Bhagyalakshmi: ಅಕ್ಕನಿಗಾಗಿ ಲಕ್ಷ್ಮೀ.. ಅಮ್ಮನಿಗಾಗಿ ವೈಷ್ಣವ್.. ಮನಸು ಬದಲಾಯಿತು.. ಮದುವೆ ನಡೆಯಿತು!
ಪ್ರೀತಿಯನ್ನು ಮತ್ತೆ ಗೆಲ್ಲುತ್ತೇನೆ ಎಂದು ಹೋಗಿದ್ದ ವೈಷ್ಣವ್ ಸೋತಿದ್ದಾನೆ. ಪ್ರೀತಿ ಇಲ್ಲದ ಮೇಲೆ ನಾನೇನು ಮಾಡಲಿ ಎಂದು ಲಕ್ಷ್ಮೀ ಕಣ್ಣೀರು ಹಾಕಿದ್ದಾಳೆ. ಇಷ್ಟವಿಲ್ಲದ ಮದುವೆಯಲ್ಲಿ ಹಸೆಮಣೆ ಏರುವುದಾದರೂ ಹೇಗೆ ಎಂಬ ಬೇಸರದಲ್ಲಿಯೇ ಪತ್ರ ಬರೆದಿಟ್ಟು ಮದುವೆ ಮನೆಯಿಂದ ಓಡಿ ಹೋಗಿದ್ದಾಳೆ. ಮದುವೆ ಬೇಡವೆಂದು ಓಡಿ ಹೋಗಿದ್ದ ವೈಷ್ಣವ್ ಕಾವೇರಿ ಆಡಿದ ಭಾವನಾತ್ಮಕ ಮಾತುಗಳು ಮತ್ತೆ ವಾಪಾಸ್ ಬರುವಂತೆ ಮಾಡಿತ್ತು. ಆದರೆ, ಈಗ ಲಕ್ಷ್ಮೀಯನ್ನು ಕರೆ ತರುವುದು ಹೇಗೆ..?
ಸತ್ಯ ಮುಚ್ಚಿಟ್ಟು ಮಾಡಲು ಹೋದ ಮದುವೆಯಲ್ಲಿ ನೂರೆಂಟು ವಿಘ್ನಗಳು ಕಾಣಿಸುತ್ತಿವೆ. ಲಕ್ಷ್ಮೀ ಕಾಣ್ತಿಲ್ಲ ಎಂಬುದು ಭಾಗ್ಯಳಿಗೆ ಗೊತ್ತಾದರೆ ಮುಗೀತು. ಎದೆ ಬಡಿದುಕೊಂಡು ಸತ್ತೆ ಹೋಗ್ತಾಳೆ. ಆದರೆ, ಅದ್ಯಾವುದು ಗೊತ್ತಾಗಬಾರದೆಂಬ ಕಾರಣಕ್ಕೆ ಕುಸುಮಾ ಪ್ಲ್ಯಾನ್ ಮಾಡಿ, ಕಾವೇರಿಯನ್ನು ಅಲಂಕಾರ ಮಾಡಲೆಂದು ಭಾಗ್ಯಳ ಬಳಿ ಬಿಟ್ಟು ಹೋಗಿದ್ದಳು.

ವೈಷ್ಣವ್ ಬಳಿ ಅಂಗಲಾಚಿದ ಕುಸುಮಾ
ಲಕ್ಷ್ಮೀಗೆ ಈ ಘಟನೆಯೆಲ್ಲಾ ಆಘಾತ ತಂದಿದೆ ಎಂದು ಕುಸುಮಾಗೆ ಗೊತ್ತಾಯ್ತು. ಪತ್ರ ಬರೆದಿಟ್ಟು ಎಲ್ಲೋ ಓಡಿ ಹೋಗಿದ್ದಾಳೆ ಅನ್ನೋದು ಕನ್ಫರ್ಮ್ ಆಯ್ತು. ಈಗ ಇರುವ ದಾರಿ ಮೊದಲು ಲಕ್ಷ್ಮೀ ಎಲ್ಲಿದ್ದಾಳೆ ಎಂಬುದನ್ನು ಪತ್ತೆ ಮಾಡುವುದು. ಇದು ಕುಸುಮಾಗೆ ದೊಡ್ಡ ಚಾಲೆಂಜ್ ಆಗಿದೆ. ಅದಕ್ಕೆ ವೈಷ್ಣವ್ ಬಳಿ ಬಂದು, "ಎಲ್ಲಾ ನಿನ್ನಿಷ್ಟದಂತೆಯೇ ಆಗಲಿ. ನಿಂಗೆ ಮದುವೆ ಬೇಡ ಅಂದ್ರೆ ಬೇಡ. ಆದರೆ ನನ್ನ ಸಂಸಾರ ಕಾಪಾಡಪ್ಪ. ಲಕ್ಷ್ಮೀ ಕಾಣಿಸ್ತಾ ಇಲ್ಲ. ಲಕ್ಷ್ಮೀ ಇಲ್ಲ ಅಂತ ಗೊತ್ತಾದ್ರೆ ನನ್ನ ಸೊಸೆ ಭಾಗ್ಯ ಎದೆ ಒಡೆದುಕೊಂಡು ಪ್ರಾಣ ಬಿಡ್ತಾಳೆ" ಅಂತ ತನ್ನ ಸೆರಗೊಡ್ಡಿ ಅಂಗಲಾಚಿ ಕೇಳಿದ್ದಾಳೆ ಕುಸುಮಾ.

ಕಡೆಗೂ ಲಕ್ಷ್ಮೀಯನ್ನು ಹುಡುಕಿಯೇ ಬಿಟ್ಟ
ದೊಡ್ಡಮ್ಮನ ಮಾತು ಕೇಳಿಸಿಕೊಂಡ ವೈಷ್ಣವ್ ಒಂದು ಕ್ಷಣ ಕಲ್ಲಾಗಿ ಹೋದ. ಏನು ಹೇಳಬೇಕು ಎಂದು ತೋಚದೆ ಅಲ್ಲಿಂದ ಹೋದವನು ಹುಚ್ಚನಂತೆ ಹುಡುಕಾಡಿದ. ಅಲ್ಲಿ ಇಲ್ಲಿ ಅಲೆದ ಕಡೆಗೂ ತನ್ನ ಮಹಾಲಕ್ಷ್ಮೀ ಇದ್ದ ಜಾಗ ತಿಳಿದೇ ಬಿಡ್ತು. ಕತ್ತಲೆಯಲ್ಲಿ ಕೂತಿದ್ದ ಲಕ್ಷ್ಮೀಯ ಬಳಿ ತನ್ನ ನೋವನ್ನು ಹಂಚಿಕೊಂಡ. ಇಬ್ಬರು ಮಾತನಾಡಿದರು.

ಚಿಕ್ಕಮ್ಮನ ಖುಷಿಗೆ ಎಲ್ಲೆ ಎಲ್ಲಿ..?
ಲಕ್ಷ್ಮೀ ಕಂಡರೆ ಚಿಕ್ಕಮ್ಮನಿಗೆ ಅಷ್ಟಕ್ಕೆ ಅಷ್ಟೇ. ಲಕ್ಷ್ಮೀ ಮದುವೆ ಮುರಿದು ಬಿದ್ರೆ ವೈಷ್ಣವ್‌ಗೆ ಪೂಜಾಳನ್ನು ಕಟ್ಟಬಹುದು ಎಂಬ ಹುನ್ನಾರ. ಅದರಂತೆ ಈಗ ಲಕ್ಷ್ಮೀ ಕಾಣಿಸದೇ ಇರುವುದಕ್ಕೆ ಫುಲ್ ಖುಷಿ ಪಟ್ಟಿದ್ದಾಳೆ. ಭಾಗ್ಯಳಿಗೆ ಯಾವ ವಿಚಾರ ಗೊತ್ತಾಗಬಾರದು ಎಂದುಕೊಂಡಿದ್ದರೋ ಚಿಕ್ಕಮ್ಮಳಿಂದ ಎಲ್ಲರ ಮುಂದೆ ಲಕ್ಷ್ಮೀ ಮದುವೆ ಮಂಟಪದಲ್ಲಿ ಇಲ್ಲ ಎಂಬ ವಿಚಾರ ಬಟಾಬಯಲಾಗಿದೆ.

ಕೀರ್ತಿ ಮರೆತು ಹೊಸ ಜೀವನ ಶುರು
ಬಲವಂತದ ಮದುವೆ ಬೇಡ ಎಂದು ನಿರ್ಧರಿಸಿದ ಲಕ್ಷ್ಮೀ ಸಾಯುವುದಕ್ಕೆ ಹೊರಟಿದ್ದಳು. ಆದರೆ, ತನ್ನೊಳಗೆ ಅಕ್ಕಮ್ಮನ ಜೀವವೂ ಇದೆ ಅಂತ ಗೊತ್ತಾಗಿ ಸುಮ್ಮನೆ ಆಗಿದ್ದಾಳೆ. ವೈಷ್ಣವ್ ಇಷ್ಟವಿಲ್ಲದೆ ಇರುವ ಮದುವೆ, ಇತ್ಯಾದಿ ಎಲ್ಲಾ ಸೇರಿ ಲಕ್ಷ್ಮೀಯನ್ನು ಕತ್ತಲೇ ಕೋಣೆಯಲ್ಲಿ ಕೂರುವಂತೆ ಮಾಡಿತ್ತು.ಈಗ ಎಲ್ಲಾ ವಿಚಾರವನ್ನು ಮಾತನಾಡಿದ ಬಳಿಕ ಇಬ್ಬರ ಮನಸ್ಸು ತಿಳಿಯಾಗಿದೆ. ವೈಷ್ಣವ್, ನನ್ನ ಮದುವೆಯಾಗ್ತೀರ ಅಂತ ಮನಸಾರೆ ಕೇಳಿದ್ದಾನೆ. ಲಕ್ಷ್ಮೀಯೂ ಒಪ್ಪಿದ್ದಾಳೆ. ಈ ಮದುವೆ ಸಂಪೂರ್ಣವಾಗಿ ಅರೆಂಜ್ಡ್ ಮ್ಯಾರೇಜ್. ಗುರು ಹಿರಿಯರು ನಿಶ್ಚಯಿಸಿರುವ ಈ ಮದುವೆಯಲ್ಲಿ ಪ್ರೀತಿ ಚಿಗುರಬೇಕಷ್ಟೆ.


Click it and Unblock the Notifications











