Bhagyalakshmi: ಲಕ್ಷ್ಮೀ ಪರ ನಿಂತ ಕುಸುಮಾ ತಂಗಿ ಕಾವೇರಿಗೆ ಚಳಿ ಬಿಡಿಸಿದ್ದೇಕೆ?
ಭಾಗ್ಯ ಅಂದ್ರೆ ಕುಸುಮಾಗೆ ತುಂಬಾ ಒಷ್ಟ. ಆದರೆ, ಸೊಸೆ ಮುಂದೆ ಅದ್ಯಾವುದನ್ನು ತೋರಿಸಿಕೊಳ್ಳಲ್ಲ. ಆ ಕೆಲಸ ಸರಿ ಇಲ್ಲ, ಈ ಕೆಲಸ ಸರಿ ಇಲ್ಲ ಅಂತ ಹೇಳುವ ಕುಸುಮಾ ಸೊಸೆ ಅಂದ್ರೆ ಹೀಗೆ ಇರಬೇಕು ಅಂತ ಬೇರೆಯವರ ಮುಂದೆ ಹೊಗಳುತ್ತಾ ಇರುತ್ತಾಳೆ. ಭಾಗ್ಯಳಷ್ಟೇ ಪ್ರೀತಿ ಲಕ್ಷ್ಮೀಯನ್ನು ಕಂಡರೆ.
ಕುಸುಮಾ ನೋಡಿದ ಲಕ್ಷ್ಮೀ ಅಪ್ಪಟ ಬಂಗಾರ. ಅಪ್ಪ ಅಮ್ಮನನ್ನು ಕಳೆದುಕೊಂಡು ಚಿಕ್ಕಮ್ಮನ ಮಗಳಲ್ಲೇ ಅಕ್ಕ ಅಮ್ಮ ಇಬ್ಬರನ್ನು ನೋಡುತ್ತಾಳೆ. ಅದಕ್ಕೆ ಭಾಗ್ಯಳಿಗೆ ಲಕ್ಷ್ಮೀ ಎಂದರೆ ಎಲ್ಲಿಲ್ಲದ ಪ್ರೀತಿ. ಕುಸುಮಾಗೂ ಲಕ್ಷ್ಮೀ ವಿನಯ - ವಿಧೇಯ ಅಂದ್ರೆ ಸಂತಸ ತರುತ್ತೆ. ಅದಕ್ಕೆ ಅಲ್ವೆ ತನ್ನ ತಂಗಿಯ ಮನೆಗೂ ಇಂತಹ ಸೊಸೆ ಇರಲಿ ಅಂತ ಒಂದು ಮಾಡಿರುವುದು. ಆದ್ರೆ ಕುಸುಮಾ ತೋರಿ, ಮಾಡಿದ ಮದುವೆಗೆ ಈಗ ವಿಘ್ನ ಬಂದು ಕೂತಿದೆ.

ಪತ್ರ ಬರೆದಿಟ್ಟು ಹೋದ ಲಕ್ಷ್ಮೀ
ಲಕ್ಷ್ಮೀಗೆ ಮದುವೆ ಬಗ್ಗೆ ಇದ್ದ ಕನಸುಗಳು ಕಡಿಮೆ ಏನು ಅಲ್ಲ. ತನ್ನ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಎಂದು ಕೊಂಡಿದ್ದಳು. ವೈಷ್ಣವ್ ಮದುವೆ ಪ್ರಪೋಸಲ್ ಬಂದಾಗ ಅಕ್ಕಮ್ಮ ತುಂಬಾ ಖುಷಿ ಪಟ್ಟರು ತುಂಬಾ ಯೋಚನೆಯನ್ನು ಮಾಡಿದರು. ಆದರೆ, ವೈಷ್ಣವ್ ತೋರಿದ ಪ್ರೀತಿಗೆ ಮನಸೋತಿದ್ದಳು. ವೈಷ್ಣವ್ ಇಷ್ಟ ಎಂದು ಎಲ್ಲರ ಮುಂದೆ ಒಪ್ಪಿಕೊಂಡಳು. ಆದ್ರೆ ವೈಷ್ಣವ್ ಈಗ ಎಲ್ಲಾ ಸತ್ಯ ಹೇಳಿದ್ದಾನೆ. ನಾನಿಷ್ಟಪಟ್ಟ ಹುಡುಗಿಯೇ ಬೇರೆ ಅಂತ ಹೇಳಿದ್ದಾನೆ. ಇದನ್ನು ಸಹಿಸದ ಲಕ್ಷ್ಮೀ ಮದುವೆಯ ಎಲ್ಲಾ ಶಾಸ್ತ್ರಗಳನ್ನು ಮುಗಿಸಿ, ಈಗ ಪತ್ರ ಬರೆದಿಟ್ಟು ಹೋಗಿದ್ದಾಳೆ. ಮದುವೆ ಕಡೆ ಗಳಿಗೆಯಲ್ಲಿ ವಧುವೇ ಇಲ್ಲದಂತಾಗಿದೆ.

ಮದುವೆ ಮನೆಯಲ್ಲಿ ಗಂಡು ಕಾಣ್ತಿಲ್ಲ
ಇತ್ತ ವೈಷ್ಣವ್ ಕೂಡ ಸಾಕಷ್ಟು ಪ್ರಯತ್ನಪಟ್ಟಿದ್ದಾನೆ. ಕೀರ್ತಿಯನ್ನು ಮನವೊಲಿಸುವ ಯತ್ನದಲ್ಲಿ ಸೋತಿದ್ದಾನೆ. ಹಾಗಂತ ಮನಸ್ಸಲ್ಲಿ ಒಂದು ಹುಡುಗಿ ಇಟ್ಟುಕೊಂಡು, ಮದುವೆಯನ್ನು ಬೇರೆಯವಳ ಜೊತೆಗೆ ಆಗುವುದು ಅಷ್ಟು ಸುಲಭವಲ್ಲ ಎಂದು ವರ ಪೂಜೆ ಶುರುವಾಗುವ ಹೊತ್ತಲ್ಲೆ, ಕಾರು ತೆಗೆದುಕೊಂಡು, ಯಾರಿಗೂ ಹೇಳದೆ ಹೊರಟೇ ಹೋಗಿದ್ದಾನೆ. ಇದನ್ನು ಲಕ್ಷ್ಮೀಯ ದುಷ್ಮನ್‌ಗಳು ನೋಡಿ ಖುಷಿ ಪಟ್ಟಿದ್ದಾರೆ.

ಕುಸುಮಾಳ ಮಾತಿಗೆ ನಡುಗಿದ ಕಾವೇರಿ
ಮದುವೆ ಮನೆ.. ಎಲ್ಲಾ ತಯಾರಿ ಮುಗಿದಿದೆ..ಕೊನೆಯ ಹಂತದ ಮುಹೂರ್ತವೊಂದು ಬಾಕಿ ಇದೆ. ಆದರೆ, ಇರಬೇಕಾದ ವಧು ವರರೇ ಈ ಕೊನೆಯ ಶಾಸ್ತ್ರಕ್ಕೆ ಇಲ್ಲ. ಇದು ಕುಸುಮಾಳನ್ನು ಕೆರಳಿಸಿ ಕೆಂಡ ಮಾಡಿದೆ. ಕಾವೇರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಲಕ್ಷ್ಮೀಯ ಮೇಲೆ ಆಪಾದನೆ ಮಾಡಲು ಹೋದ ಕಾವೇರಿಗೆ ಲಕ್ಷ್ಮೀ ಎಂತಹ ಚಿನ್ನದ ಹುಡುಗಿ ಎಂದು ತಿಳಿಸಿದ್ದಾಳೆ.

ಎಲ್ಲರಿಗೋಸ್ಕರ ಇಬ್ಬರು ಬದಲಾಗ್ತಾರಾ..?
ಲಕ್ಷ್ಮೀ ಮತ್ತು ವೈಷ್ಣವ್ ಮದುವೆಗಾಗಿ ಎರಡು ಸಂಸಾರ ಕಾಯುತ್ತಾ ಇತ್ತು. ಅಷ್ಟೇ ಅಲ್ಲ ಅಕ್ಕಮ್ಮ.. ಅಕ್ಕಮ್ಮ ಅಂತ ಪ್ರಾಣ ಬಿಡುವ ಲಡ್ಡುಳ ಅಕ್ಕಮ್ಮ ಭಾಗ್ಯಳ ದೊಡ್ಡ ಕನಸು. ಆ ಕಡೆ ವೈಷ್ಣವ್ ತಾಯಿಯ ಬಾಂಧವ್ಯ ನೋಡಬೇಕು. ಈ ಕಡೆ ಇಡೀ ಕುಟುಂಬ ತನಗಾಗಿ ನಿಂತದ್ದನ್ನು ಲಕ್ಷ್ಮೀ ನೆನೆದುಕೊಳ್ಳಬೇಕು. ಈಗ ಇಬ್ಬರು ಹಸೆ ಮಣೆ ಏರಲು ಬರಲೇಬೇಕಾಗಿದೆ. ಸತ್ಯವನ್ನು ಒಪ್ಪಿಕೊಂಡು, ಮುಂದೊಂದು ದಿನ ಪ್ರೀತಿ ಚಿಗುರುವುದಕ್ಕಾಗಿ ಸಮಯ ನೀಡಬೇಕಿದೆ. ಲಕ್ಷ್ಮೀ - ವೈಷ್ಣವ್ ಕಲ್ಯಾಣ ನಡೆಯಲೇಬೇಕಿದೆ.


Click it and Unblock the Notifications











