Bhagya Lakshmi: ಮಗನ ಬಗ್ಗೆ ಅಪ್ಪನಿಗೆ ಅನುಮಾನ.. ವರ್ಕ್‌ಔಟ್ ಆಗುತ್ತಾ ಶ್ರೇಷ್ಠಾ ಪ್ಲ್ಯಾನ್?

By ಎಸ್ ಸುಮಂತ್

ತಾಂಡವ್‌ಗೆ ಹೇಗಾದರೂ ಮಾಡಿ ಭಾಗ್ಯಾಳ ಓದನ್ನು ನಿಲ್ಲಿಸಬೇಕು. ಆದರೆ, ಮಾಡಿದ ಪ್ರಯತ್ನಗಳೆಲ್ಲಾ ಫೇಲ್ ಆಗಿದೆ. ಹೀಗಾಗಿ ಒಳ್ಳೆಯವನ ಥರ ಡ್ರಾಮಾ ಶುರು ಮಾಡಿದ್ದಾನೆ. ಇದನ್ನು ಮನೆಯವರೆಲ್ಲಾ ನಂಬಿದ್ದಾರೆ. ತಾಂಡವ್ ಬದಲಾವಣೆಗಳು ಅಪ್ಪನ‌ ಮನಸ್ಸಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದೆ.

ತಾಂಡವ್‌ ಭಾಗ್ಯಳಿಗೆ ಡಿವೋರ್ಸ್ ಕೊಟ್ಟು, ಶ್ರೇಷ್ಠಾಳನ್ನು ಮದುವೆಯಾಗುವುದಕ್ಕೆ ಕಾಯುತ್ತಿದ್ದಾನೆ. ಅದಕ್ಕೆ ಬೇಕಾದ ಎಲ್ಲಾ ದಾರಿಗಳನ್ನು ಸುಲಭ ಮಾಡಿಕೊಳ್ಳುತ್ತಿದ್ದಾನೆ. ಭಾಗ್ಯಾಳಿಗೆ ಪ್ರೀತಿ ತೋರಿಸಿ, ಮೋಸದ ಹಾದಿಯಲ್ಲಿ ನಡೆಸುತ್ತಿದ್ದಾನೆ. ಆದಷ್ಟು ಬೇಗ ಕುಸುಮಾಳಿಗೆ ಈ ಸತ್ಯ ಗೊತ್ತಾದರೆ ಭಾಗ್ಯಾಳ ಜೀವನವೂ ಉಳಿಯುತ್ತೆ.

Bhagyalakshmi-Serial

ಅಜ್ಜಿಯನ್ನು ಮನೆಗೆ ಕರೆಸಿದ ತಾಂಡವ್

ಕುಸುಮಾಳಿಗೂ ಗೊತ್ತಾಗದ ಹಾಗೇ ತಾಂಡವ್, ಅಕ್ಷರಾಭ್ಯಾಸ ಪೂಜೆ ಏರ್ಪಡಿಸಿದ್ದಾನೆ. ಈ ಪ್ರೋಗ್ರಾಂಗೆ ಅಜ್ಜಿಯನ್ನು ಕರೆಸಿದ್ದಾನೆ. ಅದರಲ್ಲೂ ಕುಸುಮಾಗೆ ಚಿಕ್ಕತ್ತೆ. ಬಂದಾಗಿನಿಂದ ಒಂದೇ ಸಮ ಸೊಸೆಯನ್ನ ಬಯ್ಯುತ್ತಲೇ ಇದ್ದಾರೆ. ಅದರಲ್ಲೂ ಭಾಗ್ಯಾಳ ಅಕ್ಷರಾಭ್ಯಾಸದ ಬಗ್ಗೆ ಕೇಳಿ ಮತ್ತಷ್ಟು ಕಿರುಚಾಡಿದ್ದಾರೆ. ಕುಸುಮಾಗೆ ಇದೇ ದೊಡ್ಡ ತಲೆನೋವಾಗಿದೆ. ಹೇಗಾದರೂ, ಮಾಡಿ ಅತ್ತೆಯನ್ನು ಸಮಾಧಾನ ಮಾಡಬೇಕು ಎಂದುಕೊಂಡಿದ್ದಾಳೆ. ಆದರೂ ಅದು ಸಾಧ್ಯವಾಗಿಲ್ಲ. ಕುಸುಮಾಗೆ ಗೊಂದಲ ಸೃಷ್ಟಿಸಿಟ್ಟಿದ್ದಾನೆ. ಈ ಗೊಂದಲವನ್ನು ಕಾವೇರಿ ಬಳಿ ಬಗೆಹರಿಸಿಕೊಂಡಿದ್ದಾಳೆ. ಸದ್ಯ ಸೊಸೆಯನ್ನು ಓದಿಸುವುದರಿಂದ ಹಿಂದೆ ಸರಿದಿಲ್ಲ.

ಅಪ್ಪನಿಗೆ ಸಿಗುತ್ತಾ ಉತ್ತರ?

ಇತ್ತ ಕುಸುಮಾಗೆ ಪಿತ್ತ ನೆತ್ತಿಗೇರಿದೆ. ಮಗನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಆದ್ರೆ ತಾಂಡವ್ ನೈಸ್ ಮಾಡಿದ್ದಾನೆ. ಅಜ್ಜಿಯನ್ನು ನೋಡಿ ಎಷ್ಟೋ ವರ್ಷಗಳಾಗಿದೆ. ನೋಡು ಹೇಗೆ ಬಡ ಬಡ ಅಂತ ಮಾತಾಡ್ತಾರೆ. ಇರ್ಲಿ ಬಿಡಿ. ನಾನೇ ಕರೆಸಿದ್ದು ಅಂತ ಹೇಳಿದಾಗ ಕುಸುಮಾ ಒಂದಷ್ಟು ಮನಸ್ಸಲ್ಲಿಯೇ ಗೊಣಕಿಕೊಂಡು ಸುಮ್ಮನಾಗಿದ್ದಾಳೆ. ಆದರೆ ಈ ಎಲ್ಲಾ ಮಾತುಕತೆಯನ್ನು ಕೇಳಿ ಅಪ್ಪನಿಗೆ ಅನುಮಾನ ಬಂದಿದೆ. ತಾಂಡವ್ ಏನೋ ಮಾಡಲು ಹೊರಟಿದ್ದಾನೆ ಎಂಬುದಂತು ಅರ್ಥವಾಗಿದೆ.

Bhagyalakshmi-Serial

ಶ್ರೇಷ್ಠಾ ಪ್ಲ್ಯಾನ್ ಪ್ಲಾಫ್

ಪೂಜೆಯನ್ನು ಹಾಳು ಮಾಡಬೇಕು ಎಂಬುದು ತಾಂಡವ್ ಉದ್ದೇಶ. ಹೀಗಾಗಿಯೇ ಅದಕ್ಕೆ ತಕ್ಕನ ಹಾಗೇ ಇರುವ ಶ್ರೇಷ್ಠಾಳನ್ನ ಮನೆಗೆ ಕರೆಸಿದ್ದಾನೆ. ಶ್ರೇಷ್ಠಾಗೆ ಮೊದಲೇ ಭಾಗ್ಯಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂಬ ಬಯಕೆ. ಅದೇ ಕಾರಣಕ್ಕೆ ಈಗ ಸಮಯ ಸಿಕ್ಕಾಗಲೆಲ್ಲಾ ತಾಂಡವ್ ಮನೆಗೆ ಬಂದು ಜಾಗರಣೆ ಮಾಡುತ್ತಾಳೆ. ಇವತ್ತು ಕಾರ್ಯಕ್ರಮದಲ್ಲಿ ಏನೋ ಮಾಸ್ಟರ್ ಪ್ಲ್ಯಾನ್ ಮಾಡುತ್ತೀನಿ ಅಂತ ಹೋಗಿ, ಅಡುಗೆ ಮನೆಯಲ್ಲಿ ಭಾಗ್ಯಾಳ ಅಮ್ಮನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸುನಂದಾಳ ಮಾತು ಕೇಳಿಸಿಕೊಳ್ಳಲಾಗದೆ ವಾಪಾಸ್ ಆಗಿದ್ದಾಳೆ. ಪ್ಲ್ಯಾನ್ ಅಲ್ಲೇ ಉಲ್ಟಾ ಆಗಿದೆ.

ಅಡುಗೆ ಹಾಳು ಮಾಡಿದ ತಾಂಡವ್

ತಾಂಡವ್‌ಗೆ ಬೇರೆನೋ ಮಾಡುತ್ತಾಳೆ ಶ್ರೇಷ್ಠಾ ಎಂಬ ನಂಬಿಕೆ ಇತ್ತು. ಆದರೆ ಅದು ಅಡುಗೆ ಹಾಳು ಮಾಡುವ ಕೆಲಸ ಎಂದು ಗೊತ್ತಾದಾಗ ಜಗಳವಾಡಿದ. ಆದರೆ, ಶ್ರೇಷ್ಠಾ ಇದೆ ಐಡಿಯಾ ವರ್ಕೌಟ್ ಆಗೋದು ಅಂತ ಹೇಳಿದಾಗ ಓಕೆ ಅಂತ ಒಪ್ಪಿಕೊಂಡ. ಆದರೆ ತಾಂಡವ್‌ಗೆ ಉಪ್ಪು ಯಾವುದು, ಸಕ್ಕರೆ ಯಾವುದು ಎಂಬುದು ಗೊತ್ತಿಲ್ಲ. ಹೀಗಾಗಿಯೇ ಶ್ರೇಷ್ಠಾಳ ಜೊತೆಗೆ ಕಾಲ್‌ನಲ್ಲಿ ಮಾತನಾಡಿಕೊಂಡು ಹಾಗೋ ಹೀಗೋ ಎಲ್ಲದಕ್ಕೂ ಉಪ್ಪು, ಖಾರದ ಪುಡಿ ಬೆರೆಸಿದ. ಹಿಂದೆ ತಿರುಗುವಷ್ಟರಲ್ಲಿ. ಅಮ್ಮ‌ ಅಲ್ಲಿಯೇ ನಿಂತಿದ್ದಾರೆ. ಅದನ್ನು ನೋಡಿ ಶಾಕ್ ಆದ. ಆದ್ರೆ ಜ್ಯೂಸ್ ಮಾಡಲು ಬಂದೆ ಅಂತ ನೆಪ ಹೇಳಿ ತಪ್ಪಿಸಿಕೊಂಡ.

More from Filmibeat

English summary
Colors Kannada Bhagya lakshmi serial Written Update on July 7th th episode. Here is the details Tandav new plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X