Bhagyalakshmi: ಕುಸುಮಾ ಕೊಟ್ಟ ಡೋಸ್‌ಗೆ ಗಡಗಡ ನಡುಗಿದ ಸುನಂದಾ.. ಭಾಗ್ಯಾ ಭವಿಷ್ಯ ಏನಾಗುತ್ತೆ?

By ಎಸ್ ಸುಮಂತ್

ಭಾಗ್ಯಾ ಓದುವುದನ್ನು ಹೇಗಾದರೂ ಮಾಡಿ ನಿಲ್ಲಿಸಲೇಬೇಕೆಂಬುದು ತಾಂಡವ್ ನಿರ್ಧಾರ. ಹೀಗಾಗಿಯೇ ಯಾವ ಕಡೆಯಿಂದೆಲ್ಲ ಸಾಧ್ಯವೋ ಆ ಕಡೆಯಿಂದೆಲ್ಲ ಪ್ರಯತ್ನ ಪಡುತ್ತಾ ಇದ್ದಾನೆ. ಆದರೆ, ಪ್ರಯತ್ನದ ದಾರಿಗಳೆಲ್ಲಾ ಈಗ ತಾಂಡವ್‌ಗೆ ದಕ್ಕದಂತೆ ಆಗಿದೆ. ಅಮ್ಮನಿಂದಾನೂ ಸಾಧ್ಯವಿಲ್ಲ, ಅಪ್ಪನಿಂದಾನೂ ಸಾಧ್ಯವಿಲ್ಲ. ಈಗ ಶ್ರೇಷ್ಠಾ ಬೇರೆ ತಾಂಡವ್‌ನನ್ನು ರೊಚ್ಚಿಗೇಳಿಸಲು ಹೊರಟಿದ್ದಾಳೆ.

ಯಾವುದೇ ಕೆಲಸವಾಗಲಿ ಕುಸುಮಾ ಕೈ ಹಾಕಿದರೆ ಮುಗೀತು. ಮಧ್ಯೆ ಯಾರೇ ಪ್ರವೇಶ ಮಾಡಿದರೂ ಅಲ್ಲಿ ಸೋಲು ಎಂಬುದು ಸಾಧ್ಯವೇ ಇಲ್ಲ. ಈಗ ಭಾಗ್ಯಾಳ ಓದಿನ ವಿಚಾರಕ್ಕೂ ಅಷ್ಟೇ. ಕುಸುಮಾ ನಿರ್ಧಾರ ಮಾಡಿ ಆಗಿದೆ. ಮಗ ಆದವನು ತಪ್ಪಿಸುವ ಹಾದಿ ಹುಡುಕುತ್ತಿದ್ದಾನೆ. ಸುನಂದಾಳಿಂದ ಕುಸುಮಾಳನ್ನು ಎದುರಿಸಿ ನಿಲ್ಲುವುದಕ್ಕೆ ಸಾಧ್ಯವಿದೆಯಾ?

Bhagyalakshmi serial Written Update on June 1st episode

ಕುಸುಮಾ ಬಂದಾಕ್ಷಣಾ ಸುನಂದಾ ಶಾಕ್

ತಾಂಡವ್ ಹೇಳಿದ ಮಾತನ್ನು ನಂಬಿದ ಸುನಂದಾ, ಭಾಗ್ಯಾಳನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಅದರ ಜೊತೆಗೆ ಭಾಗ್ಯಾಳ ಅತ್ತೆಯನ್ನು ಬಾಯಿಗೆ ಬಂದಂತೆ ಬೈದಿದ್ದಾಳೆ. ಅದೇ ಸಮಯಕ್ಕೆ ಕುಸುಮಾಳ ಎಂಟ್ರಿಯಾಗಿದೆ. ಒಳಗೆ ಬಂದ ಕುಸುಮಾ ಏನ್ರೀ ಸುನಂದಾ? ಈಗ ಮಾತನಾಡಿ ಎಂದಿದ್ದಾಳೆ. ಅದಕ್ಕೆ ಸುನಂದಾ ಕಲ್ಲು ಕಂಬದಂತೆ ನಿಂತು ಬಿಟ್ಟಿದ್ದಾಳೆ. ಸೊಸೆಯನ್ನು ಮಗಳಂತೆ ನೋಡಿಕೊಳ್ಳುತ್ತಿದ್ದೀನಿ. ಅವಳನ್ನು ಓದಿಸಬೇಕಾಗಿದ್ದು ನಿಮ್ಮ ಕರ್ತವ್ಯವಾಗಿತ್ತು ಎಂದಾಗಲೂ ಸುನಂದಾಳ ಬಾಯಿಂದ ಒಂದು ಮಾತು ಬಂದಿಲ್ಲ.

ತಾಂಡವ್‌ನನ್ನು ಎತ್ತಿ ಕಟ್ಟಿದ ಶ್ರೇಷ್ಠಾ

ತಾಂಡವ್ ಭಾಗ್ಯಾಳ ವಿಚಾರಕ್ಕೇ‌ನೆ ಕೊಂಚ ಡಿಸ್ಟರ್ಬ್ ಆಗಿದ್ದಾನೆ. ಅದಕ್ಕೆ ಆಫೀಸಿಗೆ ಕೂಡ ತಡವಾಗಿ ಬಂದಿದ್ದ, ಪ್ರಾಜೆಕ್ಟ್‌ಗೆ ಬೇಕಾದ ಪೆನ್ ಡ್ರೈವ್ ಕೂಡ ಬಿಟ್ಟು ಬಂದಿದ್ದ. ಎಲ್ಲಾ ಸಮಸ್ಯೆಗಳಿಂದ ಮುಕ್ತನಾಗಿ ಬಂದು ಕೂತವನನ್ನು ಶ್ರೇಷ್ಠಾ ಬಿಟ್ಟಿಲ್ಲ. ಅವನ ಮನಸ್ಸನ್ನು ಮತ್ತಷ್ಟು ಕೆಡಿಸಿದ್ದಾಳೆ. "ನಿನ್ನ ಹೆಂಡತಿಯಾದರೂ ನಿನ್ನ ಮಾತು ಕೇಳಬೇಕು. ನಿಂಗೆ ಇಷ್ಟ ಇಲ್ಲ ಎಂದ ಕೆಲಸವನ್ನು ನಿಮ್ಮ ಮನೆಯವರು ಯಾಕೆ ಮಾಡುತ್ತಾರೆ. ನೀನು ಆ ಮನೆಯ ಯಜಮಾನ" ಅಂತೆಲ್ಲಾ ಮಾತನಾಡಿದ್ದಾಳೆ.

Bhagyalakshmi serial Written Update on June 1st episode

ಶ್ರೇಷ್ಠಾಳ ಮಾತು ಕೇಳ್ತಾನಾ ತಾಂಡವ್

ಶ್ರೇಷ್ಠಾ ಹೇಗಾದರೂ ಮಾಡಿ ತಾಂಡವ್‌ನನ್ನು ಪಡೆಯಲೇಬೇಕೆಂದು ಪಣ ತೊಟ್ಟಿದ್ದಾಳೆ. ಅದೇ ಕಾರಣಕ್ಕೆ ತಾಂಡವ್ ಮನೆಯವರಿಗೆ ಒಳ್ಳೆಯವಳಾಗಿ, ತಾಂಡವ್‌ನನ್ನು ಎತ್ತಿ ಕಟ್ಟುತ್ತಿದ್ದಾಳೆ. ಈಗ ಭಾಗ್ಯಾಳ ವಿರುದ್ಧ ತಾಂಡವ್‌ನನ್ನು ಎತ್ತಿ ಕಟ್ಟಿದ್ದಾಳೆ. "ಅವತ್ತು ತಾಳು ವಿಚಾರಕ್ಕೇನೆ ಅಷ್ಟೊಂದು ಫೇಮಸ್ ಆದ್ಲೂ. ಅವತ್ತು ಭಾಗ್ಯಾಳ ಗಂಡ ತಾಂಡವ್ ಅಂತಾನೆ ಎಲ್ಲಾ ಹೇಳಿದ್ದು. ಮುಂದೆ ಎಸ್ಎಸ್ಎಲ್‌ಸಿ ಎಕ್ಸಾಂ ಬರೆಯುತ್ತಿರುವ ಭಾಗ್ಯಾಳ ಗಂಡ ತಾಂಡವ್ ಅಂತಾ‌ನೆ ಅಂತಾರೆ" ಹೀಗೆಂದಾಗ ತಾಂಡವ್ ರೊಚ್ಚಿಗೆದ್ದ ಇದ್ದಾನೆ. ಅದಕ್ಕೆ ಅವಕಾಶ ನೀಡಲ್ಲ ಎಂದಿದ್ದಾನೆ.

ಕುಸುಮಾ ಹೇಳಿದ ಮಾತಿಗೆ ಸುನಂದಾ ಶಾಕ್

ಇತ್ತ ಸುನಂದಾ ಅಳಿಯ ಹೇಳಿದ ಮಾತನ್ನೇ ಪಾಲಿಸ್ತಾ ಇದ್ದಾಳೆ. ಕುಸುಮಾ, ಮಾರ್ಕ್ಸ್ ಕಾರ್ಡ್ ಕೇಳಿದರೆ, ಅದೆಲ್ಲಿಂದ ಸಿಗುತ್ತೆ? ಅವಳು ಯಾವಾಗಲೋ ಓದಿದ್ದು ಎಂದಿದ್ದಾಳೆ. ಅದಕ್ಕೆ ಕುಸುಮಾ ಸಖತ್ತಾಗಿಯೇ ಡೋಸ್ ಕೊಟ್ಟಿದ್ದಾಳೆ. "ಸರಿ ಹಾಗಾದ್ರೆ ಭಾಗ್ಯಾ ಇನ್ನು ಮುಂದೆ ಇಲ್ಲೆ ಇರ್ತಾಳೆ. ನೀವೇ ನೋಡ್ಕೊಳಿ. ಸಂಜೆ ಒಳಗೆ ಮಾರ್ಕ್ಸ್ ಕಾರ್ಡ್ ಸಿಕ್ಕಿದರೆ ಓದುವುದನ್ನು ಕಲಿಯುತ್ತಾಳೆ. ಇಲ್ವಾ ಒಬ್ಬಂಟಿಯಾಗಿ ಜೀವನ ಮಾಡುವುದು ಹೇಗೆ ಅಂತ ಕಲಿಯುತ್ತಾಳೆ. ಈಗ ನನ್ನ ಜೊತೆಗೆ ಸಂಜೆ ವೇಳೆ ನಿನ್ನ ಭವಿಷ್ಯ ನಿರ್ಧಾರವಾಗುತ್ತೆ" ಎಂದಿದ್ದಾಳೆ‌. ಕುಸುಮಾಳ ಡೋಸ್‌ಗೆ ಸುನಂದಾ ದಂಗಾಗಿ ಹೋಗಿದ್ದಾಳೆ.

More from Filmibeat

English summary
Colors Kannada Bhagyalakshmi serial Written Update on June 1st episode. Here is the details about Kusuma Giving Shock to Sunanda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X