Bhagyalakshmi: ವೈಷ್ಣವ್ -ಲಕ್ಷ್ಮೀ ಮೊಗದಲ್ಲಿ ತೃಪ್ತಿಯ ಭಾವ : ಭಾಗ್ಯಾಳ ಸಂಸಾರಕ್ಕೆ ಹುಳಿ ಹಿಂಡಲು ರೆಡಿಯಾದ ಶ್ರೇಷ್ಠಾ!
ಲಕ್ಷ್ಮೀ ಚಿಕ್ಕವಳಿದ್ದಾಗಲೇ ಅಪ್ಪ - ಅಮ್ಮನನ್ನು ಕಳೆದುಕೊಂಡಳು. ಚಿಕ್ಕಪ್ಪ - ಚಿಕ್ಕಮ್ಮನ ಹೆಗಲಿಗೆ ಲಕ್ಷ್ಮೀಯ ಜವಾಬ್ದಾರಿ ಬಿತ್ತು. ಆದರೆ, ಚಿಕ್ಕಮ್ಮ ಯಾವತ್ತಿಗೂ ಪ್ರೀತಿಯನ್ನು ತೋರಿಸಿದವಳೇ ಅಲ್ಲ. ಬದಲಿಗೆ ಭಾಗ್ಯ ಇದ್ದಿದ್ದು ಲಕ್ಷ್ಮೀಯ ಅದೃಷ್ಟ ಅಂದುಕೊಂಡಳು. ಅಕ್ಕನ ಕಾಳಜಿಯಲ್ಲಿಯೇ ಅಮ್ಮನನ್ನು ಕಂಡಾಗಿನಿಂದ ಅಕ್ಕಮ್ಮ ಎಂದು ಕರೆಯುವುದಕ್ಕೆ ಶುರು ಮಾಡಿದಳು. ಅಕ್ಕಮ್ಮನ್ನಲ್ಲಿಯೇ ಎಲ್ಲರ ಪ್ರೀತಿ ನೋಡುವುದಕ್ಕೆ ಶುರು ಮಾಡಿದಳು. ಚಿಕ್ಕಮ್ಮ ಬರೀ ಹಣಕ್ಕಾಗಿ ಪೀಡಿಸಿದಾಗಲೂ, ಪೂಜಾ ತಂಗಿಯಾಗಿದ್ದರೂ ಅವಮಾನ ಮಾಡಿದಾಗಲೂ ತಲೆ ಕೆಡಿಸಿಕೊಂಡಿರಲಿಲ್ಲ.
ಲಕ್ಷ್ಮೀಯನ್ನು ಒಳ್ಳೆಯ ಮನೆಗೆ ಸೊಸೆಯಾಗಿ ಕೊಡಬೇಕು ಎಂದುಕೊಂಡು ಕಾಯುತ್ತಾ ಕೂತಿದ್ದ ಭಾಗ್ಯಳಿಗೆ ತನ್ನ ಮೈದುನನಿಗೆ ಲಕ್ಷ್ಮೀ ಹೆಂಡತಿಯಾಗಿ ಬರ್ತಾಳೆ ಅಂತ ಯಾವತ್ತೂ ಬಯಸಿರಲಿಲ್ಲ. ಮನೆಯವರೆಲ್ಲಾ ನಿರ್ಧಾರ ಮಾಡಿದಾಗ ಭಾಗ್ಯಾ ಪಟ್ಟ ಖುಷಿ ಅಷ್ಟಿಷ್ಟಲ್ಲ. ಹಾಗಂತ ಸುಮ್ಮ ಸುಮ್ಮನೆ ಒಪ್ಪಿಕೊಂಡಿದ್ದು ಅಲ್ಲ ಅದು ವೈಷ್ಣವ್ ಬಗ್ಗೆ ಮತ್ತೆ ಮತ್ತೆ ಪರೀಕ್ಷಿಸಿ ಒಪ್ಪಿಕೊಂಡ ಮದುವೆ.

ತಾಯಿಯ ಸ್ಥಾನದಲ್ಲಿದ್ದುಕೊಂಡು ಧಾರೆ ಎರೆದ ಭಾಗ್ಯ
ಭಾಗ್ಯಳಿಗೆ ಇದು ದೊಡ್ಡ ಕನಸು. ಲಕ್ಷ್ಮೀಯನ್ನು ಮದುಮಗಳಾಗಿ ನೋಡಬೇಕೆಂಬುದು ಅದೆಷ್ಟು ವರ್ಷದ ಕನಸೋ ಏನೋ. ಈಗ ಆ ಕನಸು ನನಸಾಗುತ್ತಿದೆ. ಅದರಲ್ಲೂ ತಂಗಿಯ ಮದುವೆಗಾಗಿ ಹುಂಡಿ ಮಾಡಿಟ್ಟಿದ್ದ ಹಣದಿಂದ ತಂಗಿಗೆ ಒಡವೆ, ಬಟ್ಟೆ ಕೊಡಿಸಿ ವರೋಪಾಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾಳೆ. ಈಗ ಧಾರೆ ಎರೆಯುವ ಸಮಯ. ಮನಸ್ಸು ನಿರಾಳವಾಗುವ ಸಂದರ್ಭ. ಪಕ್ಕದಲ್ಲಿಯೇ, ಚಿಕ್ಕ ಅತ್ತೆ ಮನೆಯಲ್ಲಿಯೇ ಇರುತ್ತಾಳೆ ಎಂಬುದು ಗೊತ್ತಿರುವಂತ ವಿಚಾರ. ಆದರೂ ಭಾಗ್ಯಾಳ ಕಣ್ಣೀರ ಕೋಡಿ ಹೊಡೆದಿದೆ. ಭಾಗ್ಯಳ ಭಾವನೆಯನ್ನು ಕಂಡು ನೋಡುಗರು ಕೂಡ ಅಕ್ಷರಶಃ ಕಣ್ಣೀರು ಹಾಕಿದ್ದಾರೆ.

ಭಾಗ್ಯಾಳ ಮಾತಿಗೆ ಸಮಾಧಾನ ಮಾಡಿದ ಮನೆಯವರು
ವೈಷ್ಣವ್ ಈಗ ಅಳಿಯ ಕೂಡ. ಭಾಗ್ಯ "ತನ್ನ ತಂಗಿಯನ್ನು ನಿನಗೆ ಒಪ್ಪಿಸುತ್ತಾ ಇದ್ದೀನಿ. ಅವಳನ್ನು ಪಡೆಯುವುದಕ್ಕೆ ನೀನು ಅದೃಷ್ಟ ಮಾಡಿದ್ದೀಯಾ. ಅವಳಿಗೆ ಯಾರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ಚೆನ್ನಾಗಿಯೇ ಗೊತ್ತು. ಎಲ್ಲರ ಬಳಿ ಚೆನ್ನಾಗಿ ಅಡ್ಜೆಸ್ಟ್ ಆಗುತ್ತಾಳೆ. ಆದರೆ, ಸಣ್ಣ ಮನೆಯಲ್ಲಿ ಬೆಳೆದಿರುವ ಕಾರಣ ದೊಡ್ಡ ಮನೆಯಲ್ಲಿ ತಪ್ಪಾದರೇ ದಯವಿಟ್ಟು ಹೊಟ್ಟೆಗೆ ಹಾಕಿಕೊಳ್ಳಪ್ಪ" ಅಂತ ತನ್ನ ಮೈದುನನ ಬಳಿಯೇ ಹೇಳುವಾಗ ಎಲ್ಲರೂ ಸಮಾಧಾನ ಮಾಡುತ್ತಿದ್ದಾರೆ.

ಶ್ರೇಷ್ಠಾಳಿಂದ ಭಾಗ್ಯಾಳ ಬದುಕು ದುಸ್ತರ
ಆ ಕಡೆ ಲಕ್ಷ್ಮೀಯ ಮದುವೆಯನ್ನು ಅದ್ದೂರಿಯಾಗಿ ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದಾಳೆ. ಆದರೆ, ಈ ಕಡೆ ತನ್ನ ಸಂಸಾರವೇ ಹಳಿ ತಪ್ಪುವ ಹಂತಕ್ಕೆ ಬಂದು ನಿಂತಿದೆ. ಶ್ರೇಷ್ಠಾ ಈ ಮದುವೆಗೆ ಬಂದಿದ್ದೆ, ಮದುವೆ ಮುಗಿಯುವುದರೊಳಗೆ ತಾನೂ ತಾಂಡವ್‌ನ ಮದುವೆಯಾಗಬೇಕೆಂದುಕೊಂಡು. ಈಗ ಅದನ್ನೇ ಮಾಡುವುದಕ್ಕೆ ಹೊರಟಿದ್ದಾಳೆ.

ತಾಂಡವ್ ಮಾತಿನ ವರಸೆಯೇ ಬದಲು
ತಾಂಡವ್ ಗೆ ಏನೇ ಸಿಟ್ಟು ಇದ್ದರು, ಸಿಡುಕು ಬಂದರೂ ಅಮ್ಮನ ಮುಂದೆ ಅದು ಠುಸ್ ಪಟಾಕಿಯಾಗುತ್ತೆ. ಅಮ್ಮನ ಎದುರು ಏರು ಧ್ವನಿಯಲ್ಲಿ ಮಾತನಾಡುವುದಕ್ಕೆ ಹೋಗುವುದಿಲ್ಲ. ಇನ್ನು ಶ್ರೇಷ್ಠಾಳನ್ನು ಮದುವೆಯಾಗುತ್ತಾನಾ..? ಹೆಂಡತಿ ಸ್ಥಾನದಲ್ಲಿ ಏನಿದ್ದರೂ ಭಾಗ್ಯಾಳೆ ಇರ್ತಾಳೆ. ಆದರೆ, ಶ್ರೇಷ್ಠಾಗೆ ಎಷ್ಟು ಬೇಕಾದರೂ ಖರ್ಚು ಮಾಡ್ತಾನೆ. ಎಷ್ಟು ಬೇಕಾದರೂ ಪ್ರೀತಿ ಕೊಡ್ತಾನೆ. ಆದರೆ, ಹೆಂಡತಿ ಸ್ಥಾನವನ್ನಲ್ಲ. ಅದಕ್ಕೆಲ್ಲಾ ಈಗಲೂ ಕ್ಲಾರಿಟಿ ಕೊಟ್ಟು, ಶ್ರೇಷ್ಠಾ ಕೈನಲ್ಲಿದ್ದ ತಾಳಿ ಕಟ್ಟಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿದ್ದಾನೆ.


Click it and Unblock the Notifications











