Bhagyalakshmi: ಬೀದಿಗೆ ಬಿದ್ದರು ತಾಂಡವ್‌ಗೆ ಬುದ್ದಿ ಬರಲಿಲ್ಲ.. ಮನೆಯವರ ಮೇಲೆ ದ್ವೇಷ

By ಎಸ್ ಸುಮಂತ್

ಕುಸುಮಾಳ ಬುದ್ದಿವಂತಿಕೆ, ತಾಳ್ಮೆಯಿಂದಾಗಿಯೇ ಮನೆ, ಸಂಸಾರ ಚೆನ್ನಾಗಿ ನಡೆಯುತ್ತಿದೆ. ಆ ಕಡೆ ಈ ಕಡೆ ತಾಳ ತಪ್ಪದೆ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ. ಆದರೆ ತಾಂಡವ್ ಪಾಲಿಗೆ ಅದು ಸ್ವತಂತ್ರ್ಯವೇ ಇಲ್ಲದ ರೀತಿ ಆಗಿದೆ. ಹೀಗಾಗಿಯೇ ತನ್ನದೇ ಪ್ರಪಂಚದಲ್ಲಿ ಸಂತೋಷ ಹುಡುಕಲು ಹೊರಟಿದ್ದಾನೆ. ಅದು ಅಷ್ಟು ಸುಲಭವಾಗಿಲ್ಲದ ಕಾರಣ. ಮತ್ತೆ ವಾಪಾಸ್ ಬಂದಿದ್ದಾನೆ.

ಕುಸುಮಾಳ ಮುಂದೆ ಯಾರ ಆಟವೂ ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಕುಸುಮಾ ತೆಗೆದುಕೊಳ್ಳುವ ನಿರ್ಧಾರವೂ ಪರ್ಫೆಕ್ಟ್ ಆಗಿಯೇ ಇರುತ್ತದೆ. ಹೀಗಾಗಿ ಯಾರು ಕುಸುಮಾಳ ಮಾತಿಗೆ ಎದುರಾಡುವುದಿಲ್ಲ. ಈಗ ತಾಂಡವ್‌ಗೆ ಬೇರೆ ದಾರಿಯಿಲ್ಲದೆ ಅದನ್ನೇ ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ.

Bhagyalakshmi serial Written Update on June 20th episode

ಬೀದಿಗೆ ಬಂದ ತಾಂಡವ್

ತಾಂಡವ್‌ಗೆ ತನ್ನ ಅಹಂಕಾರ ಹೆಚ್ಚಾಗಿ ಬೇರೆ ಏನೋ ಮಾಡಲು ಹೋಗಿ ಪರಿಸ್ಥಿತಿ ಬೇರೆಯದ್ದನ್ನೇ ಮಾಡಿಟ್ಟಿದೆ. ಕುಡಿದು ಬಂದು ಅವಾಂತರ ಸೃಷ್ಟಿಸಿದ. ಆದರೆ, ಅದರಿಂದ ತನ್ನವರ ಮನಸ್ಸು ನೋಯಿಸಿದ. ಮನೆಯವರ ಅಟೆನ್ಶನ್ ಕ್ರಿಯೇಟ್ ಮಾಡುವುದಕ್ಕೆ ಆಫೀಸಲ್ಲಿ ತಾನೇ ಹೋಗಿ ದುಬೈಗೆ ಟ್ರಾನ್ಸ್‌ಫರ್ ಕೇಳಿ, ಇನ್ನಷ್ಟು ಕೆಟ್ಟವನಾಗಿದ್ದಾನೆ. ಅದ್ಯಾವುದಕ್ಕೂ ಮನೆಯವರು ಸೊಪ್ಪು ಹಾಕಿಲ್ಲ. ಈಗ ಬಸ್ ಹತ್ತುವುದಕ್ಕೆ ಹೋದವನನ್ನು ಕುಸುಮಾ ಕ್ಯಾರೆ ಎನ್ನದೆ, ವಿಶ್ ಮಾಡಿ, ಅಲ್ಲಿಂದ ಭಾಗ್ಯಾಳನ್ನು ಕರೆದುಕೊಂಡು ಬಂದಿದ್ದಾಳೆ‌‌‌. ಆ ಕಡೆ ದುಬೈಗೂ ಹೋಗುವುದಕ್ಕೂ ಆಗದೆ ತಾಂಡವ್, ಬೀದಿಯಲ್ಲಿ ಕುಳಿತ ಪರಿಸ್ಥಿತಿ ಬಂದಿದೆ.

ಭಾಗ್ಯಳಿಂದ ಅತ್ತೆಗೆ ಮನವಿ

ಆ ಕಡೆ ಭಾಗ್ಯಾಳಿಗೆ ಸಿಕ್ಕಾಪಟ್ಟೆ ಗಾಬರಿಯಾಗಿದೆ. ಇನ್ನೆಲ್ಲಿ ತಾಂಡವ್ ಮನೆ ಬಿಟ್ಟು ಹೋಗಿ ಬಿಡುತ್ತಾನೋ ಎಂಬ ಆತಂಕ. ಅದಕ್ಕೆ ಮೊದಲೇ ಮನವಿ ಮಾಡಿಕೊಂಡಳು. ಗಂಡ ಅಂತು ಕರಗಲಿಲ್ಲ. ಈಗ ಅತ್ತೆಯ ಮನಸ್ಸನ್ನು ಕರಗಿಸುವ ಪ್ರಯತ್ನ ಭಾಗ್ಯಾಳದ್ದು. ಆದರೆ, ಅತ್ತೆ ಕೂಡ ಅಷ್ಟು ಸುಲಭಕ್ಕೆ ಕರಗುವವಳಲ್ಲ. ಹೀಗಾಗಿ, ಭಾಗ್ಯಾಳ ಮನವಿಗೆ ಇಬ್ಬರ ಮನಸ್ಸು ಬೇಗ ಕರಗಲಿಲ್ಲ.

ಕುಸುಮಾಗೆ ಗೊತ್ತು ಮಗನ ಬಂಡವಾಳ

ಆದರೆ, ಕುಸುಮಾಗೆ ತನ್ನ ಮಗನ ಬಗ್ಗೆ ಚೆನ್ನಾಗಿಯೇ ಗೊತ್ತಿತ್ತು. ಭಾಗ್ಯಾ ಮನವಿ ಮಾಡಲು ಬಂದಾಗ ಅದಕ್ಕೆ ಅಂತಾನೇ ಬುದ್ದಿನೇ ಹೇಳಿದ್ದಾಳೆ. ಅವನು ನಾಳೆ ಬೆಳಗ್ಗೆ ಅಷ್ಟರಲ್ಲಿ ವಾಪಾಸ್ ಮನೆಗೆ ಬರುತ್ತಾನೆ ಎಂದು ಹೇಳಿದಾಗ ಭಾಗ್ಯ, ತಕ್ಷಣ ಶಾಕ್ ಆಗಿದ್ದಾಳೆ. ಅತ್ತೆ ನಿಜವಾಗಲೂ ಬರುತ್ತಾರಾ ಎಂದು ಪ್ರಶ್ನೆ ಮಾಡಿದಾಗಲೇ ಬೆಲ್ ಮಾಡುವ ಸೌಂಡ್ ಕೇಳಿಸಿದೆ‌. ಎಲ್ಲರೂ ಆ ಕಡೆ ತಿರುಗಿ ನೋಡಿದಾಗಲೇ ಗೊತ್ತಾಯ್ತು ಅದು ತಾಂಡವ್ ಅಂತ. ಮನೆಯವರೆಲ್ಲಾ ಫುಲ್ ಖುಷಿ ಪಟ್ಟಿದ್ದಾರೆ. ಮಕ್ಕಳಂತೂ ಸಿಕ್ಕಾಪಟ್ಟೆ ಖುಷಿ ಪಟ್ಟು, ಇನ್ಮೇಲ ಎಲ್ಲೂ ಹೋಗಬೇಡ ಎಂದಿದ್ದಾರೆ.

Bhagyalakshmi serial Written Update on June 20th episode

ತಾಂಡವ್ ಪ್ಲ್ಯಾನ್ ಬೇರೆಯದ್ದೇ..!

ಕುಸುಮಾಳ ನಿರೀಕ್ಷೆ ಸುಳ್ಳಾಗಲಿಲ್ಲ. ಮನೆಗೆ ಮಗ ಬಂದಾಯ್ತು. ತಾಂಡವ್ ಕೂಡ ವಿದೇಯತೆಯಿಂದಾನೇ ಅಮ್ಮ ಅಪ್ಪನ ಬಳಿ ಕ್ಷಮೆ ಕೇಳಿದ. ಆದರೆ, ಕುಸುಮಾಳ ರಿಯಾಕ್ಷನ್ ಏನು ಚೇಂಜ್ ಇರಲಿಲ್ಲ. ಯಾವಾಗಲೂ ತಪ್ಪು ಮಾಡ್ತೀಯ, ಮಾಡಿದ ಮೇಲೆ ಮತ್ತದೆ ಕ್ಷಮೆ ಕೇಳ್ತೀಯಾ. ಊಟಕ್ಕೆ ಬರೋ ಹಾಗಿದ್ರೆ ಬಾ ಅಂತ ಹೇಳಿ ಹೊರಟೆ ಬಿಟ್ಟಳು. ಇದನ್ನು ಕೇಳಿಸಿಕೊಂಡ ತಾಂಡವ್‌ಗೆ ಮತ್ತಷ್ಟು ಕೋಪ ಬಂದಿತ್ತು. ಬಂದಿದ್ದಕ್ಕೆ ಖುಷಿ ಆಯ್ತು ಅನ್ಲಿಲ್ಲ. ನಿಮಗೆಲ್ಲಾ ಒಂದಲ್ಲ ಒಂದು ಟೈಮ್ ಸರಿಯಾಗಿ ಕೊಡ್ತೀನಿ ಅಂತಾನೇ ಸವಾಲು ಹಾಕಿಕೊಂಡಿದ್ದಾನೆ.

More from Filmibeat

English summary
Colors Kannada Bhagyalakshmi serial Written Update on June 20th episode. Here is the details Tandav coming back.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X