Bhagyalakshmi: ಕುಸುಮಾಳಿಂದ ಪರ್ಮಿಷನ್ ಸಿಕ್ಕೇಬಿಡ್ತು.. ಶ್ರೇಷ್ಠಾಳನ್ನು ಮದುವೆಯಾಗ್ತಾನಾ ತಾಂಡವ್?
ರೋಗಿ ಬಯಸಿದ್ದು ಹಾಲು ಅನ್ನ. ವೈದ್ಯ ಹೇಳಿದ್ದು ಹಾಲು ಅನ್ನ ಎಂಬ ಗಾದೆ ಮಾತು ಇಂದು ತಾಂಡವ್ ಪಾಲಿಗೆ ಹೇಳಿ ಮಾಡಿಸಿದಂತೆ ಇದೆ. ಯಾಕಂದ್ರೆ ಕುಸುಮಾ ಇವತ್ತು ಅಂತದ್ದೊಂದು ಅವಕಾಶ ನೀಡಿದ್ದಾಳೆ. ನಿಂಗೆ ಬೇಕಾದವರ ಜೊತೆ ಬದುಕು ಎಂದು ಬಿಟ್ಟಿದ್ದಾಳೆ.
ಶ್ರೇಷ್ಯಳ ಸಹವಾಸ ಮಾಡಿದಾಗಿನಿಂದ ತಾಂಡವ್, ಮನೆಯವರ ಬಗ್ಗೆ ಕಾಳಜಿ ತೋರುತ್ತಿಲ್ಲ. ಹೆಂಡತಿಯನ್ನಂತು ಕೇರ್ ಮಾಡೋದೆ ಇಲ್ಲ. ಈಗಂತು ಭಾಗ್ಯ ಓದುತ್ತೀನಿ ಎಂದಾಕ್ಷಣಾ ಇನ್ನಿಲ್ಲದ ಕಸರತ್ತು ಮಾಡಿ ಅವಳ ಓದು ತಡೆಯಲು ನೋಡುತ್ತಿದ್ದಾನೆ. ಈ ಮಧ್ಯೆ ಶ್ರೇಷ್ಠಾಳ ಜೊತೆಗೆ ಸೇರಿ ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡುತ್ತಿದ್ದಾನೆ.

ತಾಯಿಯನ್ನು ಬಾಯಿಗೆ ಬಂದಂತೆ ಬೈದ ತಾಂಡವ್
ಕುಸುಮಾಳನ್ನು ಕಂಡರೆ ತಾಂಡವ್ ಸಿಕ್ಕಾಪಟ್ಟೆ ಭಯ ಪಡ್ತಾನೆ. ಸಂಸಾರವನ್ನು ಪರ್ಫೆಕ್ಟ್ ಆಗಿ ನಿಭಾಯಿಸುವುದು ಕುಸುಮಾ ಮಾತ್ರ. ಮಕ್ಕಳು ತಪ್ಪು ಮಾಡಿದಾಗಲೂ ಆ ಜೋರು ಧ್ವನಿಯಲ್ಲಿ ಒಮ್ಮೆ ಗದರಿದರೆ ಮಕ್ಕಳು ಕೂಡ ತಪ್ಪು ಮಾಡೋದೆ ಇಲ್ಲ. ಅಮ್ಮ ಎಂದರೆ ಹೆದರುತ್ತಿದ್ದ ತಾಂಡವ್, ಈಗ ಅಮ್ಮನ ಎಲ್ಲಾ ಗುಣಗಳನ್ನು ಸರಿಯಿಲ್ಲ ಅಂತಿದ್ದಾನೆ. ಬಾಯಿ ಬಡಕಿ, ನೀನಾಡುವ ಮಾತಿನಿಂದ ಮನೆಯ ಗೋಡೆಗಳೆಲ್ಲಾ ಬಿರುಕು ಬಿಟ್ಟಿದೆ ಅಂತೆಲ್ಲಾ ಮಾತನಾಡಿದ್ದಾನೆ. ಕುಸುಮಾ ಎಷ್ಟೇ ಗಟ್ಟಿಗಿತ್ತಿಯಾದರೂ ಇಂತಹ ಮಾತುಗಳಿಗೆ ನೊಂದು ಹೋಗಿದ್ದಾಳೆ.
ರಾತ್ರಿಯೆಲ್ಲಾ ಕುಡಿದು ರಂಪಾಟ
ಕುಡಿದ ಮತ್ತಿನಲ್ಲಿ ಅಪ್ಪನನ್ನು ನಾಲಾಯಕ್ ಅಂತೆಲ್ಲಾ ಬೈದಿದ್ದ. ಅಮ್ಮನ ಮುಂದೆ ತುಟಿಕ್ ಪಿಟಿಕ್ ಎನ್ನಲ್ಲ ಅಂತೆಲ್ಲಾ ಅಣಕಿಸಿದ. ಅಮ್ಮನ್ನಂತು ಸಿಕ್ಕಾಪಟ್ಟೆ ಹೀನಾಯವಾಗಿ ಬೈದ. ಆದ್ರೆ ಇದೆಲ್ಲ ನಡೆದಿದ್ದು ರಾತ್ರಿ ಕುಡಿದಾಗ ಆಗಿದ್ದು. ಬೆಳಗ್ಗೆ ತಾಂಡವ್ ಎದ್ದು ಏನು ಆಗೇ ಇಲ್ಲವೇನೋ ಎಂಬಂತೆ ಅಪ್ಪ, ಅಮ್ಮನ ಮುಂದೆ ಬಂದಿದ್ದಾನೆ. ನಾರ್ಮಲ್ ಆಗಿ ಮಾತನಾಡುವುದಕ್ಕೆ ಶುರು ಮಾಡಿದ್ದಾನೆ. ಆದರೆ, ಕುಸುಮಾ ಮತ್ತು ಗಂಡನ ಮುಖದಲ್ಲಿ ನೋವೇ ಕಾಣಿಸುತ್ತಾ ಇತ್ತು.

ಅಪ್ಪ ಅಮ್ಮನ ಮುಂದೆ ಶೇಪ್ ಔಟ್
ಎಲ್ಲರೂ ಸೈಲೆಂಟ್ ಆಗಿ ಇದ್ದದ್ದನ್ನು ಕಂಡು ತಾಂಡವ್ ಪ್ರಶ್ನೆ ಮಾಡಿದ್ದಾನೆ. ಯಾಕೆ ಎಲ್ಲರೂ ಈ ರೀತಿ ಇದ್ದೀರಾ ಅಂತ. ಅದಕ್ಕೆ ಕುಸುಮಾ ಕೂಡ ಏನು ಮಾತನಾಡಿಲ್ಲ. ಆಗ ಅವರ ತಂದೆಯೇ ಹೇಳೆ ಮಗ ಕೇಳುತ್ತಿದ್ದಾನಲ್ಲ ಎಂದಾಗ ಕುಸುಮಾ, ಏನಂತ ಹೇಳಬೇಕು. ಅಪ್ಪ ನಾಲಾಯಕ್ ಅಂತ ಅಂದಿದ್ದ. ತಾಯಿ ಬಾಯಿಬಡುಕಿ, ಜೋರು ಅಂದಿದ್ದ. ಇಲ್ಲಾ ಹೆಂಡ್ತಿ, ಮಕ್ಕಳನ್ನು ಹಿಡಿದುಕೊಂಡು ಹೊಡೆದದ್ದನ್ನ ಹೇಳಬೇಕಾ ಎಂದಿದ್ದಾಳೆ. ಇದನ್ನು ಕೇಳಿದ ತಾಂಡವ್‌ಗೆ ಶಾಕ್ ಆಗಿದೆ. ಜೊತೆಗೆ ಮನಸ್ಸಿನಲ್ಲಿ ಅಸಹ್ಯವೂ ಮೂಡಿದೆ.
ಅಮ್ಮನಿಂದಾನೇ ಸಿಕ್ತು ಪರ್ಮಿಷನ್
ಕುಸುಮಾ ಎಲ್ಲವನ್ನು ನೋಡುವ ತನಕ ನೋಡಿದಳು. ಭಾಗ್ಯಾ ನಮ್ಮ ಮನೆಗೆ ಸರಿ ಹೊಂದು ಹೆಣ್ಣು ಮಗಳು ಅಂತ ನಿನ್ನ ಮುಂದೆ ತಂದು ನಿಲ್ಲಿಸಿದೆ. ಆದರೆ ನೀನು ಹೇಳಿದ್ದು ಏನು ಭಾಗ್ಯಾ ದಡ್ಡಿ ಅಂತ. ಆಯ್ತಪ್ಪ ನಿಂಗೆ ಯಾರು ಇಷ್ಟ ಆಗ್ತಾರೋ ಅವರ ಜೊತೆಗೇನೆ ಬದುಕು. ಹೇಗೆ ಬೇಕಾದರೂ ಬದುಕು. ಇಲ್ಲಿ ಇರಬೇಡ ಅಂತ ಮನೆಯಿಂದ ಹೊರ ಹಾಕುವುದಕ್ಕೆ ಪ್ರಯತ್ನ ಪಡ್ತಿದ್ದಾಳೆ. ಈಗ ತಾಂಡವ್ ನಿರ್ಧಾರ ಬಹಳ ಮುಖ್ಯವಾಗಿದೆ. ಅದರಲ್ಲೂ ಶ್ರೇಷ್ಠಾ ಬೇರೆ ಬಿಟ್ಟು ಹೋಗಿದ್ದಾಳೆ. ಅಮ್ಮ ಬೇರೆ ಅವಕಾಶ ನೀಡಿ ಆಗಿದೆ. ಈಗ ತಾಂಡವ್ ಕೈನಲ್ಲಿದೆ ದೊಡ್ಡ ಆಪ್ಶನ್.


Click it and Unblock the Notifications











