Bhagyalakshmi: ಶ್ರೇಷ್ಠಾಗೆ ತಾಳಿ ಕಟ್ಟದೆ ಯಾಮಾರಿಸಿದ ತಾಂಡವ್ ಪ್ಲ್ಯಾನ್ ಆದ್ರೂ ಏನು..?
ತಾಂಡವ್‌ನ ನಡವಳಿಕೆ ನೋಡುತ್ತಾ ಇದ್ದರೆ ಯಾವುದನ್ನೂ ಊಹೆ ಮಾಡುವುದಕ್ಕೆ ಆಗುತ್ತಿಲ್ಲ. ಆ ಕಡೆ ಭಾಗ್ಯಾ ನಂಗೆ ಮ್ಯಾಚ್ ಆಗಲ್ಲ ಅಂತಾನೇ ಶ್ರೇಷ್ಠಾಳ ಸಹವಾಸ ಮಾಡಿದ್ದ. ಈ ಕಡೆ ಎಲ್ಲ ಪ್ಲ್ಯಾನ್ ಮಾಡಿಕೊಂಡು ಮದುವೆಯಾಗಲೇಬೇಕೆಂದುಕೊಂಡು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ಆದರೆ, ಅಲ್ಲಿಯೂ ಉಲ್ಟಾ ಹೊಡೆದಿದ್ದಾನೆ. ಈ ಮೂಲಕ ತಾಂಡವ್ ಏನು ಮಾಡೋದಕ್ಕೆ ಹೊರಟಿದ್ದಾನೆ ಅನ್ನೋದೆ ಗೊಂದಲದ ಗೂಡಾಗಿದೆ.
ತಾಂಡವ್‌ಗೆ ಎಲ್ಲವೂ ತನ್ನದೇ ಕಂಟ್ರೋಲ್‌ನಲ್ಲಿ ಇರಬೇಕೆಂಬ ಆಸೆ. ಅದಕ್ಕಾಗಿಯೇ ಮಾತಿನ ಮೂಲಕ ಕಂಟ್ರೋಲ್‌ನಲ್ಲಿ ಒಟ್ಟುಕೊಳ್ಳುವುದಕ್ಕೆ ನೋಡಿದ. ಆದರೆ, ಅದು ಸಾಧ್ಯವಾಗಲಿಲ್ಲ. ಅದಕ್ಕೆ ಈಗ ನಾಟಕಗಳನ್ನ ಶುರು ಮಾಡಿಕೊಂಡಿದ್ದಾನೆ. ಎರಡು ದೋಣಿಯಲ್ಲೂ ತನಗೆ ಬೇಕಾದ ರೀತಿಯಲ್ಲಿ ಸಂಚಾರ ಮಾಡುತ್ತಿದ್ದಾನೆ.

ಭಾಗ್ಯಳಿಗೆ ಮತ್ತೆ ಮೋಸ
ಭಾಗ್ಯಾಳ ಮುಗ್ಧತೆಯನ್ನು ತಾಂಡವ್ ಸುಲಭವಾಗಿ ಬಳಸಿಕೊಳ್ಳುತ್ತಿದ್ದಾನೆ. ಚೆಂದವಾಗಿ ಮಾತನಾಡಿದರೆ ಮುಗೀತು, ಒಂದು ಮೊಳ ಮಲ್ಲಿಗೆಯನ್ನು ತಂದುಕೊಟ್ಟರೆ ಮುಗೀತು. ಭಾಗ್ಯ ಮನಸ್ಸಿನ ಕೋಪ ಕರಗಿ ಹೋಗುತ್ತೆ, ಪ್ರೀತಿ ಹೆಚ್ಚಾಗುತ್ತೆ. ಇದು ತಾಂಡವ್‌ಗೆ ಗೊತ್ತಿಲ್ಲದ ಸತ್ಯವೇನು ಅಲ್ಲ. ಅದಕ್ಕಾಗಿಯೇ ಈಗ ಭಾಗ್ಯಾಳ ಮೇಲೆ ಅತಿಯಾದ ಪ್ರೀತಿ ಇರುವವನಂತೆ ನಾಟಕವಾಡುತ್ತಿದ್ದಾನೆ. ಅಡುಗೆಯನ್ನು ಮಾಡಬೇಡ, ಹೊರಗಡೆಯಿಂದಾನೇ ಊಟ ತರ್ತೀನಿ ಅಂತ ಬೇರೆ ಹೇಳಿದ್ದಾನೆ.
ಶ್ರೇಷ್ಠಾಳಿಗೆ ತಾಳಿ ಕಟ್ಟಲೇ ಇಲ್ಲ
ಆ ಕಡೆ ಶ್ರೇಷ್ಠಾ ಮುನಿಸಿಕೊಂಡು ಹೋಗಿದ್ದಳು. ಅವಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ, ತಾಳಿ ಕಟ್ಟಿಯೇ ಕಟ್ತೀನಿ ಅಂತ ಆಸೆ ಹುಟ್ಟಿಸಿದ್ದ. ಆದರೆ, ಶ್ರೇಷ್ಠಾ ಕಂಡ ಕೆಟ್ಟ ಕನಸಿನಿಂದ ತಾಂಡವ್ ಹಿಂದೆ ಸರಿದ. ತಾಳಿ ಕಟ್ಟಲಿಲ್ಲ. ಶ್ರೇಷ್ಠಾ ಮತ್ತೆ ಜೋರು ಮಾಡಿದಾಗ, ಸಮಾಧಾನ ಮಾಡಿ ಯಾಮಾರಿಸಿದ್ದಾನೆ. ಹೀಗೆ ಯಾರು ಇಲ್ಲದೆ ನಿನ್ನನ್ನು ಮದುವೆಯಾಗುವುದಿಲ್ಲ. ಆದಷ್ಟು ಬೇಗ ಎಲ್ಲರ ಮುಂದೆ ನಿನ್ನ ಮದುವೆಯಾಗ್ತೀನಿ. ಭಾಗ್ಯಾಳಿಗೆ ಗೇಟ್ ಪಾಸ್ ಕೊಡ್ತೀನಿ ಅಂತಾನೆ ಹೇಳಿದ್ದಾನೆ. ತಾಂಡವ್‌ನ ಈ ಮಾತನ್ನು ಅಚ್ಚುಕಟ್ಟಾಗಿ ನಂಬಿದ್ದಾಳೆ ಶ್ರೇಷ್ಠಾ.
ತಾಂಡವ್ ಮಾತು ನಂಬಿದ ಶ್ರೇಷ್ಠಾ
ಅದೇ ಖುಷಿಯಲ್ಲಿ ಮನೆಗೆ ಬಂದ ಶ್ರೇಷ್ಠಾ ಬಟ್ಟೆಯನ್ನೆಲ್ಲಾ ಪ್ಯಾಕ್ ಮಾಡುಕೊಳ್ಳುತ್ತಾ ಇದ್ದಳು. ಜೊತೆಗೆ ಕತ್ತಿನಲ್ಲಿ ಮಾಂಗಲ್ಯ ಕೂಡ ಇತ್ತು. ಕಾವ್ಯಾಳಿಗೆ ಇದನ್ನು ನೋಡಿ ಶಾಕ್ ಆಗಿತ್ತು. ಏನಿದು ಅಂತ ಕೇಳಿದಾಗ ನನ್ನದು, ತಾಂಡವ್‌ದು ಮದುವೆಯಾಗಿದೆ ಎಂದೆ ಹೇಳಿದಳು. ನಂಬದೆ ಹೋದಾಗ ಇದು ಜಾತ್ರೆಯಲ್ಲಿ ಸಿಗುವ 30 ರೂಪಾಯಿ ಸರ ಅಲ್ಲ, ಪಕ್ಕ ಡೈಮೆಂಡ್ ಸರ ಅಂತಾನೇ ಹೇಳಿದ್ದಳು. ಇದು ಕಾವ್ಯಾಳಿಗೆ ಅರಗಿಸಿಕೊಳ್ಳುವುದಕ್ಕೂ ಕಷ್ಟ ಆಗಿತ್ತು.

ಅಮ್ಮನ ಮುಂದೆಯೂ ಭಾಗ್ಯಾಳಿಗೆ ಸಪೋರ್ಟ್
ಇತ್ತ ತಾಂಡವ್ ಮನೆಗೆ ಬಂದು ಮತ್ತೆ ನಾಟಕ ಶುರು ಮಾಡಿದ್ದ. ಭಾಗ್ಯಾ ಕೆಲಸ ಮಾಡುತ್ತಿದ್ದನ್ನು ತಪ್ಪಿಸಿ, ಡೈನಿಂಗ್ ಹಾಲ್‌ಗೆ ಕರೆದುಕೊಂಡು ಬಂದು ಕೂರಿಸಿದ್ದ. ಭಾಗ್ಯಾಳಿಗೆ ಓದುವುದಕ್ಕೆ ಸ್ವಲ್ಪ ಸಮಯ ಕೊಡಬೇಕು ಅಲ್ವಾ ಅಮ್ಮ ಅಂತ ಅಮ್ಮನನ್ನೇ ಪ್ರಶ್ನಿಸಿದ್ದ. ಆದರೆ, ಕುಸುಮಾ ಮತ್ತೆ ರೈಸ್ ಆಗಿದ್ದಳು. ಸಮಯ ಅಂತೆ ಸಮಯ. ಇದೆಲ್ಲ ಯಾರು ಮಾಡುವುದು ಅಂತ. ಅಮ್ಮನ ಮಾತನ್ನು ಕೇಳದ ತಾಂಡವ್, ಭಾಗ್ಯಾ ಬರಬೇಕು ಅಂತ ಹಠ ಮಾಡಿದ. ಹೊರಗಡೆಯಿಂದ ಊಟ ತರಿಸುವುದಾಗಿ ಮನೆಯಲ್ಲಿ ತಿಳಿ ಹೇಳಿದ್ದ.


Click it and Unblock the Notifications











