ ಗಂಡನ ಪಿಎನಾ? ಎಂದು ಕಾವ್ಯ ಬಳಿ ವ್ಯಂಗ್ಯವಾಡಿದ್ದಾಳೆ. ನಾನು ನನ್ನ ಎಂಗೇಜ್ಮೆಂಟ್ ಮಾಡಿಕೊಳ್ಳಲು ತುಂಬಾ ಚೆನ್ನಾಗಿ ರೆಡಿಯಾಗುತ್ತಾ ಇದ್ದೇನೆ. ಅದಕ್ಕೂ ಕೂಡ ಕಲ್ಲು ಹಾಕಲು ಬರುತ್ತಾರೆ ಎನ್ನುತ್ತಾಳೆ. ಕಾವ್ಯ ಈ ವೇಳೆ ನಿನ್ನ ಅಪ್ಪನ ಹಾರ್ಟ್ ವೀಕ್ ಇಲ್ಲ ಎಂದಿದ್ದರೆ ಎಲ್ಲಾ ಸತ್ಯ ನಾನೇ ಹೇಳಿಬಿಡುತ್ತಿದ್ದೆ ಎಂದು ಶ್ರೇಷ್ಠಾಗೆ ಹೇಳಿದ್ದಾಳೆ.

ತನ್ವಿಗೆ ಅರೆಂಜ್ ಆಗದ ಬ್ಲಡ್

ಭಾಗ್ಯ ಎಲ್ಲಾ ಕಡೆ ಬ್ಲಡ್ ಹುಡುಕಿ ಹುಡುಕಿ ಸುಸ್ತಾಗಿದ್ದಾಳೆ. ಇದೇ ವೇಳೆ ಡಾಕ್ಟರ್ ಬಂದು ಬ್ಲಡ್ ಅರೆಂಜ್ ಆಯ್ತಾ? ಎಂದು ಕೇಳಿದಾಗ ಭಾಗ್ಯ ನೀವೇ ಬ್ಲಡ್ ಅರೆಂಜ್ ಮಾಡಿಕೊಳ್ಳಿ ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದು ಹೇಳಿದ್ದಾಳೆ. ವೇಳೆ ಡಾಕ್ಟರ್ ನಾವು ಕೂಡ ಎಲ್ಲಾ ಕಡೆ ಹುಡುಕಿಸಿದ್ದೇವೆ. ಆದರೆ ಎಲ್ಲಿಯೂ ಕೂಡ ನಮಗೂ ಸಿಕ್ಕಿಲ್ಲ ಆದಷ್ಟು ಬೇಗ ಬ್ಲಡ್ ಅರೇಂಜ್ ಮಾಡಿ ಎಂದಿದ್ದಾರೆ.

ಮಗಳಿಗಾಗಿ ತಾಂಡವ್ ಬರ್ತಾನಾ?

ಈ ವೇಳೆ ಭಾಗ್ಯ, ತನ್ವಿ ತಂದೆ ಹಾಗೂ ತನ್ವಿಯ ಬ್ಲಡ್ ಒಂದೇ ಗ್ರೂಪ್ ಅವರು ಸಿಕ್ಕರೆ ಆದಷ್ಟು ಬೇಗ ಬ್ಲಡ್ ಅರೇಂಜ್ ಆಗುತ್ತದೆ ಎಂದು ಭಾಗ್ಯ ಹೇಳಿದ್ದಾಳೆ. ಬೇಗನೆ ಅರೇಂಜ್ ಮಾಡಿದರೆ ತನ್ವಿಯ ಜೀವಕ್ಕೆ ಆಗುವ ಅಪಾಯ ತಪ್ಪಿಸಬಹುದು ಎಂದು ಡಾಕ್ಟರ್ ಹೇಳಿದಾಗ ಭಾಗ್ಯಗೆ ಮತ್ತಷ್ಟು ಭಯವಾಗಿದೆ. ಹೇಗಾದರೂ ಮಾಡಿ ನನ್ನ ಮಗಳನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾಳೆ. ಮಗಳ ಜೀವ ಕಾಪಾಡಲು ತಾಂಡವ್ ಬರುತ್ತಾನಾ? ಎಂಬುದೇ ಕುತೂಹಲವಾಗಿದೆ.

More from Filmibeat

English summary
Bhagyalakshmi kannada serial today update. Here is the details about bhagya calling shresta enquiries where is tandav , but shresta lying.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X