Bhagyalakshmi: ವೈಷ್ಣವ್‌ಗೆ ಇಷ್ಟವಿಲ್ಲದ ಮದುವೆಯಲ್ಲಿ ಲಕ್ಷ್ಮೀ ಖುಷಿ ನೋಡಿದ್ದೀರಾ..?
ಕಲರ್ಸ್ ಕನ್ನಡದಲ್ಲಿ ಮೂಡಿ ಬರ್ತಾ ಇರುವಂತ 'ಭಾಗ್ಯಲಕ್ಷ್ಮೀ' ಧಾರಾವಾಹಿ ಎಲ್ಲರ ಮನಸ್ಸನ್ನು ಗೆದ್ದಿದೆ. ಅದಕ್ಕೆ ಕಾರಣವೂ ಇದೆ. ಅಕ್ಕ ತಂಗಿಯರ ಬಾಂಧವ್ಯ, ಸಂಸಾರ ತಾಪತ್ರಯ, ಸೊಸೆ ಎಂದರೆ ಭಾಗ್ಯಳಂತಿರಬೇಕು ಎಂಬ ಆಸೆ. ತಂಗಿಯಾಗಿ, ಮನೆಗೆ ಕಷ್ಟ ಸುಖ ನೋಡುವವಳಂತೆ ಲಕ್ಷ್ಮೀಯಂತ ಮಗಳಿರಬೇಕು ಎಂಬ ಆಸೆ ಯಾರಿಗೆ ಇರುವುದಿಲ್ಲ ಹೇಳಿ. ಈಗ ಅಕ್ಕಮ್ಮನ ದೊಡ್ಡ ಕನಸು ನೆರವೇರುತ್ತಿದೆ.
ನಮ್ಮಲಕ್ಷ್ಮೀಗೊಬ್ಬ ಶ್ರೀರಾಮ ಬೇಕು ಎಂದು ಬಯಸುತ್ತಿದ್ದ ಭಾಗ್ಯಳಿಗೆ, ಪಕ್ಕದ ಮನೆಯ ಹುಡುಗನೇ ಸಿಕ್ಕಿದ್ದಾನೆ. ಕೀರ್ತೀಯನ್ನು ಶ್ರೀರಾಮನ ರೀತಿಯೇ ಪ್ರೀತಿಸುತ್ತಿದ್ದ ವೈಷ್ಣವ್‌ಗೆ ಈಗ ಲಕ್ಷ್ಮೀ ಹೆಂಡತಿಯಾಗಿ ಬರುತ್ತಿದ್ದಾಳೆ. ಹಲವು ತೊಡಕುಗಳ ನಡುವೆ ಇಬ್ಬರ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಆ ಮದುವೆ ಹಿಂದಿನ ಝಲಕ್ ಇಲ್ಲಿದೆ.

ವೈಷ್ಣವ್‌ಗೆ ಇಷ್ಟವಿಲ್ಲದ ಮದುವೆ
ವೈಷ್ಣವ್ ಕಡೆ ಗಳಿಗೆಯ ತನಕ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟ. ಕೀರ್ತಿಗೆ ಕಾಡಿ ಬೇಡಿದೆ, ಕೋಪ ಬರುವಂತೆ ಮಾಡಿದೆ, ಹೊಟ್ಟೆಕಿಚ್ಚಾಗುವಂತೆ ನಡೆದುಕೊಂಡ. ಆದ್ರೆ ಕೀರ್ತಿಯ ನಿರ್ಧಾರ ಒಂದು ಇಡೀ ಫ್ಯಾಮಿಲಿಯನ್ನು ಬಿಟ್ಟು ಬಂದ್ರೆ, ನಾನು ನಿನ್ನ ಪ್ರೀತಿ ಒಪ್ಪಿಕೊಳ್ತೇನೆ ಎಂಬುದು. ಅದು ವೈಷ್ಣವ್‌ನಿಂದ ಸಾಧ್ಯವಿಲ್ಲದ ಮಾತು. ಹೀಗಾಗಿ ಎಲ್ಲವನ್ನು ಬಿಟ್ಟಿಯೇ ಹೋಗಿ ಬಿಡೋಣಾ ಎಂದು ನಿರ್ಧರಿಸಿದ್ದ. ಆದರೆ, ಅಮ್ಮನ ಭಾವನೆಗಳಿಗೆ ಕಟ್ಟು ಬಿದ್ದು, ವಾಪಾಸ್ ಬಂದ.

ವೈಷ್ಣವ್‌ಗೆ ಶಾಸ್ತ್ರಗಳಿಂದ ಖುಷಿಪಡಿಸಿದ ಭಾಗ್ಯ..!
ನಟನೆಯೆಂದರೇನೆ ಹಾಗೇ. ತೆರೆ ಮೇಲೆ ಹಲವು ಪಾತ್ರಗಳ ಮೂಲಕ, ಹಲವು ರೀತಿಯಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ಆದರೆ ತೆರೆ ಹಿಂದೆ ಇರುವ ರೀತಿ ನೀತಿಯೇ ಬೇರೆಯಾಗುತ್ತೆ. ಈಗ ವೈಷ್ಣವ್‌ದು ಅದೇ ಕಥೆ. ತೆರೆ ಮೇಲೆ ಮದುವೆ ಇಷ್ಟವಿಲ್ಲ. ತೆರೆ ಹಿಂದೆ ಸಿಕ್ಕ ಸಮಯವನ್ನು ಸಖತ್ ಎಂಜಾಯ್ ಮಾಡ್ತಾ ಇದ್ದಾರೆ. ಅದರಲ್ಲೂ ಅತ್ತುಗೆ ಭಾಗ್ಯ ಮಾಡುವ ಕಾಲು ತೊಳೆಯುವ ಶಾಸ್ತ್ರ, ಕಾಶಿಗೆ ಕಳುಹಿಸುವ ಶಾಸ್ತ್ರ ಎಲ್ಲದನ್ನು ಎಂಜಾಯ್ ಮಾಡುತ್ತಿದ್ದಾರೆ. ಅದು ಬೇರೆ ಮದುವೆ ಹುಡುಗನ ಡ್ರೆಸ್‌ನಲ್ಲಿ ಬೇರೆ ಮಿಂಚ್ತಾ ಇದ್ದಾರೆ.

ರೀಲ್ಸ್ ಮಾಡೋರು ಒಂದು ಕಡೆ
ಇನ್ನು ಮದುವೆ ಮನೆಯಲ್ಲಿ ಎಂಜಾಯ್ಮೆಂಟ್‌ಗೇನಾದರೂ ಕಡಿಮೆ ಇರುತ್ತದೆಯಾ. ಗಂಡು ಹೆಣ್ಣಿಗೆ ಹೊಸ ಜೀವನದ ಚಿಂತೆಯಾದ್ರೆ, ಕುಟುಂಬಸ್ಥರಿಗೆ ಜವಾಬ್ದಾರಿಯ ಚಿಂತೆಯಾಗಿರುತ್ತೆ. ಬಂದವರಿಗೆ ನೋ, ಊಟದ ಚಿಂತೆಯಾಗಿರುತ್ತೆ. ಅದನ್ನು ಹೊರತು ಪಡಿಸಿ ಈ ಮಕ್ಕಳು ಮರಿ ಇರ್ತಾವಲ್ಲ ಅವಕ್ಕೆಲ್ಲಾ ಕಂಪ್ಲೀಟ್ ರೀಲ್ಸ್ ಮಾಡೋದೆ ಚಿಂತೆಯಾಗಿರುತ್ತೆ. ಈಗ ವೈಷ್ಣವ್ ಮತ್ತು ಲಕ್ಷ್ಮೀ ಮದುವೆಯಲ್ಲೂ ಸೈಕಲ್ ಗ್ಯಾಪ್‌ನಲ್ಲಿ ಆಗ್ತಾ ಇರೋದೆ ಅದು ಅನ್ನಿ.

ಅಕ್ಕ ತಂಗಿಯ ಪೋಸ್ ನೋಡಿ
ಮದುವೆ ಮನೆಯಲ್ಲಿರುವ ಮಕ್ಕಳು ಮಾತ್ರವಲ್ಲ ಲಕ್ಷ್ಮೀ - ಭಾಗ್ಯ ಕೂಡ ರೀಲ್ಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಲಕ್ಷ್ಮೀ ಮದುಮಗಳ ಲುಕ್‌ನಲ್ಲಿ ಒಂದು ಎಷ್ಟೊ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಭಾಗ್ಯಕ್ಕ, ಆ ಪೋಸ್ ಓಕೆನಾ ಈ ಲೈಟ್ಸ್ ಸರಿ ಇಲ್ಲ ಅಂತ ರೀಲ್ಸ್ ಪ್ರಾಕ್ಟೀಸ್ ಮಾಡ್ತಾ ಇದ್ದಾರೆ. ಮದುವೆಯ ಟೆನ್ಶನ್ ಜೊತೆ ಜೊತೆಗೆನೆ, ಸೀರೆ, ಒಡವೆ, ಗತ್ತು, ಗಾಂಭೀರ್ಯ ಅಂತ ತುಂಬಾನೇ ಫನ್ ಮೂಮೆಂಟ್ ಬೇರೆ ಕ್ಯಾಮೆರಾದಲ್ಲಿ ಸೆರೆಯಾಗ್ತಾ ಇದೆ.


Click it and Unblock the Notifications











