Bhagyalakshmi: "ಎರಡು ಮಕ್ಕಳಿರುವ ನಿನಗೆ ನಾನು ಬೇಕಾ"? ತಾಂಡವ್ ವಿರುದ್ಧ ಶ್ರೇಷ್ಠಾ ತಿರುಗಿಬಿದ್ದಿದ್ದೇಕೆ?
ಭಾಗ್ಯಳನ್ನು ಕುಸುಮಾ ಸೆಲೆಕ್ಟ್ ಮಾಡಿ ಸೊಸೆಯಾಗಿ ಕರೆದುಕೊಂಡು ಬಂದಳು. ಭಾಗ್ಯಾಳನ್ನು ನೋಡ್ತಾ ಇದ್ರೆ ಇಂಥ ಸೊಸೆ ಇರಬೇಕು ಎನಿಸದೆ ಇರುವುದಿಲ್ಲ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುತ್ತಾಳೆ. ಅತ್ತೆ ಮಾವನ ಆರೈಕೆ ಮಾಡುತ್ತಾಳೆ. ಆದ್ರೆ ತಾಂಡವ್‌ಗೆ ಆ ರೀತಿಯಾದ ಹೆಂಡತಿ ಬೇಡವಾಗಿದೆ. ಹೀಗಾಗಿ ಇಬ್ಬರ ನಡುವೆ ಜಗಳ ಆಗುತ್ತಲೇ ಇದೆ.
ಅದರಲ್ಲೂ, ಶ್ರೇಷ್ಠಾ ಪರಿಚಯವಾದ ಮೇಲಂತೂ ತಾಂಡವ್‌ಗೆ ಭಾಗ್ಯಾಳ ಮೇಲೆ ಆಸಕ್ತಿಯೇ ಕಡಿಮೆಯಾಗಿದೆ. ಮನೆಯವರ ಮೇಲೆ ಎಗರಾಡುವುದನ್ನು ಕಲಿತಿದ್ದಾನೆ. ಏನೇ ಎಗರಾಡಿದರೂ, ಎಷ್ಟೇ ಜಂಭ ತೋರಿದರೂ ಅಮ್ಮ ಎಂದರೆ ಸಿಕ್ಕಾಪಟ್ಟೆ ಭಯ. ಅಮ್ಮನ ಮುಂದೆ ಎದುರು ಮಾತನಾಡುತ್ತಾನೆ. ಆದರೆ ಅಮ್ಮನ ಮಾತನ್ನು ಮೀರುವುದಿಲ್ಲ. ಈಗ ಒಂದೇ ಒಂದು ಫೋನ್ ಕಾಲ್ ನಿಂದಾಗಿ ಶ್ರೇಷ್ಠಾಳನ್ನೇ ಬಿಟ್ಟಿದ್ದಾನೆ.

ಕಂಟ್ರೋಲ್ ತಪ್ಪುವ ಲೆವೆಲ್‌ಗೆ ಕುಡಿದ ತಾಂಡವ್
ತಾಂಡವ್‌ಗೆ ಕುಡಿಯುವ ಅಭ್ಯಾಸವಿಲ್ಲ. ಆದರೆ, ಶ್ರೇಷ್ಠಾಳ ಜೊತೆಗೆ ಸೇರಿ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾನೆ. ಅದನ್ನೇ ಬಂಡವಾಳ ಮಾಡಿಕೊಂಡು ಚೆನ್ನಾಗಿ ಕುಡಿಸಿದ್ದಾಳೆ. ಎಷ್ಟರ ಮಟ್ಟಿಗೆ ಅಂದ್ರೆ ತಾಂಡವ್ ತನ್ನ ಕಂಟ್ರೋಲ್‌ನಲ್ಲಿ ಇರಲಿಲ್ಲ. ಶ್ರೇಷ್ಠಾಳ ತಾಳಕ್ಕೆ ತಕ್ಕನಾಗಿ ಕುಣಿಯುತ್ತಿದ್ದ. ಶ್ರೇಷ್ಠಾ ಹೇಳಿದ ಮಾತೇ ವೇದ ವಾಕ್ಯದಂತೆ ಪಾಲಿಸುತ್ತಿದ್ದ.
ಸಾಕ್ಷಿ ಸಮೇತ ತಾಳಿ ಕಟ್ಟಿಸಿಕೊಳ್ಳಲು ಪ್ಲ್ಯಾನ್
ಶ್ರೇಷ್ಠಾಗೆ ಬೆಂಗಳೂರು ಬಿಟ್ಟು ಹೋಗುವುದಕ್ಕೆ ಆಗುತ್ತಿಲ್ಲ. ಆ ಕಡೆ ಅಪ್ಪ ಅಮ್ಮ ಬರೀ ಎರಡೇ ತಿಂಗಳು ಸಮಯ ನೀಡಿದ್ದಾರೆ. ಅಷ್ಟರಲ್ಲಿ ತಾಂಡವ್‌ನನ್ನು ಮದುವೆಯಾಗಬೇಕೆಂದುಕೊಂಡಿದ್ದಾಳೆ. ಅದಕ್ಕೆ ತಾಂಡವ್‌ಗೆ ಕಂಠ ಪೂರ್ತಿ ಕುಡಿಸಿ, ರೊಚ್ಚಿಗೇಳಿಸಿದ್ದಾಳೆ. ತಾಂಡವ್, ಶ್ರೇಷ್ಠಾ ಆಡಿದ ಒಂದೊಂದು ಮಾತಿನಿಂದ ಬ್ಲಾಸ್ಟ್ ಆಗಿ, ಈಗ ದೇವಸ್ಥಾನದ ಬಳಿ ಇರುವ ಅರಿಶಿನದ ದಾರವನ್ನೇ ಶ್ರೇಷ್ಠಾಳಿಗೆ ಕಟ್ಟಲು ಹೊರಟಿದ್ದಾನೆ. ಶ್ರೇಷ್ಠಾ ಮೊದಲೇ ಕ್ರಿಮಿನಲ್. ಇದನ್ನೆಲ್ಲಾ ವಿಡಿಯೋ ಮಾಡಿಕೊಳ್ಳಲು ಮೊಬೈಲ್ ಆನ್ ಮಾಡಿ ಇಟ್ಟಿದ್ದಳು.

ಅಮ್ಮನ ಕರೆಗೆ ಹೆದರಿದ ತಾಂಡವ್
ಶ್ರೇಷ್ಠಾಗೆ ತಾಂಡವ್ ಹಾಕಿದ್ದು ಒಂದೇ ಗಂಟು. ಇನ್ನು ಎರಡು ಗಂಟು ಹಾಕಬೇಕಿತ್ತು. ಅಷ್ಟರಲ್ಲಿ ಫೋನ್ ರಿಂಗಾಯ್ತು. ಇದು ಅಮ್ಮನ ಕರೆ ಎಂದುಕೊಂಡು ಹಾಕಿದ್ದ ಒಂದು ಗಂಟನ್ನು ಬಿಚ್ಚಿ ತಾಳಿಯನ್ನೇ ಕಿತ್ತಿ ಬಿಸಾಡಿದ. ಇದು ಶ್ರೇಷ್ಠಾಗೆ ಮತ್ತಷ್ಟು ಕೋಪವನ್ನು ಹೆಚ್ಚು ಮಾಡಿದೆ. ಬಾಯಿಗೆ ಬಂದಂತೆ ಬೈದಿದ್ದಾಳೆ. ತಾಳಿ ಕಟ್ಟು ಅಂತ ಹೇಳಿದರೂ ತಾಂಡವ್ ಕೇಳುತ್ತಿಲ್ಲ.
ತಾಳಿ ಕಟ್ಟುತ್ತೀನಿ ಅಂತ ಕೂಗಿದರು ಬಾರದ ಶ್ರೇಷ್ಠಾ
ಶ್ರೇಷ್ಠಾ ಸಿಕ್ಕಾಪಟ್ಟೆ ಪ್ರಯತ್ನ ಮಾಡಿದರೂ ತಾಂಡವ್ ಮಾತ್ರ ತಾಳಿ ಕಟ್ಟಲಿಲ್ಲ. ಅದಕ್ಕೆ ರೈಸ್ ಆಗಿದ್ದಾಳೆ. "ನೀನು ಅಮ್ಮನ ಸೆರಗನ್ನೇ ಹಿಡಿದುಕೊಂಡು ಓಡಾಡು. ನಿನ್ನಂಥವನಿಗೆ ಲವ್ ಯಾಕೆ? ಅದು ಈಗ 40 ವರ್ಷ. ಮದುವೆಯಾಗಿ 2 ಮಕ್ಕಳಿದ್ದಾವೆ. ನಿನ್ನಂತವನನ್ನು ನಾನು ನಂಬಿಕೊಂಡು ಕೂತಿದ್ದೀನಿ. ಕಾವ್ಯಾ ಹೇಳುವುದೇ ಸರಿ. ನೀನು ಎಷ್ಟು ಸಲ ನನ್ನ ನಡು ನೀರಿನಲ್ಲಿ ಕೈಬಿಟ್ಟು ಹೋಗಿದ್ದೀಯ. ಈಗ ನೀನೇನು ನನ್ನ ಬಿಟ್ಟು ಹೋಗೋದು ನಾನೇ ನಿನ್ನ ಬಿಟ್ಟು ಹೋಗುತ್ತೀನಿ ಅಂತ ಆಟೋ ಹತ್ತಿ ಹೋಗಿಯೇ ಬಿಟ್ಟಳು. ತಾಂಡವ್ ಹಿಂದೆ ಹಿಂದೆ ಓಡಿ ಹೋದರೂ ಶ್ರೇಷ್ಠಾ ವಾಪಸ್ ಬರಲೇ ಇಲ್ಲ. ಅದೇ ಬೇಸರದಲ್ಲಿಯೇ ತಾಂಡವ್ ಮನೆಗೆ ಹೋಗಿ ಎಲ್ಲರ ಮುಂದೆ ರೇಗಾಡಿದ್ದಾನೆ.


Click it and Unblock the Notifications











