Bhagyalakshmi: ಕುಡಿದ ಮತ್ತಿನಲ್ಲಿ ನೀನು ಮಗಳಲ್ಲವೆಂದ ತಾಂಡವ್.. ಮನೆಯಲ್ಲೆಲ್ಲಾ ರಂಪಾಟ..!

By ಎಸ್ ಸುಮಂತ್

ಮನೆಯ ಎಲ್ಲಾ ಜವಾಬ್ದಾರಿಗಳನ್ನು ಭಾಗ್ಯಾಳ ಹೆಗಲ ಮೇಲೆ ಹಾಕಿ ಎರಡೇ ಎರಡು ದಿನ ನೆಮ್ಮದಿಯಾಗಿ ಇದ್ದು ಬರೋಣಾ ಅಂತ ಕುಸುಮಾ ತವರು ಮನೆಗೆ ಹೋಗಿದ್ದಾಳೆ. ಮಾವನು ಇಲ್ಲದ ಕಾರಣ ಭಾಗ್ಯಾಳಿಗೆ ಹೆಚ್ಚಿನ ಕೆಲಸವಾಗಿದೆ. ಹಾಗಂತ ಅದಕ್ಕೆಲ್ಲ ಹೆದರುವವಳೇ ಅಲ್ಲ ಈ ಭಾಗ್ಯಾ. ಸಲೀಸಾಗಿ ಎಲ್ಲಾ ಕೆಲಸವನ್ನು ಮಾಡಿ ಮುಗಿಸಿದ್ದಾಳೆ. ಮನೆ ಕೆಲಸ, ಅಡುಗೆ ಕೆಲಸ, ಮಕ್ಕಳ ಓದು ಎಲ್ಲವೂ.

ಗಂಡನ ಜವಾಬ್ದಾರಿಯೂ ತನ್ನದೇ ಅಲ್ಲವೆ. ಅದಕ್ಕಾಗಿ ರಾತ್ರಿಯಾದರೂ ಬಾರದ ತಾಂಡವ್‌ಗಾಗಿ ಕಾದು ಕುಳಿತಿದ್ದಾಳೆ. ಜೊತೆಗೆ ಫೋನ್ ಮಾಡಿ ವಿಚಾರಿಸುವ ಪ್ರಯತ್ನವನ್ನು ಮಾಡಿದ್ದಾಳೆ. ಆದರೆ, ತಾಂಡವ್ ಅದ್ಯಾವುದಕ್ಕೂ ಸೊಪ್ಪು ಹಾಕುತ್ತಿಲ್ಲ. ಕುಡಿದ ಮತ್ತಿನಲ್ಲಿ ಶ್ರೇಷ್ಠಾ ಮಾತ್ರ ಮುಖ್ಯ ಎನಿಸಿದೆ. ಅದಕ್ಕೆ ಭಾಗ್ಯಾಳ ಕರೆಯನ್ನೇ ನೆಗ್ಲೆಕ್ಟ್ ಮಾಡಿದ್ದಾನೆ.

 Bhagyalakshmi serial Written Update on June 10th episode

ಕುಡಿದು ಮನೆಗೆ ಬಂದ ತಾಂಡವ್

ತಾಂಡವ್ ಶ್ರೇಷ್ಠಾಳ ಜೊತೆಗೆ ಹೊರ ಹೋಗಿದ್ದ. ಅಮ್ಮ ಊರಿಗೆ ಹೋಗಿದ್ದೆ ತಡ ರೆಕ್ಕೆ ಬಿಚ್ಚಿದಂತೆ ಆಗಿತ್ತು. ಸ್ವೇಚ್ಛೆಯಾಗಿ ಹಾರಾಡಲು ಹೋಗಿದ್ದ. ಶ್ರೇಷ್ಠಾ ಡ್ರೆಸ್ ನೋಡಿ ಇರಿಸು, ಮುರಿಸು ಮಾಡಿಕೊಂಡು, ಜೊತೆಯಲ್ಲಿ ಕೂತು ಕಂಠ ಪೂರ್ತಿ ಕುಡಿದ. ಬಳಿಕ ಶ್ರೇಷ್ಠಾಳಿಗೆ ತಾಳಿಯನ್ನು ಕಟ್ಟಲು ಹೋಗಿ ಸುಮ್ಮನಾದ. ಶ್ರೇಷ್ಠಾ ಬ್ರೇಕಪ್ ನಾಟಕ ಮಾಡಿ ಹೊರಟಾಗ ಕುಡಿದ ಸ್ಥಿತಿಯಲ್ಲಿಯೇ ಮನೆಗೆ ಬಂದಿದ್ದಾನೆ.

ನೀನು ಮಗಳೆ ಅಲ್ಲ ಎಂದ ತಾಂಡವ್

ಭಾಗ್ಯಾ ಮನೆಯಲ್ಲಿ ಅತ್ತೆ ಮಾವ ಇಲ್ಲ ಅಂತ, ಬೇಗ ಬೇಗೆ ಎಲ್ಲಾ ಕೆಲಸ ಮಾಡಿ ಮುಗಿಸಿ, ಮಕ್ಕಳಿಗೆ ಹೋಂ ವರ್ಕ್ ಮಾಡಿಸಿ, ಊಟ ಮಾಡಿಸಿ ಮಲಗಿಸಿದ್ದಳು. ಹಾಲ್‌ನ ಸೋಫಾ ಮೇಲೆಯೇ ಮಕ್ಕಳು ನಿದ್ದೆಗೆ ಜಾರಿದ್ದರು. ತಾಂಡವ್ ಬಂದಾಕ್ಷಣಾ ಭಾಗ್ಯಾ ಹೋಗಿ ಬಾಗಿಲು ತೆರೆದರೆ ನಿಂತುಕೊಳ್ಳುವುದಕ್ಕೂ ಶಕ್ತಿ ಇರಲಿಲ್ಲ. ಹಂಗೆ ತೂರಾಡ್ತಾ ಇದ್ದ ತಾಂಡವ್. ಒಳಗೆ ಬಂದ ಅಪ್ಪನನ್ನು ಮೊದಲ ರೀತಿಯಲ್ಲಿಯೇ ತನ್ವಿ ಮಾತನಾಡಿಸಿದಳು. ಚಾಕಲೇಟ್ ಐಸ್ ಕ್ರೀಂ ಎಲ್ಲಿ ಅಂತ ಕೇಳಿದ ಮಗಳಿಗೆ ನೀನು ನನ್ನ ಮಗಳೇ ಅಲ್ಲ. ನಿನ್ನಿಂದ ನನ್ನ ಮರ್ಯಾದೆ ಹೋಗ್ತಿದೆ ಅಂತೆಲ್ಲಾ ಬೈಯ್ಯುವುದಕ್ಕೆ ಶುರು ಮಾಡಿದ.

 Bhagyalakshmi serial Written Update on June 10th episode

ಭಾಗ್ಯಾಳ ಮೇಲೆಯೇ ದೌರ್ಜನ್ಯ

ತನ್ವಿ ಜೊತೆಗೆ ಆ ರೀತಿ ನಡೆದುಕೊಂಡ ಮೇಲೆ ಸೀದಾ ರೂಮು ಸೇರಿದ್ದ. ಭಾಗ್ಯಾಳಿಗೆ ತಾಂಡವ್ ಕುಡಿದು ಬಂದಿರುವುದು ಗೊತ್ತಾಯ್ತು. ಅದಕ್ಕೆ ಮಜ್ಜಿಗೆ ತೆಗೆದುಕೊಂಡು ಹೋದಳು. ಆದರೆ ತಾಂಡವ್ ಅದನ್ನು ಕುಡಿಯುವುದಕ್ಕೆ ಸಿದ್ದವಿಲ್ಲ. ಭಾಗ್ಯಾ ಎಷ್ಟೇ ಹೇಳಿದರೂ ಕೇಳದೆ, ಮತ್ತೆ ಅವಳಿಗೆ ಕುಡಿಸಲು ಹೊರಟಿದ್ದ.

ಅಮ್ಮನ ಮುಂದೆ ಗಪ್ ಚಿಪ್

ಭಾಗ್ಯಾಳ ಮೇಲೆ ದೌರ್ಜನ್ಯವೆಸಗಿದ ತಾಂಡವ್, "ನೀನೊಬ್ಬಳು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗುತ್ತೆ ಅಂತ "ಕತ್ತು ಹಿಡಿದು ಆಚೆ ನೂಕಿದೆ. ಭಾಗ್ಯಾ ಸೀದಾ ಹೋಗಿ ಅತ್ತೆಯ ಹೆಗಲಿಗೆ ಬಿದ್ದಳು. ಮುತ್ತಿನಂತ ಸೊಸೆಯ‌ನ್ನ ಕಾಪಾಡುವುದಕ್ಕೆ ಸದಾ ಕಾವೇರಿ ಸಿದ್ದಳಿರುತ್ತಾಳೆ. ತಾಂಡವ್ ಅವತಾರ ನೋಡಿದ ಅಪ್ಪನಿಗೆ ಕೋಪ ಬಂದು ರೇಗಿಯೇ ಬಿಟ್ಟರು. ಆದರೆ ಕುಸುಮಾ ಮಾತೇ ಆಡಲಿಲ್ಲ. ಜಸ್ಟ್ ಕಣ್ಣೋಟ. ಆ ಬೆಂಕಿಯಂತಹ ನೋಟಕ್ಕೆ ತಾಂಡವ್ ಸುಸ್ತಾಗಿ ಹೋದ. ಕುಡಿದಿದ್ದೆಲ್ಲವೂ ಇಳಿದೆ ಬಿಡ್ತು. ಈಗ ಅಮ್ಮ ಕೊಡುವ ಕ್ಲಾಸ್‌ಗೆ ನಡುಕ ಶುರುವಾಗಿದೆ.

More from Filmibeat

English summary
Colors Kannada Bhagyalakshmi serial Written Update on June 10th episode. Here is the details Kusuma saved Bhagya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X