Bhagyalakshmi: ಅತ್ತೆಯ ಬಳಿಕ ಕುಸುಮಾಳದ್ದೇ ಆಡಳಿತ.. ತಾಂಡವ್ ಮುಂದಿನ ನಡೆ ಏನು?

By ಎಸ್ ಸುಮಂತ್

ತಾಂಡವ್ ತನ್ನದೇ ಮಾತನ್ನು ಕೇಳುತ್ತಾನೆ. ಅಪ್ಪ ಅಮ್ಮ ಎಂದರೆ ತಾಂಡವ್ ಅತಿಯಾದ ಗೌರವ ಇದೆ ಎಂದೇ ಕುಸುಮಾ ನಂಬಿದ್ದರು. ಆದರೆ, ತಾಂಡವ್ ನಿಜ ರೂಪ ಗೊತ್ತಾಗಿದ್ದೆ ಇತ್ತೀಚೆಗೆ. ಅದರಲ್ಲೂ ಶ್ರೇಷ್ಠಾ ಸಹವಾಸ ಮಾಡಿದಾಗಿನಿಂದ ತಾಂಡವ್ ಅವತಾರಗಳೇ ಬದಲಾಗಿದೆ. ಯಾವಾಗಲೂ ಭಾಗ್ಯಳನ್ನು ನಿಂದಿಸುವುದು, ಭಾಗ್ಯಾಳನ್ನು ಮನೆ ಬಿಟ್ಟು ಕಳುಹಿಸುವುದರಲ್ಲಿಯೇ ಇದ್ದಾನೆ. ಈಗ ಮನಸ್ಸಲ್ಲಿರುವ ಕೋಪ ಅಪ್ಪ ಅಮ್ಮನ ಮೇಲೂ ನೇರವಾಗಿ ಹೊರ ಹಾಕಿದ್ದಾನೆ.

ಶ್ರೇಷ್ಠಾಳ ಜೊತೆಗೆ ಸೇರಿ ಕುಡಿದು ಬಂದಿದ್ದ ತಾಂಡವ್ ತನ್ನ ತಾಯಿಯನ್ನು ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಇದು ಅದೆಷ್ಟು ನೋವುಂಟು ಮಾಡಿದೆ ಎಂದರೆ ಕುಸುಮಾ ತನ್ನ ಮಗರಾಜನಿಗೆ ಸ್ವಾತಂತ್ರ ಕೊಡಲು ನಿರ್ಧರಿಸಿದ್ದಾಳೆ. ಅಂದ್ರೆ, ನಿನ್ನ ಲೈಫ್ ನಿನ್ನಿಷ್ಟದಂತೆ ಪಡೆದುಕೋ ಎಂದಿದ್ದಾಳೆ. ಆದರೂ ತಾಂಡವ್‌ಗೆ ಫ್ಯಾಮಿಲಿ ಬಿಟ್ಟು ಹೋಗುವ ಧೈರ್ಯ ಇಲ್ಲ.

Bhagyalakshmi serial Written Update on June 14th episode

ಭಾಗ್ಯಾಳನ್ನು ಓದಿಸುವುದಕ್ಕೆ ವಿರೋಧ

ರಾತ್ರಿಯೆಲ್ಲಾ ಕುಡಿದು ಮಾತನಾಡಿದ ತಾಂಡವ್ ಬೆಳಗ್ಗೆ ಅಪ್ಪ ಅಮ್ಮನ ಮುಂದೆ ಏನು ಆಗಿಲ್ಲವೇನೋ ಎಂಬಂತೆ ನಿಂತಿದ್ದಾನೆ. ಆದರೆ ಕುಸುಮಾ ಬಿಡುತ್ತಾಳಾ ಕ್ಲಾಸ್ ತೆಗೆದುಕೊಂಡಿದ್ದಾಳೆ. ಅಮ್ಮ ಅಷ್ಟೆಲ್ಲ ಹೇಳಿದರೂ ಮತ್ತೆ ಅದೇ ಮಾತು ಅವನದ್ದು. ಭಾಗ್ಯಾ ಓದುವುದು ಬೇಡ. ಚಿಕ್ಕ ವಯಸ್ಸಲ್ಲಿಯೇ ಓದಲಿಲ್ಲ. ಈಗ ಓದುತ್ತಾಳಾ..? ಅಂತಾನೆ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಮತ್ತೆ ಕುಸುಮಾ ರೇಗಿದ್ದಾಳೆ.

ಕುಸುಮಾ ಖಡಕ್ ಉತ್ತರ

ಕುಸುಮಾಗೆ ರಾಜನ ನಡೆ ಸ್ವಲ್ಪವೂ ಇಷ್ಟವಾಗಿಲ್ಲ. 'ಅಲ್ಲ ಭಾಗ್ಯಾ ಅವತ್ತು ನೋಡಿದ್ರೆ ನನ್ನ ಹೆಂಡತಿ ದಡ್ಡಿ, ಓದೋಕು ಬರಲ್ಲ ಅಂತ. ಆಯ್ತು ಓದಿಸೋಣಾ ಅಂದ್ರೆ ಬೇಡ ಅಂತಾನೆ. ನಿನ್ನ ಗಂಡನಿಗೆ ತಲೆಗಿಲೆ ಕೆಟ್ಟಿದೆಯಾ ಭಾಗ್ಯಾ. ಏನಾದರೂ ಆಗಲಿ. ನಾನು ತೆಗೆದುಕೊಂಡ ನಿರ್ಧಾರದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ತಾಂಡವ್‌ಗೆ ಅರ್ಥವಾಗುವ ರೀತಿ ಹೇಳಿದ್ದಾಳೆ. ಯಾರೇ ಬಂದರೂ ಭಾಗ್ಯಾಳ ಓದು ತಪ್ಪಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಸಿದ್ದಾಳೆ.

Bhagyalakshmi serial Written Update on June 14th episode

ಮನೆಯಲ್ಲಿ ಕುಸುಮಾದ್ದೇ ಅಧಿಕಾರ

ಇನ್ನು ತಾಂಡವ್ ಯಾವ ರೇಂಜಿಗೆ ಮಾತನಾಡಿದ್ದ ಅಂದ್ರೆ ಅಮ್ಮನದ್ದು ಬರೀ ಶೋಕಿ ಎಂದು. ಇದಕ್ಕೂ ಉತ್ತರ ನೀಡಿದ ಕುಸುಮಾ, 'ಈ ಮನೆಯಲ್ಲಿ ನನ್ನ ಅತ್ತೆಯ ಅಧಿಕಾರ ಆದ ಮೇಲೆ ನನ್ನದೆ ಅಧಿಕಾರ ನಡೆಯುವುದು. ನೀನು ರೀತಿ ನೀತಿಗಳನ್ನು ಹೇಳಿದೆ ಅಂತ ನಾನು ಎಲ್ಲದನ್ನು ಬದಲಾಯಿಸಿ ಕೊಳ್ಳುವುದಕ್ಕೆ ಆಗಲ್ಲ. ನನ್ನದೇ ಮಾತು ನಡೆಯೋದು. ಯಾರೂ ಏನೇ ಹೇಳಿದರೂ ನಾನು ಇರುವುದು ಹೀಗೆ. ಇಷ್ಟ ಇದ್ದವರು ಇರಬಹುದು' ಎಂದು ಕುಸುಮಾ ಸೂಚಿಸಿದ್ದಾಳೆ.

ತಾಂಡವ್‌ನಿಂದ ಶ್ರೇಷ್ಠಾನೂ ದೂರ

ಆ ಕಡೆ ಶ್ರೇಷ್ಠಾ ಬೇರೆಯದ್ದೇ ನಿರ್ಧಾರ ಮಾಡಿದ್ದಾಳೆ. ಕುಸುಮಾ ಎಲ್ಲಾ ರೀತಿಯ ಅವಕಾಶವನ್ನು ನೀಡಿದ್ದಾಳೆ. ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಬದುಕು ಎಂದು ಅವಕಾಶ ನೀಡಿದರೂ, ತಾಂಡವ್ ಗೆ ಇಷ್ಟವಾದ ಹುಡುಗಿ ಸಿಗುವುದು ಅನುಮಾನವೇ ಆಗಿದೆ. ಶ್ರೇಷ್ಠಾಳಿಗೆ ತಾಳಿ ಕಟ್ಟುವುದಕ್ಕೆ ಹೋಗಿ ಅರ್ಧಕ್ಕೆ ನಿಲ್ಲಿಸಿದ್ದಾನೆ. ಇದಕ್ಕೆ ಕೋಪ ಮಾಡಿಕೊಂಡ ಶ್ರೇಷ್ಠಾ ಬ್ರೇಕಪ್ ಮಾಡಿಕೊಂಡು ಹೋಗಿದ್ದಾಳೆ. ಆ ಕಡೆ ಅಪ್ಪ ಅಮ್ಮನಿಗೂ ಫೋನ್ ಮಾಡಿ ತಿಳಿಸಿದ್ದಾಳೆ. ನೀವೇಳಿದಂತೆ ಕೇಳುತ್ತೇನೆ ಎಂದು. ಹೀಗಾಗಿ ತಾಂಡವ್ ಆ ಕಡೆನೂ ಇಲ್ಲ ಈ ಕಡೆನೂ ಇಲ್ಲ ಎನ್ನುವಂತೆ ಆಗಿದ್ದಾನೆ.

More from Filmibeat

English summary
Colors Kannada Bhagyalakshmi serial Written Update on June 14th episode. Here is the details Tandav shape out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X