Bhagyalakshmi: ಇನ್ಮುಂದೆ ಸೀರೆ ಉಡ್ತಾನಂತೆ ತಾಂಡವ್.. ಭಾಗ್ಯಾಳ ಬಾಳಲ್ಲಿ ಏನು ನಡೀತಿದೆ?

By ಎಸ್ ಸುಮಂತ್

ಭಾಗ್ಯಾ ಓದಬೇಕು ಎಂಬುದು ಮನೆಯಲ್ಲಿ ಎಲ್ಲರ ಒತ್ತಡ. ಅದಕ್ಕಾಗಿ ಅತ್ತೆ - ಮಾವ ಇಬ್ಬರು ಹೋರಾಟ ನಡೆಸುತ್ತಿದ್ದಾರೆ. ತಾಂಡವ್ ತನ್ನ ಕೈಲಿ ಎಷ್ಟು ಸಾಧ್ಯವೋ ಅಷ್ಟನ್ನು ಹಾಕಿ ಭಾಗ್ಯಾಳನ್ನು ಓದನ್ನು ತಡೆಯಲು ಯತ್ನಿಸುತ್ತಾ ಇದ್ದಾನೆ. ಆದರೆ ಕೈ ಹಾಕಿದ ಪ್ಲ್ಯಾನ್ ಎಲ್ಲಾ ತಾಂಡವ್‌ಗೆ ಸೋಲನ್ನೇ ಕೊಡ್ತಾ ಇದೆ. ಈಗ ಅಪ್ಪನನ್ನು ಎದುರಾಕಿಕೊಂಡಿದ್ದಾನೆ.

ಭಾಗ್ಯಾಳ ಬದುಕನ್ನು ಕಟ್ಟಿ ಕೊಡಲು ಕುಸುಮಾ ಶತಸಿದ್ಧಳಾಗಿ ನಿಂತಿದ್ದಾಳೆ. ತಾಂಡವ್‌ನನ್ನು ಮೊದಲು ಬಗ್ಗಿಸಿದಳು. ಬಳಿಕ ಸುನಂದಾ ಕೂಡ ಅದೇ ಆಟ ಆಡಲು ಹೊರಟಾಗ ಅವಳನ್ನು ಒಂದೇ ಮಾತಿನಲ್ಲಿ ಬಗ್ಗಿಸಿದ್ದಾಳೆ. ಆದರೆ, ಇನ್ಮುಂದೆ ಭಾಗ್ಯಾಳ ಜೀವನದಲ್ಲಿ ಸಾಕಷ್ಟು ಸವಾಲು ಎದುರಾಗುವುದಂತು ಶತಸಿದ್ಧವಾಗಿದೆ.

Bhagyalakshmi serial Written Update on June 5th episode

ಮಾರ್ಕ್ಸ್ ಕಾರ್ಡ್ ಹರಿದು ಹಾಕಿದ ತಾಂಡವ್

ಭಾಗ್ಯಾಳ ಓದಿಗೆ ತಾಂಡವ್ ಪದೇ ಪದೆ ತಲೆ ಹಾಕ್ತಾ ಇದ್ದಾನೆ. ಭಾಗ್ಯಾಳ ಮೈಂಡ್ ಅನ್ನೇ ಡೈವರ್ಟ್ ಮಾಡುವುದಕ್ಕೆ ಟ್ರೈ ಮಾಡಿದ. ಯಾವುದು ಆಗದೆ ಹೋದಾಗ ಈಗ ಮಾರ್ಕ್ಸ್ ಕಾರ್ಡ್ ಅನ್ನೇ ಹರಿದು ಹಾಕಿದ್ದಾನೆ. ಇಂಗ್ಲಿಷ್ ಪುಸ್ತಕ ಓದುವುದಕ್ಕೆ ಕೊಟ್ಟು, ಅಲ್ಲಿಯೂ ಗೇಲಿ ಮಾಡಿದ್ದಾನೆ. "ನೀನು ಓದಿ ದೊಡ್ಡ ಆಫೀಸರ್ ಆಗಿ, ಸೂಟು ಬೂಟು ಹಾಕೊಂಡು ಹೋಗಿಬಿಡು ಭಾಗ್ಯಾ. ಆಮೇಲೆ ನಾನು ಏನು ಮಾಡಲಿ. ಸರಿ ಹಾಗಾದ್ರೆ, ನಿಂದು ಎರಡು ಕಾಟನ್ ಸೀರೆ ಕೊಟ್ಬಿಡು. ಉಟ್ಕೊಂಡು ಮನೆಯಲ್ಲಿಯೇ ಇರ್ತೀನಿ" ಅಂತ ವ್ಯಂಗ್ಯವಾಡಿದ್ದಾನೆ.

ತಂದೆಯ ಕೆಂಗಣ್ಣಿಗೆ ಗುರಿಯಾದ ತಾಂಡವ್

ಭಾಗ್ಯಾ ಒಬ್ಬಳೆ ಇದ್ದಾಗ ಅವಳನ್ನು ಎಷ್ಟು ಕುಗ್ಗಿಸಬೇಕೋ ಅಷ್ಟು ಕುಗ್ಗಿಸುವುದಕ್ಕೆ ಟ್ರೈ ಮಾಡ್ತಾನೆ. ಅಪ್ಪ ಅಮ್ಮ ಇದ್ದಾಗ ಹೆಚ್ಚು ತಲೆ ಹಾಕುವುದಿಲ್ಲ. ಈಗ ಒಬ್ಬಳನ್ನೇ ಟಾರ್ಗೆಟ್ ಮಾಡಿದಾಗಲೇ ತಂದೆಯ ಎಂಟ್ರಿಯಾಗಿದೆ. "ಸರಿ ಬಿಡೋ ನಮಗೆ ನೀನು ಬೇಡ. ಸೊಸೆಯ ಏಳಿಗೆಯನ್ನೇ ಸಹಿಸದ ಮಗ ಯಾಕೆ. ನೋಡು ಭಾಗ್ಯಾ ಇಷ್ಟು ದಿನ ಅವನಿಗೆ ಬೇಕಾದಂತೆ ಬದುಕಿದ್ದೀಯಾ. ಇನ್ನು ಮುಂದೆ ನಿನಗೆ ಬೇಕಾದ ರೀತಿಯಲ್ಲಿ ಬದುಕು. ಭಯ ಬೇಡ ಮಗಳೇ. ಮಾರ್ಕ್ಸ್ ಕಾರ್ಡ್ ಅನ್ನು ಯಾರು ಹರಿದು ಹಾಕಿದ್ದಾರೋ ಅವರೇ ತಂದು ಕೊಡ್ತಾರೆ" ಅಂತ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ.

ಊರಿಗೆ ಕರೆದೊಯ್ಯಲು ಶತ ಪ್ರಯತ್ನ

ಈ ಕಡೆ ಶ್ರೇಷ್ಠಾ ಗ್ರಹಚಾರ ಕೆಟ್ಟಿದೆ. ಇಷ್ಟು ದಿನ ಸುಳ್ಳು ಹೇಳಿಕೊಂಡು ಬರುತ್ತಿದ್ದ ಶ್ರೇಷ್ಠಾ ಸರಿಯಾಗಿ ಲಾಕ್ ಆಗಿದ್ದಾಳೆ‌. "ನಿನ್ನ ಘನಂದಾರಿ ಕೆಲಸವೆಲ್ಲಾ ತಿಳಿದು ಹೋಯ್ತು. ಇನ್ನು ಬೆಂಗಳೂರಲ್ಲಿ ಇರುವುದು ಬೇಡ. ನಡಿ ಊರಿಗೆ. ಮದುವೆ ಮಾಡಿಕೊಂಡು ಊರಲ್ಲಿಯೇ ಇರು" ಅಂತ ಶ್ರೇಷ್ಠಾಳ ಅಪ್ಪ ಅಮ್ಮ ಬಲವಂತ ಮಾಡಿದ್ದಾರೆ.

Bhagyalakshmi serial Written Update on June 5th episode

ಕಾವ್ಯಾಳ ಅಮ್ಮನಿಂದ ಇನ್ಮುಂದೆ ಪಾಠ

ಕಾವ್ಯಾಳ ಅಮ್ಮನಿಗೆ ಇದ್ಯಾವುದು ಗೊತ್ತಿರಲಿಲ್ಲ. ಈಗ ಶ್ರೇಷ್ಠಾ ಬೇರೆ ಅಪ್ಪ ಅಮ್ಮನ ಬಳಿ ಕ್ಷಮೆ ಕೇಳಿ ಎರಡು ತಿಂಗಳು ಸಮಯ ಕೇಳಿದ್ದಾಳೆ. ಎಲ್ಲಾದ್ರೂ ರೂಮ್ ಮಾಡ್ತೀನಿ ಅಂತಿದ್ದಾಳೆ. ಆದರೆ ಇದೇ ಸಮಯಕ್ಕೆ ಕಾವ್ಯಾರ ಅಮ್ಮ "ಹೊರಗೆ ಹೋಗುವುದು ಬೇಡ. ಇಲ್ಲಿಯೇ ಇರು. ಇನ್ಮೇಲೆ ಶಿಸ್ತು ಅಂದ್ರೆ ಏನು ಅಂತ ಕಲಿಸ್ತೀನಿ. ಎರಡು ತಿಂಗಳಾದ ಮೇಲೆ ಅಪ್ಪ ಅಮ್ಮನ ಜೊತೆಗೆ ಹೋಗುವಂತೆ" ಎಂದಿದ್ದಾರೆ. ಇದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಆಗಿದೆ ಶ್ರೇಷ್ಠಾಳಿಗೆ. ಇದರ ಜೊತೆಗೆ ತಾಂಡವ್‌ನನ್ನು ಮದುವೆ ಮಾಡಿಕೊಳ್ಳಲು ಎರಡು ತಿಂಗಳ ಟಾರ್ಗೆಟ್ ಇಟ್ಟುಕೊಂಡಿದ್ದಾಳೆ.

More from Filmibeat

English summary
Colors Kannada Bhagyalakshmi serial Written Update on June 5th episode. Here is the details Shresta Lock.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X