Bhagyalakshmi: ಅಮ್ಮನ ಭಯವಿಲ್ಲ.. ಹೆಂಡತಿಗೂ ಡೋಂಟ್ ಕೇರ್.. ಶ್ರೇಷ್ಠಾಗೆ ತಾಳಿಕಟ್ಟೇ ಬಿಟ್ಟಾ ತಾಂಡವ್!
ಶ್ರೇಷ್ಠಾ ಪರಿಚಯವಾದಾಗಿನಿಂದ ತಾಂಡವ್ ಬೇರೆ ರೀತಿಯಗಿಯೇ ಆಟವಾಡುತ್ತಿದ್ದಾನೆ. ಹೆಂಡತಿ ನನಗೆ ಮ್ಯಾಚ್ ಆಗಲ್ಲ ಎಂದುಕೊಂಡಿದ್ದ ತಾಂಡವ್, ಶ್ರೇಷ್ಠಾ ಪರ್ಫೆಕ್ಟ್ ಜೋಡಿ ಎನಿಸುವುದಕ್ಕೆ ಶುರುವಾಗಿದೆ. ಶ್ರೇಷ್ಠಾ ಜೊತೆಗೆ ಜಗತ್ತಿನಲ್ಲಿ ಸಿಗದೆ ಇರುವ ನೆಮ್ಮದಿ ಎಲ್ಲವನ್ನು ಪಡೆಯುತ್ತಿದ್ದಾನೆ. ಆದರೆ, ಇತ್ತೀಚೆಗೆ ಶ್ರೇಷ್ಠಾಳೆ ತಾಂಡವ್‌ನಿಂದ ಬ್ರೇಕಪ್ ಮಾಡಿಕೊಂಡು ಹೊರಟು ಹೋಗಿದ್ದಳು.
ತಾಂಡವ್ ಗೋಸ್ಕರ ಶ್ರೇಷ್ಠಾ ಮನೆಯವರನ್ನೆಲ್ಲಾ ಎದುರು ಹಾಕಿಕೊಂಡಿದ್ದಳು. ಅಪ್ಪ ಅಮ್ಮ ಕೇಳಿದಾಗಲೂ ಎರಡು ತಿಂಗಳ ಸಮಯಾವಕಾಶ ತೆಗೆದುಕೊಂಡು ತಾಂಡವ್‌ನನ್ನು ಬದಲು ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಳು. ಅಷ್ಟೇ ಅಲ್ಲ, ತಾಂಡವ್‌ನನ್ನು ಮದುವೆಯಾಗುವುದಕ್ಕೆ ಪ್ರಯತ್ನ ಪಟ್ಟು ಸೋಲು ಅನುಭವಿಸಿದ್ದಳು. ಈಗ ಬಯಸದೆ ಬಂದ ಭಾಗ್ಯವಾಗಿ, ತಾಂಡವ್‌ನನ್ನು ಪಡೆದಿದ್ದಾಳೆ.

ಮನೆಯಲ್ಲಿ ಭಾಗ್ಯಾಳಿಗೂ ಪ್ರೀತಿ
ತಾಂಡವ್ ಈಗ ಸಿಕ್ಕಾಪಟ್ಟೆ ನಾಟಕವಾಡುವುದಕ್ಕೆ ಶುರು ಮಾಡಿದ್ದಾನೆ. ಭಾಗ್ಯಾಳಿಗೆ ಇನ್ನಿಲ್ಲದ ಆಸೆಯನ್ನು ತೋರಿಸುತ್ತಿದ್ದಾನೆ. ಪ್ರೀತಿಯಿಂದ ಮಾತನಾಡುತ್ತಿದ್ದಾನೆ. ಅಪ್ಪಿಕೊಳ್ಳುತ್ತಿದ್ದಾನೆ. ಇದನ್ನೆಲ್ಲಾ ನೋಡಿದ ಭಾಗ್ಯಾಳಿಗೆ ತನ್ನ ಗಂಡ ಬದಲಾಗಿದ್ದಾನೆ ಎಂಬ ನಂಬಿಕೆ ಬಂದಿದೆ. ಹೀಗಾಗಿ ಗಂಡನ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾಳೆ. ಇಷ್ಟು ದಿನ ಏನು ತಂದು ಕೊಡದ ತಾಂಡವ್, ಮಲ್ಲಿಗೆ ತಂದು ಕೊಟ್ಟಿದ್ದಕ್ಕೆ ದಿನವಿಡಿ ಆ ಘಮಲಿನ ಖುಷಿಯಲ್ಲಿಯೇ ತೇಲುತ್ತಿದ್ದಾಳೆ.
ಅಮ್ಮನಿಗೂ ಖುಷಿ ತಂದ ತಾಂಡವ್ ಬದಲಾವಣೆ
ತಾಂಡವ್ ಬರೀ ಹೆಂಡತಿಗೆ ಮಾತ್ರ ಅಲ್ಲ, ಇಡೀ ಮನೆಯವರಿಗೆ ತನ್ನ ನಾಟಕದಿಂದ ಖುಷಿ ನೀಡುತ್ತಿದ್ದಾನೆ. ಬದಲಾಗಿದ್ದೀನಿ, ಕ್ಷಮೆ ಇರಲಿ ಅಂತ ಕೇಳಿ, ತನಗೆ ಏನು ಬೇಕೋ ಅದೆಲ್ಲವನ್ನು ಸಾಧಿಸುತ್ತಿದ್ದಾನೆ. ಕುಸುಮಾ ಅಂತು ತನ್ನ ಮಗ ಬದಲಾಗಿದ್ದಾನೆ ಎಂದುಕೊಂಡು ಇರೋ ಬರೋ ಪ್ರೀತಿಯನ್ನೆಲ್ಲ ಧಾರೆ ಎರೆಯುತ್ತಿದ್ದಾಳೆ. ಮಗನನ್ನು ಹಾಡಿ - ಹೊಗಳುತ್ತಿದ್ದಾಳೆ. ಊಟಕ್ಕೆ ಕೂತಾಗಲೂ ತಾಂಡವ್ ಮಾತು, ನಿಂತಾಗಲೂ ಮನೆಯಲ್ಲಿ ತಾಂಡವ್ ಬಗ್ಗೆಯೇ ಮಾತುಕತೆ ನಡೆಯುತ್ತಿದೆ. ತನ್ನ ಮಗ ಮಾಡಿದ ಒಂದು ತಪ್ಪಿಗೆ ಅದೆಷ್ಟು ಪಶ್ಚಾತ್ತಾಪ ಪಡುತ್ತಿದ್ದಾನೆ ಅಲ್ವಾ ಎಂದು ಮಗನ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದಾರೆ.

ಶ್ರೇಷ್ಠಾ ಆಸೆಯಂತೆ ಮದುವೆಯಾದ ತಾಂಡವ್
ಮನೆಯಲ್ಲಿ, ಆಫೀಸಲ್ಲಿ ಎಲ್ಲಿಯೂ ನೆಮ್ಮದಿ ಇಲ್ಲದಂತೆ ಆಗಿತ್ತು ತಾಂಡವ್‌ಗೆ. ಇದೇ ಸಮಯದಲ್ಲಿ ಶ್ರೇಷ್ಠಾ ಕೂಡ ಬಿಟ್ಟು ಹೋಗಿದ್ದಳು. ಬೇರೆ ಮದುವೆಯಾಗ್ತೀನಿ ಅಂತಿದ್ಲು. ಈಗ ತನ್ನ ನಾಟಕದಿಂದ ಎಲ್ಲವನ್ನು ಸರಿ ಮಾಡಿರುವ ತಾಂಡವ್, ಈಗ ತನ್ನ ಸುಖ ಸಂತೋಷವನ್ನು ಹುಡುಕಿಕೊಂಡು ಹೊರಟಿದ್ದಾನೆ. ಶ್ರೇಷ್ಠಾಳ ಬಳಿ ಕ್ಷಮೆ ಕೇಳಿ, ಮತ್ತೆ ಒಂದಾಗುವ ಮಾತನಾಡಿದ್ದಾನೆ. ಅದರಲ್ಲೂ ಮಾಂಗಲ್ಯ ಕೊಡಿಸಿ, ಸೀರೆ ತೋರಿಸಿ ಮದುವೆಯಾಗುವ ಭರವಸೆ ನೀಡಿದ್ದಾನೆ.
ತವರು ಮನೆಗೆ ಹೊರಟ ಶ್ರೇಷ್ಠಾ
ತಾಂಡವ್‌ನ ಬದಲಾವಣೆಯನ್ನು ಶ್ರೇಷ್ಠಾಳಿಂದ ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವೇ ಆಗಲಿಲ್ಲ. ಆದರೂ ತಾಂಡವ್ ಮದುವೆಯಾಗುವುದಕ್ಕೆ ವರನ ರೀತಿ ರೆಡಿಯಾಗಿದ್ದ. ಬಳಿಕ ದೇವಸ್ಥಾನಕ್ಕೆ ಹೋಗಿ, ಇಬ್ಬರು ದೇವರ ಮುಂದೆ ಬೇಡಿಕೊಂಡು ಮದುವೆಯಾಗಿದ್ದಾರೆ. ತಾಳಿ ಕಟ್ಟಿದ ಬಳಿಕ ಶ್ರೇಷ್ಠಾ ಹಾಗೂ ತಾಂಡವ್ ನೇರವಾಗಿ ಊರ ಕಡೆ ಹೊರಟಿದ್ದಾರೆ. ಶ್ರೇಷ್ಠಾ ಅಮ್ಮನ ಮುಂದೆ ನವ ವಧು-ವರರು ನಿಂತಿದ್ದನ್ನು ನೋಡಿದ ಶ್ರೇಷ್ಠಾ ಅಮ್ಮ ಶಾಕ್ ಆಗಿದ್ದಾರೆ.
ಭಾಗ್ಯಾಳ ಗತಿ ಏನು..?
ತಾಂಡವ್ ಈಗ ಮೊದಲಿನಂತೆ ಇಲ್ಲ. ಮನೆಯಲ್ಲಿ ನಾಟಕ ಶುರು ಮಾಡಿರುವ ಕಾರಣ ಯಾವುದೇ ಭಯವಿಲ್ಲದೆ ಬದುಕುತ್ತಿದ್ದಾನೆ. ಆ ಕಡೆ ತನಗಿಷ್ಟವಾದ ಶ್ರೇಷ್ಠಾಳನ್ನು ಮದುವೆಯಾಗಿ ಆಗಿದೆ. ಇನ್ನು ಎರಡು ದೋಣಿಯಲ್ಲೂ ನಾಟಕದ ಬದುಕನ್ನು ಸಾಗಿಸುತ್ತಾನೆ. ಭಾಗ್ಯಾಳಿಗೆ ಮಾತುಗಳಿಂದಾನೆ ಆಸೆ ತುಂಬಿಸುತ್ತಾನೆ. ಸುಳ್ಳು ಪ್ರೀತಿ ನೀಡಿ ಮೋಸ ಮಾಡುತ್ತಾನೆ. ಆದರೆ ಸತ್ಯ ಗೊತ್ತಾದಾಗ ಭಾಗ್ಯ ಶಿಕ್ಷಣದಲ್ಲಿ ದೊಡ್ಡವಳಾಗಿರುತ್ತಾಳೇನೋ.
More from Filmibeat